Saturday, December 25, 2010

ಚಿತ್ರ ಚಿತ್ತಾರ ...4.

ಇದೊಂದು ಕಾಡು ಜಾತಿಯ ಹೂ ನಂದಿಬೆಟ್ಟಕ್ಕೆ ಹೋದ ಸಂದರ್ಭದಲ್ಲಿ ನನ್ನ ಕ್ಯಾಮರ ಕಣ್ಣಿಗೆ ಸೆರೆಸಿಕ್ಕಿ ದೃಶ್ಯವಿದು.

ಮೋಡದ ಮೇಲೊಂದು ಮನೆಯ ಕಟ್ಟಿ …!.


ಮೋಡದ ಮೇಲೊಂದು ಮನೆಯ ಕಟ್ಟಿ
ಸದ್ದು ಗದ್ದಲಗಳಿಂದ ದೂರವಿರಲು ಭಯಸುತ್ತೇನೆ.
ಹಾರುವ ವಿಮಾನಗಳು ನನ್ನ ಆಸೆಗೆ ತಡೆಯೊಡ್ಡಿ
ನನ್ನ ನೆಮ್ಮದಿಯನ್ನು ಹಾಳುಗೆಡವುತ್ತವೆ...

ಆಳ ಸಮುದ್ರದಲ್ಲೊಂದು ಮನೆಯ ಕಟ್ಟಿ
ಮುತ್ತು ಅವಳಗಳನ್ನು ಬೆಳೆಯಲು ನಿರ್ಧರಿಸುತ್ತೇನೆ
ಜಲಾಂತರ್ಗಾಮಿ ಹಡಗುಗಳು 
ನನ್ನ ಮನೆಯನ್ನು ನೆಲೆ ಸಮಗೊಳಿಸಿ
ನಾಮಾವಶೇಷಗಳನ್ನೂ ಉಳಿಸದಂತೆ ಮರೆಯಾಗಿಸುತ್ತವೆ...

ವಿಶಾಲ ಕಣಿವೆಯಲ್ಲೊಂದು ಮನೆಯ ಕಟ್ಟಿ
ಮೌನವಾಗಿರಲು ತವಕಿಸುತ್ತೇನೆ.
ಸುರಿವ ಬಾಂಬು ಮದ್ದು ಗುಂಡುಗಳ ದಾಳಿಗೆ
ನನ್ನ ಮನೆ ಸುಟ್ಟು ಇದ್ದಿಲಾಗುತ್ತದೆ...

ದಟ್ಟಡವಿಯ ಮಧ್ಯದಲ್ಲೊಂದು ಮನೆಯಕಟ್ಟಿ
ಮೂಕ ಪ್ರಾಣಿಗಳ ಸಂರಕ್ಷಣೆಯನ್ನು ಕೈಗೊಳ್ಳುತ್ತೇನೆ
ನರರೂಪ ರಾಕ್ಷಸರ ಕೆಂಗಣ್ಣಿಗೆ ಗುರಿಯಾಗಿ
ಪ್ರಾಣಿಯಂತೆ ನನ್ನನ್ನೇ ಅಟ್ಟಾಡಿಸಿ ಕೊಲ್ಲಲೆತ್ನಿಸುತ್ತಾರೆ...

ಕಾಣದ ನೆಮ್ಮದಿಯನ್ನು ಹುಡುಕುತ್ತ.
ದುಃಖ ಬಯಲು ಸೀಮೆಗಳಲ್ಲಿ ಅಲೆಯುತ್ತ.
ನಾ ಕಟ್ಟಬೇಕಿದ್ದ ಮನೆ ಕನಸಂತೆಯೇ ಉಳಿದಾಗ
ಈ ಕ್ಷುದ್ರಲೋಕದ ನೆನಪನ್ನೇ ತೊರೆದು 
ಮೌನವಾಗಿ ಮರೆಯಾಗುತ್ತೇನೆ...

                                                                                     ವಸಂತ್

Wednesday, December 15, 2010

ನಾ ಕಂಡ ಜಗತ್ತು…!.


ನಾ ಕಂಡ ಜಗತ್ತು ಪರಿಪೂರ್ಣದಂತಿದ್ದರೂ
ಅಲ್ಲಿಯೂ ನೋವುಗಳಿವೆ, ನಲಿವುಗಳಿವೆ,
ವಿಷಾದಗಳಿವೆ ವಿಮರ್ಶೆಗಳಿವೆ ಹಾಗೇಯೆ,
ಮತ್ತೊಬ್ಬರನ್ನು ಅನುಸರಿಸುವಂತ ಮಾತುಗಳು ಇವೆ...

ಯಾರು ಸತ್ತರೆ ನಮಗೇನೆಂದು
ಬಾಗಿಲು ಮುಚ್ಚಿ ಮಲಗುವಂತ ಮನಸ್ಸುಗಳಿವೆ..
ದೂರಕ್ಕೆ ಕಾಣುವ ಬೆಟ್ಟ ಹಿಮಾಲಯದಂತ್ತಿದ್ದರೂ
ಹಿಮಾಲಯವಿರುವುದು ಕಾಶಿಯಲ್ಲಲ್ಲವೆ 
ಎನ್ನುವಂತ ಮುಗ್ಧ ಕನಸುಗಳು ಇವೆ...

ತುತ್ತು ಕಾಣದ ಹೊಟ್ಟೆಗಳು ಕಂಡ ಕಂಡಲ್ಲಿ
ಕೈ ಮುಗಿದು ಬೇಡುವ ಸಂಪ್ರಾದಾಯವು ಇದೆ
ಬೀದಿ ಬೀದಿಗಳಲ್ಲಿ ಸೌಂಧರ್ಯವನ್ನೇ ಪಣಕ್ಕಿಟ್ಟು
ಕಂಡವರಿಗೆ ಕೈ ಬೀಸಿ ಕರೆಯುವಂತ ಚಾಳಿಯು ಇದೆ...

ನೆಲಕ್ಕೆ ಕಾಲಿಡಲು ಭಯ ಪಟ್ಟು ನಡುಗುವಂತ
ಸಿರಿವಂತರ ಸೊಕ್ಕಿನ ಬಯಲು ಸೀಮೆಗಳಿವೆ.
ಸುಡುವ ಬಿಸಿಲಿಗೆ ಒಣಗುತ್ತ ಚಳಿಯಲ್ಲಿ ನಡುಗುತ್ತ
ಬಲವಿಲ್ಲದ ದೇಹದೊಂದಿಗೆ ಹಗಳಿರುಳು
ದುಡಿಯುವಂತ ಅತಾಷ ಭಾವಗಳು ಇವೆ...

ಏನಿಲ್ಲಾ ಹೇಳಿ ಈ ಜಗತ್ತಿನಲ್ಲಿ
ಕಾಮ, ಕ್ರೋದ, ಮೋಹ, ಲೋಭ, ಮಧ,
ಮಾತ್ಸರ ಮಯದಿಂದ ಕೂಡಿರುವ
ಈ ನರಕಮಯ, ಸ್ವರ್ಗಮಯ,
ಮಧುರಮಯ ಲೋಕ ಇದ್ದಂತೆ ಅಲ್ಲವೆ ?....

                                               ವಸಂತ್ 
ಚಿತ್ರಕೃಪೆ. http://mohebban.burjalsaheb.com

Monday, December 13, 2010

ಚಿತ್ರ ಚಿತ್ತಾರ ...3.

ಸಣ್ಣ ಕೀಟಗಳ ಹಾರೈಕೆಯಲ್ಲಿ ಮಗ್ನವಾಗಿರುವ ಇರುವೆ..

Thursday, December 9, 2010

ಹೊಸ ದಿಗಂತದೆಡೆಗೆ ಪಯಣ...!.ಕಾಲವು ದೀಪದಂತೆ ಉರಿಯುತ್ತ
ಕತ್ತಲ ಬೆಳಕಿನ ರೂಪದಲ್ಲಿ
ತನ್ನ ಚಲನೆಯನ್ನು ಸೂಚಿಸುತ್ತದೆ..
ದಿನದಿಂದ ದಿನಕ್ಕೆ
ಹೊಸ ಹೊಸ ಬದಲಾವಣೆಗಳು
ಹೊಸ ಹೊಸ ಪರ್ವಗಳಾಗಿ
ಹೊಸ ದಿಗಂತದೆಡೆಗೆ ಹೆಜ್ಜೆಯನಿರಿಸಿ ಸಾಗುತ್ತದೆ...

ಮೌನವಾಗಿ ಸುರಿಯುವ ಮಳೆ
ರಣಚಂಡಿಯ ಅವತಾರಂದತಾಗಿ
ಎಲ್ಲವನ್ನು ತನ್ನೊಳಗೆ ಮುಳುಗಿಸಿಟ್ಟುಕೊಳ್ಳಬಹುದು...
ಒಮ್ಮೊಮ್ಮೆ ಹಿತವಾಗಿ ಅಪ್ಪಳಿಸುವ ಅಲೆಗಳು
ಸುನಾಮಿ ಅಲೆಯಂತ ಭೀಕರತೆಯನ್ನು ಸೃಷ್ಟಿಸಬಹುದು...
ಕಣ್ಣಿಗೆ ಕಾಣದ ಗಾಳಿಯು ಸಹ
ಚಂಡಮಾರುತದಂತಾಗಿ ಎಲ್ಲವನ್ನು ಒಡೆದುರುಳಿಸಿ
ಮಾರಣಹೋಮವನ್ನು ನಡೆಸಬಹುದು...
ಇದು ಸಹ ಹೊಸ ಹಾದಿಗೆ ಮುನ್ನುಡಿ ಬರೆದಂತೆ...

ಎಲ್ಲ ಕಾರ್ಯಗಳು ಬದಲಾವಣೆಗಳತ್ತ
ಸಾಗುತ್ತಲೇ ಇರಬೇಕು
ಇದು ಪ್ರಕೃತಿಯ ನಿಯಮ...
ಇಂದು ನಾವು ಮಂದೆ ನಮ್ಮನ್ನು ಮೀರಿಸುವಂತ
ಜೀವಿಗಳು ಸೃಷ್ಟಿಯಾಗಬಹುದು...

ಪ್ರತಿ ಕ್ಷಣವು ಸಹ ಹೊಸತನ್ನು ಬಯಸುತ್ತದೆ
ಪ್ರತಿ ಆಲೋಚನೆಯು ಹೊಸ ವಿಚಾರಗಳತ್ತ ಅಂಬಲಿಸುತ್ತದೆ
ಪ್ರತಿ ರಾತ್ರಿಯು ಹೊಸ ಉದಯವನ್ನು ಕಾಣುತ್ತದೆ
ಪ್ರತಿ ವಿಜಯವು ಹೊಸ ಕ್ರಾಂತಿಯತ್ತ ಸಾಗುತ್ತದೆ
ಬದಲಾವಣೆಯ ಹಾದಿಯಲಿ ವರ್ಷಗಳೇ ಕಳೆದು
ಹೊಸ ವರ್ಷದ ಸಂಭ್ರಮವನ್ನು ಸಹ ಆಚರಿಸಿಕೊಳ್ಳುತ್ತದೆ...

                                                                   ವಸಂತ್ 

ಚಿತ್ರಕೃಪೆ. http://www.acceleratingfuture.com

Monday, December 6, 2010

ಚಿತ್ರ ಬೇಟೆ ...2.

           ಮೊದ ಮೊದಲು ನಮ್ಮ ಹಳ್ಳಿಗಳ ಕಡೆ ಹೆಚ್ಚಾಗಿ ಕಂಡುಬರುತ್ತಿದ್ದ ಈ ಕೀಟಗಳ ಸಂಖ್ಯೆ. ಈಗ ಕ್ಷೀಣಿಸುವ ಹಂತಲ್ಲಿದೆ. ಕಾರಣ ಗೊತ್ತಾಗುತ್ತಿಲ್ಲ. ಆದರು ಇವುಗಳ ಸಂಖ್ಯೆ ತೀರಾ ಅಪರೂಪವಾಗುತ್ತಿದೆ...


Friday, December 3, 2010

ಚಿತ್ರ ಬೇಟೆ ...1.

         ಚಿತ್ರ ಬೇಟೆ. ಕೆಲವು ದಿನಗಳಿಂದ ಪರಿಸರ, ಸಮಾಜ, ಬದುಕು, ಬಾಷೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತ ಚಿತ್ರಗಳನ್ನು ಸೆರೆಯಿಡಿಯುವ ಕಾಯಕಕ್ಕೆ ಕೈ ಹಾಕಿದ್ದೇನೆ. 10 ಪುಟಗಳ ಅರ್ಥವನ್ನು ಕೇವಲ ಒಂದೇ ಚಿತ್ರದಲ್ಲಿ ಮೂಡಿಸಬಹುದಂತೆ. ಆ ಕಾರಣದಿಂದ ಚಿತ್ರ ಬೇಟೆಗೆ ಸಜ್ಜುಗೊಂಡಿದ್ದೇನೆ. ಹಳ್ಳಿಬದುಕು, ಪ್ರವಾಸಿ ತಾಣಗಳು, ಕಲೆ, ಸಾಹಿತ್ಯ, ದಾರ್ಮಿಕ ಆಚರಣೆಗಳು, ಸಭಾ ಸಮಾರಂಭಗಳು, ವೇಶಭೂಷಣಗಳು ಹೀಗೆ ನಾಡಿನ ಸೊಬಗನ್ನು ಬಿಂಬಿಸುವಂತ ಚಿತ್ರಗಳ ಬೇಟೆಯನ್ನು ಶುರು ಮಾಡಿದ್ದೇನೆ. ನಿಮ್ಮ ಪ್ರೋತ್ಸಾಹದೊಂದಿಗೆ ಅವುಗಳೆಲ್ಲವನ್ನು ಈ ಬ್ಲಾಗಿನ ಮುಖಾಂತರ ನಿಮ್ಮ ಮುಂದಿಡಲು ಬಯಸುತ್ತೇನೆ. ಧನ್ಯವಾದಗಳೊಂದಿಗೆ.
ನಮ್ಮ ಹಳ್ಳಿಯ ಕೆರೆಯ ಬಳಿ ಕ್ಯಾಮರ ಕಣ್ಣಿಗೆ ಬಿದ್ದ ಚಿತ್ರವಿದು .....

                                                                                                                          ವಸಂತ್


Sunday, November 28, 2010

"ಅರ್ಥವಾಗದ ಬದುಕು….!..
ನನ್ನ ಬದುಕೊಂದು ಅರ್ಥವಿಲ್ಲದ ಕವನದಂತೆನಿಸಿ
ಮೊನ್ನೆ ರಾತ್ರಿ ಬರೆದಿಟ್ಟು ಸಾಲುಗಳನ್ನು ಪೂರ್ಣಗೊಳಿಸಲಾಗಿರಲ್ಲ...
ಬರೆದಷ್ಟು ಆಳಕ್ಕೆ ಸಮಸ್ಸೆಗಳೊಡನೆ ಹೆಣಗಾಡುತ್ತ...
ಅರ್ಧ ಸತ್ತು ಮತ್ತರ್ಧ ಜೀವದೊಂದಿಗೆ ಉಸಿರಾಡುತ್ತ...
ಯಾರಿಗಾಗಿ ಈ ಬದುಕೆಂಬ ಹಲವು ಪ್ರಶ್ನೆಗಳು ಎದುರುಗೊಳ್ಳುತ್ತವೆ...

ಜೀವನವೇ ಏಳುಬೀಳಿನ ಸಂತೆಯೆಂದು ಗೊತ್ತಿದ್ದರೂ
ಬದುಕಿನ ಪುಟಗಳ ಒಳ ಅರ್ಥವನ್ನು ಮತ್ತೆ ಮತ್ತೆ ತಿರುವಿಹಾಕುತ್ತ
ಕಣ್ಣಗಲಿಸಿ ನೋಡಿದರೂ ಒಂದು ಪದಕ್ಕೂ ಅರ್ಥಸಿಗುತ್ತಲೇ ಇಲ್ಲ...

ಹಾಗಿದ್ದರೆ ಮಹಾತ್ಮರೆನಿಸಿಕೊಂಡ
ಗಾಂಧಿ, ಅಲ್ಲಮ, ಬುದ್ದ, ಬಸವ, ಬಾಬಾರಂತವರನ್ನೂ
ಈ ಕಷ್ಟಗಳು ಬಾದಿಸದೇ ಇರಲಾರವು...
ಪ್ರಪಂಚವನ್ನೇ ತಿದ್ದಿದಂತ ಮಹಾತ್ಮರನ್ನೂ ಬಿಟ್ಟಿರದ
ಸಮಸ್ಸೆಗಳು ಸಾಮಾನ್ಯ ಜನರನ್ನು ಸುಮ್ಮನೆ ಬಿಡುತ್ತವೆಯೆ
ಎಂಬ ಕೊರಗು ಸದಾ ನನ್ನೋಳಗೆ ಮಾರ್ಧನಿಸುತ್ತಲೇ ಇದೆ...

ದಿನನಿತ್ಯ ನೂರಾರು ಗಡಿಬಿಡಗಳು
ಸದಾ ಚಿಂತೆಗಳೊಂದಿಗೆ ಬಡಿದಾಟ
ಉಕ್ಕುವ ಆಸೆಗಳಿಗೆ ಉತ್ತರಿಸಲಾಗದೆ.. ಒಂದು ಕ್ಷಣ
ಬೆಳಕಂತೆ ತೋರಿದರೂ ಮತ್ತೊಮ್ಮೆ ಘಾಡ ಕತ್ತಲು ಕವಿದಿರುತ್ತದೆ...
ಅತ್ತ ದಡವನ್ನೂ ಸೇರಲಾಗದೆ, ಇತ್ತ ಹಳ್ಳದಲ್ಲೂ ಮುಳುಗಲಾಗದೆ,..
ಸಾವು ಬದುಕಿನ ನಡುವೆ ತ್ರಿಶಂಕೂ ಸ್ಥಿತಿಗೆ ಮುಕ್ತಿಯಾದರೂ ಎಂದು ಎಂಬ...
ನನ್ನ ಕವನದಲ್ಲಿ ಬರೆದಷ್ಟೆ ಸಾಲುಗಳು,.. ತಿಳಿದಷ್ಟೇ ಜೀವನ,..
ಮತ್ತೇನಂಬ ಹಲವು ಪ್ರಶ್ನೆಗಳು ನನ್ನನ್ನೇ ಎದುರು ನೋಡುತ್ತವೆ...

ಮತ್ತೇನು ತೋಚದೆ ಒಂದು ಕ್ಷಣ ಶಾಂತವಾಗುತ್ತ...
“ಮಾನವ ದೇಹವು ಮೂಳೆ ಮಾಂಸದ ತಡಿಕೆ
ಇದರ ಮೇಲಿದೆ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೆ ,
ಎಂಬ ಕುಂಬಾರರ ಸಾಲುಗಳು ನೆನಪಿಗೆ ಬಂದು ಮೌನಕ್ಕೆ ಚರಣಾಗುತ್ತೇನೆ…

                                                                              ವಸಂತ್ 

ಚಿತ್ರಕೃಪೆ.

Thursday, November 25, 2010

ಕನಸಿನೊಳಗೊಂದು ದಿನ..!.ಜವ್ವನ ಕರಿಹೊತ್ತು
ಇರುಳೊಳಗೆ ಕಳೆದುಹೋಗಿ
ಕನಸ ಕಟ್ಟುತಲಿದ್ದೆ...

ಆಗಸದ ತುಂಬಾ
ಮಂದಾರ ಪುಷ್ಪಗಳು
ಏಣಿಯೊಂದು ಸ್ವರ್ಗಕ್ಕೆ...

ಪಾರಿವಾಳಗಳು ಕೈಬೀಸಿ
ಕರೆಯುತ್ತಿದ್ದವು
ಸ್ವರ್ಗ ಲೋಕದ ಪಯಣಕ್ಕೆ....

ತನ್ನೊಳಗಿನ ಮೌನ
ಬೆಚ್ಚಿ ನುಡಿದಿತ್ತು !..

ಹೋಗುವೆಯಾ ಹುಡುಗಿ
ಹಿರಿಯೂರ ಸೌಧಕ್ಕೆ...
ಬ್ರಾಂತಿಯಲಿ ಮೈಮರೆತು
ಇಳಿಯದಿರು ನರಕಕ್ಕೆ...

ಗೊಂದಲವೇ ಗಾಳವಾಗಿ
ಮನಸಿನೊಳು ತೂರಿತ್ತು...
ಸ್ವರ್ಗ ನರಕಗಳೆರಡು
ಕೈ ಹಿಡಿದು ಎಳೆದಿತ್ತು...

ಹೂವಿನ ಹಾಸಿಗೆಯೊಂದೆಡೆ ?..
ಮುಳ್ಳಿನ ಹೊದಿಕೆಯೊಂದೆಡೆ ?..

ಬೆಚ್ಚಿ ಬೇಸತ್ತು ...!.
ಚೀರಿಕೊಂಡು ಕಣ್ ಬಿಟ್ಟೆ...

ಇರುಳು ಕಳೆದಿತ್ತು...
ಬೆಳಕು ಮೂಡಿತ್ತು...
ನನ್ನ ಅವಸ್ಥೆಯ ಕಂಡು
ಸೂರ್ಯ ನಗುತ್ತಿದ್ದ...

                                     ವಸಂತ್
                                   
ಚಿತ್ರಕೃಪೆ. http://1.bp.blogspot.com/

Friday, November 19, 2010

ಜನತೆಯ ಕೂಗು..!.

ನಿಮ್ಮ ರಾಜಕೀಯದಾಟದಲಿ ನಮ್ಮನ್ನು 
ದಾಳಗಳನ್ನಾಗಿ ಬಳಸಿಕೊಳ್ಳದಿರಿ…
ನಿಮಗೆ ನಾವು ಮತಹಾಕಿದ್ದು…
ನಮ್ಮನ್ನು ಅಭಿವೃದ್ಧಿ ಪಡಿಸುತ್ತೀರೆಂದು…
ನಿಮ್ಮಿಷ್ಟದಂತೆ ನೀವುಗಳು ನಡೆದುಕೊಳ್ಳುವುದಕ್ಕಲ್ಲ..,

ನಮ್ಮ ಬಳಿ ಅಧಿಕಾರವಿಲ್ಲ...
ಅಂಗರಕ್ಷಕರಿಲ್ಲ, ಹಣಬಲವಿಲ್ಲ...
ಎರಡಂತಸ್ಸಿನ ಮನೆಯು ಇಲ್ಲ…
ಮಳೆ ಬಂದರೆ ನೆನೆಯುತ್ತ…
ಚಳಿಯಲ್ಲಿ ನಡಗುತ್ತ, ಬಿಸಿಲಿನಲಿ ಒಣಗುತ್ತಿವೆ…
ನಿಮ್ಮ ಹಾಗೆ ಮೃಷ್ಠಾನವನ್ನು ತಿನ್ನುವುದಾದರು ಎಂತು..,

ದಿನಕ್ಕೊಂದು ಸುಳ್ಳಿನ ಸರಮಾಲೆ...
ನನ್ನದು ಕಮ್ಮಿ. ಅವನದು ಹೆಚ್ಚೆಂದು…
ನಿನ್ನ ಮಾತು ಸುಳ್ಳು, ನಾ ಹೇಳುವುದೇ ಸತ್ಯವೆಂದು...
ನೀನು ಪಡೆದಿಲ್ಲವೆ…ನಾನೇಕೆ ಪಡೆಯಬಾರದೆಂಬ...
ಬಂಡತನವನ್ನು ತೋರದಿರಿ ಸ್ವಾಮಿ...
ನಿಮ್ಮಯ ತಪ್ಪುಗಳನ್ನು ನೀವುಗಳೆ ಸರಿಪಡಿಸಿಕೊಳ್ಳಿ..,

ನೀವು ಹಿರಿಯರು ನಿಮ್ಮಿಷ್ಟದಂತೆ ನಡೆದುಕೊಳ್ಳಿ…
ಆದರೆ ತುತ್ತು ಕಾಣದ ಜನಕೊಂದಿಷ್ಟು ಅನ್ನವನ್ನು…
ಸೂರಿಲ್ಲದ ಬಡವರಿಗೊಂದಿಷ್ಟು ನೆಲೆಯನ್ನು…
ನೀರೇ ಕಾಣದ ಮಂದಿಗಷ್ಟು ಶುದ್ಧ ಜಲವನ್ನು ಕೊಟ್ಟರೆ ಸಾಕು…
ಹೇಗೋ ಜೀವವಿಡಿದು ನಿಲ್ಲುತ್ತೇವೆ..,

ನಿಮ್ಮ ಆಶ್ವಾಸನೆಗಳನ್ನು ಕಾಯುತ್ತ…
ನೀವು ಬರುವ ದಾರಿಗಳಲ್ಲಿ ಹೂಗಳನ್ನು ಹಾಸುತ್ತ…
ನೀವು ಮಾಡುವಂತ ಅಭಿವೃದ್ಧಿಯನ್ನು ನೋಡುತ್ತ…
ನಿಮ್ಮಯ ಆದರ್ಶ ಸರ್ಕಾರಗಳನ್ನು ಭಯಸುತ್ತಿದ್ದೇವೆ…
ನೀವೇ ಕೊಟ್ಟಂತ ಆಶ್ವಾಸನೆಗಳನ್ನು…
ಎಂದು ಪೂರ್ಣವಾಗಿಸುತ್ತೀರೆಂದು ದೀಪವಿಟ್ಟು ಕಾಯುತ್ತಿದ್ದೇವೆ...,

                                                                                  ವಸಂತ್ 

ಚಿತ್ರಕೃಪೆ. http://lh4.ggpht.com

Wednesday, November 17, 2010

ನಿಲ್ಲು ನಿಲ್ಲು ಎಲೆ ಮನವೆ...!.

ನಿಲ್ಲು ನಿಲ್ಲು ಎಲೆ ಮನವೆ
ಜಗದ ಪಾಪಗಳ ಕಂಡು
ನೊಂದು ಮರುಗಿ ಹೋಗದಿರು
ನೂರು ಕಷ್ಟಗಳ ಸುತ್ತ ನಮ್ಮ ಬಾಳು...

ಸುರಿವ ಕಣ್ಣೀರಲ್ಲಿ
ಹಲವು ಕನಸುಗಳ ಬಿತ್ತಿ
ಅವು ಮೊಳಕೆಯೊಡೆಯಲಿಲ್ಲವೆಂದು ಭ್ರಮಿಸಿ
ನೀ ಸಾಗದಿರು
ಕಲ್ಲು ಕರಗುವ ಸಮಯ ಬಂದೇ ಬರುವುದು...

ಕಾಣದ ಸತ್ಯಗಳಿಗಾಗಿ
ಬುದ್ದ ತಡಕಾಡಿ ಗಾಂಧಿ ಸುತ್ತಾಡಿ
ಅಲ್ಲಮರು ತಲೆಯ ಮೇಲೆ ಕೈಹೊತ್ತು
ಏನಾದರೂ ಉತ್ತರವಿದೆಯೇ ಎಂದು
ಸತ್ಯ ಪಥದೆಡೆಗೆ ಮುಖಮಾಡಿದರು...

ಜಗದ ಕೊಳಕನ್ನು ತೋಳೆಯಲು
ಅವರಿಂದಲೂ ಪೂರ್ಣವಾಗಿ ಸಾಧ್ಯವಾಗಲಿಲ್ಲ
ಒಂದು ಸತ್ತರೆ ನೂರು
ಮರುಹುಟ್ಟುನು ಪಡೆದರೆ
ಸತ್ಯಕಿದು ಸಮಯವಲ್ಲವೆಂದೆನಿಸಿ ಮೌನವಾದರು...

ಹುಟ್ಟು ಸಾವಿನ ನೆರಳು
ಎತ್ತ ಹೋದರೂ ಬಿಡಲೊಲ್ಲದು
ಸಂಜೆಗತ್ತಲಾದರೆ
ಮರು ಮುಂಜಾನೆ ಬೆಳಕು ಬೆಳಕಲ್ಲವೆ...

                                                                   ವಸಂತ್

ಚಿತ್ರಕೃಪೆ. http://lh5.ggpht.com/

Sunday, November 14, 2010

ನನ್ನಯ ಮುದ್ದಿನ ಬೆಕ್ಕು...!. (ಮಕ್ಕಳ ಕವನ)


ನನ್ನಯ ಮುದ್ದಿನ ಬೆಕ್ಕೆ...
ಏನು ನಿನ್ನಯ ಸೊಕ್ಕೆ....

ಹಾಲನು ಕೊಟ್ಟರೆ ಕುಡಿಯುವೆ...
ಆಪಲ್ ಕೊಟ್ಟರೆ ಹೋಡುವೆ...

ಚಾಕ್ಲೇಟ್ ನೀನು ತಿನ್ನಲ್ಲ...
ಶಾಲೆಗೆ ಅಂತೂ ಹೋಗೊಲ್ಲ...

ಅ, ಆ, ಇ, ಈ ಬರೆಯೊಲ್ಲ...
ಒಂದು ಎರಡು ಹೇಳಲ್ಲ...

ಇಲಿಯನು ಕಂಡರೆ ಹಿಡಿಯುವೆ...
ಹುಲಿಯಂತೆ ನೀ ನಡೆಯುವೆ...

ಚಂಡಿನ ಜೊತೆಯಲಿ ಚಲ್ಲಾಟ...
ನಾಯಿಯ ಕಂಡರೆ ರಂಪಾಟ...

ಅಮ್ಮನು ಕರೆದರೆ ಕೂಗುವೆ...
ಅಪ್ಪನ ಅಂಗಿಯ ಎಳೆಯುವೆ...

ನಿನ್ನನು ಕಂಡರೆ ನನಗಿಷ್ಟ...
ಓಡದಿರು ನಿನ್ನ ಹಿಡಿಯುವುದೇ ಕಷ್ಟ...

                                               ವಸಂತ್ 

ಚಿತ್ರಕೃಪೆ.. http://lh6.ggpht.com

Saturday, November 13, 2010

ಜಗುಲಿ.!


ಆ ಜಗುಲಿಯ ಮೇಲೆ ಕುಳಿತು
ಅವನೊಡನೆ ಮಾತನಾಡಿದ್ದೆ !
ಬದುಕಿನಲ್ಲಿ ಉತ್ಸಾಹವಿರಬೇಕು
ದೃಢತೆ, ಆದರ್ಶಗಳಿರಬೇಕು
ಈ ಜಗುಲಿಯಂತೆ ಎಂದು ತನ್ನಡಿಯ ಕಲ್ಲುಹಾಸನ್ನು ತೋರಿಸಿ
ನೋಡು, ಹೋದವರೆಲ್ಲಾ ಹೋದರು
ತಲತಲಾಂತರಗಳಿಂದ ಎಷ್ಟು ಢೃದವಾಗಿ ನಿಂತಿದೆ
ಅಚಲವಾಗಿ ನುಡಿದಿದ್ದ!
ಯಾರನ್ನೂ ದ್ವೇಷಿಸುವುದಿಲ್ಲ
ತಿರಸ್ಕರಿಸುವುದಿಲ್ಲ, ಎಲ್ಲವನ್ನೂ ಸಹಿಸಿ
ಜಗುಲಿಯಂತೆ ನಿಶ್ಛಲವಾಗಿ ನಿಲ್ಲಬೇಕು
ಈ ಜುಗುಲಿಯೇ ನನಗೊಂದು ಆದರ್ಶ!
ಅವನ ವರ್ತನೆ ವಿಚಿತ್ರವೆನಿಸಿದರೂ 
ಮಾತಲ್ಲಿನ ಸತ್ಯ ಕೆನ್ನೆಗೊಡೆದಂತಿತ್ತು
ಮೋಸ, ಅಸೂಯೆ ಯಾವುದೂ ಇರಲಿಲ್ಲ
ಬಾನು ಬಾಗಿ ಸಂಜೆ ಮಂಕಾದಾಗ
ನಾಳೆ ಸಿಗುತ್ತೇನೆ ಗೆಳೆಯ ಎಂದೇಳಿ
ಮನೆಯತ್ತ ಹೊರಟಿದ್ದೆ
ಮತ್ತೊಂದು ಸಂಜೆ ಅವನಿರಲಿಲ್ಲ  
ಜಗುಲಿ ಮೌನವಾಗಿತ್ತು
ನಾಲ್ಕು ಜನ ಹೆಗಲಮೇಲೆ ಹೊತ್ತು
ಅವನ ಸಾಗುತ್ತಿದ್ದರು

ಊಡು ಬತ್ತಿಯ ದಟ್ಟ ಹೊಗೆ
ತಮಟೆ ನಗಾರಿಗಳ ಕಿಕ್ಕರಿಸುವ ಸದ್ದು
ಚಿಲ್ಲರೆ ನಾಣ್ಯಗಳು ಉದುರಿ
ಚೆಲ್ಲಾ ಪಿಲ್ಲಿಯಾಗಿ ಬೀಳುತ್ತಿದ್ದವು

ಜಗುಲಿ ಮೇಲೆ ಕುಳಿತೆ ಅವ್ಯಕ್ತ ಭಾವ
ನಮಸ್ಸು ನಿಶ್ಛಳದಂತಿತ್ತು
ಉತ್ಸಾಹ ಆದರ್ಶಗಳು
ಬರಿ ಉಸಿರಿರುವ ತನಕ ಮಾತ್ರವೇ !
ಅರ್ಥವಾಗಲೇ ಇಲ್ಲ
ಯಾವುದೋ ದನಿ ಉಸಿರಿದಂತಾಯಿತು
"ಬದುಕಿನಲ್ಲಿ ಉತ್ಸಾಹವಿರಬೇಕು,
ದೃಢತೆ, ಆದರ್ಶಗಳಿರಬೇಕು
ಜಗುಲಿಯಂತೆ!'
ಮಾತುಗಳು ನನ್ನ 
ಮತ್ತೆ ಮತ್ತೆ ಎಚ್ಚರಿಸುತ್ತಲೇ ಇದ್ದವು
ಸಂಜೆ ಮಂಕಾದಾಗ ಬಾನು ಬಾಗುವವರೆಗು.

Monday, November 8, 2010

ನಲ್ಲೆ..!.ನ್ನ ನೈದಿಲೆಯೆ ನಿನ್ನ ಜಾಡು ಹುಡುಕಿ
ಸರೋವರಗಳೆಲ್ಲವನ್ನೂ ತಡಕಾಡುತ್ತೇನೆ
ನಾ ಸೂರ್ಯನಾಗಲಾರೆ
ಬಂದು ಎನ್ನ ಬಿಗಿದಪ್ಪುಕೋ..

ಓ ನನ್ನ ಕೋಗಿಲೆಯೆ ನಿನ್ನ ಸುಮಧುರ ಕಂಠಕ್ಕಾಗಿ
ಪ್ರತಿದಿನವು ಹಂಬಲಿಸುತ್ತೇನೆ
ನನ್ನನ್ನು ಒಂಟಿಯನ್ನಾಗಿಸಬೇಡ
ಮಧುವನದ ಸರೋವರದಲ್ಲಿ ಪೂರ್ಣವಾಗಿ ಮುಳುಗಿಸು..

ಓ ನನ್ನ ಮಲೆಯ ಮಾರುತವೇ
ನಿನ್ನ ತಣ್ಣನೆಯ ಸ್ವರ್ಶಕ್ಕಾಗಿ ಸೋತು ಸೊರಗುತ್ತೇನೆ
ನಿನಗಾಗಿ ಹಂಬಲಿಸುವ ಈ ಹೃದಯಕ್ಕೆ
ಮುತ್ತಿನ ಹನಿಗಳನ್ನು ಸುರಿಸಿ..

ಓ ನನ್ನ ಬೆಳ್ಮುಗಿಲೆ ನಿನ್ನ ಆಕೃತಿಗಳನ್ನು ಬಳಸಿ
ನನ್ನನ್ನು ಮರುಳು ಗೊಳಿಸಬೇಡ
ಈ ನಿನ್ನ ಇನಿಯನ ಕರೆಗೆ ಓಗೊಟ್ಟು
ನನ್ನ ಬಾಳನ್ನು ಬೆಳಗಿಸುವ ಬೆಳಕಾಗಿ ಬಾ..

ಚಿತ್ರಕೃಪೆ. http://lh4.ggpht.com/

Wednesday, November 3, 2010

ದೀಪಾವಳಿ ..!.ದೀಪದಿಂದ ದೀಪ ಬೆಳಗಿಸಿ
ಮನಕೆ ಕವಿದ ಕತ್ತಲ ತೊಲಗಿಸಿ
ಕಜ್ಜಾಯದ ಸಿಹಿಯಂತೆ
ಎಂದೂ ಆರದ ಜ್ಯೋತಿಯಂತೆ
ಎಲ್ಲರ ಬಾಳಿನಲ್ಲೂ ಮೂಡಿ ಬರಲಿ ಆಶಾಕಿರಣ
ನೆನಪಿನ ದೀವಿಗೆಗಳ ಚಿತ್ತಾರದ ತೋರಣ..ದೀಪಾವಳಿಯ ಶುಭಾಶಯಗಳು..

                                                                        ವಸಂತ್

ಚಿತ್ರಕೃಪೆ. http://api.ning.com

Saturday, October 23, 2010

ಮೌನದೊಳು ಮೌನವಾಗುತ್ತ....!.


ನೂರಾರು ಆಸೆಗಳ ಹೊತ್ತು ಹಲವಾರು ಕನಸುಗಳೊಂದಿಗೆ
ಜವರಾಯನ ಬೆದರಿಕೆಗೂ ಬಗ್ಗದೆ
ಮೌನದೊಳು ಮೌನವಾಗಿ ಬದುಕುತ್ತೇನೆ....

ಜಡವಾದ ಮಾತುಗಳು, ಸತ್ಯವನ್ನು ತೊರೆದ ನಾಲಿಗೆಗಳು,
ಎಡಗೈಯಿಂದ ಬಲಗೈಗೆ ಗೊತ್ತಾಗದಂತೆ
ಹಸ್ತಾಂತರವಾಗುವ ಪಾಪಗಳು ನನ್ನನ್ನು
ನಿನ್ನದು ಯಾವ ದಿಕ್ಕಿನ ದಾರಿ ಎಂದು ಕೇಳುತ್ತವೆ.... ?.

ಒಮ್ಮೆ ತಣ್ಣಗೆ ಬೀಸಿಬಂದ ತಂಗಾಳಿಯಲ್ಲಿ
ಕಾಣದ ವಿಷವಾಯು ಹರಿಯುತ್ತದೆ....
ದಾಹ ತೀರಿಸಿಕೊಳ್ಳಲೆಂದು ನೀರು ಕುಡಿಯಲು ಹೋದಾಗ
ಲವಣಗಳು ವಿಷಕಾರಕ ಪದಾರ್ಥಗಳು
ನಮ್ಮ ದೇಹದೊಳು ಸೇರುತ್ತಿರುತ್ತವೆ....
ಕತ್ತಲಲ್ಲೂ ಬೆಳಕಾದಂತೆ ಬಂದೂಕು ಬಾಂಬುಗಳ ಸ್ಪೋಟಗಳು
ಅಬ್ಬರಿಸಿ ತಣ್ಣಗೆ ಮರೆಯಾಗುತ್ತವೆ....

ಮೌನವಾಗಿ ಕುಳಿತಿದ್ದ ನನ್ನಲ್ಲಿ
ಕೆಲವು ಪ್ರಶ್ನೆಗಳು ಎದುರುಗೊಂಡು ಕೇಳುತ್ತದೆ
ನಾವು ಬದುಕುವುದಾದರೂ ಯಾವ ಪುರುಷಾರ್ಥಕ್ಕಾಗಿ....
ಅಪಾಯ ಕಾರಕ ವಿಷಜಂತುಗಳ ಜೊತೆ ನೆಮ್ಮದಿಕಾಣದ ಬದುಕು, 
ಯಾವ ಕ್ಷಣದಲ್ಲಾದರು ಏನಾದರೂ ಆಗಬಹದು
ಈ ಲೋಕವನ್ನು ಮತ್ತೆ ತಿದ್ದಲು ಬಾಬ, ಗಾಂಧಿ, ಬುದ್ದ
ಬಸವರಂತಹವರಾರು ಬರಲಾರರ ಎಂಬ ಪ್ರಶ್ನೆಗೆ ?.
ನನ್ನ ಬಳಿ ಉತ್ತರವಿರಲಿಲ್ಲ....!.
ಆದರೆ ಸಜ್ಜನಿಕೆಯ ಮನಸ್ಸುಗಳು ಒಂದಾದಲ್ಲಿ ಮಾತ್ರ
ದುರ್ಗುಣಗಳನ್ನು ಹೋಗಲಾಡಿಸಬಹುದೆಂದು ನನ್ನ ಒಮ್ಮತವಾಗಿತ್ತು....

ಪ್ರಾಣವಿಲ್ಲದ ವೃಕ್ಷ ಸಂಪತ್ತು
ತನ್ನಲಿ ಬಿಡುವ ಹೂ ಹಣ್ಣುಗಳ ಬಗ್ಗೆ ತಮಗೆ ಅರಿವಿಲ್ಲದಿದ್ದರೂ
ಪರರ ಉದರವನ್ನು ಪೋಷಿಸುತ್ತವೆ....
ಹಾಗೆ ನಮ್ಮ ಬದುಕು ತನಗಲ್ಲದಿದ್ದರೂ
ಇತರರ ನೆರವಿಗಾದರೂ ಜೀವಿಸಬೇಕೆಂದುಕೊಳ್ಳುತ್ತದೆ....
ಗಾಂಧೀಜಿಯ ತತ್ವವನು ಗಾಳಿಗೆ ತೂರಿ
ಗೌತಮನ ಭೋದಿಷೃಕ್ಷವನ್ನೇ ಕಡಿದು
ಅಲ್ಲಮ ಬಾಬರ ವಾಕ್ಯಗಳಿಗೆ ಬೆಲೆಕೊಡುವವರಾರೆಂದು ಅಂದುಕೊಳ್ಳುತ್ತಿದ್ದಾಗ....

ಸಂಜೆಯ ಬಾನಲಿದ್ದ ಸೂರ್ಯ ಆಗತಾನೇ ಕತ್ತಲು ದೂಡಿ ಕೆಂಪಾಗುತ್ತಿರುತ್ತಾನೆ.....
ಅದರರ್ಥ ನಾಳೆಯ ಬೆಳಕಿಗೆ ಈ ಕತ್ತಲು ಸಾಕ್ಷಿಯೆಂಬಂತ್ತಿತ್ತು....
ಮೌನದಲಿ ಮೌನವಾಗಿದ್ದ ನನಗೆ ಮುಂದಿನ ಕಾರ್ಯಗಳ ಬಗ್ಗೆ ಅರಿವಾಗಿ
ಕಾಣದ ಸತ್ಯಗಳನ್ನು ಹುಡುಕುತ್ತ ಕತ್ತಲಲ್ಲಿ ಸಾಗುತ್ತೇನೆ.......

                                                                              ವಸಂತ್ 

ಚಿತ್ರಕೃಪೆ. http://lh4.ggpht.com