Sunday, June 13, 2010

ಅಣಕು ಶಾಯರಿ...2.


6.
ಆದ್ಯಾಕೆ ಹುಡುಗಿ ?.
ನನ್ನ ಕೆಂಪು ವಸ್ತ್ರವ ಕಂಡರೆ ಸಾಕು
ನಿನ್ನೊಳಗೆ ಒಂದು ರೀತಿಯ
ಭಯ ಭಕ್ತಿ ಆನಂದ.
ವ್ಹಾ.......ವ್ಹಾ........
ಆದ್ಯಾಕೆ ಹುಡುಗಿ ?.
ನನ್ನ ಕೆಂಪು ವಸ್ತ್ರವ ಕಂಡರೆ ಸಾಕು
ನಿನ್ನೊಳಗೆ ಒಂದು ರೀತಿಯ
ಭಯ ಭಕ್ತಿ ಆನಂದ.
ವ್ಹಾ.......ವ್ಹಾ........


ಹೇಳಿ ಬಿಡು ಗೊತ್ತಾಗುತ್ತಿಲ್ಲ ?.
ನನ್ನ ಮುಖದಲ್ಲೇನಾದರು ಕಾಣುತ್ತಾನ
ಆ ನಿತ್ಯಾನಂದ...


7.
ನಾನು ಪ್ರೀತಿಸುತ್ತಿದ್ದ ಪ್ರತಿ ಹುಡುಗೀರ
ಮುಖ ನೋಡಿ ಹೇಳುತ್ತಿದ್ದೆ
ನಿನ್ನ ಮುಖ ಐಶ್ವರ್ಯಾ ರೈ.
ವ್ಹಾ.......ವ್ಹಾ........
ನಾನು ಪ್ರೀತಿಸುತ್ತಿದ್ದ ಪ್ರತಿ ಹುಡುಗೀರ
ಮುಖ ನೋಡಿ ಹೇಳುತ್ತಿದ್ದೇ
ನಿನ್ನ ಮುಖ ಐಶ್ವರ್ಯಾ ರೈ.
ವ್ಹಾ.......ವ್ಹಾ........

ಇದರಿಂದಲೆ ಏನೋ ?.
ಅವರೆಲ್ಲ ಹೇಳಿ ಹೋಗುತ್ತಿದ್ದರು ನನಗೆ
ಬಾಯ್ ಬಾಯ್...

8.
ನಿನ್ನ ಕಣ್ಣ ನೋಟಕ್ಕೆ ಸೋತು
ನಾನು ಅನುದಿನವು ಬಿದ್ದು ಏಳುತ್ತಿದ್ದೆ.
ವ್ಹಾ.......ವ್ಹಾ........
ನಿನ್ನ ಕಣ್ಣ ನೋಟಕ್ಕೆ ಸೋತು
ನಾನು ಅನುದಿನವು ಬಿದ್ದು ಏಳುತ್ತಿದ್ದೆ.
ವ್ಹಾ.......ವ್ಹಾ........

ಆದರೆ
ನಿನ್ನ ಜೊತೆಗೆ ನಿನ್ನ
ಗಂಡನನ್ನು ಕರೆತಂದಾಗ
ನಾನು ಹೇಳದೆಯೆ ಬಿದ್ದೆ...

9.
ಅಳಬೇಡ ಹುಡುಗಿ
ನಾನೇನು
ಮಾಡಲು ಸಾಧ್ಯವಿಲ್ಲ !.
ವ್ಹಾ.......ವ್ಹಾ........
ಅಳಬೇಡ ಹುಡುಗಿ
ನಾನೇನು
ಮಾಡಲು ಸಾಧ್ಯವಿಲ್ಲ !.
ವ್ಹಾ.......ವ್ಹಾ........

ನಿನ್ನಪ್ಪನ ಬಳಿಗೋಗು ಕೇಳು
ಕೊಡಿಸುತ್ತಾನೆ
ಪೆನ್ನು ಪುಸ್ತಕಗಳನ್ನೆಲ್ಲ...

10.
ನಿನ್ನ ಕಂಡರೆ ನನಗೆ ಕಾಣುವುದು
ಮಂಜು ಮುಸುಕಿದ ನೀಲಿ ಆಕಾಶ.
ವ್ಹಾ.......ವ್ಹಾ........
ನಿನ್ನ ಕಂಡರೆ ನನಗೆ ಕಾಣುವುದು
ಮಂಜು ಮುಸುಕಿದ ನೀಲಿ ಆಕಾಶ.
ವ್ಹಾ.......ವ್ಹಾ........

ಕಾರಣ ತಿಳಿಯಲಿಲ್ಲ ?.
ಆದರೂ
ಡಾಕ್ಟರ್ ಬಳಿ ಕೇಳಿದಾಗ
ಅವರೆಂದರು
ನಿನ್ನ ಕಣ್ಣನಲ್ಲಿದೆ ದೃಷ್ಟಿದೋಷ..

                                                         ವಸಂತ್

2 comments:

PARAANJAPE K.N. said...

ವಸಂತ್, ನಿಮ್ಮ ಪರಿಚಯ ಬ್ಲಾಗ್ ಮೂಲಕ ಆಗಿದ್ದು ಖುಷಿಯಾಯ್ತು, ನಿಮ್ಮ ಶಾಯರಿ ಗಳನ್ನು ಓದಿದೆ, ಚೆನ್ನಾಗಿದೆ, ಮುಂದುವರಿಸಿ,

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು PARAANJAPE ಸಾರ್. ನಿಮ್ಮ ಬ್ಲಾಗನ್ನು ನಾನು ಮೋದಲ ಬಾರಿಗೆ ನೋಡಿದ್ದು. ನಿಜವಾಗಿಯು ನಿಮ್ಮ ಲೇಖನಗಳು ತುಂಬಾ ಅರ್ಥಪೂರ್ಣವಾಗಿ ಮತ್ತು ಉತ್ತಮವಾದ ಆದರ್ಶಗಳನ್ನು ತುಂಬಿ ಪ್ರಕಟಿಸಿದಂತಿವೆ. ನಿಮ್ಮ ಜ್ಞಾನಾರ್ಜನೆ ತುಂಬಾ ವಿಸ್ತಾರವಾದದ್ದು ಮತ್ತು ಅದನ್ನು ಇತರರಿಗೂ ಧಾರೆಯೆರೆದು ಕೊಟ್ಟಂತಿದೆ. ಹಾಗೆ ನಿಮ್ಮ ಲೋಗೋದಲ್ಲಿರುವ ಧ್ಯಾನಸ್ತ ಆ ಪುಟ್ಟ ಬಾಲಕನ ಭಂಗಿ ಎಂತಹವರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಹಾಗೆ ನನ್ನ ಕವನಕ್ಕೆ ನೀವು ಪ್ರತಿಕ್ರಿಯೆ ಸೂಚಿಸಿದ್ದಕ್ಕಾಗಿ ನಾನು ನಿಮಗೆ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸಲು ಇಷ್ಟ ಪಡುತ್ತೇನೆ.
ವಸಂತ್