Thursday, June 17, 2010

ಅಣಕು ಶಾಯರಿ...3.


11.
ಅಳಬೇಡ ಪ್ರಿಯೇ
ನಿನಗೊಂದು ತರುತ್ತೇನೆ
ಪುಷ್ಪಕ ವಿಮಾನ.
ವ್ಹಾ.......ವ್ಹಾ........
ಅಳಬೇಡ ಪ್ರಿಯೇ
ನಿನಗೊಂದು ತರುತ್ತೇನೆ
ಪುಷ್ಪಕ ವಿಮಾನ.
ವ್ಹಾ.......ವ್ಹಾ........

ಆದರೆ
ಮೇಲೆ ಹಾರಿಸಿಕೊಂಡು ಹೋಗಲು
ಸರಿಯಿಲ್ಲ ಹವಾಮಾನ...

12.
ನನ್ನವಳಿಗೆ ಬರೆಯುತ್ತೇನೆ ಅನುದಿನವು
ಒಂದು ಪ್ರೇಮ ಪತ್ರ.
ವ್ಹಾ.......ವ್ಹಾ........
ನನ್ನವಳಿಗೆ ಬರೆಯುತ್ತೇನೆ ಅನುದಿನವು
ಒಂದು ಪ್ರೇಮ ಪತ್ರ.
ವ್ಹಾ.......ವ್ಹಾ........

ಆದರೆ
ಅವುಗಳನ್ನು ಪ್ರೀತಿಯಿಂದ ಕೊಡಲು
ಹೋದಾಗ ಹೇಳುತ್ತಾಳೆ ?.
ಬರಲೇ ಬೇಡ ನೀನು ನನ್ನ ಹತ್ರ...



13.
ರಾತ್ರಿಯ ಕನವರಿಕೆಯಲ್ಲು
ನಮ್ಮ ಜನಗಳು ಹೇಳುತ್ತಾರೆ
ಟೊಂಟಿ, ಪಾರ್ಟಿ, ಸಿಕ್ಸ್ಟಿ.
ವ್ಹಾ.......ವ್ಹಾ........
ರಾತ್ರಿಯ ಕನವರಿಕೆಯಲ್ಲು
ನಮ್ಮ ಜನಗಳು ಹೇಳುತ್ತಾರೆ
ಟೊಂಟಿ, ಪಾರ್ಟಿ, ಸಿಕ್ಸ್ಟಿ.
ವ್ಹಾ.......ವ್ಹಾ........


ತಪ್ಪು ತಿಳಿಯಬೇಡಿ ಇದು
ಸ್ಕೂಲಿನಲ್ಲಿ ಕಲಿತ ವಿಧ್ಯೆಯಲ್ಲ

ನಮ್ಮ ಜನಗಳು ಬಾರುಗಳಲ್ಲಿ
ಆಗಾಗ ಹೋಗಿ ಕಲಿತ
ಇಂಗ್ಲೀಶ್ ಅಕ್ಷರಗಳ ಪಟ್ಟಿ...

14.
ಆದ್ಯಾಕೋ ಗೊತ್ತಿಲ್ಲ ನನ್ನ
ಪೋನಿನಲ್ಲಿ ಹತ್ತಾರು
ಮಿಸ್ಡ್ ಕಾಲ್ಸ್.
ವ್ಹಾ.......ವ್ಹಾ........
ಆದ್ಯಾಕೋ ಗೊತ್ತಿಲ್ಲ ನನ್ನ
ಪೋನಿನಲ್ಲಿ ಹತ್ತಾರು
ಮಿಸ್ಡ್ ಕಾಲ್ಸ್.
ವ್ಹಾ.......ವ್ಹಾ........

ಹೋಗಲಿ
ಬೈದಾದರು ಬುದ್ಧಿ ಹೇಳೊಣವೆಂದರೆ
ಇರುವುದಿಲ್ಲ ಒಂದು ರೂ ಬ್ಯಾಲೆನ್ಸು...

15.
ನಿನ್ಯಾಕೆ ಹುಡುಗಿ ಪೋನಿನಲ್ಲಿ
ಮಾತಾಡುವೆ ಗಂಟೆ ಗಂಟೆ.
ವ್ಹಾ.......ವ್ಹಾ........
ನಿನ್ಯಾಕೆ ಹುಡುಗಿ ಪೋನಿನಲ್ಲಿ
ಮಾತಾಡುವೆ ಗಂಟೆ ಗಂಟೆ.
ವ್ಹಾ.......ವ್ಹಾ........

ನಿನಗ್ಯಾಕೆ ಬೇಕು
ಈ ಕಾಲದ ಪಡ್ಡೆ ಹುಡುಗರ ತಂಟೆ...

                                                              ವಸಂತ್

6 comments:

Dileep Hegde said...

ಹಹಹ.. ಅಣಕು ಶಾಯರಿಗಳು ಚೆನ್ನಾಗಿವೆ ವಸಂತ್..

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು Dileep Hegde ರವರೆ ನಿಮ್ಮ ಶಾಯರಿಗಳು ಅದ್ಭುತವಾಗಿವೆ. ಹಾಗೆಯೆ ನಿಮ್ಮ ಕಾರ್ಟೂನ್ ಕಾರ್ನರ್ ಅಂತು ಅದ್ಭುತ ಮತ್ತು ಕವನಗಳು ತುಂಬಾನೆ ಇಷ್ಟವಾದವು.

ವಸಂತ್

ಮನದಾಳದಿಂದ............ said...

ವ್ಹಾವ್...........
ವ್ಹಾವ್.........
ಕ್ಯಾ ಬಾತ್ ಹೈ.........

ಸುಂದರ ಚುಟುಕುಗಳು.......

© ಹರೀಶ್ said...

ನಿಮ್ಮ ಪುಷ್ಪಕವಿಮಾನದ ಶಾಯಿರಿ ಚನ್ನಾಗಿದೆ
ಹೀಗೆ ಕಥೆ, ಕವನ ಬರೆಯುತ್ತಿರಿ ಯಾವುದಾದರೊಂದರಲ್ಲಿ ಪಕ್ವರಾಗುತ್ತೀರ.

ಹೊನ್ನ ಹನಿ
http://honnahani.blogspot.com

ಡಾ.ಕೃಷ್ಣಮೂರ್ತಿ.ಡಿ.ಟಿ. said...

ವಸಂತ್ ;ನಿಮ್ಮ ಶಾಯರಿಗಳು ಚೆನ್ನಾಗಿವೆ.

ವಸಂತ್ said...

ಎಲ್ಲರಿಗು ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮ ಮಾರ್ಗದರ್ಶನದ ಅಗತ್ಯತೆಯು ನನಗೆ ಬೇಕಾಗಿದೆ. ನೀವು ನೀಡುತ್ತಿರುವ ಪ್ರೋತ್ಸಾಹ ನನಗೆ ಮುಂದೆ ಸುಗಮವಾಗಿ ಸಾಗಿ ನಡೆಯುವ ಹಾದಿಯಾಗಬಹುದೆಂದು ಕೊಳ್ಳುತ್ತೇನ ಮತ್ತೊಮ್ಮೆ ಧನ್ಯವಾದಗಳೊಂದಿಗೆ.

ವಸಂತ್