Sunday, June 20, 2010

ಮುಂಗಾರಿನಲ್ಲಿ ಜೊತೆಯಾದ ಪ್ರಣಯ ಪಕ್ಷಿಗಳು.



ನಾ ನಿನ್ನ ಕಂಡದ್ದು
ಬಸ್ಟಾಂಡಿನಲ್ಲೇ ಆದರೂ
ನನ್ನೊಳಗೊಂದು ಪ್ರೀತಿಯ ಬೀಜವು
ರೂಪು ಗೊಂಡದ್ದು ಅದೇ ಸ್ಥಳದಲ್ಲಿಯೇ ?.
ಎಂಬುದ್ದನ್ನು ನಾ ಎಂದು ಮರೆಯುವುದಿಲ್ಲ.

ನನಗಾಗಿ ನೀನು ನಿನಗಾಗಿ ನಾನು
ಎಂದೂ!. ಕಾದು ಕುಳಿತವರಲ್ಲ.
ಆ ದಿನ ಸುರಿದ ಮುಂಗಾರಿನ ಮಳೆಯಲ್ಲಿ
ರಭಸದಿಂದ ಸಿಡಿದ ಸಿಡಿಲಿಗೆ  
“ಬೆಚ್ಚಿ” ನೀನು ನನ್ನ ತೋಳಿನ ತೆಕ್ಕೆಯಲಿ
ಸದಾ ಬಂದಿಯಾಗುತ್ತೀಯಾ ಎಂದು
ನಾನು ಕನಸಕಂಡಿರಲೇ ಇಲ್ಲ.

ಸದಾ ಜನ ಜಂಗುಳಿಯಿಂದ ತುಂಬಿದ್ದ
ನಿಲ್ದಾಣ ಒಂದರಲ್ಲಿ  
ನಮ್ಮ ಪ್ರೇಮ ಪೂರಾಣಕ್ಕೊಂದು
ಮುನ್ನುಡಿಯನು ಬರೆಯಲು  
ನಿಂತುಹೋಗಿದ್ದ ಮುಂಗಾರೇ
ಸಾಕ್ಷಿಯಾಗುವುದೆಂದು  ನಾ ಅಂದುಕೊಂಡಿರಲಿಲ್ಲ?.
ನೀನು ಬುತ್ತಿಯಲ್ಲಿ ತರುತ್ತಿದ್ದ ಅನ್ನದಲ್ಲಿ
ನನಗೂ ಪಾಲಿದೆಯೆಂದು ನಾನು
ಎಂದೂ ಅರಿತಿರಲಿಲ್ಲ.

ನಿನಗಾಗಿ ನಾ ಅನುದಿನವು ಕಾಯುತ್ತಿದ್ದೆ.
ನೀ ಕಾಣದಿದ್ದಾಗ ಪರಿತಪಿಸುತ್ತಿದ್ದೆ.
ನಿನ್ನ ಬಗ್ಗೆ ಹಲವಾರು ಕನಸುಗಳನ್ನು ಕಾಣುತ್ತಿದ್ದೆ.
ಒಮ್ಮೊಮ್ಮೆ
ಆ ನಿನ್ನ ಕಣ್ಣುಗಳಿಗೆ
ಆ ನಿನ್ನ ನಾಚಿಕೆಗೆ
ಆ ನಿನ್ನ ಮುನಿಸಿಗೆ
ಆ ನಿನ್ನ ಓಲೈಕೆಗೆ ಸೋತು ಕರುಗುತ್ತಿದ್ದೆ.
ನೀ ಒಂದು ಕ್ಷಣ ತಡವಾಗಿ ಬಂದರು
ಏನನ್ನೊ ಕಳೆದುಕೊಂಡೆನೆಂಬ
ಬಾವನೆ ನನ್ನಲ್ಲಿ ಸದಾ ಹುಚ್ಚುಹಿಡಿಸುತ್ತಿತ್ತು.

ಆದರೆ
ನಮ್ಮಿಬ್ಬರ ಜೀವನದ ಪುಟಗಳನ್ನು
ಆ ದೇವರೆ ಬರೆಂದತ್ತಿತ್ತು.
ಯಾಕೆಂದರೆ ?.
ನಾವಿಬ್ಬರು ತಬ್ಬಲಿಗಳಾಗಿದ್ದೆವು.
ಬಾಳ ಪಯಣ ಬಹಳ 
ದೂರವೆಂದು ತಿಳಿದಿದ್ದರು 
ಚಿಂತಿಸುವ ಅಗತ್ಯವಂತು ಇರಲಿಲ್ಲ.
ಎದುರಿಸಿ ಗೆಲ್ಲುವ ಚೈತನ್ಯವನು
ರೂಡಿಸಿಕೊಳ್ಳಬೇಕಿತ್ತು.

ಇಂದಲ್ಲ ನಾಳೆ
ನಮಗೂ ಒಂದು ಸುಂದರ
ಕನಸೊಂದು ಕಾಣಬಹುದು.
ಅದರಲ್ಲಿ ನಾನು ಷಹಜಹಾನ್
ನೀನು ಮುಂತಾಜ್
ನಾವಿಬ್ಬರು ಪ್ರೀತಿಯಿಂದಲೇ
ಪ್ರೇಮದ ಗುಡಿಯನ್ನು ನಿರ್ಮಿಸಲ್ಲಿದ್ದೆವು.

ನಮ್ಮ ಜೀವನದಲ್ಲಿ ಬರುವ ಕಷ್ಟ ಸುಖಗಳನ್ನು
ಪಾಲುಮಾಡಿಕೊಳ್ಳುತ್ತಿದ್ದೆವು.
ಅದು ಕಣ್ಣೀರಾದರು ಸಹ
ಅಂಚಿಕೊಳ್ಳಲು ಸಿದ್ದರಿದ್ದೆವು.
ನಮಗೂ ಒಂದು ಬದುಕಿದೆ
ಆ ಬದುಕಿಗೆ ಒಂದು ಸುಂದರ ಗುಡಿಯನ್ನು
ಕಟ್ಟಬೇಕೆಂಬ ಆಲೋಚನೆಗಳಿಗೆ
ಒಪ್ಪುವ ಮನೆಯನ್ನು ಕಟ್ಟಿ ಅದಕ್ಕೊಪ್ಪುವ 
ಬಣ್ಣವನ್ನು ಬಳಿದು ಸುಂದರ ಗೊಳಿಸಿ 
ಅಚ್ಚುಕಟ್ಟಾದ ಮನೆಯಾಗಿಸಿ
ನಮ್ಮ ಕನಸುಗಳನು ಬೆಳೆಯಲು ತಯಾರಾಗಿದ್ದೆವು.

                                                                    ವಸಂತ್

4 comments:

© ಹರೀಶ್ said...

channagide nimma preema payana

ವಸಂತ್ said...

ಹರೀಶ್ ರವರೆ ಇದು ನನ್ನ ಪ್ರೀತಿಯ ಪಯಣವಲ್ಲ. ಕಲ್ಪನೆಯ ಪ್ರೀತಿಯ ಪಯಣ. ನಿಮಗೆ ಇಷ್ಟವಾಗಿದ್ದರೆ ಸಾಕು ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

ವಸಂತ್

© ಹರೀಶ್ said...

kalpaneya payanavadaru adu nimma kavana thane.
ishtavayithu kavana.

ವಸಂತ್ said...

ಕಂಡಿತ ಇದು ನನ್ನ ಕವನ.