Wednesday, June 23, 2010

ಇದೆಲ್ಲಕ್ಕೂ ಕಾರಣರಾರು ?..


ಹಾರುವ ಮೋಡಕೆ ರೆಕ್ಕೆಯ ಕಟ್ಟಿ
ತೇಲಲು ಬಿಟ್ಟವರಾರು ?
ಬೀಸುವ ಗಾಳಿಯಲಿ ಕಣ್ಣಿಗೆ ಕಾಣದ
ಉಸಿರನು ಇಟ್ಟವರಾರು ?
ಕತ್ತಲನೋಡಿಸಿ ಬೆಳಕನು ನೀಡುವ
ಸೂರ್ಯನ ನೆಟ್ಟವರಾರು ?
ತಣ್ಣಗೆ ತಣಿಸುವ ಹನಿಗಳ ಸುರಿಸುವ
ಮಳೆಯನು ಕೊಟ್ಟವರಾರು ?
ಯಾರು… ಅವರಾರು…?. ಇದೆಲ್ಲಕೂ ಕಾರಣರಾರು ?.

ತಳಕುತ ಬಳಕುತ ಕುಣಿಯುವ ನವಿಲಿಗೆ
ನಾಟ್ಯವ ಕಲಿಸಿದವರಾರು ?
ಕುಹೂ ಕುಹೂ ಎಂದು ಕೂಗುವ ಕೋಗಿಲೆಗೆ
ಕಂಠವ ಕೊಟ್ಟವರಾರು ?
ಕೆಸರಲಿ ಅರಳುವ ಕಮಲದ ಸೊಬಗಿಗೆ
ಅಂದವನಿಟ್ಟವರಾರು ?
ಸರಸರ ಹರಿಯುವ ನದಿಗಳ ಊರಿಗೆ
ದಾರಿಯ ತೋರುವರಾರು
ಯಾರು… ಅವರಾರು…?. ಇದೆಲ್ಲಕೂ ಕಾರಣರಾರು ?.

ಧಗಧಗ ಬೆಂಕಿಯ ಉಗುಳುವ ಜ್ಯಾಲೆಗೆ
ಬಿಸಿಯನು ಕೊಟ್ಟವರಾರು ?
ಬೆಟ್ಟಗಳಂತೆ ಮನೆಯನು ಕಟ್ಟಿದ
ಹಿಮವನು ಇಟ್ಟವರಾರು ?
ತಿಳಿಯದೆ ಸುತ್ತುವ ನಮ್ಮಯ ಭೂಮಿಗೆ
ಪಥವನು ತೋರುವರಾರು ?
ಇದ್ದೆಲ್ಲವ ಕಾಣಲು ಎಲ್ಲವ ತಿಳಿಯಲು
ನಮ್ಮನೆ ಕೊಟ್ಟವರಾರು ?
ಯಾರು… ಅವರಾರು…?. ಇದೆಲ್ಲಕೂ ಕಾರಣರಾರು ?.


                                                                              ವಸಂತ್
"ಇದೆಲ್ಲಕ್ಕೂ"

4 comments:

Dr.D.T.K.Murthy. said...

ಹುಡುಕಾಟ ಮುಂದುವರೆಯಲಿ.ಒಳ್ಳೆಯ ಕವನ ವಸಂತ್.

© ಹರೀಶ್ said...

neevu hudukidashtu nimmalli kavanaglu huttuvavu

HONNAHANI

ಮನದಾಳದಿಂದ............ said...

ಸುಂದರ ಕವನ.........
ಈ ಪ್ರಶ್ನೆಗೆ ಉತ್ತರ ಹುಡುಕುವುದು ಬಲು ಕಷ್ಟ........
ಆದರೂ ಪ್ರಯತ್ನಿಸಿ, ಸಿಗಬಹುದು.

ವಸಂತ್ said...

ಎಲ್ಲರಿಗು ವಂದನೆಗಳನ್ನು ಸಲ್ಲಿಸುತ್ತಾ ಇದಕ್ಕೆ ಉತ್ತರವನ್ನು ಹುಡುಕಿರುವೆ ಅದು "ಸೃಷ್ಟಿಕರ್ತನೆ" ಇರಬಹುದ?.
ಗೊತ್ತಿದ್ದರೆ ತಿಳಿಸಿ please ಧನ್ಯವಾದಗಳು.

ವಸಂತ್.