Thursday, June 24, 2010

ಸಂಜೆಯ ಸೂರ್ಯನಂತೆ ಕತ್ತಲಾಗಿ ಕಳೆದು ಹೋಗುತ್ತೇನೆ..!.

ಎದೆಯನ್ನು ಬಗೆದು
ಉತ್ತು ಹದಮಾಡಿ
ಬಿತ್ತಿದ ಬೀಜಗಳು
ಮೊಳಕೆಯೊಡೆಯಲಿಲ್ಲ...

ಬಾಳಪೈರಿಗೆ ಕಷ್ಟವೆಂಬ
ಕಣ್ಣೀರೆರೆದರೂ ಫಲಕೊಡಲಿಲ್ಲ…

ಬತ್ತದ ಬಯಕೆಗಳು
ಪೂರೈಸಲಾಗದ ಆಸೆಗಳು
ಭವದ ಬಯಲಲ್ಲಿ
ಹನಿಮಳೆಗಾಗಿ ಹಾತೊರೆಯುತ್ತವೆ…

ಜೀವಕುಲದಲ್ಲಿ ಅಪಾರ
ಆಸೆಗಳ ಹೊತ್ತು ಚಿಗುರಿದೆ
ರೆಕ್ಕೆಗಳು ಮೂಡಲಿಲ್ಲ
ಚಿಗುರುಗಳು ಅರಳಲಿಲ್ಲ…
ಆಸೆಗಳು ಬೆನ್ನಟ್ಟಿ ಬಂದಾಗ
ಬಯಕೆಯೂರಿ ನಿಂತೆ…

ಒಣಗಿ ನಿಂತ ಮರದಂತೆ
ಸೊರಗದ ಬಯಕೆಗಳಿಗೆ
ಎದೆಯೆಂಬ ಮರುಭೂಮಿಯಲಿ
ಸ್ವಾತಿ ಮಳೆ ಹನಿಗಾಗಿ
ಎದುರು ನೋಡುತ್ತೇನೆ…

ಉರಿಯುವ ಸೂರ್ಯ
ತನ್ನಾಸೆಗೆ ತಡೆಯೊಡ್ಡಿ
ಬೆವರು ಸುರಿಸುತ್ತಾನೆ…

ನಾ ಒಂಟಿಯಂತೆ ಅನಿಸಿ
ಪೂರೈಸಲಾಗದ ಆಸೆಗಳು
ಪೂರ್ಣವಾಗದ ಕನಸುಗಳು
ಅಗ್ನಿಕುಂಡವಾಗಿ ಉರಿದಾಗ…

ಸಂಜೆಯ ಸೂರ್ಯನಂತೆ
ಕಪ್ಪನೆಯ ಕತ್ತಲಾಗಿ
ಕಳೆದು ಹೋಗುತ್ತೇನೆ…

                                           ವಸಂತ್

5 comments:

ಮನದಾಳದಿಂದ............ said...

ವಸಂತ್..........
ಕವನ ಚನ್ನಾಗಿದೆ........
ನಿಮ್ಮ ಆಸೆಗಳು ಬೇಗ ಈಡೇರಲಿ...........

© ಹರೀಶ್ said...

ಮೊದಲಿನ ಕವನಕ್ಕೂ ಈಗ ಬರೆದಿರುವ ಕವನದಲ್ಲಿ ಸುಧಾರಿಸಿದಂತೆ ಕಾಣುತ್ತದೆ.

ಹೀಗೆ ಬರೆಯುತ್ತಿರಿ
ಹೊನ್ನ ಹನಿ

Dr.D.T.K.Murthy. said...

ಕವನಗಳು ಚೆನ್ನಾಗಿ ಮೂಡಿಬರುತ್ತಿವೆ.ಕವನಗಳಲ್ಲಿ ಆಶಾವಾದ,ಭರವಸೆ,ಚಿಮ್ಮಲಿ.You are our hopes!

Raghu said...

ಪೂರೈಸಲಾಗದ ಆಸೆಗಳು..ಪೂರ್ಣವಾಗದ ಕನಸುಗಳು..ಸಾಲುಗಳು ತುಂಬಾ ಚೆನ್ನಾಗಿದೆ...ದಟ್ಟ ಕಾಡಿನ ನಡುವೆ ಎಲ್ಲೊ ಅಡಗಿದ ಕಾಡು ಹೂವಂತೆ.
ನಿಮ್ಮವ,
ರಾಘು.

ವಸಂತ್ said...

ಕವನ ಓದಿ ಪ್ರತಿಕ್ರೆಯಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತ. ಈ ನಡುವೆ ದಿನಕೊಂದು ಕವನವನ್ನು ಬರೆಯಲೇ ಬೇಕೆಂಬ ಉತ್ಸಾಹದಿಂದ ಬರೆಯುತ್ತಿದ್ದೇನೆ. ನಿಮ್ಮ ಪ್ರೋತ್ಸಾಹವನ್ನು ಕಂಡು ಮುಂದುವರೆಸುಕೊಂಡು ಹೋಗಲೇ ಬೇಕೆನಿಸುತ್ತಿದೆ. ಆದರೆ ಕಥೆಗಳನ್ನು ಮತ್ತು ಲೇಖನಗಳನ್ನು ಬರೆಯಲಿ ಸಮಯ ಸಿಗುತ್ತಿಲ್ಲ. ಆದ್ದರಿಂದ ಅವುಗಳಿಗೆ ಪುಲ್ ಸ್ಟಾಪ್ ಇಟ್ಟು. ಕವನಗಳನ್ನು ಮಾತ್ರ ಬರೆಯುತ್ತಿದ್ದೇನೆ. ನಿಮ್ಮ ಸಹಕಾರವೇ ನನಗೆ ಶ್ರೀರಕ್ಷೆ ಎಂದು ತಿಳಿಸುತ್ತಾ.

ವಸಂತ್