Monday, June 28, 2010

ನೀ ಬರುವೆಯಾ ಗೆಳತಿ ?...ಗೆಳತಿ…!,,
ನಿನಗಾಗಿ ನಾ
ಚಿನ್ನದ ರಥವನ್ನು ತರಲಾರೆ !.
ವಜ್ರ ವೈಡೂರ್ಯಗಳನ್ನು ತರಲಾರೆ !.
ಮುತ್ತಿನ ರಾಶಿಯೋ.
ಹೊನ್ನಿನ ಕಣಜವೋ.
ಯಾವುದನ್ನೂ ತರಲಾರೇ !.

ನೀ ಬರುವುದಾದರೆ
ಹೊಂಗೆಯ ಮರದಡಿಯಲ್ಲಿ
ಉಯ್ಯಾಲೆಯನ್ನು ಕಟ್ಟಿ.

ಬಣ್ಣದ ಹೂಗಳ
ಮಾಲೆಯನು ತಂದು
ಸೂರ್ಯ ಚಂದ್ರನನ್ನು
ಆಮಂತ್ರಣಕ್ಕೆ ಕರೆದು
ನವಿಲಿನ ನಾಟ್ಯದ ಮುಂದೆ
ಕೋಗಿಲೆಯ ಕಂಠದಿ
ಮಂಗಳವಾಡಿಸಿ.

ಹುಲ್ಲಿನ ಗುಡಿಸಲಲ್ಲಿ
ನನ್ನ ಮನವನ್ನು
ತುಂಬಿಸಿ ಕೊಳ್ಳುತ್ತೇನೆ
ನೀ ಬರುವೆಯಾ ಗೆಳತಿ ?...

                                             ವಸಂತ್

2 comments:

© ಹರೀಶ್ said...

ನೀ ಬರುವುದಾದರೆ
ಹೊಂಗೆಯ ಮರದಡಿಯಲ್ಲಿ
ಉಯ್ಯಾಲೆಯನ್ನು ಕಟ್ಟಿ.- ವಸಂತ್ ರವರೆ ಈ ಸಾಲುಗಳು ಚನ್ನಾಗಿದೆ.

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಳು ಹರೀಶ್ ರವರೆ.

ವಸಂತ್