Tuesday, June 15, 2010

ಕತ್ತಲೊಳಗೊಂದು ದಿನ..!.


ಆ ಹೊತ್ತು
ಬೆಳಕು ಮೂಡಿರಲಿಲ್ಲ
ಕರಿಹೊತ್ತಿನ ಕೆನ್ನಾಲಿಗೆಗೆ
ಆಹುತಿಯಾಗಿದ್ದೆ.

ಕಾಣದ ಕೈಗಳು ನನ್ನನ್ನು
ಮಧುಮಂಚಕ್ಕೆ ಕರೆದೊಯ್ಯುತ್ತಿದ್ದವು.
ಅರಿಯದ ಆವೇದನೆ
ಅಡ್ಡಗಟ್ಟಿ ನಿಲ್ಲಿಸಿತ್ತು.

ಅರ್ಥಸಿಗದ ಅಕ್ಕರೆ
ಬರಸೆಳೆಯಲೆತ್ನಿಸುತ್ತಿತ್ತು.
ನಕ್ಷತ್ರಗಳೆಲ್ಲ ಇಣುಕಿ
ನನ್ನೆಡೆ ನೋಡುತ್ತಿದ್ದವು.
ಸೋಲಲೊಪ್ಪದೆ
ಗೆಲ್ಲಲಾಗದೆ
ಹೆಜ್ಜೆಗಳು ಮಾತ್ರ ಸವೆಯುತ್ತಿದ್ದವು.

ತುಟಿಗಳು ಕಂಪಿಸುತ್ತಿದ್ದವು
ತಣ್ಣನೆಯ ಗಾಳಿಗೆ
ಉಟ್ಟ ಸೀರೆಯು ನಿಲ್ಲದೆ
ಜಾರಿ ಬೀಳುತ್ತಿತ್ತು.

ಯೌವನ ಯಮರಾಯ
ಕ್ಷಣಿಕ ಸುಖಕ್ಕೆ ಮುಡಿಪಾಗದೆ
ಅರಿವಿಗೆ ಎಣ್ಣೆ ಹಚ್ಚಿ
ಸೂರ್ಯನನ್ನು ಬರಮಾಡಿಕೊಂಡೆ.

                                               ವಸಂತ್

2 comments:

ಡಾ.ಕೃಷ್ಣಮೂರ್ತಿ.ಡಿ.ಟಿ. said...

ವಸಂತ್ ನಮಸ್ಕಾರ.ನಿಮ್ಮಲ್ಲಿ ಕವಿತ್ವ ಸ್ವಾಭಾವಿಕವಾಗಿಯೇ ಮೈಗೂಡಿದೆ.ನಿಮ್ಮ ಎರಡು ಕವಿತೆಗಳನ್ನು ಓದಿದೆ.ಬಿಡುವು ಮಾಡಿಕೊಂಡು ಎಲ್ಲಾ ಕವಿತೆಗಳನ್ನೂ ಓದುತ್ತೇನೆ.ನೀವೂ ನನ್ನ ಬ್ಲಾಗಿಗೆ ಫಾಲೋಯರ್ ಆಗಿ.ಬೇರೆ ಬ್ಲಾಗುಗಳಿಗೆ ಭೇಟಿ ಕೊಡುತ್ತಿರಿ.ನಿಮ್ಮ ಕವಿತೆಗಳು ನಿಜಕ್ಕೂ ಚೆನ್ನಾಗಿದೆ.ನನ್ನದೊಂದು ಸಲಹೆ.ನೀವು ಎಷ್ಟು ಸಾಧ್ಯವೋ ಅಷ್ಟು ಖ್ಯಾತ ಸಾಹಿತಿಗಳ ಕೃತಿಗಳನ್ನೂ ಓದಿ.ನೀವು ಓದಿದಷ್ಟೂ ನಿಮ್ಮ ಬರಹ ನಿಮಗೆ ಅರಿವಿಲ್ಲದೆ ಸುಧಾರಿಸುತ್ತದೆ.ಧನ್ಯವಾದಗಳು.

ವಸಂತ್ said...

ಧನ್ಯವಾದಗಳು ಕೃಷ್ಣಮೂರ್ತಿ ಸರ್. ಖಂಡತ ನಿಮ್ಮ ಬ್ಲಾಗಿಗೆ ಫಾಲೋಯರ್ ಆಗುತ್ತೇನೆ. ಈ ಕವನಗಳನ್ನು ಸಮಯವಿದ್ದಾಗ ಮಾತ್ರ ಬರೆಯುತ್ತಿದ್ದೆ. ಈಗ ಜನರಿಂದ ಬರುತ್ತಿರುವ ಪ್ರೋತ್ಸಾಹ ನೋಡಿ. ಇನ್ನು ಉತ್ತಮ ರೀತಿಯಲ್ಲಿ ನನ್ನ ಬರವಣಿಗೆ ಶೈಲಿಯನ್ನು ಮೈಗೋಡಿಸಿಕೊಳ್ಳಬೇಕೆಂದಿದ್ದೇನೆ. ಕೇವಲ ಮುಂಜಾವಿನಲ್ಲಿ ಬರುವ ಕೆಲವು ಭಾವನೆಗಳನ್ನು ಮಾತ್ರ ನನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದೇನೆ. ಇನ್ನು ಮುಂದೆ ಸ್ವಲ್ಪಹೆಚ್ಚಿನ ಸಮಯವನ್ನು ಇದಕ್ಕೆ ಮೀಸಲಿಡಬಯಸುತ್ತೇನೆ. ನಿಮ್ಮಂತ ಅನುಭಾವಿತರಿಂದ ಆದರ್ಶಗಳನ್ನು ಪಡೆದಲ್ಲಿ ಇನ್ನು ಉತ್ತಮವಾದುದ್ದನ್ನು ಸಾಧಿಸಬಹುದೆಂಬುದು ನನ್ನ ಅನಿಸಿಕೆ. ನಿಮ್ಮ ಸಲಹೆಯನ್ನು ಚಾಚು ತಪ್ಪದೆ ಪಾಲಿಸುತ್ತೇನೆ. ಮತ್ತೊಮ್ಮೆ ಧನ್ಯವಾದಗಳೊಂದಿಗೆ.
ವಸಂತ್