Tuesday, June 15, 2010

ನೀನು ಯಾರು ?.


ಮಲ್ಲಿಗೆ ಪರಿಮಳದಲ್ಲಿ
ತಾವರೆಯ ಚಲುವಿನಲ್ಲಿ
ಮಂದಾರದ ಒಡಲಿನಲ್ಲಿ
ಮುತ್ತಿನ ತೇರಿನಲ್ಲಿ ಬಂದೇ
ನೀ ನಾರು ?

ಮುಂಗಾರಿನ ಮಿಂಚಿನಲ್ಲಿ
ಚೈತ್ರಮಾರುತದ ಅಂಚಿನಲ್ಲಿ
ನಕ್ಷತ್ರ ಮಾಲೆಯ
ಉಯ್ಯಾಲೆಯನ್ನೇರಿ ಬಂದೇ
ನೀ ನಾರು ?

ಕೋಗಿಲೆಯ ರಾಗದಲ್ಲಿ
ನಲಿವಿನ ನಾಟ್ಯದಲ್ಲಿ
ಸ್ವರ್ಣಗೀತೆ ಕಾವ್ಯದಲ್ಲಿ
ಕುಣಿಯುತ್ತ ಬಂದೇ
ನೀ ನಾರು?

ಮಧುಮಾಸದ ಸಂಜೆಯಲ್ಲಿ
ರವಿಮುಳುಗಿದ ನಸುಕಿನಲ್ಲಿ
ಬಿದಿಗೆ ಚಂದ್ರಮನ ಬೆಳಕಿನಲ್ಲಿ
ನನ್ನ ಹೃದಯವ ತುಂಬಿಕೊಂಡೆ
ನೀ ನಾರು ?

                                                 ವಸಂತ್

2 comments:

Banavasi Somashekhar. said...

ಪ್ರೇಮ ಕವಿಯಿಂದ ಕವಿಯಂದ ಹೆಚ್ಚಿಸಿ ಮುದ್ದಾಗಿ ಮೂಡಿದ ಸುಂದರ ಕವನ.ಓದಲು,ಅರ್ಥೈಸಲು ಇಷ್ಟವಾಗುವುದು.ಮತ್ತೆ ಮತ್ತೆ ಓದಿಸಿಕೊಳ್ಳುವ ಕವನ.ನಿಜಕ್ಕೂ ನಿಮ್ಮ ಅಭಿಮಾನಿ ಎನಿಸಿಕೊಳ್ಳಲು ಹೆಮ್ಮೆ ಎನಿಸುವುದು.,

Badarinath Palavalli said...

ಕವಿತೆಯ ಚಂದವಿರುವುದೇ ನಿಮ್ಮ ಶೈಲಿಯಲ್ಲಿ. ಸರಳತೆ ಇದ್ದರೂ ಭರ್ತಿ ಭಾವನೆಯನ್ನು ವ್ಯಕ್ತಪಡಿಸುವ ಕಲೆ ನಿಮಗೆ ಸಿದ್ಧಿಸಿದೆ.

ಅಂದ ಹಾಗೆ ನಿಮ್ಮ ಕಾವ್ಯ ಕನ್ನಿಕೆ ವಾಸ್ತವಕ್ಕೂ ತೆಕ್ಕೆಗೆ ಸಿಗುವಂತಾಗಲಿ!