Sunday, July 4, 2010

ಮರೆಯದಿರು ನನ್ನನು...!.


ಮರೆಯದಿರು ನನ್ನನು
ತೋರೆದು ಹೋಗದಿರು ಗೆಳತಿ
ಬಯಸುತಿದೆ ನಿನ್ನೊಲವ
ನನ್ನ ಮನವು....

ಅನುದಿನವು ನಾ ಸೊರಗಿ
ಕರಗಿ ಹೋಗುವ ಹಾಗೆ
ಸುಡುತಲಿದೆ ನನ್ನೊಳಗೆ
ನಿನ್ನ ಒಲವು....

ನಿನಗಾಗಿ ಎಲ್ಲಿ ಹುಡುಕಲಿ
ಯಾವಸಾಗರದ ಮುತ್ತ ಹೆಕ್ಕಿತೆಗೆಯಲಿ
ನಿನ್ನೊಳಂತರಂಗ ಹೇಗೆ ಅರಿಯಲಿ
ನನ್ನೊಳಗಿನ ಮೌನ ವೇದನೆಗೆ ಏನೆಂದು ಉತ್ತರಿಸಲಿ ?.

ಬಾರೆನೆಂದು ಮಾತ್ರ ಹೇಳದಿರು
ನಿನ್ನ ಕಾಯುವ ಮನಕ್ಕೆ ನೋವಾಗ ಬಹುದು
ಎಂದಾದರೂ ನೀ ಬಂದು ಸೇರಲೇ ಬೇಕಲ್ಲವೆ
ಅದು ಹುಣ್ಣಿಮೆಯೇ ಆಗಬೇಕೆ ?.

ನೀ ಬರುವ ದಾರಿಯಲಿ ಹಗಲು ಹೂವಾಗಿ
ನೀ ನಡೆವ ರಾತ್ರಿಯಲಿ ಇರುಳ ಬೆಳಕಾಗಿ
ಅನುದಿನವು ನಿನ್ನ ಬರುವಿಕೆಗಾಗಿ ಕಾಯುತಿರುವೆ
ನನ್ನನ್ನೊಮ್ಮೆ ಸೇರಲು ಬರುವೆಯಾ ನನ್ನೊಲವೆ.

ಕಾಯುವಿಕೆಯಲ್ಲಿಯೇ ಇಹುದು ಸಂತಸವೆಂದು
ಶಬರಿ ಕಥೆಯಲ್ಲಿ ನಾ ಕೇಳಿರುವ ನೆನಪು
ಕಾದಿಹೆನು, ಕಾಯುವೆನು ನಿನ್ನೆ ನಾಳೆಯವರೆಗೆ
ಮುನಿಯದಿರು ಬಾ ಒಲವೆ ನೀ ಎನ್ನ ಕರೆಗೆ.
                                                                                                                                                                                          ವಸಂತ್

8 comments:

ದಿನಕರ ಮೊಗೇರ.. said...

tumbaa chennaagide kavana... moorane charaNa soopar....
heege bareyuttiri.....

nanna blog kade banni....

ಮನದಾಳದಿಂದ............ said...

ವಸಂತ್...........
ಚಿಂತೆ ಯಾಕೆ ಮಾಡ್ತೀರಾ?
ಬರ್ತಾರೆ ಬಿಡಿ, ಈ ಕವನವನ್ನೊಮ್ಮೆ ಓದಿಸಿ ಸಾಕು!
ಕವನ ಚನ್ನಾಗಿದೆ.

Dr.D.T.K.Murthy. said...

olleya kavana vasant.

ವಸಂತ್ said...

ಪ್ರತಿಕ್ರಿಯೆಗೆ ನಿಮಗೆಲ್ಲರಿಗೂ ಧನ್ಯವಾದಗಳು.

ವಸಂತ್

ವಸಂತ್ said...

ಪ್ರತಿಕ್ರಿಯೆಗಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು.

ವಸಂತ್

ಜಲನಯನ said...

ವಸಂತ್, ತುಂಬಾ ಮನದಾಳದ ಭಾವಗಳು ಮಂಥಿತಗೊಂಡು ಹೊರಬಿದ್ದಂತಿವೆ ನಿಮ್ಮ ಸಾಲುಗಳು...
ಅದರಲ್ಲೂ ಈ ಕೆಳಗಿನ ಸಾಲುಗಳು ಬಹಳ ಸುಂದರವಾಗಿವೆ
ಅನುದಿನವು ನಾ ಸೊರಗಿ
ಕರಗಿ ಹೋಗುವ ಹಾಗೆ
ಸುಡುತಲಿದೆ ನನ್ನೊಳಗೆ
ನಿನ್ನ ಒಲವು....

Anjali said...

Vasanth thumbha ne chennagide nimma kavana....

Anjali said...

vasanth nimm kavana thumbha ne chennagide....