Friday, July 9, 2010

ಅನುದಿನವು ಹಬ್ಬವನಾಚರಿಸುವೆ…


ಇದು ಯಾರ ಮಾಯೆಯ ಮೋಡಿ
ನನಗೊದಗಿ ಬಂದ ಸಿರಿಯೊ ಏಂತೊ!
ಕಣ್ ತಣಿಸುವ ಸೂರ್ಯಕಾಂತಿಗೆ
ನನ್ನ ಮನ ತಣಿದಿದೆಯಲ್ಲ.
ಪಚ್ಚೆಯ ಮೇಲೆ ಇಬ್ಬನಿಯ ನರ್ತನ
ಮುತ್ತುಗಳ ಹಾರವನು ಬಿಟ್ಟು ಸರಿದಂತೆ
ಒಮ್ಮೆ ದಗದಗಿಸಿ ಮತ್ತೊಮ್ಮೆ ಮೌನವಾಗುತ
ಜೀವಾತ್ಮವನ್ನೊತ್ತ ಪ್ರಕೃತಿಗೆ
ತಲೆಬಾಗಿ ವಂದಿಸುತ್ತೇನೆ.

ಇದು ಯಾರ ಭಾಗ್ಯವೊ ಏನೊ
ಇನ್ನಾರ ಪುಣ್ಯವೊ ನಾಕಾಣೆ
ನಂದನವನದಲ್ಲಿ ಮಿಂದು ಮೀಯುವ
ಸುಂದರತೆಯನು ಕಂಡು ಪುಳಕಿತನಾದೆನಲ್ಲ.

ಪಟಪಟನೆ ಸುರಿಯುವ ವರ್ಷಧಾರೆ
ಸರಸರನೆ ಹರಿದುಸಾಗುವ
ಕಾವೇರಿಯ ಕಾಲ್ ನಡುಗೆ
ಪಚ್ಚೆಯ ಸೀರೆಯನುಟ್ಟು
ಸೊಬಗಿನಿಂದ ಬೀಗುವ ಮಲೆನಾಡಮ್ಮನಿಗೆ
ನಾ ಏನೆಂದು ಬಣ್ಣಿಸಲಿ.

ತಣ್ಣನೆ ತಣಿಸುವ ತಂಗಾಳಿ
ಮೃದು ಕೂಗಕ್ಕಿಗಳ ಇಂಚರದಲಿ
ಕೆಂದಾವರೆಯ ನರ್ತವಂಕಂಡು ಹರ್ಷಗೊಂಡೆ
ಷರಾವತಿಯಲಿ ಸಾಗಿನಡೆದು
ಕಾವೇರಿಯಲಿ ಮುಳುಗಿತೇಲಿ
ಗಂಗೆಯಲಿ ಪೂರ್ಣ ಸ್ತಾನವಗೈದು ಮಿಂದಂತೆ

ಇದು ಯಾವ ಮೋಹದ ಮಾಯೆಯೊ ನಾಕಾಣೆ
ಪ್ರತಿ ದಿನದ ಮುಂಜಾನೆಯಲಿ ಪುಲಕಗೊಂಡು
ಅನುದಿನವು ನಾ ಹಬ್ಬವನಾಚರಿಸುತ್ತೇನೆ.

7 comments:

© ಹರೀಶ್ said...

ಚನ್ನಾಗಿದೆ ಪ್ರಕೃತಿಯ ಮೋಡಿಗೆ ಹಬ್ಬವಾಚರಿಸುವುದು.

Raghu said...

ಪ್ರಕೃತಿ ಮಾಯೆಯೇ ಹಾಗೆ ಅನುಭವಿಸುವವರಿಗೆ ಅನುದಿನವು ಹಬ್ಬ!!
ಚೆನ್ನಾಗಿದೆ.
ನಿಮ್ಮವ,
ರಾಘು.

"NRK" said...

very nice

ಸೀತಾರಾಮ. ಕೆ. / SITARAM.K said...

very nice! keep it up!

Deepasmitha said...

ಅನುದಿನವೂ ಹಬ್ಬ ಆಚರಿಸುವ ನಿಮ್ಮ ಬಯಕೆ ಯಾವಾಗಲೂ ಕೈಗೂಡಲಿ

Dr.D.T.K.Murthy. said...

'LIVING IS A CELEBRATION' ಎನ್ನುವ ಮಾತು ನಿಮ್ಮ ಕವನದಲ್ಲಿ ಅನುರಣಿಸುತ್ತಿದೆ.ನಿಮ್ಮಲ್ಲಿ ಪ್ರತಿಭೆ ಇದೆ.ಸತತ ಅಭ್ಯಾಸದಿಂದಇನ್ನೂ ಒಳ್ಳೆಯ ಕವನಗಳನ್ನು ಬರೆಯಬಹುದು.ಕುವೆಂಪು,ಬೇಂದ್ರೆ,ನಿಸ್ಸಾರ್ಅಹಮದ್,ಜಿ.ಎಸ್
ಶಿವರುದ್ರಪ್ಪ,ಲಕ್ಷ್ಮಿನರಾಯನ್ಭಟ್ಟ,ವೆಂಕಟೇಶಮೂರ್ತಿ,ಲಕ್ಷ್ಮಣರಾವ್,
ಮುಂತಾದವರ ಕವಿತೆಗಳನ್ನೂ ಸಾಧ್ಯವಾದಷ್ಟೂ ಹೆಚ್ಚು ಅಭ್ಯಾಸ ಮಾಡಿ.ಒಳ್ಳೆಯ ಕವಿತೆಗಳನ್ನು ಬರೆಯಲು ಬೇರೆಯವರ ಕವಿತೆಗಳ ಅಭ್ಯಾಸವೂ ಅವಶ್ಯ ಎನ್ನುವುದು ನನ್ನ ಅನಿಸಿಕೆ.

ವಸಂತ್ said...

ನಿಮ್ಮೆಲ್ಲರ ಅತ್ಮೀಯತೆಗೆ ತಲೆಬಾಗಿ ನಿಮಗೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ನಿಮ್ಮ ಸಲಹೆಗಳನ್ನು ಪಾಲಿಸುತ್ತಾ ಇನ್ನೂ ಉತ್ತಮ ರೀತಿಯಲ್ಲಿ ಬರೆಯಲು ಪ್ರಯತ್ನಿಸುತ್ತೇನೆ ಧನ್ಯವಾದಗಳೊಂದಿಗೆ.

ವಸಂತ್