Sunday, July 11, 2010

ಬಿಟ್ಟು ಬಿಗುಮಾನವನು, ಜೊತೆಗೂಡೆ ಬಾರೆ ಸಖಿ ...!.

ಬಿಟ್ಟು ಬಿಗುಮಾನವನು, ಜೊತೆಗೂಡೆ ಬಾರೆ ಸಖಿ,
ನಿನಗಾಗಿ ನಾ ತರುವೆ ಸ್ವರ್ಗವನ್ನೇ.
ಭುವಿಯೊಳಗೇನಡಗಿದೆ, ಪಾಪ ಕರ್ಮದ ನಂಟು,
ಕಟ್ಟೆಲೇ ರೆಕ್ಕೆಯನು ಚಂದ್ರನೆಡೆಗೆ.


ತೋರುವೆ ನಕ್ಷತ್ರವನು, ನೀಡುವೆ ಬಳುವಳಿಯ,
ಮೋಡದ ಮೇಲೊಂದು ಮನೆಯ ಕಟ್ಟಿ.
ಜವರಾಯನೇ ಬರಲಿ, ಇಂದ್ರನೇ ತಲೆದೂಗಲಿ,
ಎಲ್ಲರಿಗೂ ತಿಳಿಸುವೆ ನಾ ತೊಡೆಯ ತಟ್ಟಿ.


ಬೇಕಾದ್ದ ನೀ ಬೇಡು, ತಂದುಕೊಡುವೆನು ನೋಡು,
ಕಾಣುತಿರು ನೀನೆಂದೂ ಹಗಲುಗನಸು.
ಒಂದು ಓಲೆಗೆ ಯಾಕೆ, ಇಷ್ಟೊಂದು ಒಳಮುನಿಸು?
ತಂದು ತಿನಿಸಲೇ ಬೇಗ ಸಿಹಿಯ ತಿನಿಸು?


ಇರುಳು ಕಾಣದ ಊರು, ನಮ್ಮ ತವರೂರು,
ಬೆಳದಿಂಗಳೇ ಎಂದೆಂದೂ ನಮ್ಮ ಬಾಳು.
"ಬಿಲ್" ಕೇಳುವರಾರು, ಯಾರೂ ನಿನ್ನ ನೋಯಿಸರು,
ಅಂದದ ಕನಸೊಳಗೆ ಓಡುವುದು ನಿನ್ನ ಗೋಳು.


ಯಾಕಿನ್ನು ಬಿಡು ಚಿಂತೆ, ಒಮ್ಮೆ ನಗು ನೀ ಕಾಂತೆ,
ನಾ ಕಂಡ ಕನಸದು ಬೇಗ ನನಸಾಗಲೆಂದು
ನೀ ನಂಬಿ ಬಂದಿರುವೆ, ನಾ ನಿನ್ನ ಅರಿತಿರುವೆ,
ನಗುನಗುತ ಜೊತೆಯಾಗಿ ಹಾರುವ ಎಂದೆಂದು.


                                                                           ವಸಂತ್

12 comments:

Raghu said...

ತುಂಬಾ ಚೆನ್ನಾಗಿದೆ ಸರ್..
ನಿಮ್ಮವ,
ರಾಘು.

Snow White said...

tumba chennagide nimma kavana..tumba ista aitu :)

Manasa said...

sakattagide nimma kavana :)

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ರಾಘುರವರೆ.

ವಸಂತ್

ವಸಂತ್ said...

ಕವನವನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು Snow Whiteರವರೆ.

ವಸಂತ್

ವಸಂತ್ said...

ಧನ್ಯವಾದಗಳು ಮಾನಸ ಮೇಡಂ.

ವಸಂತ್

!! ಜ್ಞಾನಾರ್ಪಣಾಮಸ್ತು !! said...

ವಸಂತ್,
ತುಂಬಾ ಚೆನ್ನಾಗಿದೆ ನಿಮ್ಮ ಸಖಿಗೆ ನೀವು ನೀಡಿದ ಸಾಲುಗಳು..
ಆದರೆ... ಆ ನಿಮ್ಮ ಲೋಕದಲ್ಲಿ ಬರಿ ಬೆಳದಿಂಗಳೇ ಸಾಕೆ.. ಇರುಳು ಇದ್ದರೆ ಸೊಗಸಲ್ಲವೇ..~?!

AntharangadaMaathugalu said...

ಬ್ಲಾಗ್ ಲೋಕಕ್ಕೆ ಸ್ವಾಗತ ವಸಂತ್...

ಕವನ ಚೆನ್ನಾಗಿದೆ. ಕೊನೆಯ ಸಾಲುಗಳು ಮನ ಮುಟ್ಟುವಂತಿದೆ...
ಶ್ಯಾಮಲ

ವಸಂತ್ said...

ಧನ್ಯವಾದಗಳು ಜ್ಞಾನಾರ್ಪಣಾಮಸ್ತುರವರೆ ಈಗ ಸಧ್ಯಕ್ಕೆ ಈ ಕವನದೊಳಗೆ ಇರುಳು ತುಂಬಿಕೊಂಡಿತ್ತು. ಅದಕ್ಕೆ ಈ ಬೆಳದಿಂಗಳಿನ ಕವನ.

ವಸಂತ್

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಶ್ಯಾಮಲ ಮೇಡಂ.

ವಸಂತ್

SATISH N GOWDA said...

simply super kanri VASANT

ವಸಂತ್ said...

ಧನ್ಯವಾದಗಳು ಸಂತೋಶ್.