Thursday, July 15, 2010

ನಾ ಕಾಯ್ವೆನು?.


ಎತ್ತ ಸಾಗುತಿದೆ ನಮ್ಮಯ ಸತ್ವ
ಎತ್ತ ಸಾಗುತಿದೆ ನಮ್ ನುಡಿಯ ಪಕ್ವ
ನಾನೆಂಬ ಅಹಂಕಾರದ ಇಂಗ್ಲೀಶ್ ಮಾಯೆಯೊಳ್.

ನಮ್ ತನವನು ಬದಿಗಿಟ್ಟು
ನಮ್ ನೆಲವನು ತೆರದಿಟ್ಟು
ಬಾ ಬಾ ನೀ ಓ ಪರಕೀಯಾ ಮಾಯೆ ಎಂಬೆನುತ.

ತೋರಣವಂ ಕಟ್ಟಿ, ಅಂಗಳವಂ ಗುಡುಸಿ,
ಬಕ್ಷ ಭೋಜನವಮ್ ಮುಂದಿಟ್ಟು ಕಾಯುತಿರ್ಪ
ಕನ್ನಡದ ಕಳಂಕಿಂತರನ್ ಏನೆನ್ನಬೇಕು ?.

ತನು ಕನ್ನಡ ಮನ ಕನ್ನಡ
ಧನ ಕನ್ನಡವೆನೆ  ಪಾಡಿದ
ನಮ್ ಕನ್ನಡದ ಕವಿಗಳನ್ ಕಾಯುವುದೆಂತು?.

ನಮ್ಮದಲ್ಲದ ಭಾರವನು ಹೊತ್ತು
ದೇಶ ವಿದೇಶವೆಂದು ಸಾಗುರ್ತಿಪ
ನಮ್ ಕನ್ನಡದ ಕಂದಗಳನ್ ರಕ್ಷಿಪರಾರು.

ನಮ್ ನೆಲದ ಸತ್ವವನು
ನಾವೇ ಮರೆತರೆ ಅರ್ಥವುಂಟೆ ?.
ನಮ್ ನೆಲದ ರುಣವನ್ ತೀರ್ಪರಾರು.

ರನ್ನ ಪಂಪರಂ ಕಂಡ ನಮ್ ಈ ಕಂಗಳು
ಹಕ್ಕ ಬುಕ್ಕರಾಡಿ ಹೊಗಳಿದ ನಮ್ ರಾಜ್ಯದಲಿ
ಕನ್ನಡಮ್ಮನಿಗೆ ಕಣ್ ಕಟ್ಟಿ ಕುರುಡು ಬಂದಿದೆಯಂದ್
ಪೊಳ್ ನುಡಿವ ಕಳಂಕಿತರನ್ ಶಿಕ್ಷೆಗೈಪರಾರು?.

ಬಸವಣ್ಣ ನುಡಿದ, ಸರ್ವಜ್ಞ ಪಾಡಿದ,
ಅಲ್ಲಮ ಅಕ್ಕಮಹಾದೇವಿಯರಂತ,
ವೆಕ್ತಿಗಳನ್ ಕಂಡ ನಮ್ ರಾಜ್ಯದಲಿ
ಕನ್ನಡಕೆ ಕಾಯಕವಂ ಮಾಡಬೇಕಿದೆ.

ಪರಕೀಯಾ ವ್ಯಾಮೋಹಿಗಳಂ ಹಿಡಿದು
ಕನ್ನಡದ ಕಷಾಯವಂ ಕುಡಿಸಿ
ನಮ್ ಕನ್ನಡ ತನವನ್ನು ನಲ್ಮೆಯಿಂದ್ ಕಲಿಸಿ
ಅಕ್ಕರೆಯ ಮಾತಿನೊಳ್ ಸಕ್ಕರೆಯನು ಸವಿಸಿ .

ಕನ್ನಡವ ಮರೆಯದಿರು
ಕನ್ನಡತನವ ತೊರೆಯದಿರು ಎಂಬೇಳಿ
ನಮ್ ತಾಯಿ ದರ್ಪದಿಂದ್ ಬೀಗುವ
ಕಾಲ ಬರುವುದೆಂತ್ ನಾ ಕಾಯ್ವೆನು ????.
                                                                  ವಸಂತ್

6 comments:

Dr.D.T.K.Murthy. said...

ವಸಂತ್;ಹೊರನಾಡಿನ ಕನ್ನ್ನಡಿಗರ ಕನ್ನಡದ ಅಭಿಮಾನ ಹೆಚ್ಚು.ಆಲ್ಲೇ ಕನ್ನಡ ಸಂಘಗಳನ್ನು ಕಟ್ಟಿ ಕನ್ನಡದ ಕೆಲಸ ಅದ್ಭುತವಾಗಿ ಮಾಡುತ್ತಿದ್ದಾರೆ.ನಮ್ಮಲ್ಲೇ ಇರುವ ಕನ್ನಡಿಗರ ಕನ್ನಡಾಭಿಮಾನ ಜಾಗೃತಗೊಳ್ಳಬೇಕಾಗಿದೆ.

ವಸಂತ್ said...

ನಿಮ್ಮ ಮಾತು ಅಕ್ಷರಸಹ ನಿಜವಾದ ಮಾತು ಮೂರ್ತಿ ಸರ್. ನಾನು ಈ ಕವನದಲ್ಲಿ ಕನ್ನಡವನ್ನು ನಿಂದಿಸುವವರನ್ನು ಗುರಿಯಾಗಿರಿಸಿಕೊಂಡು ಬರೆದಿದ್ದೇನೆ ಮತ್ತು ಕನ್ನಡದ ಬಗ್ಗೆ ತಾತ್ಸಾರ ಮನೋಭಾವವನ್ನು ಬೆಳೆಸಿಕೊಂಡವರನ್ನು ಕವನದ ರೂಪದಲ್ಲಿ ಚಿತ್ರಿಸಿದ್ದೇನೆ.. ಇದರಲ್ಲಿ ನಮ್ಮಲ್ಲೆ ಇರುವ ಕನ್ನಡಿಗರ ಪಾಲೂ ಬಹಳಷ್ಟು ಇದೆ ನಮ್ಮ ನಾಡಿನ ಬಗ್ಗೆ ಅವರಲ್ಲಿ ಅರಿವನ್ನು ಮೂಡಿಸಬೇಕಿದೆ. ನಮ್ಮ ಹೊರನಾಡಿನ ಕನ್ನಡಿಗರು ಅಲ್ಲಿದ್ದುಕೊಂಡೆ ನಮ್ಮ ಕನ್ನಡಿಗರಿಗೆ ಸಹಾಯವನ್ನು ಮಾಡುತ್ತಿರುವ ಎಷ್ಟೊ ಉದಾಹರಣೆಗಳನ್ನು ಕಂಡಿದ್ದೇನೆ. ಅವರು ಚಿರಾಯುವಾಗಿ ಜೀವಿಸಲೆಂದು ಹಾರೈಸುತ್ತೇನೆ.

ವಿ.ಆರ್.ಭಟ್ said...

Good Effort !

Dileep Hegde said...

ಹಳೆಗನ್ನಡವನ್ನ ಹೊಸಗನ್ನಡದೊಂದಿಗೆ ಬೆರೆಸಿ ಬರೆದ ಪದ್ಯ ಚೆನ್ನಾಗಿದೆ..
ಉತ್ತಮ ಪ್ರಯತ್ನ.. ಏನೇ ಹೇಳಿ... ಭಾಷಾಭಿಮಾನದ ವಿಷಯದಲ್ಲಿ ನಾವು ಸ್ವಲ್ಪ ಹಿಂದುಳಿದವರೇ ಸೈ...

ಈ ಕೆಳಗಿನ ಕೆಲವು ಬದಲಾವಣೆ ಮಾಡಿಕೊಳ್ಳಬಹುದು ಅಂತ ನನ್ನ ಅನಿಸಿಕೆ..

ನಮ್ ತನುವನು - ನಮ್ ತನವನು
ಕಾಯುರ್ತಿಪ - ಕಾಯುತಿರ್ಪ
ಧನ ಕನ್ನವೆಂಬ್ - ಧನ ಕನ್ನಡವೆನೆ
ಅಕ್ಕಮಹಾದೇವಿರಂತ - ಅಕ್ಕಮಹಾದೇವಿಯರಂತ
ಸಕ್ಕರೆಯನು ಸವೆಸಿ - ಸಕ್ಕರೆಯನು ಸವಿಸಿ

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಭಟ್ ಸರ್.

ವಸಂತ್ said...

ನಿಮ್ಮ ಮಾತು ಸತ್ಯ Dileep Hegde ನಾವು ಎಂದು ನಮ್ಮ ತನವನ್ನು ಮರಿಯಬಾರದು. ನೀವು ತಿಳಿಸಿದ ಕೆಲವು ಬದಲಾವಣೆಗಳನ್ನು ಬದಲಿಸಿದ್ದೇನೆ ಧನ್ಯವಾದಗಳು.