Wednesday, July 21, 2010

ಕವನ..!.

ನನಗೂ ಅನಿಸುತ್ತದೆ
ಕವನ ಬರೆಯಬೇಕೆಂದು.
ಆದರೆ ?
ಕಮರಿಹೋದ ಬಾವನೆಗಳು,
ಬಿಡಿಸಲಾರದ ಸಾಲುಗಳು,
ನನ್ನನ್ನು ಅಂಧಕಾರಕ್ಕೆ ತಳ್ಳುತ್ತವೆ.
ಮರಳಿ ಅದೇ ಯತ್ನ, ಪ್ರಯತ್ನ.
ನೆನ್ನೆಯಿದ್ದ ನೆನಪುಗಳು
ಇಂದು ಇರುವುದಿಲ್ಲ.
ಬರೆಯಬೇಕೆಂದರೆ
ಪದಗಳೇ ಹುಟ್ಟುವುದಿಲ್ಲ.
ಎಂತಹ ವಿಪರ್ಯಾಸ !
ಆದರೂ ಬಿಡುವುದಿಲ್ಲ
ನಾನೇ ಕವಿತೆಯಾಗಬೇಕು.
ನನ್ನ ಜೀವನವೇ
ಸಾಲುಗಳಾಗಬೇಕು.
ನನ್ನಲ್ಲಿ ವಿಶ್ವಾಸವಿದೆ
ಬರವಸೆಯಿದೆ.
ಬರೆದೇ ಮುಗಿಸುತ್ತೇನೆ ಎಂದು.
ಇಂದಲ್ಲ ನಾಳೆ
ನನ್ನ ಕವನ ಚಿಗುರಿ
ಮರವಾಗಿ, ಹೆಮ್ಮರವಾಗಿ,
ಬೆಳೆಯುತ್ತದೆ.
ಆಗ ತಿಳಿಯುತ್ತದೆ
ನನಗೂ ಕವನ ಬಿಡಿಸಲು
ಬರುತ್ತದೆ ಎಂದು.

                                             ವಸಂತ್

16 comments:

ಸಿಮೆಂಟು ಮರಳಿನ ಮಧ್ಯೆ said...

Very nice !!

Dr.D.T.K.Murthy. said...

'ಕವಿತೆ !ನನ್ನಲಿ ನೀನೆಲ್ಲಿ ಅವಿತೆ?'ಎಂದು ನೀವು ಅಚ್ಚರಿ ಪಡುವ ರೀತಿಯಲ್ಲಿ ನಿಮ್ಮಲ್ಲಿ ಹುದುಗಿರುವ ಕವಿತೆಯ ಬೀಜ ಸತತ ಸಾಧನೆಯಿಂದ ಹೆಮ್ಮರವಾಗಿ ಬೆಳೆಯಲಿ ಎಂಬುದು ನನ್ನ ಹಾರೈಕೆ.

kusu Muliyala said...

good one

pragathi hegde said...

ಚೆನ್ನಾಗಿದೆ ವಸಂತ್ ಅವರೆ, ನಿಮ್ಮ ಕವನ... ನಿಮ್ಮ ಆಸೆ ಈಡೇರಲಿ...

ಮನಮುಕ್ತಾ said...

ಕವನವನ್ನು ತು೦ಬಾ ಚೆನ್ನಾಗಿ ಬರೆದಿದ್ದೀರ.ಇನ್ನೂ ಚೆನ್ನಾಗಿ ಬರೆಯಬಲ್ಲಿರಿ..ಬರೆಯುತ್ತಿರಿ.ನಿಮ್ಮ ಅಭಿಲಾಷೆ ಬೇಗ ನೆರವೇರಲಿ.

Raghu said...

nice...
Raaghu

ಸೀತಾರಾಮ. ಕೆ. / SITARAM.K said...

ಕವಿತೆ ಬರೆಯಲಾಗದುದರ ಮೇಲೆ ಭಾರೀ ಕವಿತೆ ಬರೆದಿದ್ದಿರಾ... ಇನ್ನು ಬರೆಯಲಾಗುತ್ತದೆಂದರೆ!!!!!
ವಾಹಹಾ

ವಸಂತ್ said...

ನಿಮ್ಮ ಆತ್ಮೀಯತೆಗೆ ತುಂಬು ಹೃದಯದ ಧನ್ಯವಾದಗಳು ಪ್ರಕಾಶ್ ಸರ್.

ವಸಂತ್ said...

ನಿಮ್ಮ ಹಾರೈಕೆಗೆ ಅಭಿನಂದನೆಗಳು ಮೂರ್ತಿ ಸರ್.

ವಸಂತ್ said...

ನನ್ನ ಬ್ಲಾಗ್ ಲೋಕಕ್ಕೆ ನಿಮಗೆ ಸುಸ್ವಾಗತ kusu Muliyala ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಪ್ರಗತಿರವರೆ.

ವಸಂತ್ said...

ಬ್ಲಾಗ್ ಲೋಕಕ್ಕೆ ನಿಮಗೆ ಸುಸ್ವಾಗತ ಮನಮುಕ್ತಾರವರೆ, ನನ್ನ ಕವನದ ಬಗ್ಗೆ ನಿಮ್ಮ ಅನಿಸಿಕೆಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ರಾಘುರವರೆ.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಮತ್ತು ನಿಮ್ಮ ಅನಿಸಿಕೆಗೆ ಧನ್ಯವಾದಗಳು ಸೀತಾರಾಮ ಸರ್.

ಚುಕ್ಕಿಚಿತ್ತಾರ said...

wow.. nice poem

keep writing..

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಚುಕ್ಕಿಚಿತ್ತಾರರವರೆ.