Saturday, July 24, 2010

ಕನಸ ಕಟ್ಟುವ ಹೊತ್ತಿನಲಿ.!..

ರಾತ್ರಿಯ ಇರುಳಲ್ಲಿ
ಕನಸುಗಳನ್ನು ಹರಡಿ 
ಕಟ್ಟಲು ಪ್ರಯತ್ನಿಸುತ್ತೇನೆ.

ಕನಸುಗಳೇ ಹುಟ್ಟುವುದಿಲ್ಲ
ದೂರದ ಊರಿಗೊಂದು
ಕವಲು ದಾರಿ ಕಾಣುತ್ತದೆ.


ಹೆಜ್ಜೆಗಳನು ಇಟ್ಟು ನಡೆಯಲು
ಪ್ರಯತ್ನಿಸುತ್ತೇನೆ.
ಹೆಜ್ಜೆಗಳೇ ಸವೆಯುವುದಿಲ್ಲ
ಪಯಣವು ಮುಗಿಯುವುದಿಲ್ಲ.


ಬೆಳದಿಂಗಳ ರಾತ್ರಿಯಲಿ
ಹುಣ್ಣಿಮೆಯು ಅಮವಾಸ್ಯೆಯಂತಾದಾಗ

ಕಳೆದುಹೋದ ಚಂದಿರನನ್ನು
ಹುಡುಕಲು ಹೊರಡುತ್ತೇನೆ.
ರೆಕ್ಕೆಗಳು ಮೂಡುವುದಿಲ್ಲ


ಕತ್ತಲು ಸಹ ಕರಗಿರಲಿಲ್ಲ
ಬೆಳಕು ಕೂಡ ಬಂದಿರಲಿಲ್ಲ
ನನ್ನ ಕನಸ ಕಟ್ಟುವ ಪ್ರಯತ್ನವು 
ನಿಲ್ಲದೆ, ಕಳೆದುಹೋದ 
ಚಂದಿರನಿಗಾಗಿ ಹುಡುಕುತ್ತಿರುತ್ತೇನೆ.....


                                                  ವಸಂತ್

14 comments:

ಮನದಾಳದಿಂದ............ said...

ಹೀಗೆ ಕಾಯ್ತಾ ಕಾಯ್ತಾ, ಕನಸು ಕಟ್ಟುತ್ತಾ..........ಎಲ್ಲಿವರೆಗೆ ಹೋಗ್ತೀರಾ ಸ್ವಾಮೀ?
ಚಂದದ ಕವನ..

ವಿ.ಆರ್.ಭಟ್ said...

ಸ್ವಲ್ಪ ಅರ್ಥವಾಗಲಿಲ್ಲ, ನಿಮ್ಮ ಕನಸಲ್ಲಿ ಅಮಾವಾಸ್ಯೆಯ ರಾತ್ರಿಯಲ್ಲೂ ಸೂರ್ಯ ಬಂದನೇ? ಸೂರ್ಯನನ್ನು ಒಮ್ಮೆ ಕಂಡಮೇಲೆ ಮತ್ತೆ ಸೂರ್ಯನ ಉದಯಕ್ಕಾಗಿ ಕಾಯುವುದೆಂತು? 'ಕರಾಳ ರಾತ್ರಿ' ಶಬ್ಧ ಪ್ರಯೋಗ ಅಲ್ಲಿ ತರವಲ್ಲ ಎನಿಸುತ್ತಿದೆ, ಅದು ಕೆಟ್ಟ ಘಟನೆಗಳಿಗೆ ಬಳಸುವಂಥದು, ಮಿಕ್ಕಿದಂತೆ ಕವನ ಪರವಾಗಿಲ್ಲ, ನಾನು ಸ್ವಲ್ಪ ವಿಮರ್ಶೆ ಬರೆದಿದ್ದೇನೆ, ನೀವೇನು ಅಂದುಕೊಳ್ಳುತ್ತೀರೋ ಗೊತ್ತಿಲ್ಲ, ಕವನ ಬರೆಯುವಾಗ ಶಬ್ಧ ಪ್ರಯೋಗದ ಕಡೆಗೆ ನಿಮ್ಮ ಗಮನವಿರಲಿ, ಕವನ ತಡವಾಗಿ ಪ್ರಕಟವಾದರೂ ಚಿಂತೆಯಿಲ್ಲ, ಚೆನ್ನಾಗಿರಲಿ ಎಂದು ಬಯಸುತ್ತೇನೆ, ಬೇಸರವೇ ? ಧನ್ಯವಾದ

ವಸಂತ್ said...

ನನ್ನ ಬಾಳಿನಲ್ಲಿ ಪೂರ್ಣವಾಗಿ ಬೆಳಕು ಚೆಲ್ಲುವ ತನಕ ಕಾಯುವ ಆಸೆ ನಂತರ ಹೋಗಲಿದ್ದೇನೆ ಪ್ರವೀಣ್ ಸರ್, ಪ್ರತಿಕ್ರಿಯೆಗೆ ಧನ್ಯವಾದಗಳು.

ವಸಂತ್ said...

>>>ಚೆನ್ನಾಗಿರಲಿ ಎಂದು ಬಯಸುತ್ತೇನೆ, ಬೇಸರವೇ ? ಧನ್ಯವಾದ<<< ಕಂಡಿತವಾಗ್ಲು ನನಗೆ ಯಾರ ಬಗ್ಗೆಯು ಬೇಸರವಿಲ್ಲ ಭಟ್ ಸರ್, ನಿಮ್ಮ ಮಾರ್ಗ ದರ್ಶನವಂತು ನನ್ನಂತವರಿಗೆ ಬಹಳ ಮುಖ್ಯವಾಗಿ ಬೇಕು. ನಿಮ್ಮ ಮಾತುಗಳನ್ನು ಮತ್ತು ಹಿರಿಯರ ಮಾತುಗಳನ್ನು ನಾನು ಶಿರಸಾವಹಿಸಿ ಪಾಲಿಸುತ್ತೇನೆ. ಈ ಕವನವನ್ನು ಬಹಳ ದಿನಗಳ ಹಿಂದೆ ಬರೆದಿದ್ದು. ಅದನ್ನು ಮತ್ತೊಂದು ಬ್ಲಾಗ್ ನಲ್ಲಿ ಇಟ್ಟುಕೊಂಡಿದ್ದೆ. ಅದ್ದರಿಂದ ಯಾವ ಬದಲಾವಣೆಯನ್ನು ಮಾಡದೆ ಪ್ರಕಟಿಸಿದ್ದೆ. ನೀವು ತಿಳಿಸಿದ ನಂತರ ನನಗೆ ಗೋಚರವಾಯಿತು. ಮತ್ತು ಈ ಕವನವನ್ನು ಪೂರ್ಣವಾಗಿ ಕನಸು ಕಾಣುವ ರೀತಿಯಲ್ಲಿ ಬರೆದಿದ್ದೆ. ನಮ್ಮ ಕನಸಿನಲ್ಲಿ ರಾತ್ರಿ ಹಗಲಾಗಬಹುದು ಹಾಗೆ ಹಗಲು ರಾತ್ರಿಯ ರೀತಿಯಲ್ಲಿ ಕಾಣಬಹುದು ಆ ಆಧಾರದ ಮೇಲೆ ಬರೆದ್ದು. ಶಬ್ಧ ಪ್ರಯೋಗವು ಸರಿಯಿದ್ದಿರಲಿಲ್ಲ ಅದನ್ನು ಬದಲಿಸಿದ್ದೇನೆ.ಸರಿಯಿಲ್ಲದಿದ್ದಲ್ಲಿ ನೀವು ತಿಳಿಸಿದಂತೆ ಮಾಡುತ್ತೇನೆ.

Dr.D.T.K.Murthy. said...

ಸ್ವಲ್ಪ ನವ್ಯದ ರೀತಿ ಇರುವುದರಿಂದ ಕವನ ತಕ್ಷಣಕ್ಕೆ ಅರ್ಥವಾಗದೆ ಹೋಗಬಹುದು.ಆದರೆ ಒಳ್ಳೆಯ ಪ್ರಯತ್ನ.ಬಿಡದೆ ಮುಂದುವರೆಸಿ.ಧನ್ಯವಾದಳು.

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಮೂರ್ತಿ ಸರ್. ನನಗೂ ಸಾಕಷ್ಟು ತಿಳುವಳಿಕೆಯ ಅದತ್ಯವಿದೆ. ತಪ್ಪಿದ್ದಲ್ಲಿ ದಯವಿಟ್ಟು ತಿಳಿಸಿ. ನನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇನೆ.

Venkatakrishna.K.K. said...

ಚೆನ್ನಾಗಿದೆ,
ಒಳ್ಳೇ ಪ್ರಯತ್ನ.ಬರೀತಿರಿ.

- ಕತ್ತಲೆ ಮನೆ... said...

ವಸಂತ್ ,

ಹೊಸತರಹ ನವಿರಾಗಿದೆ..

ಸೀತಾರಾಮ. ಕೆ. / SITARAM.K said...

ಹುಣ್ಣಿಮೆಯ ರಾತ್ರಿಯಲ್ಲಿ ಚಂದಿರ ಕಳೆದೋಗಿ ಕಾರ್ಗತ್ತಾದಾಗ ಚಂದಿರನ ಹುಡುಕ ಹೊರಡುವ ತಮಗೆ ರೆಕ್ಕೆ ಮೂಡಲಿ!

SATISH N GOWDA said...

ಸಾರೀ ವಸಂತ್ ನಾನು ನಿಮ್ಮ ಬ್ಲಾಗಿನಲ್ಲಿ ಕಾಮೆಂಟ್ ಬರೆದಿದ್ದೇನೆ ಆದರೆ . ನನಗೆ ಮರತೆ ಹೋಗಿತ್ತು ವಸಂತ್ ಸಾರೀ ...

ವಸಂತ್ said...

ತುಂಬಾ ಧನ್ಯವಾದಗಳು Venkatakrishna ಸರ್.

ವಸಂತ್ said...

ತುಂಬಾ ಧನ್ಯವಾದಗಳು " ಮನಸಿನ ಮನೆ " ರವರೆ

ವಸಂತ್ said...

ಸೀತಾರಾಮ ಸರ್. ನಿಮ್ಮ ಆರ್ಶಿವಾದವು ನನ್ನಂತವರಿಗೆ ಅತ್ಯಗತ್ಯ ತುಂಬಾ ಧನ್ಯವಾದಗಳು.

ವಸಂತ್ said...

ಪರವಾಗಿಲ್ಲ ಏನು ಬೇಸರವಿಲ್ಲ ಸಂತೋಶ್ ಗೌಡ. ಮುಂದುವರೆಸು.