Monday, July 26, 2010

ನಿನ್ನ ಮನಸನ್ನು ಕದ್ದು ಹೋದೇನು .!...


ನೀ ಸುಮ್ಮನಾಗಿಬಿಡು ಗೆಳತಿ
ನೀ ನಗುವಾಗ ನಿನ್ನ ನಗುವನ್ನು ಕಂಡು
ಆ ಸೂರ್ಯನೇನಾದರೂ
ಬೆಳಕ ತೋರದೆ ಕತ್ತಲಾದಾನು...

ನೀ ನಡೆದಾಡದಿರು ಗೆಳತಿ
ನಿನ್ನ ಸುಕೋಮಲವಾದ ನಡುಗೆಯ ಕಂಡು
ಆ ನವಿಲೇನಾದರೂ
ನಾಟ್ಯವಾಡದೆ ನೊಂದು ಕೊಂಡೀತು...

ನೀ ಕೋಪಗೊಳ್ಳದಿರು ಗೆಳತಿ
ನಿನ್ನ ತಾಪಕ್ಕೆ ಮುಚ್ಚಿಹೋಗಿರುವ
ಅಗ್ನಿಪರ್ವತಗಳೇನಾದರೂ
ಮತ್ತೆ ಪುಟಿದೆದ್ದು ಬಂದಾವು...

ನೀ ಕನಸು ಕಾಣದಿರು ಗೆಳತಿ
ಆ ಕನಸೊಳಗೆ ನಾ ಬಂದು
ನಿನ್ನ ಹೃದಯದಲ್ಲಿ ಪ್ರೀತಿಯ ಬೀಜವನು ಬಿತ್ತಿ..
ನಿನ್ನ ಮನಸನ್ನೇನಾದರೂ ಕದ್ದು ಹೋದೇನು...

                                                                 ವಸಂತ್

24 comments:

ಪ್ರಗತಿ ಹೆಗಡೆ said...

ಚಿತ್ರ ಮತ್ತು ಕವನ ಎರಡೂ ಸೊಗಸಾಗಿವೆ...

ವಸಂತ್ said...

ಧನ್ಯವಾದಗಳು ಪ್ರಗತಿಯವರೆ ನಿಮ್ಮ ಪ್ರತಿಕ್ರಿಯೆಗೆ.

ಮನದಾಳದಿಂದ............ said...

ವಸಂತ್,
ದಿನದಿಂದ ದಿನಕ್ಕೆ ನಿಮ್ಮ ಬರವಣಿಗೆ ಸತ್ವಯುತವಾಗುತ್ತಿದೆ,
ಕವನ ಸುಂದರವಾಗಿದೆ, ನನಗೆ ತುಂಬಾನೇ ಇಷ್ಟವಾಯ್ತು.......

Dileep Hegde said...

ಚೆಂದದ ಕವನ ವಸಂತ್..

Dr.D.T.K.Murthy. said...

ಒಳ್ಳೆಯ ಕವನ ವಸಂತ್.ಇಷ್ಟವಾಯ್ತು.

ಸುಮ said...

ಸುಂದರವಾದ ಕವಿತೆ...ಇಷ್ಟವಾಯ್ತು.

Venkatakrishna.K.K. said...

ಚೆಂದದ ಪ್ರೇಮಕವನ.

ವಿ.ಆರ್.ಭಟ್ said...

Good, Go ahead like this !

Ranjita said...

tumba chandada kavana chitra kooda sogasagide :)

ವಸಂತ್ said...

ತುಂಬಾ ಧನ್ಯವಾದಗಳು ಪ್ರವೀಣ್ ಸರ್ ನಿಮ್ಮ ಪ್ರತಿಕ್ರಿಯೆಗೆ.

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾಗಳು Dileep Hegde.

ವಸಂತ್ said...

ತುಂಬಾ ಧನ್ಯವಾದಗಳು Murthy ಸರ್ ನಿಮ್ಮ ಪ್ರತಿಕ್ರಿಯೆಗೆ.

ವಸಂತ್ said...

ಧನ್ಯವಾದಗಳು ಸುಮ ಮೇಡಂ ನಿಮ್ಮ ಪ್ರತಿಕ್ರಿಯೆಗೆ.

ವಸಂತ್ said...

ಧನ್ಯವಾದಗಳು Venkatakrishna ಸರ್ ನಿಮ್ಮ ಪ್ರತಿಕ್ರಿಯೆಗೆ.

ವಸಂತ್ said...

ತುಂಬಾ ಧನ್ಯವಾದಗಳು ವಿ.ಆರ್.ಭಟ್ ಸರ್ ನಿಮ್ಮ ಪ್ರತಿಕ್ರಿಯೆಗೆ.

ವಸಂತ್ said...

ಧನ್ಯವಾದಗಳು Ranjita ಮೇಡಂ ನಿಮ್ಮ ಪ್ರತಿಕ್ರಿಯೆಗೆ.

- ಕತ್ತಲೆ ಮನೆ... said...

ವಸಂತ್ ,

ನೀ ಕಣ್ ಮುಚ್ಚದಿರು ಗೆಳತಿ.. ನನ್ನ ಪ್ರತಿಬಿಂಬ ನನಗೆ ಕಾಣದಾದೀತು...

ಸೀತಾರಾಮ. ಕೆ. / SITARAM.K said...

ಸೂರ್ಯನ ಬೆಳಕು ಪ್ರಿಯತಮೆಯ ನಗು, ನವಿಲಿನ ನಾಟ್ಯ-ಪ್ರಿಯತಮೆಯ ನಡಿಗೆ, ಪ್ರಿಯತಮೆಯ ಕೋಪ-ಜ್ವಾಲಾಮುಖಿ ಎಂದು ರಸವತ್ತಾಗಿ ಹೋಲಿಸಿದ್ದಿರಾ...ಮೊದಲೆರಡು ಇದ್ದು ನವಿಲು ನಾಟ್ಯ ಮಾಡಿದಿದ್ದರೂ ಸರಿ, ರವಿ ಬೆಳಕ ನೀಡದಿದ್ದರೂ ಸರಿ ಆದರೆ ಕೋಪ ಮಾತ್ರ ಬೇಡ!ಅಲ್ಲವೇ!
ಗೆಳತಿ ಕನಸು ಕಾಣಲಿ! ನೀವು ಪ್ರೀತಿ ಬಿತ್ತಿ, ಮನಸ್ಸು ಕದಿಯಲಿ ಮತ್ತು ಕೊನೆಯದು ಅವಶ್ಯವಾಗಿ ಆಗಲಿ ಎಂದು ಹಾರೈಸುತ್ತಾ ಸುಂದರ ಕವನ ನೀಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ.

ವಸಂತ್ said...

ತುಂಬಾ ಧನ್ಯವಾದಗಳು ಕತ್ತಲೆಮನೆ ರವರಿಗೆ.

SATISH N GOWDA said...

tumba channagide VASANTH sundaravada kalpane . nanna ee link ge hattiravada kavana sogasagide....

http://nannavalaloka.blogspot.com/2010/06/ninyare.html

ವಸಂತ್ said...

ಈ ಕೋಪವನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಂಡಿರದಿದ್ದರೆ, ಇದು ನಮ್ಮೊಳಗಿನ ತನು ಮನವನ್ನು ನಾಶ ಮಾಡಿಬಿಡುತ್ತದ ಎಂದು ನನ್ನ ಬಾವನೆ. ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಸೀತಾರಾಮ ಸರ್.

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಸಂತೋಶ್ ಗೌಡ.

ದಿನಕರ ಮೊಗೇರ.. said...

ಸೊಗಸಾದ ಕವನಕ್ಕೆ ಅಭಿನಂದನೆಗಳು..... ತುಂಬಾ ಮುದ್ದಾದ ಚಿತ್ರಕ್ಕೂ ಅಭಿನಂದನೆ....

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ದಿನಕರ ಮೊಗೇರ ಸರ್.