Friday, July 30, 2010

ಇದ್ದಾರೆ ನಮ್ಮೊಳಗೆ..!.


ಇದ್ದಾರೆ ನಮ್ಮೊಳಗೆ
ಸ್ವಚ್ಚಂದವಾಗಿ ಬದುಕುವ ನವಿಲುಗಳನ್ನು ಕೊಂದು
ಅದರಿಂದ ಬಣ್ಣದ ಗರಿಗಳ ಕಡಿದು
ಜೇಡಿಮಣ್ಣಿಗೆ ನವಿಲಿನಂತೆ ರೂಪವಿಟ್ಟು
ಹಾದಿ ಬೀದಿಯಲ್ಲಿ ಮಾರಿಕೊಂಡು ಹೋಗುವಂತಾ ಜನ.

ಇದ್ದಾರೆ ನಮ್ಮೊಳಗೆ
ಸತ್ಯವನ್ನು ಸುಳ್ಳನ್ನಾಗಿಸಿ
ಸುಳ್ಳನ್ನು ಸತ್ಯವನ್ನಾಗಿಸಿ
ಸುಳ್ಳಿನಿಂದಲೆ ಮಹಲುಗಳ ನಿರ್ಮಿಸಿ
ಗುಂಡು ತುಂಡಿನ ಮಜದಲ್ಲಿ
ಅನುದಿನವು ನಶೆಯಲ್ಲಿ ತೇಲಾಡುತ್ತಿರುವಂತ ಜನ.

ಇದ್ದಾರೆ ನಮ್ಮೊಳಗೆ
ಒಂದು ಹೊತ್ತಿನ ಕೂಳಿಗಾಗಿ
ತಮ್ಮ ಮೈಯನ್ನೇ ಮಾರಿಕೊಳ್ಳುತ್ತ
ಸಿಕ್ಕ ಸಿಕ್ಕವರಿಗೆ ಸೆರಗನ್ನು ಚಾಚುವಂತ
ಬದುಕಲು ಬವಣೆ ಪಡುವಂತ ಅಭಾಗ್ಯಶೀಲ ಜನ.

ಇದ್ದಾರೆ ನಮ್ಮೊಳಗೇ
ಕೊಟ್ಟ ಕುದುರೆಯನು ಏರದವರು
ಹೌದು ಇವರು ಡೊಂಕು ಬಾಲದ ನಾಯಕರು
ತಮ್ಮ ತಪ್ಪುಗಳ ಬಗ್ಗೆ ಅರಿವಿದ್ದರೂ
ಮತ್ತೊಬ್ಬರ ತಪ್ಪುಗಳನ್ನು ಎತ್ತಿ ತೋರುವಂತ ಜನ.

                                                                         ವಸಂತ್

24 comments:

ಮನದಾಳದಿಂದ............ said...

ಎಂಥಾ ವಿಪರ್ಯಾಸ ಆಲ್ವಾ?
ಚೆನ್ನಾಗಿದೆ.

ಪ್ರಗತಿ ಹೆಗಡೆ said...

ಇದ್ದಾರೆ ನಮ್ಮಲ್ಲೂ ವಾಸ್ತವವ ಬಿಂಬಿಸುವ
ಕವನ ಬರೆವ ವಸಂತ್ ಅವರಂತ ಜನ...
ಕವನ ಚೆನ್ನಾಗಿದೆ...

Dr.D.T.krishna Murthy. said...

ಕವನ ಚೆನ್ನಾಗಿದೆ ವಸಂತ್.ಧನ್ಯವಾದಗಳು.

ಮನಮುಕ್ತಾ said...

ಚೆನ್ನಾಗಿ ಬರೆದಿದ್ದೀರಿ.

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರವೀಣ್ ಸರ್. ಖಂಡಿತ ನಿಮ್ಮ ಮಾತು ನಿಜ.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಪ್ರಗತಿರವರೆ.

ವಸಂತ್ said...

ತುಂಬಾ ಧನ್ಯವಾದಗಳು ಕೃಷ್ಣಮೂರ್ತಿ ಸರ್ ನಿಮ್ಮ ಪ್ರತಿಕ್ರಿಯೆಗೆ.

ವಸಂತ್ said...

ನಿಮ್ಮ ಪ್ರತಿಕ್ರಿಯೆಗು ತುಂಬಾ ಧನ್ಯವಾದಗಳು ಮನಮುಕ್ತಾ ಮೇಡಂ.

ವನಿತಾ / Vanitha said...

ಸತ್ಯ .!!

ದಿನಕರ ಮೊಗೇರ.. said...

ವಸಂತ್ ಸರ್,
ಸುಂದರ ಕವನ..... ಎಂತಾ ಜನ ಆಲ್ವಾ ಎಂದರೆ.... ನಾವು ಹೇಗೋ, ಯಾರು ನಮ್ಮ ಬಗ್ಗೆ ಬರೀತಾ ಇದ್ದಾರೋ...... ಹೌದಲ್ವಾ....?

ವಿ.ಆರ್.ಭಟ್ said...

ನನ್ನ ಒಂದು ದಿನದ ಒಕ್ಕಣಿಕೆ ನಿಮಗೆ ಬೇಸರ ತರಿಸಿರಬಹುದು, ಆದರೆ ಇಂದು ನೋಡಿ ಅದು ಹೇಗೆ ಬದಲಾದ ಕವನಗಳನ್ನು ಬರೆಯಲು ಪ್ರೇರೇಪಿಸಿತು, ಈ ರೀತಿ ಕೆಲವೊಮ್ಮೆ ನಾವು ತಿವಿದು ಹೇಳುವುದಿದೆ, ಅದು ನಿಮ್ಮ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡಲು ಮಾರ್ಗ ತೆರೆಸುತ್ತದೆ ಎಂಬುದು ನನ್ನ ಅನಿಸಿಕೆ, ಹೀಗಾಗಿ ನಾನು ಮತ್ತು ನನ್ನ ಥರದವರು ನೆರವಾಗಿ ಏನು ಬರೆದರೂ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ, ಈ ಕವನದಲ್ಲಿ ಹಾಗೂ ನಿಮ್ಮಲ್ಲಿ ಬಹಳ ಬದಲಾವಣೆ ಕಂಡೆ, ಗುಡ್ ಲಕ್, ಭವಿಷ್ಯ ಉಜ್ವಲವಾಗಲಿ, ಥ್ಯಾಂಕ್ಸ್

Raghu said...

chennagide vansath..holike olle ritinalli vekatha padisiddiri..
keep writing...
Raaghu

ವಸಂತ್ said...

ಹೌದು ನಿಮ್ಮ ಮಾತು ನಿಜ ದಿನಕರ ಮೊಗೇರ ಸರ್. ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

ವಸಂತ್ said...

ವಿ.ಆರ್.ಭಟ್ ಸರ್, ನಾನು ಯಾರ ಮೇಲು ಬೇಸರಗೊಳ್ಳುವುದಿಲ್ಲ. ಏಕೆಂದರೆ ನಿಮ್ಮ ಹಿತವಚನಗಳು ನಮ್ಮಂತವರಿಗೆ ಬೇಕೇ ಬೇಕು. ಅದು ನೀವು ತಾನೆ ನಮ್ಮನ್ನು ತಿದ್ದಿಕೊಳ್ಳಲು ಹೇಳುತ್ತೀರ ಇದರಲ್ಲಿ ಬೇಸರ ಪಡುವ ಮಾತೆಲ್ಲಿ. ಶಾಲೆಯಲ್ಲಿ ಗುರುಗಳು ನಮಗೆ ಯಾವರೀತಿಯಲ್ಲಿ ಭೋದಿಸುತ್ತಾರೊ ನೀವು ನೀವು ಹಾಗೆ. ನಿಮ್ಮ ಮಾತುಗಳನ್ನು ಶಿರಸಾವಹಿಸಿ ಪಾಲಿಸುತ್ತೇನೆ ಧನ್ಯವಾದಗಳು.

ವಸಂತ್ said...

ತುಂಬಾ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ವನಿತಾ ಮೇಡಂ.

ವಸಂತ್ said...

ನಿಮಗೂ ತುಂಬಾ ಧನ್ಯವಾದಗಳು ರಘುರವರೆ.

SATISH N GOWDA said...

ತುಂಬಾ ಚನ್ನಾಗಿದೆ ವಸಂತ್ .

kusu Muliyala said...

ವಸ೦ತ್ ರವರೇ,
ವಾಸ್ತವ ಯಾವಾಗಲೂ ನಿಮ್ಮ ನಿರೀಕ್ಷೆಗಿ೦ತ ಭಿನ್ನವಾಗಿ ಮತ್ತು ಕಠೋರವಾಗಿರುತ್ತದೆ.
ನಿಮ್ಮ ಅನಿಸಿಕೆಯ ಪ್ರಸ್ತುತತೆ ಚೆನ್ನಾಗಿದೆ.

- ಕತ್ತಲೆ ಮನೆ... said...

ಅದ್ಭುತ ಸಾಲುಗಳು..
ಸ್ಥಿತಿಗತಿ ಬಗ್ಗೆ ಉತ್ತಮ ಕವನ...

ವಸಂತ್ said...

ತುಂಬಾ ಧನ್ಯವಾದಗಳು SATISH GOWDA.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು kusu Muliyala ಸರ್.

ವಸಂತ್ said...

ನಿಮಗೂ ಧನ್ಯವಾದಗಳು "ಕತ್ತಲೆ ಮನೆ"ರವರೆ.

ಸೀತಾರಾಮ. ಕೆ. / SITARAM.K said...

marmikavada kavana. tumbaa chennaagide anuku kavana.

ವಸಂತ್ said...

ತುಂಬಾ ಧನ್ಯವಾದಗಳು ಸೀತಾರಾಮ ಸರ್.