Friday, August 6, 2010

ನಾಳೆ ಬರುವ ಕನಸಿಗಾಗಿ ಕಾಯುತ್ತಿರುತ್ತೇನೆಹತ್ತಾರೂ ಬಾರಿಯಾದರೂ ದಿಟ್ಟಿಸುತ್ತೇನೆ
ಮೇಲೆ ಸಾಗುವ ಮೋಡಗಳ ಪಯಣವನ್ನು
ಸಾಗುತ್ತಾ ಸಾಗುತ್ತಾ ಮರೆಯಾಗುವ
ಅವುಗಳ ಪರಿಯ ಒಮ್ಮೆಯಾದರೂ
ನನ್ನ ಜೀವನಕ್ಕೆ ಅಳವಡಿಸಿಕೊಳ್ಳಲು
ಸಾಧ್ಯವಾಗುತ್ತದೇನೊ ಎಂಬ ತವಕದೊಂದಿಗೆ.
ಅವುಗಳ ಸ್ವಚ್ಛಂದ ಸಾಗಾಟ
ಗಾಳಿಯೊಂದಿಗಿ ಬೆಸೆದ ನಂಟು
ಸೂರ್ಯನ ತಾಪಕ್ಕೆ ಕರಗಿಹೋದರೂ 
ನಾಳೆಯ ಬಗ್ಗೆ ಯೋಚಿಸದ ಪರಿಯನ್ನು
ತದೇಕಚಿತ್ತದಿಂದಲೇ ಗಮನಿಸುತ್ತೇನೆ
ನನ್ನ ಜೀವನವು ಅವುಗಳಂತಾದರೆ ಸಾಕೆಂದು
ಪ್ರತಿ ರಾತ್ರಿಯು ಕನಸುಕಾಣುತ್ತೇನೆ
ದಿನನಿತ್ಯದ ಗೊಡವೆಗಳು
ಬೇಸರವನ್ನು ತರಿಸುವ ಪ್ರಸಂಗಗಳು
ನೋವಿನ ಛಾಯೆಗಳು
ವಿಷಾದದ  ಬಿಂಬಗಳು
ಕೊನೆಯಾಗದ ಹೆಜ್ಜೆ ಗುರುತುಗಳು
ಮನಸ್ಸಿನಲ್ಲಿ ಮೂಡಿ ಕಸಿವಿಸಿ ಗೊಳಿಸುತ್ತವೆ
ನನ್ನ ಸ್ವಚ್ಛಂದ ಆಸೆಗೂ ಅಡ್ಡಿಯುಂಟುಮಾಡುತ್ತವೆ
ಮುಂಜಾನೆಯೆ ಎದ್ದು ಆಕಾಶದೆಡೆಗೆ  
ಮುಖಮಾಡಿ ದಿಟ್ಟಿಸಿ ನೋಡುತ್ತೇನೆ
ಬಿಸಿಯುಸಿರ ಭಾವವೊಂದು ಬಂದು ಕಣ್ಮರೆಯಾಗುತ್ತದೆ
ನನ್ನ ಸ್ವಚ್ಛಂದ ಜೀವನಕ್ಕೆ ರೆಕ್ಕೆ ಮೂಡುವುದು
ಕೇವಲ ಕನಸಿನಲ್ಲೆಂದು ತಿಳಿದು
ನಾಳೆ ಬರುವ ಕನಸಿಗಾಗಿ ಕಾಯುತ್ತಿರುತ್ತೇನೆ.

[ಕ್ಷಮಿಸಿ ತಡವಾಗಿ ಎಲ್ಲರಿರಗೂ ಸ್ನೇಹಿತರ ದಿನದ ಶುಭಾಷಯಗಳನ್ನು ಕೋರುತ್ತಿದ್ದೇನೆ.]                                                                  
     

20 comments:

Dr.D.T.krishna Murthy. said...

vasant;kavana tumbaa chennaagide.svalpa editing bekaagittu anisutte.dhanyavaadagalu.

SATISH N GOWDA said...

ಕವನ ಚನ್ನಾಗಿ ಮೂಡಿಬಂದಿದೆ ...... ವಸಂತ್

- ಕತ್ತಲೆ ಮನೆ... said...

ತಮಗೂ ಕೂಡ ಸ್ನೇಹ ದಿನದ ಶುಭಾಶಯಗಳು..

ಮನದಾಳದಿಂದ............ said...

ವಸಂತ್,
ಕವನ ಚನ್ನಾಗಿದೆ,
ನಿಮಗೂ ಸ್ನೇಹಿತರ ದಿನದ ಶುಭಾಶಯಗಳು.

ವಸಂತ್ said...

ತುಂಬಾ ಧನ್ಯವಾದಗಳು ಮೂರ್ತಿ ಸರ್. ನಿಮ್ಮ ಅನಿಸಿಕೆ ಸರಿಯಿದೆ, ಈ ಕವನದಲ್ಲಿ ಕೆಲವು ಬದಲಾವಣೆಗಳ ಅವಶ್ಯಕತೆಯಿದೆ. ನಿಮಗನಿಸಿದ ಬದಲಾವಣೆಗಳನ್ನು ನೀವೆ ತಿಳಿಸಿಕೊಡಿ.

ವಸಂತ್ said...

ಧನ್ಯವಾದಗಳು ಸಂತೋಶ್ ಗೌಡ.

ವಸಂತ್ said...

ತಡವಾಗಿ ಸ್ನೇಹ ದಿನದ ಶುಭಾಶಯಗಳನ್ನು ನಿಮಗೆ ತಿಳಿಸಿದ್ದೇನೆ. ಬೇಸರಿಸಿಕೊಳ್ಳದೆ ನನ್ನೊಡನೆ ನಿಮ್ಮ ಶುಭಾಷಯಗಳನ್ನು ಅಂಚಿಕೊಂಡದ್ದಕ್ಕಾಗಿ ನಾನು ನಿಮಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಕತ್ತಲು ಮನೆರವರಿಗೆ.

ವಸಂತ್ said...

ನನ್ನ ಕವನವನ್ನು ಇಷ್ಟಪಟ್ಟದ್ದಕ್ಕಾಗಿ ಮತ್ತು ತಡವಾಗಿ ಸ್ನೇಹ ದಿನದ ಶುಭಾಶಯಗಳನ್ನು ನಿಮಗೆ ತಿಳಿಸಿದ್ದೇನೆ. ಬೇಸರಿಸಿಕೊಳ್ಳದೆ ನನ್ನೊಡನೆ ನಿಮ್ಮ ಶುಭಾಷಯಗಳನ್ನು ಅಂಚಿಕೊಂಡದ್ದಕ್ಕಾಗಿ ನಾನು ನಿಮಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಪ್ರಕಾಶ್ ಸರ್.

ಸಿಮೆಂಟು ಮರಳಿನ ಮಧ್ಯೆ said...

ಕವನ ಹೆಣೆದ ರೀತಿ..
ಭಾವಗಳನ್ನು ವ್ಯಕ್ತಪಡಿಸಿದ ರೀತಿ ಚೆನ್ನಾಗಿದೆ..

ಅಭಿನಂದನೆಗಳು..

ವಸಂತ್ said...

ಕವನದ ಬಗೆಗಿನ ನಿಮ್ಮ ಅನಿಸಿಕೆಗೆ ಧನ್ಯವಾದಗಳನ್ನು ಆರ್ಪಸುತ್ತೇನೆ ಪ್ರಕಾಶ್ ಸರ್.

Dr.D.T.krishna Murthy. said...

ವಸಂತ್;ನಮಸ್ಕಾರ.ಮತ್ತೆ ಮತ್ತೆ ನಿಮ್ಮ ಕವನವನ್ನು ಓದಿದೆ.ಅದರಲ್ಲೇನೋ ತಾಜಾತನವಿದೆ.ಅದನ್ನು ತಿದ್ದುವುದು ಬೇಡ.ಅದು ತನ್ನ ಪಾಡಿಗೆ ತಾನು ಮಗುವಿನಂತೆ ಸ್ವಚ್ಚಂದವಾಗಿ ಬೆಳೆಯಲಿ.ನನ್ನ ಬ್ಲಾಗಿನಲ್ಲಿ ಹಿಂದಿನ ಕವನ 'ಮಕ್ಕಳು'ಓದಿ ನೋಡಿ.ನಿಮಗೆ ಖುಷಿ ಕೊಡಬಹುದು.ನೀವು ನಿಮಗೆ ತೋಚಿದ ಹಾಗೆ ಬರೆಯುತ್ತಾ ಮುಂದೆಸಾಗಿ.ಆಲ್ ದಿ ಬೆಸ್ಟ್ .

ವಿ.ಆರ್.ಭಟ್ said...

ಕವನದ ಈ ರೀತಿಯ ಹಾಡಿ ನನಗೆ ಹಿಡಿಸುತ್ತದೆ, ಮಾರ್ಮಿಕ ಬದಲಾವಣೆ ಕಂಡೆ, ದುಗುಡ ರಹಿತ ಜೀವನ ನಿಮಗೊದಗಲಿ!

ಸೀತಾರಾಮ. ಕೆ. / SITARAM.K said...

ಭಾವನೆಯ ಉತ್ಕಟ ಅಭಿವ್ಯಕ್ತಿ. ಚೆಂದವಾಗಿ ಬರೆದಿದ್ದಿರಾ.. ಸ್ನೇಹಿತರ ದಿನದ ಶುಭಾಶಯಗಳು ತಮಗೂ ಸಹಾ...

Ranjita said...

good one vasant heege barta irali :)

ಅನಂತರಾಜ್ said...

ಸ್ವಚ್ಛಂದ ಜೀವನಕ್ಕೆ ರೆಕ್ಕೆ ಮೂಡುವುದು ಕೇವಲ ಕನಸಿನಲ್ಲೆಂದು ತಿಳಿದು ನಾಳೆ ಬರುವ ಕನಸಿಗಾಗಿ ಕಾಯುತ್ತಿರುತ್ತೇನೆ.
ನಿಜ ವಸ೦ತ್, ಅಲ್ಲಿಯ ಜೀವನಕ್ಕೆ ನಾವೇ ನಿರ್ದೇಶಕರು, ನಿರ್ಮಾಪಕರು ಮತ್ತು ಪ್ರೇಕ್ಷಕರು. ಉತ್ತಮ ಕವನ.

ಅನ೦ತ್

ವಸಂತ್ said...

ತುಂಬಾ ಧನ್ಯವಾದಗಳು ಮೂರ್ತಿ ಸರ್.

ವಸಂತ್ said...

ಕವನದ ಬಗೆಗಿನ ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು ವಿ.ಆರ್.ಭಟ್ ಸರ್.

ವಸಂತ್ said...

ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು ಸೀತಾರಾಮ ಸರ್, ಮತ್ತು ಸ್ನೇಹದಿನದ ಶುಭಾಷಯಗಳಿಗೆ ಪ್ರತಿಕ್ರಿಯಸಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳು.

ವಸಂತ್ said...

ಧನ್ಯವಾದಗಳು ರಂಜಿತಾ ಮೇಡಂ, ಕಂಡಿತ ನನ್ನ ಕವನಗಳ ಪಯಣ ನಡೆಯುತ್ತಾ ಸಾಗಿತ್ತಿರುತ್ತದೆ.

ವಸಂತ್ said...

ಅನಂತರಾಜ್ ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮತ್ತು ನಿಮ್ಮ ಅನಿಸಿಕೆಗೂ ನನ್ನ ಧನ್ಯವಾದಗಳನ್ನು ತಿಳಿಸುತ್ತೇನೆ.