Wednesday, August 11, 2010

ದಾರಿ ಯಾವುದಯ್ಯ ಈ ಜಗದೊಳಗೆ ..!.



ಸಾಗಲೊಲ್ಲದ ಹಾದಿ ಯಾವುದಯ್ಯ,
ಈ ಜಗದೊಳಗೆ, ಸಾಗಿ ಹೋಗುತಿಹರು ಬಿಡದೇ, 
ಕಾಣದ ಹಾದಿ ಬೀದಿಗಳ ಹುಡುಕುತ್ತಾ
ದಿನಕ್ಕೊಂದು ಹೊಸದಾರಿಯ ಅನ್ವೇಷಣೆಯಲಿ.

ತಣ್ಣಗೆ ಮಲಗಿರುವ ಬೀದಿಗಳ ಕೆಣಕಿ
ಹೇ ದಾರಿ, ನಿನ್ನ ಹಾದಿ ಎಲ್ಲಿದೆ,
ಹಾಗೇಯೆ ನಿನ್ನ ಅಂತ್ಯವನ್ನೊಮ್ಮೆ ತಿಳಿಸಿಬಿಡು,
ಎಲ್ಲವನ್ನೂ ಪರೀಕ್ಷಿಸಿ ಬರೆದುಕೊಳ್ಳಬೇಕಿದೆಯೆಂದು.

ಅದು ಇಂದ್ರನಲ್ಲಿರಲಿ ಚಂದ್ರನಲ್ಲಿರಲಿ
ಅಥವಾ ಮತ್ಯಾವುದೋ ಗ್ರಹದಲ್ಲಿರಲಿ
ಅವನಿಗೆ ಬೇಕಿರುವುದು ಕೇವಲ
ಆ ದಾರಿಯ ಲೆಕ್ಕಾಚಾರ ಮಾತ್ರ.

ತಾನು ಮೆಟ್ಟಿದ ನೆಲದಲ್ಲಿ
ಗರಿಕೆಯು ಸಹ ಚಿಗುರೊಡೆಯುವುದಿಲ್ಲ
ಹಾಗೆಂದ ಮಾತ್ರಕ್ಕೆ ಸುಮ್ಮನಿರುತ್ತಾನೆಯೆ ?
ಬೀದಿಗಳಲ್ಲಿ ಸಿಮೆಂಟಿನ ಮರಗಳನ್ನು ಸೃಷ್ಟಿಸುತ್ತಾನೆ,
ಹಸಿರ ರಾಶಿಯ ಕೆಡವಿ ಕಾಂಕ್ರೇಟಿನ ಕಾಡಾಗಿಸುತ್ತಾನೆ.

ಉಣ್ಣುವ ನೆಲವನ್ನು ಕಸಿದು
ಮಿರ ಮಿರ ಮಿಂಚುವ ಮನೆಗಳಾಗಿಸುತ್ತಾನೆ.
ತನ್ನದೇ ದಾರಿಗಳನ್ನು ಪರರಿಗೆ ಮಾರುತ್ತಾ .
ಉಟಕ್ಕೆ ಗತಿ ಇಲ್ಲದವರನ್ನು ಹೊಡೆದು ಹೊರ ದೂಡಿ
ಮೃಷ್ಠಾನ್ನವ ತಿನ್ನುತ್ತಾ ಮೋಜು ಮಾಡುತ್ತಾನೆ.

ಯಾರು ತಾನೆ ಎಷ್ಟೆಷ್ಟು ದೂರ ನಡೆದಾರೂ
ಇಲ್ಲಿ ಬದುಕುವ ಸಕಲ ಜೀವರಾಶಿಗಳಿಗೂ
ಮಾನವನ ಪಾಲಿನಷ್ಟೆ, ಹಕ್ಕಿದೆಯೆಂಬುದನ್ನು ಮರೆಯಬಾರದು
ತನ್ನ ದಾರಿಯಲ್ಲಿ ತಾನು ಮಾತ್ರ ನಡೆಯುವುದ ಬಿಟ್ಟು,
ಇತರರನ್ನು ತನ್ನ ಜೊತೆ ನಡೆಸಿಕೊಂಡು ಸಾಗಿದರೆ 
ಸಕಲ ಜೀವಕುಲಕ್ಕೂ ಒಳಿತಾಗಬಹುದಲ್ಲವೆ.
                                                                                         ವಸಂತ್

16 comments:

ಪ್ರಗತಿ ಹೆಗಡೆ said...

ಕವನ ಚೆನ್ನಾಗಿದೆ....ಇಷ್ಟವಾಯಿತು...

SATISH N GOWDA said...

ಸುಂದರ ಕವನ , ಕವನದ ಸಾಲುಗಳು ಸ್ವಲ್ಪ ಜಾಸ್ತಿ ಆದವು ಅದರೊಸಾಲುಗಳು ಚನ್ನಾಗಿ ಮೂಡಿಬಂದಿವೆ

Venkatakrishna.K.K. said...

ಸುಂದರ ಕವನ,
ಇಷ್ಟವಾಯಿತು...

ಸೀತಾರಾಮ. ಕೆ. / SITARAM.K said...

ಸುಂದರವಾದ ಕವನ. ಮಾನವನ ಪರಿಸರ ನಾಶ, ಅದರಿಂದಾಗುವ ವಿನಾಶ, ಹಿಡಿದ ದಾರಿ, ಗಮ್ಯಕ್ಕೊಂದು ಪ್ರಶ್ನೆ ಹೀಗೆಲ್ಲ ಹತ್ತು ಹಲವು ವಿಷಯಗಳು ಕವನದಲ್ಲಿ ಮೂಡಿವೆ. ಧನ್ಯವಾದಗಳು.

Dr.D.T.krishna Murthy. said...

ವಸಂತ್;ಕವನದ ಶೈಲಿ ಸುಂದರವಾಗಿದೆ.ನಿಮ್ಮ ಲೇಖನದಿಂದ ಇನ್ನಷ್ಟು ಸುಂದರ ಕವನಗಳು ಬರಲಿ ಎನ್ನುವ ಹಾರೈಕೆ.

ಸಿಮೆಂಟು ಮರಳಿನ ಮಧ್ಯೆ said...

ವಸಂತ್...

ಅಭಿನಂದನೆಗಳು...
ಚಂದದ ಕವನಕ್ಕೆ...

ದಿನಕರ ಮೊಗೇರ.. said...

olleya kavana.... oLLeya kalpane....
ishta aaytu....

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಗತಿರವರೆ.

ವಸಂತ್ said...

ಧನ್ಯವಾದಗಳು ಸತೀಶ್ ಗೌಡ ನಿಮ್ಮ ಅನಿಸಿಕೆಗೆ.

ವಸಂತ್ said...

ಧನ್ಯವಾದಗಳು ವೆಂಕಟಕೃಷ್ಣ ಸರ್. ಕವನ ಇಷ್ಟಪಟ್ಟದ್ದಕ್ಕೆ..

ವಸಂತ್ said...

ಕವನದ ಒಳ ಅರ್ಥವನ್ನು ತುಂಬಾ ವಿವರವಾಗಿ ವಿವರಿಸಿ ತಿಳಿಸಿದ್ದೀರಾ. ನಮ್ಮ ಪರಿಸರದ ಬಗ್ಗೆ ನಮಗೆ ಕಾಳಜಿಯಿರಲೇ ಬೇಕು. ಆ ಕಾಳಜಿಯನ್ನು ಎಲ್ಲರೂ ಅಳವಡಿಸಿಕೊಂಡಲ್ಲಿ ಮುಂದಿನ ಜೀವನ ಸುಗಮವಾಗುತ್ತಾ ಸಾಗುತ್ತದೆ. ಧನ್ಯವಾದಗಳು ಸೀತಾರಾಮ ಸರ್.

ವಸಂತ್ said...

ಕವನದ ಶೈಲಿ ಇಷ್ಟವಾದದ್ದಕ್ಕೆ ಧನ್ಯವಾದಗಳು ಮೂರ್ತಿ ಸರ್.

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಕಾಶ್ ಸರ್.

ವಸಂತ್ said...

ದಿನಕರ ಮೊಗೇರ ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

- ಕತ್ತಲೆ ಮನೆ... said...

ವಾಸ್ತವಕ್ಕೆ ತಕ್ಕದಾದ ಕವನ..
ಹಸಿರ ಅಳಿಸಿ ನೆಲವನ್ನು ಬರಿದಾಗಿಸುತ್ತಿರುವುದರಿಂದ ಮನ ನೊಂದು ಮರುಗುತ್ತಿದೆ..

ವಸಂತ್ said...

ತುಂಬಾ ಧನ್ಯವಾದಗಳು ಕತ್ತಲು ಮನೆಯವರೆ ನಿಮ್ಮ ಪ್ರತಿಕ್ರಿಯೆಗೆ.