Sunday, August 22, 2010

ಸೃಷ್ಟಿಯೊಳಗಿನ ಅದ್ಭುತ ರಹಸ್ಯಗಳು...!.

     ಜಗತ್ತು ಹಲವಾರು ವಿಸ್ಮಯಗಳ ತಾಣವಾಗಿದೆ. ಪ್ರಕೃತಿಯ ಅಂತರಂಗವನ್ನು ಕೆದಕುತ್ತ ಹೋದಂತೆ ಊಹೆಗೂ ನಿಲುಕದ ಸಂಗತಿಗಳು ಹೊರಬೀಳುತ್ತ ಸಾಗುತ್ತವೆ. ಹಲವಾರು ಅದ್ಭುತಗಳನ್ನು ತನ್ನ ಮಡಲಿನೊಳಗೆ ಅಡಗಿಸಿಟ್ಟುಕೊಂಡು ಮನುಷ್ಯನ ಯೋಚನೆಗು ವಿಜ್ಞಾನಿಗಳ ವಾದಕ್ಕು  ಮಧ್ಯದಲ್ಲಿ ಗೋಡೆಯಂತೆ ನಿಂತಿದೆ. ಇದರ ಮರ್ಮವನ್ನು ತಿಳಿದು ಹೇಳುವುದಕ್ಕೆ ಯಾರಿಗಾದರೂ ಕಷ್ಟದಾಯಕವಾಗುತ್ತದೆ. ಪ್ರಪಂಚದ ಪುಟಗಳನ್ನು ತಿರುವುತ್ತ ಸಾಗಿದಂತೆ ನಮಗೆ ಎಲ್ಲೂ ಕಂಡು, ಕೇಳರಿಯದ ಅದ್ಭುಗಳು ಗೋಷರವಾಗುತ್ತದೆ. ಇದು ನಿಜಾನ ಎಂದು ನಮ್ಮ ಮೂಗಿನ ಮೇಲೆ ನಾವೇ ಬೆರಳಿಟ್ಟುಕೊಂಡು ನೋಡಿಕೊಳ್ಳುತ್ತೇವೆ. ಸೃಷ್ಟಿಯೊಳಗಿನ ವೈಪರಿತ್ಯಗಳಿಗೆ ಕಾರಣವಾಗಿರುವ ಪ್ರಕೃತಿಯು ತನ್ನ ಕಪಿಮುಷ್ಠಿಯೊಳಗೆ ಸದಾ ಹಸಿರಿನಿಂದ ಕಂಗೊಳಿಸುವ ನಿತ್ಯಹರಿದ್ವರ್ಣ ಕಾಡುಗಳು. ದುಮ್ಮಿಕ್ಕಿ ಹರಿಯುವ ಜಲಪಾತಗಳು, ನೋಡಿದಷ್ಟು ದೂರಕ್ಕೆ ಬೆಳ್ಳಿಯಂತೆ ಬಿದ್ದುಕೊಂಡಿರುವ ಹಿಮಪರ್ವತಗಳು, ಒಮ್ಮೆಗೆ ಪುಟಿದೆದ್ದು ಲಾವರಸಗಳನ್ನು ಹರಿಸುವ ಜ್ವಾಲಾಮುಖಿಗಳು, ಮನುಷ್ಯನ ಬದುಕನ್ನೆ ತಲ್ಲಣಗೊಳಿಸುವ ಸುನಾಮಿಗಳು, ಬಿರುಗಾಳಿಗಳು, ಚಂಡಮಾರುತಗಳು, ಪ್ರವಾಹಗಳು, ಮಳೆಯೆ ಬೀಳದ ಮರುಳುಗಾಡುಗಳು, ಸದಾ ಮಳೆಯನ್ನೆ ಸುರಿಸುವ ಆಗೊಂಬೆಯಂತ ಪ್ರೆದೇಶಗಳು, ವರ್ಷಪೂರ್ತಿ ಹರಿಯುವ ನದಿಗಳು ಹೇಳುತ್ತ ಹೋದರೆ ಇದರ ಸಂಖ್ಯೆ ಬೆಳೆಯುತ್ತ ಸಾಗುತ್ತದೆ. ಪ್ರಪಂಚದ ಯಾವುದೇ ಭಾಗಕ್ಕೆ ಹೋದರು ಪ್ರೆದೇಶಕ್ಕೆ ಸೀಮಿತವಾದ ಹಲವಾರು ಅದ್ಭುತಗಳ ಸಂಗ್ರಹವನ್ನೆ ಕಾಣಬಹುದು. ಕೆಲವು ಸ್ಥಳಗಳಲ್ಲಿ  ಉದಯಸಿರುವ ವಿಸ್ಮಯಗಳು ಅಂತಹ ಪ್ರದೇಶಗಳಲ್ಲಿವಾಸಿಸುವ ಜನರ ಧಾರ್ಮಿಕ ಸಂಖ್ಯೇತಗಳಾಗಿರುತ್ತವೆ. ಮತ್ತಲವು ಅವರವರ ನಂಬಿಕೆಯಾಗಿ ಮಾರ್ಪಟ್ಟಿರುತ್ತದೆ. ಒಟ್ಟಿನಲ್ಲಿ ನಂಬಲೇ ಬೇಕಾದ ಸತ್ಯಗಳು ನಮ್ಮ ಕಣ್ಣಮುಂದೆ ಸುಳಿದರೆ, ನಂಬಲೇ ಬೇಕಾದ ಪರಿಸ್ಥಿತಿ ನಮ್ಮದಾಗುತ್ತದೆ. ಇಲ್ಲಿ ನಿಮಗೆ ಕೆಲವು ಚಿತ್ರಗಳನ್ನು ತೋರಿಸುತ್ತೇನೆ. ಇದೊಂದು ಅದ್ಭುತ ಮರದ ಚಿತ್ರಗಳು. ಈ ಮರಕ್ಕೆ ಹೆಣ್ಣುಮರ ಅಥವಾ ಹೆಣ್ಣುಬಿಡುವ ಮರವೆಂದು ಕರೆಯುತ್ತಾರೆ. ಇಲ್ಲಿನ ಚಿತ್ರಗಳನ್ನು ಅಂತರ್ ಜಾಲ ತಾಣದಿಂದ ತೆಗೆದುಕೊಳ್ಳಲಾಗಿದೆ. ಇದೋ ನೋಡಿ ಈ ಚಿತ್ರವೆ (Nareepol-Tree) ಹೆಣ್ಣುಬಿಡುವ ಮರಥೈಲ್ಯಾಂಡಿನಲ್ಲಿ ಮರವನ್ನು  ನರೀಪೊಲ್ ಮರವೆಂದು (Nareepol-Tree)  ಕರೆಯುತ್ತಾರೆ.
 
     ಈ ಮರವನ್ನು ಥೈಲ್ಯಾಂಡಿನ (Petchaboon province) ಎಂಬ ಪ್ರೆದೇಶದಲ್ಲಿ ಕಾಣಬಹುದು. ಅಲ್ಲಿನ ಜನರು ಮರವನ್ನು ದೇವರ ಮರವೆಂದು ನಂಬುತ್ತಾರೆ. ದೇವರೆ ಸ್ವತಃ ಮರವನ್ನು ಸೃಷ್ಟಿಮಾಡಿ ಹೋದನೆಂದು ಹೇಳುತ್ತಾರೆ. ಮರದ ಕಾಯಿಗಳು ಮೊದಲಿಗೆ ಬದನೆಕಾಯಿಯ ರೂಪದಲ್ಲಿ ರೂಪುಗೊಂಡು ನಂತರ ಬೆಳೆದಂತೆ ಕೈಕಾಲುಗಳು, ತಲೆ, ಮುಖ, ದೇಹವೆಲ್ಲವೂ ಹೋರಬೀಳುತ್ತದೆ. ಈ ಕಾಯಿಯ ಎಲ್ಲಾ ಲಕ್ಷಣಗಳು ನಗ್ನವಾಗಿ ನಿಂತಿರುವಂತ ಸುರ ಸುಂದರಿಯ ರೂಪವನ್ನು ಹೋಲುತ್ತದೆ. ನೋಡಲು ನಗ್ನರೂಪದ ಅಪೂರ್ವ ಸೌಂಧರ್ಯ ಕಾಶಿಯಂತೆ ಕಂಗೊಳಿಸುತ್ತದೆ. ಈ ಮರದ "ಸೃಷ್ಟಿ" ಒಂದು ಅದ್ಭುತ, ಊಹೆಗೂ ನಿಲುಕದ ಒಂದು ರಹಸ್ಯ.
    ನೋಡಿ ಇಲ್ಲಿ ಮಲಗಿರುವ ಅಜ್ಜಿ ಆಕೃತಿ ನರೀಪೊಲ್ ಮರದಲ್ಲಿ ಬೆಳೆದು ಒಣಗಿದಂತ ಕಾಯಿಯದು. ಸತ್ತ ಅಜ್ಜಿಯ ರೋಪವನ್ನು ಹೋಲುತ್ತದೆ. ಅಲ್ಲಿನ ಜನರು ಮರದ ಕಾಯಿಗಳನ್ನು ಬಹಳ ಭಯ ಭಕ್ತಿಯಿಂದ ತೆಗೆದುಕೊಂಡು ಹೋಗಿ,  ತಮ್ಮ ಮನೆಗಳಲ್ಲಿ ಅವುಗಳಿಗೆ ಆಭರಣಗಳಿಂದ ಶೃಂಗರಿಸಿ ದೇವರ ಕೋಣೆಯಲ್ಲಿಟ್ಟು ಪೂಜಿಸುತ್ತಾರೆ. ಅವರ ಧರ್ಮಗ್ರಂಥಗಳಲ್ಲಿ ಮರದೊಳಗಿನ ದೈವಗುಣದ ಉಲ್ಲೇಖವಿದೆಯಂತೆ. ಮರದ ಉಟ್ಟಿನ ಬಗ್ಗೆ ಅವರದೆ ಆದಾ ಪ್ರತಿವಾದಗಳಿವೆ. ಚಿತ್ರದಲ್ಲಿ ತೋರಿಸಿದಂತೆ ಉಲ್ಲೇಖಿಸಲಾಗಿದೆಯಂತೆ.
   ಈ ಮರವು ಪ್ರಪಂಚದ ಇತರೆಡೆಗಳಲ್ಲಿ ಕಂಡು ಬರುವುದಿಲ್ಲ. ಇದು ಸುಳ್ಳಲ್ಲ ಸತ್ಯ "ನಂಬಿದರೆ ನಂಬಿ ಇಲ್ಲವಾದಲ್ಲಿ ಮರವನ್ನೊಮ್ಮೆ ಕಣ್ಣಾರೆ ನೀಡಬನ್ನಿ" ಎಂದು ಅಲ್ಲಿನ ಜನ ಇತರರಿಗೆ ಸವಲಾಕುತ್ತಾರೆ. ಮರವನ್ನು ನೀವು  ಸಹ ನೋಡಬಹುದು. ಬ್ಯಾಂಕಾಕ್ ನಿಂದ 500 ಕಿ. ಮೀ ದೂರವನ್ನು ಕ್ರಮಿಸಿದರೆ ಸಾಕು. ನಿಮ್ಮ ಮುಂದೆ ಮರದ ವಿರಾಠ್ ರೂಪ ಪ್ರತ್ಯಕ್ಷವಾಗುತ್ತದೆ. (You can see the real tree at Petchaboon province about almost 500 kms away from Bangkok). ಪ್ರಯಾಣಕ್ಕೆ ಸಿದ್ದರಾಗುತ್ತಿದ್ದಿರೇನು ?. 
    ಏನೇ ಹಾಗಲಿ ಸೃಷ್ಟಿಯ ಮುಂದೆ ನಾವೆಲ್ಲರು ಕುಬ್ಜರು. ವರ್ಣಿಸಲು ಸಾಧ್ಯವಾಗದ ಕೌತುಕಗಳನ್ನು ಸೃಷ್ಟಿ ಸೃಷ್ಟಿಸುತ್ತದೆ. ಸೃಷ್ಟಿಗೆ ಮನುಷ್ಯರಾದ ನಾವುಗಳು ತಲೆಬಾಗಲೇ ಬೇಕು. ಇದೊಂದು ಮಾಯಜಗತ್ತು. ಯಾರಿಂದಲು ಸೃಷ್ಟಿಸಲಾಗದ ಸೃಷ್ಟಿಯೊಳಗಿನ ರಹಸ್ಯ.
[ಸೂಚನೆ: ಈ ಮರದ ಬಗ್ಗೆ ವಿವರಣೆ ಸಂಗ್ರಹಣೆ ಮಾಡಿ ಈ ಲೇಖನ ಬರೆಯಲಾಗಿದೆ. ಕೆಲವರು ಈ ಚಿತ್ರಗಳನ್ನು ಗ್ರಾಪಿಕ್ಸ್ ತಂತ್ರಜ್ಞಾನ ಅನ್ನುತ್ತಾರೆ. ಇದರ ಬಗ್ಗೆ ಯಾವುದೇ ಮಾಹಿತಿಯಿರುವುದಿಲ್ಲ]

10 comments:

ಪ್ರಸನ್ನ ಶಂಕರಪುರ said...

ವಸಂತ್ ಚತ್ರಗಳು ಹಾಗೂ ಲೇಖನ ಚೆನ್ನಾಗಿದೆ. ಇದು ಪ್ರಪಂಚದ ಎಂಟನೆಯ ಅದ್ಭುತ ಇರಬಹುದು! ಈ ಮರಕ್ಕೆ ಎಷ್ಟು ವರ್ಷ ವಯಸ್ಸಾಗಿದೆ ಎಂಬ ಬಗ್ಗೆ ಮಾಹಿತಿ ಇದೆಯೇ?

-ಪ್ರಸನ್ನ.ಎಸ್.ಪಿ

Santhosh Acharya said...

Vasanth, I believe this is just a hoax. Computer animated stuff or the human made dolls hanging over tree.. thats it! :)

ಸಾಗರದಾಚೆಯ ಇಂಚರ said...

ನಿಜಕ್ಕೂ ಅದ್ಭುತ

ಪ್ರಕ್ರತಿ ಬಲು ವೈಚಿತ್ರ್ಯದ ತವರು

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಸನ್ನ. ಈ ಮರದ ನಿರ್ಧಿಷ್ಟ ವಯಸ್ಸಿನ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ. ಮಾಹಿತಿಗಾಗಿ ಪ್ರಯತ್ನಿಸುತ್ತೇನೆ ಧನ್ಯವಾದಗಳು.

ವಸಂತ್ said...

Santhosh Acharya ರವರೆ ನಿಮ್ಮ ಮಾತು ಸತ್ಯವಿರಬಹುದು. ಇದೊಂದು ಕಂಪ್ಯೂಟರ್ ಅನಿಮೇಟಡ್ಡೆ ಅಥವಾ ಮಾನವ ನಿರ್ಮಿತ ಗೊಂಬೆಗಳೆ ಇರಬಹುದು ಆದರೂ ಈ ಮರವನ್ನು ಕೆಲವು ಟಿವಿ ಚಾನಲ್ ಗಳು ವಿಧವಿಧವಾಗಿ ತೋರಿಸಿವೆ ತೋರಿಸುತ್ತಿವೆ. ಮತ್ತು ಇದು ಸುಳ್ಳಲ್ಲ ಸತ್ಯ ನಂಬದಿದ್ದಲ್ಲೊಮ್ಮೆ ಕಣ್ಣಾರೆ ನೋಡಬಹುದೆಂದು ಆ ಮರವಿರುವ ಸ್ಥಳದ ಪೂರ್ಣ ವಿಳಾಸವನ್ನು ಸಹ ನೀಡಿದ್ದಾರೆ. ನನಗೂ ಆ ಮರದ ಬಗ್ಗೆ ಪೂರ್ಣವಾಗಿ ಗೊತ್ತಿಲ್ಲ. ಗೊತ್ತಿರುವುದನ್ನು ಬರೆದಿದ್ದೇನೆ ಅಷ್ಟೆ. ಇನ್ನು ಅ ಮರವಿರುವ ಸ್ಥಳಕ್ಕೆ ಹೋಗಿ ಆ ಮರದ ಬಗ್ಗೆ ಪೂರ್ವಪರಗಳನ್ನು ತಿಳಿದುಕೊಂಡ ಮೇಲೆ ಏನಾದರು ಹೇಳಬಹುದೆಂದು ನನ್ನ ಅನಿಸಿಕೆ. ಈ ವೆಬ್ ವಿಳಾಸದಲ್ಲಿ http://2.bp.blogspot.com/_i-pjm8JvHHQ/THR6ALUD-WI/AAAAAAAAAUU/cpRUvAC3c9s/s1600/nareepol.jpg ಅವರು ಕೃತಕವಾಗಿ ನಿರ್ಮಿಸಿದ (Nareepol-Tree)ಮರದ ಚಿತ್ರವಿದೆ. ಪ್ರತಿಕ್ರಿಯೆಗೆ ಧನ್ಯವಾದಗಳು.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು Gurumurthy ಸರ್. ನೀವು ತಿಳಿಸಿದಂತೆ ಪ್ರಕೃತಿಯನ್ನು ಅರಿಯಲು ಯಾರಿಂದಲು ಸಾಧ್ಯವಿಲ್ಲವೆಂದೆನಿಸುತ್ತದೆ.

ಸೀತಾರಾಮ. ಕೆ. / SITARAM.K said...

ಇದರ ಬಗ್ಗೆ ನನಗೆ ಮಿಂಚಂಚೆ ಬಂದಿತ್ತು. ನಾನಂತೂ ನಂಬಿಲ್ಲ!
ಆದರೆ ನಮ್ಮ ಕಲ್ಪನೆಗೂ ನಿಲುಕದ ವೈಚಿತ್ರ್ಯಗಳು ಜಗತ್ತಿನಲ್ಲಿ ಇವೆ.

Raghu said...

super photos..nice article.
Raaghu

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಸೀತಾರಾಮ ಸರ್ ನೀವು ತಿಳಿಸಿದಂತೆ ಈ ಸೃಷ್ಟಿಯೊಳಗೆ >>ನಮ್ಮ ಕಲ್ಪನೆಗೂ ನಿಲುಕದ ವೈಚಿತ್ರ್ಯಗಳ<< ನ್ನು ಕಾಣಬಹುದೆಂಬುದು ನಿಜವಾದ ಮಾತು.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ರಾಘುರವರೆ.