Saturday, August 28, 2010

ಕಾಣದ ಸತ್ಯಗಳಿಗಾಗಿ ಹುಡುಕುತ್ತ ...!.


ಅಗೋಚರವಾದ ದಾರಿಯಲ್ಲಿ
ಗೋಚರಿಸುವ ಸತ್ಯಗಳಿಗಾಗಿ
ಪುಟ್ಟ ದೀಪದೊಂದಿಗೆ ಸಾಗುತ್ತೇನೆ.

ಗಾಳಿಯ ರೂಪದಲ್ಲಿ
ಕತ್ತಲೆಯು ಕೆನ್ನಾಲಿಗೆ ಚಾಚಿ
ಭಯ ಹುಟ್ಟಿಸುವ
ಶಬ್ಧಗಳೊಂದಿಗೆ ಬಂದಾಗ.

ದೀಪದ ಬೆಳಕಲ್ಲಿ ನಿಂತ ನನಗೆ
ನಾ ಬಂದದ್ದಾದರೂ ಏಕೆ
ಎಂಬುದು ಮರೆತೇ ಹೋಗಿರುತ್ತದೆ.

ಸತ್ಯಗಳನ್ನು ಹುಡುಕುವ ತವಕದಲ್ಲಿ
ನನ್ನೊಳಗೆ ನನಗೆ ಕಾಣದ
ಹಲವಾರು ಭಯಗಳು ರೂಪುಗೊಂಡು
ತಪ್ಪಿಸಿಕೊಳ್ಳಲು ಹೆಣಗಾಡುತ್ತೇನೆ.

ಆಸೆ, ನಿರಾಸೆ, ಧ್ವೇಷ,
ಅಸೂಯೆ, ಮೋಹಗಳೆಲ್ಲವು
ನನ್ನನ್ನೇ ಸುತ್ತುವರೆದು ನಿಲ್ಲುತ್ತವೆ.

ನನಗೆ ತಿಳಿಯದ ನನ್ನೊಳಗೂ ಹಲವು
ತಪ್ಪುಗಳಿರುವುದನ್ನು ಕಂಡು
ಪರರ ತಪ್ಪುಗಳಿಗಾಗಿ ಹುಡುಕುವುದು
ಸರಿಯಲ್ಲವೆಂದೆನಿಸಿ.

ಬೆಳಗುತ್ತಿದ್ದ ದೀಪವನ್ನಾರಿಸಿ
ಕತ್ತಲಲ್ಲಿ ನಡೆದು ಸಾಗುತ್ತೇನೆ
ಏನೂ ಕಾಣದ ನನಗೀಗ,
ಬಾನ ಚಂದಿರನೇ ಜತೆಯಾಗುತ್ತಾನೆ. 
                                                                       ವಸಂತ್

16 comments:

ದಿನಕರ ಮೊಗೇರ.. said...

ಬೆಳಗುತ್ತಿದ್ದ ದೀವನ್ನು
ಆರಿಸಿ ಕತ್ತಲಲ್ಲಿ ನಡೆದು ಸಾಗುತ್ತೇನೆ
ಏನು ಕಾಣದ ನನಗೆ
ಬಾನಲಿದ್ದ ಚಂದ್ರ ಜೊತೆಯಾಗಿ ಬರುತ್ತಾನೆ .

tumbaa sundara saalugaLu....
dhanyavaada....

ಸೀತಾರಾಮ. ಕೆ. / SITARAM.K said...

ಚೆಂದದ ಕವನ.

ವಿ.ಆರ್.ಭಟ್ said...

Nice!

Dr.D.T.krishna Murthy. said...

ನಿಮ್ಮ ಇತ್ತೀಚಿನ ಕವನಗಳು ಭಾವ ಪೂರ್ಣವಾಗಿ,ಅರ್ಥಪೂರ್ಣವಾಗಿ ಮೂಡಿ ಬರುತ್ತಿವೆ.ಮುದುವರೆಸಿ.ಧನ್ಯವಾದಗಳು.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಮತ್ತು ಅನಿಸಿಕೆಗೆ ಧನ್ಯವಾದಗಳು ದಿನಕರ ಮೊಗೇರ ಸರ್.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸೀತಾರಾಮ ಸರ್.

ವಸಂತ್ said...

ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು ವಿ.ಆರ್.ಭಟ್ ಸರ್.

ವಸಂತ್ said...

ನಿಮ್ಮೆಲ್ಲರ ಆರ್ಶೀವಾದದ ಫಲದಿಂದ ನನ್ನ ಬರವಣಿಗೆಯಲ್ಲಿ ಬದಲಾವಣೆಗಳು ಮೂಡಿವೆ ಮೂರ್ತಿ ಸರ್. ಪ್ರತಿಕ್ರಿಯೆಗೆ ಧನ್ಯವಾದಗಳು.

SATISH N GOWDA said...

sooooooooooooo sweet ri vasant keep it

- ಕತ್ತಲೆ ಮನೆ... said...

ಈ ಸಾಲುಗಳು ನನಗೆ ಅನ್ವಯವಾಗುತ್ತವೆ..
"ನನಗೆ ತಿಳಿಯದ ನನ್ನೊಳಗೂ ಹಲವು
ತಪ್ಪುಗಳಿರುವುದನ್ನು ಕಂಡು
ಪರರ ತಪ್ಪುಗಳಿಗಾಗಿ ಹುಡುಕುವುದ ಸರಿಯಲ್ಲವೆಂದೆನಿಸಿ."

ವಸಂತ್ said...

ಧನ್ಯವಾದಗಳು ಸತೀಶ್ ಪ್ರತಿಕ್ರಿಯೆಗೆ.

ವಸಂತ್ said...

ಕತ್ತಲು ಮನೆಯವರೆ ನಿಮ್ಮ ಅನಿಸಿಕೆ ಸತ್ಯ >>>ಈ ಸಾಲುಗಳು ನನಗೆ ಅನ್ವಯವಾಗುತ್ತವೆ.<<< ಮೊದಲು ನಮ್ಮನ್ನು ನಾವು ಶುದ್ಧ ಗೊಳಿಸಿಕೊಂಡು ನಡೆಯಬೇಕು ತದನಂತರವೆ ಪರರ ಕೊಂಕುಗಳತ್ತ ಬೆರಳು ತೋರಬೇಕು. ಅಂತಹವರು ಇಲ್ಲಾ ಎಂದಲ್ಲ ಹುಡಿಕಿ ತೆಗೆಯಬೇಕಾಗುತ್ತದೆ.
ಒಟ್ಟಿನಲ್ಲಿ ನಮ್ಮ ನಮ್ಮ ತಪ್ಪುಗಳು ನಮಗೆ ಅರಿವಾದರೆ ಸಾಕಲ್ಲವೆ. ಪ್ರತಿಕ್ರಿಯೆಗೆ ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಸತ್ಯಗಳನ್ನು ಹುಡುಕುವ ತವಕದಲ್ಲಿ
ನನ್ನೊಳಗೆ ನನಗೆ ಕಾಣದ
ಹಲವಾರು ಭಯಗಳು ರೂಪುಗೊಂಡು
ತಪ್ಪಿಸಿಕೊಳ್ಳಲು ಹೆಣಗಾಡುತ್ತೇನೆ.

sundara saalugalu

ವಸಂತ್ said...

ಧನ್ಯವಾದಗಳು ಗುರುಮೂರ್ತಿ ಸರ್. ನಿಮ್ಮ ಅನಿಸಿಕೆ ಮತ್ತು ಪ್ರತಿಕ್ರಿಯೆಗೆ.

ಪ್ರವರ said...

ri en kalpane.... ha adbuta..... odalu manasige hita.....

ವಸಂತ್ said...

ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ
ಸೋತುಹೋದೆ ತಮ್ಮ ಆತ್ಮೀಯತೆಗೆ
ಆಗಾಗ ಬಂದು ಹೋಗಿ ನನ್ನ ಬ್ಲಾಗಿಗೆ
ಸದಾ ಮೂಡುತಿರಲಿ ನಿಮ್ಮ ಮೊಗದಲ್ಲಿ ಕಿರುನಗೆ.

ಧನ್ಯವಾದಗಳು ಪ್ರವರರವರೆ.