Tuesday, September 28, 2010

ಸಂತಸದಿಂದ ಕರಗಿ ಹೋಗುವ....


ಹಗಲಿನಲ್ಲಿನ ಬಣ್ಣಗಳನ್ನು
ಇರುಳಿನಲ್ಲಿ ಪೋಣಿಸುತ್ತಾ
ಕನಸಾಗಿಸುತ್ತೇವೆ....

ಮಸುಕು ಮಸುಕಾದ ಆಕೃತಿಗಳು
ವಿಧ ವಿಧವಾದ ಬಣ್ಣಗಳಿಂದ
ಕನಸಂತೆ ಕಾಣುತ್ತದೆ....

ಅದು ನಾವನುಭವಿಸುವ
ಅನುದಿನದ ಯಾತನೆಯೋ
ವೇದನೆಯೋ ಯಾವುದೋ
ಒಂದು ಕ್ಷಣದ ಸಂತಸದ
ಸಮಯವಾಗಿರಬಹುದು....

ಸುಖ ನಿದ್ರೆಗೂ ನೂರೆಂಟು
ಭಂಗಗಳಿಂದ ಕೂಡಿರುವ
ಹಲವಾರೂ ಸಂಗತಿಗಳು
ಒಮ್ಮೆಗೆ ಮರುಕಳಿಸಿದಾಗ....

ಬಾರದ ನಿದ್ರೆಯನ್ನರಸಿ
ನಿದ್ರೆಯನ್ನುಣಿಸುವಂತ
ಮಾತ್ರೆ ಮದ್ದುಗಳಿಗೆ 
ಮಾರು ಹೋಗುತ್ತೇವೆ....

ಈಗಿರುವಾಗ ನಾವು
ಕಾಣುವ ಕನಸಾದರೂ ಎಂತಹುದು
ಉರಿಯುವ ದೀಪದಡಿಯ ಕತ್ತಲೆಯಂತೆ....

ಹೇಗಿದ್ದರೂ ಎಂದಾದರೊಮ್ಮೆ 
ಶಾಂತಿಸಿಗುವ  ಲೋಕದೆಡೆಗೆ
ಕನಸಾಗಿ ಸಾಗಿಹೋಗಲೇ ಬೇಕಲ್ಲವೆ ?....

ಅಷ್ಟರೊಳಗೆ ಇರುವ ಸಮಯಕ್ಕೆ
ತಕ್ಕಂತ ಕನಸುಗಳನ್ನು ಕಂಡು
ಸಂತಸದಿಂದ ಕರಗಿ ಹೋಗುವ....
                                                           ವಸಂತ್

Wednesday, September 22, 2010

ಇದು ಸರಿ ಎಂಬದಕ್ಕೆ ಉತ್ತರಿಸಿ ಹೋಗು....!.

ಅಂದು ಹುಣ್ಣಿಮೆಯ ರಾತ್ರಿಯಲ್ಲಿ
ಮಂದವಾಗಿ ಬೆಳಕದೊರುತ್ತಿದ್ದ
ಚಂದ್ರನಮೇಲೆ ಆಣೆಮಾಡಿ !
"ನನ್ನಲ್ಲಿ ಒಂದು ಮಾತು ಹೇಳಿದ್ದೆ"
ನಿನಗೆ ನೆನಪಿದೆಯಾ ಗೆಳಿತಿ....

ಬಾನಲಿರುವ ಚಂದ್ರನ ಬೆಳಕಿನಂತೆ
ನಮ್ಮಿಬ್ಬರ ಹೃದಯಗಳು ಒಂದಾಗಿ....
ಮಧುಮಾಸದ ಸಂಜೆಯನ್ನು ನೆನಪಿಸುತ್ತ
ಬಾಳ ಪಯಣವನ್ನೇರಿ....
ಸ್ವಚ್ಛಂದವಾಗಿ ಸಾಗಿ ಹೋಗುವ ಎಂದು....

ಆದರೆ ಅದು ಹಾಗಾಗಲಿಲ್ಲ....

ನಿನ್ನ ಪ್ರೀತಿಸುವ ಭರದಲ್ಲಿ
ಹಗಲು ರಾತ್ರಿಗಳನ್ನು ಮರೆತಿದ್ದ ನನಗೆ.....
ನೀ ಮಾಡುವ ವಂಚನೆಯು ಸಹ ಮರೆತುಹೋಗಿತ್ತು....
ಕಾರಣ ನಮ್ಮ ಬಾಳು ಸದಾ ಬೆಳಗುವ
ಬೆಳದಿಂಗಳಾಗುತ್ತದೆಂಬ ಹುಚ್ಚು ಬಯಕೆ....

ಪಾಪ ಚಂದ್ರನನ್ನು ಬಿಡದೆ ಕಾಡುವ ಕಾರ್ಗತ್ತಲು
ನನ್ನನ್ನು ಸುಮ್ಮನೆ ಬಿಟ್ಟೀತ್ತೇ....
ಹುಣ್ಣಿಮೆಯನ್ನು ಕಾಣುವ ಹಂಬಲದಲ್ಲಿ
ಬೆಳಕನ್ನೇ ನುಂಗುವಂತ ಕತ್ತಲಿರುವುದನ್ನು ಮರೆತಿದ್ದೆ....

ನನ್ನ ಬಾಳಿನಲ್ಲೊಂದು ದೀಪವಾಗಿ
ಬೆಳಗಬೇಕಿದ್ದ ನೀನು....
ಅಮವಾಸ್ಯೆಯ ಕತ್ತಲಂತಾಗುವೆಯೆಂದು
ನಾನು ಕನಸ ಕಂಡಿರಲಿಲ್ಲ....
ಕನಸುಗಳೆ ಕಾಣದಿದ್ದ ನನಗೆ
ಎಲ್ಲೂವು ನೀನೆಯೆಂಬ 
ಮಾಯೆಯಲ್ಲಿ ಮುಳುಗಿಹೋಗಿದ್ದೆ....

ನನ್ನಲ್ಲಿದ್ದ ನಿನ್ನೆಲ್ಲವನ್ನು ತೆಗೆದುಕೊಂಡೋದೆ....
ಬೆಳಕಾಗಿದ್ದ ಬೆಳದಿಂಗಳನ್ನು ಸಹ ಬಿಡದೆ....
ಆದರೆ ನಿನಗಾಗಿ ಹಂಬಲಿಸುವ
"ಬರಡು ಹೃದಯವನ್ನು" ಮಾತ್ರ
ಯಾಕಾಗಿ ಹುಳಿಸಿಹೋದೆಯೋ ನನಗೆ ಅರ್ಥವಾಗಲಿಲ್ಲ....

ನೀನು ಮತ್ತೆ "ಬಾ" ಎಂದು ನಾ ಕೇಳಲಾರೆ,
ಆದರೆ ನೀ ಕೊಟ್ಟ ಮಾತನ್ನು ಮುರಿದೆಯಲ್ಲ
ಇದು ಸರಿ ಎಂಬದಕ್ಕೆ ಉತ್ತರಿಸಿ ಹೋಗು....!.

                                                                  ವಸಂತ್

Monday, September 20, 2010

ಮುದ್ದಿನ ಚಂದಿರ (ಮಕ್ಕಳ ಕವನ)


ನನ್ನಯ ಮುದ್ದಿನ
ಚಂದಿರನು.
ಬೆಳ್ಳಿಯ ಬಣ್ಣದ
ಸುಂದರನು.
ಚಿಣ್ಣರಿಗಿವನೆ
ಚೆನ್ನಿಗನು.
ರಾತ್ರಿಯ ಲೋಕದ
ರಾಜನು.
ನೋಡಲು ತುಂಬ
ಚಿಕ್ಕವನು.
ಹಿಡಿಯಲು ದಕ್ಕದ
ಮುತ್ತವನು.
ತಣ್ಣಗೆ ಕೊರೆಯುವ
ಚಳಿಯವನು.
ನನ್ನಯ ಜೊತೆಗೆ
ಬರುವವನು.
ನನ್ನಯ ಅಜ್ಜನ
ಗುರು ಇವನು
ನಮ್ಮಯ ಅಜ್ಜಿಯ
ದೇವನವನು.
ನನ್ನಯ ಪುಸ್ತಕದಿ
ಪಾಠ ಇವನು.
ನಮ್ಮಯ ಗೆಳೆಯರ
ಸ್ನೇಹಿತನು.
ನೋಡಲು ತುಂಬಾ
ಸುಂದರನು.
ನನ್ನಯ ಮುದ್ದಿನ
ಚೆಂದಿರನು...
                               ವಸಂತ್

Thursday, September 9, 2010

ಹಣೆಬರಹ....


   "ಹಣೆಬರಹ" ಅನ್ನುವುದೊಂದಿದೆ ಇದನ್ನು "ವಿಧಿ" ಎಂತಲು ಕರೆಯುತ್ತಾರೆ.... ಮನುಷ್ಯನಾಗಿ ಜನ್ಮಕ್ಕೆ ಬರುವಾಗಲೇ ಭಗವಂತನು ಸಂಪೂರ್ಣ ಜೀವನದ ಅದಿಯಿಂದ  ಅಂತ್ಯದವರೆಗಿನ ಎಲ್ಲಾ ಘಟನೆಗಳನ್ನು ಆಜ್ಞಾಚಕ್ರದ ಸ್ಥಾನದಲ್ಲಿ ಬರೆದಿರುತ್ತಾನೆ....  ಎಂದು ಒಂದು ಪುಸ್ತಕದಲ್ಲಿ ಓದಿದ ನೆನಪು.... ಇದು ನಿಜವೋ ಸುಳ್ಳೋ ಕಾರಣ ಗೊತ್ತಿಲ್ಲ.... ಆದರೂ  ಈ ಆಜ್ಞಾಚಕ್ರವು ಹಣೆಯ ಭಾಗದಲ್ಲಿದೆ.... ಅದ್ದರಿಂದ ಸೂಕ್ಮ ರೂಪದಲ್ಲಿ ಭಗವಂತನಿಂದ ಬರೆಯಿಲ್ಪಟ್ಟ  ಮಾನವನ ಜೀವನದ ವೃತ್ತಾಂತವನ್ನು ಹಣೆಬರಹವೆಂದು ಕರೆಯುತ್ತಾರೆಂದು ಹೇಳುತ್ತಾರೆ....  ಪ್ರತಿ ಮಾನವನ ಬದುಕಿನಲ್ಲೂ ಸೋಲು ಗೆಲುವಿನ ವ್ಯತ್ಯಾಸವಿರುತ್ತದೆ.... ಇಲ್ಲಿ ಅವನ ಸುಖ, ದುಃಖ,ಗಳಲ್ಲಿ ತನಗರಿವಿಲ್ಲದೆ ಉದ್ಬವಿಸುವ ಕಷ್ಟಗಳು, ಅಪಘಾತಗಳು, ಖಾಯಿಲೆಗಳೆಲ್ಲವುದರಲ್ಲೂ ಹಣೆಬರಹದ ಹಸ್ತವಿದೆಯಂತೆ. ಪ್ರಯಾಣಕ್ಕೊ ಅಥವಾ ಬಂಧುಗಳ  ಊರಿಗೋ ಹೋಗುವ ಸಮಯದಲ್ಲಿ.... ಒಮ್ಮೆಗೆ ಅವರಿಗೆ ಅರಿವಿಲ್ಲದಂತೆ ನಡೆದು ಹೋಗುವ ಅಪಘಾತದಲ್ಲಿ ಇಡಿ ಕುಂಟುಂಬವೇ ಮರಣವೊಂದಬಹುದು.... ಹಾಗೇಯೆ ಆಟೋದಲ್ಲಿ ಚಲಿಸುತ್ತಿದ್ದಾಗ ಬಿರುಗಾಳಿ ಬೀಸಿ ರಭಸದಿಂದ ಮಳೆ ಸುರಿದು ಆಟೋದವನಿಗೆ ದಾರಿಯಲ್ಲಿಯೇ ಮೃತ್ಯುವಿನ ರೂಪದಲ್ಲಿ ಮರ ಹುರುಳಿ, ಅಥವಾ ವಿದ್ಯುತ್ ಕಂಬ ಉರುಳಿ ಸಾವನ್ನಪ್ಪಿರುತ್ತಾನೆ. ಇದು ಸಹ ಹಣೆಬರಹವೆಂದೆ ನಂಬುತ್ತಾರೆ.... ಕಾರಣ ಅವನ ನಸೀಬು ಸರಿಯಿರಲಿಲ್ಲವೆಂದು ಹೇಳಿಕೊಳ್ಳುತ್ತಾರೆ.... ಇಲ್ಲಿ ಹಣೆಬರಹ ಬಡವನಿಂದ ಹಿಡಿದು ಶ್ರೀಮಂತರವರೆಗೂ ತನ್ನ ಹಸ್ತವನ್ನು ಚಾಚಿಕೊಂಡು ಸಾಗುತ್ತದೆ.... ಮೊನ್ನೆ ನಡೆದ ಬಿಕ್ಷಕರ ಕೇಂದ್ರದಲ್ಲಿ ಒಂದೇ ದಿನಕ್ಕೆ ಹತ್ತಾರು ಮಂದಿ ಸಾವನ್ನಪ್ಪುತ್ತಾರೆ. ಮರುದಿನದಲ್ಲೆ ಇನ್ನಲವು ಮಂದಿ ಸಾವನ್ನಪ್ಪುತ್ತಾರೆ.... ಇದಕ್ಕೂ ಅಣೆಬರಹವೆಂದೇ ಹೇಳಬಹುದಾ ? ಎಂದರೆ ಹೌದು ಎಂದು ಹೇಳುವ ಮಂದಿಯುಂಟು.... ಹಾಗೇಯೆ ಹೆಚ್ಚಾಗಿ ಹೆಣ್ಣು ಮಕ್ಕಳೆ ಹುಟ್ಟಿದ್ದಲ್ಲಿ.... ಅಯ್ಯೋ ಗಂಡುಮಗು ಹುಟ್ಟಲು ಹಣೆಬರಹ ಇಂದಂಗಿಲ್ಲಾ ಅಂತ ಕಾಣುತ್ತೆ”.... ಎಂದು ನೆರೆ ಹೊರೆಯವರು ಹಾಡಿಕೊಳ್ಳುವುದನ್ನು ನೋಡಿದ್ದೇವೆ.... ಸ್ಕೂಲಿನಲ್ಲಿ ಪರೀಕ್ಷೆಯನ್ನು ಬರೆಯದೆ ಪೈಲಾದ ವಿದ್ಯಾರ್ತಿಗೆ ಗುರುಗಳು ಹಣೆಬರಹವನ್ನು ತೋರುತ್ತಾರೆ.... "ನೋಡೋ ಅವಿವೇಕಿ ನೀನು ಮೂರು ವರ್ಷಗಳಿಂದ ಇದೇ ಕ್ಲಾಸಿನಲ್ಲಿ ಕೂತು ಕಲಿಯುತ್ತಿರುವೆ.... ಪಾಸಂತು ಹಾಗಲಿಲ್ಲ ಕಡೆ ಪಕ್ಷ ಸರಿಯಾಗಿ ಓದೊದನ್ನಾದರೂ ಕಲಿಯೋ”.... ನಿನ್ನ ಜೊತೆಯಲ್ಲಿ ಓದಿಕೊಂಡು ಹೋದವರೆಲ್ಲ ಡಾಕ್ಟರ್ಗಳೋ ಇಂಜನಿಯರ್ಗಳೋ ಹಾಗಿ ಹೋತಾರೆ.... ನೀನಿನ್ನು ಈ ಮಿಡಲ್ ಕ್ಲಾಸಿನಲ್ಲೆ ಇದ್ದಿಯಾ.... ಅದಕ್ಕೆಲ್ಲಾ ಹಣೆಬರಹ ಬೇಕು ಕಣೋ" ಎಂದು ಬೈಯುತ್ತಿದ್ದ  ಗುರುಗಳ ಮಾತುಗಳು ಸಾಮಾನ್ಯವಾಗಿ ಎಲ್ಲರೂ ಕೇಳಿಯೇ ಇರುತ್ತಾರೆ....

   ಪ್ರೀತಿಯಲ್ಲಿ ಸೋಲನ್ನು ಅನುಭವಿಸಿದ ಪ್ರೇಮಿಯೊಬ್ಬ....
ಮದುವೆಯಾಗಿಹೋದ ತನ್ನ ಗೆಳಿತಿಗೆ ಪತ್ರ ಬರೆಯುತ್ತಾನೆ....
ಗೆಳತಿ ನಾನು ನಿನ್ನನ್ನು ತುಂಬಾ ಪ್ರೀತಿಸಿದ್ದೆ....
ನಿನ್ನನ್ನೇ ಮದುವೆಯಾಗಬೇಕೆಂದು ಕೊಂಡಿದ್ದೆ.... 
ನಿನಗೆ ಗೊತ್ತಿಲ್ಲ... 
ನಿನ್ನನ್ನು ಸುಮಾರೂ ಐದು ವರ್ಷಗಳಿದ ಪ್ರೀತಿಸುತ್ತಿದ್ದೆ....
ಆದರೆ ನಿನ್ನ ಬಳಿ ಹೇಳವ ಧೈರ್ಯ ನನ್ನಲಿರಲಿಲ್ಲ...
ಕಡೇ ಪಕ್ಷ ನಿನ್ನ ಮದುವೆಗೆ ಮುಂಚೆಯಾದರೂ ತಿಳಿಸಬಹುದಿತ್ತು....
ಆದರೆ ಆ ಹುಡುಗನ್ನು ನೀನು ತುಂಬಾ ಇಷ್ಟ ಪಡುತ್ತಿದ್ದೆ....
ಇದರಿಂದ ನನ್ನ ಪ್ರೀತಿಯನ್ನು ಮುರಿದುಕೊಂಡೆ....
"ಯಾವುದಕ್ಕೂ ನನ್ನ ಹಣೆಯಲ್ಲಿ ನಿನ್ನನ್ನು ಬರೆದಿಲ್ಲ ಅಂತ ಕಾಣುತ್ತೆ"....
ಇರಲಿ "ನಿನ್ನ ಪಡೆಯಲು" 
ಈ ಜನ್ಮದಲ್ಲಂತೂ ಸಾಧ್ಯವಾಗಲಿಲ್ಲ....
ಮುಂದಿನ ಜನ್ಮದಲ್ಲಾದರೂ ಪ್ರಯತ್ನಿಸುತ್ತೇನೆ....
ನಿನ್ನ ಜೀವನ ಸುಂದರ ಹೂವಾಗಿ ಅರಳಲಿ ಎಂದು ಹರಸುತ್ತಾ....
"ಇಂತಿ ನಿನ್ನ ಪ್ರೀತಿಗಾಗಿ, ಕಡೆಯವರೆಗೂ ಕಾದು ಸೋತ ಪ್ರಿಯತಮ"....
ಎಂದು ತನ್ನ ಮುಂದಿನ ಜನ್ಮದ ಆನೆಯನ್ನು ಬರೆದಿರುತ್ತಾನೆ....
ಇದು ಸಹ ಪ್ರೀತಿಯಲ್ಲಿ ಸೋತ ಹುಡುಗನ ಹಣೆಬರಹವೆಂದೆ ಹೇಳಬೇಕು....

     ಒಟ್ಟಿನಲ್ಲಿ ಹಣೆಬರಹದ ಬಗ್ಗೆ ನೂರಾರು ಕಥೆಗಳಿವೆ.... ನಂಬಿಕೆಗಳಿವೆ.... ವಾದಗಳಿವೆ.... ಇದನ್ನು ನಂಬುವಂತ ಮಂದಿಯು ಸಂಖ್ಯೆ ಕಡಿಮೆಯೇನಿಲ್ಲ....  ಹಾಗೇಯೆ ಜ್ಯೋತಿಷಿಗಳು, ಋಷಿಗಳು, ಪಂಡಿತರು, ವಿಧವಿಧವಾಗಿ ಹೇಳುತ್ತಾರೆ.... ಈ ಆಜ್ಞಾ ಚಕ್ರವು ಹಣೆಯ ಭಾಗದಲ್ಲಿದೆ.... ಅದ್ದರಿಂದ ಸೂಕ್ಮ ರೂಪದಲ್ಲಿ ಭಗವಂತನಿಂದ ಬರೆಯಿಲ್ಪಟ್ಟ,,,, ಎಂದು ಹಿರಿಯರು ಇದನ್ನು ವಿಧವಿಧವಾಗಿ ವಿವರಣೆ ಕೊಟ್ಟು ವರ್ಣಸುತ್ತಾರೆ.... ಆದರೆ ದಿನನಿತ್ಯ ನಡೆಯುವಂತ ಕೊಲೆ, ಸುಲಿಗೆ, ವಂಚನೆ ,ಅತ್ಯಾಚಾರಗಳಿಗೇನು ಕಡಿಮೆಯಿಲ್ಲ.... ಭಗವಂತನಲ್ಲೂ ಸಹ ಭಕ್ತಿಯನ್ನು ಪರೀಕ್ಷಿಸುವ ನೆಪದಲ್ಲಿ ಚಿನ್ನಾಬರಣಗಳಿಗೆ ಕತ್ತರಿ ಹಾಕುತ್ತಾರೆ.... ಇದರ ಫಲವು ಹಣೆಬರಹದ್ದೆ ಎಂದರೆ ?. ಅವರ ಪಾಪದ ಕೊಡ ತುಂಬಿದ ಬಳಿಕ ದೇವರಲ್ಲಿ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತೆ ಎಂದು ಹೇಳುತ್ತಾರೆ.... ಒಟ್ಟಿನಲ್ಲಿ ಯಾರ ಹಣೆಯಲ್ಲಿ ಯಾವ ಯಾವ ರೀತಿ ಬರೆದಿರುತ್ತದೆಯೋ ಯಾರಿಗೆ ಗೊತ್ತು.... ಅದು ನಿಜವಾಗಿಯು ಬರೆದಿದೆಯೊ ಇಲ್ಲವೊ ನಾನಂತು ಕಾಣೆ.... ಆದರೂ ಇದು ಬರೆದಿರುವುದು ಸತ್ಯವಾದರೆ, ಎಲ್ಲರ ಜೀವನದಲ್ಲೂ  ಸುಂದರ ಬದುಕನ್ನು ರೂಪಿಸುವ ಬರಹವಾಗಿ ಬರೆದಿರಲೆಂದು ಹಾರೈಸುತ್ತೇನೆ....

                                                                                                                  ವಸಂತ್


Wednesday, September 1, 2010

ನನ್ನ ಬಳಿ ಉತ್ತರವಿಲ್ಲ ..!.ನಾ ಅಳುವ  ಕಣ್ಣೀರಿಗೆ
ನಿನ್ನ ಬಳಿ ಉತ್ತರವಿಲ್ಲ,
ನಿನ್ನ ನಂಬಿದ ತಪ್ಪಿಗೆ
ನಾ ಕಣ್ಣೀರಾಗಿ ಹೋದೆನಲ್ಲ,
ನನಗೆ ಮಾಡಿದ ದ್ರೋಹ
ಮತ್ಯಾರ ಬದುಕಲ್ಲು ಮಾಡದಿರು.

ನಿನ್ನ ಯವ್ವನ ಕ್ಷಣಿಕ ಮಾತ್ರ
ಅದು ಒಮ್ಮಗೆ ಮೇಣದಂತೆ
ಉರಿದು ಹೋಗಬಲ್ಲದು,
ನಂಬಿಕೆಗೆ ಬಹುದೊಡ್ಡ ಸ್ಥಾನವಿದೆ
ಆ ನಂಬಿಕೆಯನ್ನು
ಆಸೆಯನ್ನಾಗಿಸಿ ಮಾರಿಬಿಟ್ಟೆಯಲ್ಲ.

ನಿನ್ನ ಬರುವಿಕೆಗಾಗಿ
ನಾ ಪ್ರತಿದಿನವು ಕಾಯುತ್ತಿದ್ದೆ ,
ನಮ್ಮ ಮುಂದಿನ ಬದುಕನ್ನು ಕಟ್ಟಲು
ಕನಸುಗಳ ಬೆಳೆಯುತ್ತಿದ್ದೆ,
ನೀ ಮಾಯೆಯೆಂದು
ನನಗೆ ತಿಳಿದಿರಲಿಲ್ಲ !.
ತಿಳಿಯುವ ಮುಂಚೆಯೆ ನೀ
ಮಾಯೆಯಾಗಿ ಹೋಗಿಬಿಟ್ಟೆಯಲ್ಲ.

ಈಗಲು ನಿನ್ನ ಮೇಲಿನ 
ಪ್ರೀತಿ ಸ್ವಲ್ಪವು ಕರಗಿಲ್ಲ,
ನೀನೊಪ್ಪಿ ಬಂದರೂ
ನಾ ಒಪ್ಪಲು ಸಾಧ್ಯವಿಲ್ಲ,
ನಿನ್ನ ದಾರಿಗೆ ನೀನೆ ಒಡತಿಯಾಗಿರುವೆ
ನೀ ಕೇಳುವ ಕ್ಷಮೆಗೆ ನನ್ನ ಬಳಿ ಉತ್ತರವಿಲ್ಲ.

                                                      ವಸಂತ್