Thursday, September 9, 2010

ಹಣೆಬರಹ....


   "ಹಣೆಬರಹ" ಅನ್ನುವುದೊಂದಿದೆ ಇದನ್ನು "ವಿಧಿ" ಎಂತಲು ಕರೆಯುತ್ತಾರೆ.... ಮನುಷ್ಯನಾಗಿ ಜನ್ಮಕ್ಕೆ ಬರುವಾಗಲೇ ಭಗವಂತನು ಸಂಪೂರ್ಣ ಜೀವನದ ಅದಿಯಿಂದ  ಅಂತ್ಯದವರೆಗಿನ ಎಲ್ಲಾ ಘಟನೆಗಳನ್ನು ಆಜ್ಞಾಚಕ್ರದ ಸ್ಥಾನದಲ್ಲಿ ಬರೆದಿರುತ್ತಾನೆ....  ಎಂದು ಒಂದು ಪುಸ್ತಕದಲ್ಲಿ ಓದಿದ ನೆನಪು.... ಇದು ನಿಜವೋ ಸುಳ್ಳೋ ಕಾರಣ ಗೊತ್ತಿಲ್ಲ.... ಆದರೂ  ಈ ಆಜ್ಞಾಚಕ್ರವು ಹಣೆಯ ಭಾಗದಲ್ಲಿದೆ.... ಅದ್ದರಿಂದ ಸೂಕ್ಮ ರೂಪದಲ್ಲಿ ಭಗವಂತನಿಂದ ಬರೆಯಿಲ್ಪಟ್ಟ  ಮಾನವನ ಜೀವನದ ವೃತ್ತಾಂತವನ್ನು ಹಣೆಬರಹವೆಂದು ಕರೆಯುತ್ತಾರೆಂದು ಹೇಳುತ್ತಾರೆ....  ಪ್ರತಿ ಮಾನವನ ಬದುಕಿನಲ್ಲೂ ಸೋಲು ಗೆಲುವಿನ ವ್ಯತ್ಯಾಸವಿರುತ್ತದೆ.... ಇಲ್ಲಿ ಅವನ ಸುಖ, ದುಃಖ,ಗಳಲ್ಲಿ ತನಗರಿವಿಲ್ಲದೆ ಉದ್ಬವಿಸುವ ಕಷ್ಟಗಳು, ಅಪಘಾತಗಳು, ಖಾಯಿಲೆಗಳೆಲ್ಲವುದರಲ್ಲೂ ಹಣೆಬರಹದ ಹಸ್ತವಿದೆಯಂತೆ. ಪ್ರಯಾಣಕ್ಕೊ ಅಥವಾ ಬಂಧುಗಳ  ಊರಿಗೋ ಹೋಗುವ ಸಮಯದಲ್ಲಿ.... ಒಮ್ಮೆಗೆ ಅವರಿಗೆ ಅರಿವಿಲ್ಲದಂತೆ ನಡೆದು ಹೋಗುವ ಅಪಘಾತದಲ್ಲಿ ಇಡಿ ಕುಂಟುಂಬವೇ ಮರಣವೊಂದಬಹುದು.... ಹಾಗೇಯೆ ಆಟೋದಲ್ಲಿ ಚಲಿಸುತ್ತಿದ್ದಾಗ ಬಿರುಗಾಳಿ ಬೀಸಿ ರಭಸದಿಂದ ಮಳೆ ಸುರಿದು ಆಟೋದವನಿಗೆ ದಾರಿಯಲ್ಲಿಯೇ ಮೃತ್ಯುವಿನ ರೂಪದಲ್ಲಿ ಮರ ಹುರುಳಿ, ಅಥವಾ ವಿದ್ಯುತ್ ಕಂಬ ಉರುಳಿ ಸಾವನ್ನಪ್ಪಿರುತ್ತಾನೆ. ಇದು ಸಹ ಹಣೆಬರಹವೆಂದೆ ನಂಬುತ್ತಾರೆ.... ಕಾರಣ ಅವನ ನಸೀಬು ಸರಿಯಿರಲಿಲ್ಲವೆಂದು ಹೇಳಿಕೊಳ್ಳುತ್ತಾರೆ.... ಇಲ್ಲಿ ಹಣೆಬರಹ ಬಡವನಿಂದ ಹಿಡಿದು ಶ್ರೀಮಂತರವರೆಗೂ ತನ್ನ ಹಸ್ತವನ್ನು ಚಾಚಿಕೊಂಡು ಸಾಗುತ್ತದೆ.... ಮೊನ್ನೆ ನಡೆದ ಬಿಕ್ಷಕರ ಕೇಂದ್ರದಲ್ಲಿ ಒಂದೇ ದಿನಕ್ಕೆ ಹತ್ತಾರು ಮಂದಿ ಸಾವನ್ನಪ್ಪುತ್ತಾರೆ. ಮರುದಿನದಲ್ಲೆ ಇನ್ನಲವು ಮಂದಿ ಸಾವನ್ನಪ್ಪುತ್ತಾರೆ.... ಇದಕ್ಕೂ ಅಣೆಬರಹವೆಂದೇ ಹೇಳಬಹುದಾ ? ಎಂದರೆ ಹೌದು ಎಂದು ಹೇಳುವ ಮಂದಿಯುಂಟು.... ಹಾಗೇಯೆ ಹೆಚ್ಚಾಗಿ ಹೆಣ್ಣು ಮಕ್ಕಳೆ ಹುಟ್ಟಿದ್ದಲ್ಲಿ.... ಅಯ್ಯೋ ಗಂಡುಮಗು ಹುಟ್ಟಲು ಹಣೆಬರಹ ಇಂದಂಗಿಲ್ಲಾ ಅಂತ ಕಾಣುತ್ತೆ”.... ಎಂದು ನೆರೆ ಹೊರೆಯವರು ಹಾಡಿಕೊಳ್ಳುವುದನ್ನು ನೋಡಿದ್ದೇವೆ.... ಸ್ಕೂಲಿನಲ್ಲಿ ಪರೀಕ್ಷೆಯನ್ನು ಬರೆಯದೆ ಪೈಲಾದ ವಿದ್ಯಾರ್ತಿಗೆ ಗುರುಗಳು ಹಣೆಬರಹವನ್ನು ತೋರುತ್ತಾರೆ.... "ನೋಡೋ ಅವಿವೇಕಿ ನೀನು ಮೂರು ವರ್ಷಗಳಿಂದ ಇದೇ ಕ್ಲಾಸಿನಲ್ಲಿ ಕೂತು ಕಲಿಯುತ್ತಿರುವೆ.... ಪಾಸಂತು ಹಾಗಲಿಲ್ಲ ಕಡೆ ಪಕ್ಷ ಸರಿಯಾಗಿ ಓದೊದನ್ನಾದರೂ ಕಲಿಯೋ”.... ನಿನ್ನ ಜೊತೆಯಲ್ಲಿ ಓದಿಕೊಂಡು ಹೋದವರೆಲ್ಲ ಡಾಕ್ಟರ್ಗಳೋ ಇಂಜನಿಯರ್ಗಳೋ ಹಾಗಿ ಹೋತಾರೆ.... ನೀನಿನ್ನು ಈ ಮಿಡಲ್ ಕ್ಲಾಸಿನಲ್ಲೆ ಇದ್ದಿಯಾ.... ಅದಕ್ಕೆಲ್ಲಾ ಹಣೆಬರಹ ಬೇಕು ಕಣೋ" ಎಂದು ಬೈಯುತ್ತಿದ್ದ  ಗುರುಗಳ ಮಾತುಗಳು ಸಾಮಾನ್ಯವಾಗಿ ಎಲ್ಲರೂ ಕೇಳಿಯೇ ಇರುತ್ತಾರೆ....

   ಪ್ರೀತಿಯಲ್ಲಿ ಸೋಲನ್ನು ಅನುಭವಿಸಿದ ಪ್ರೇಮಿಯೊಬ್ಬ....
ಮದುವೆಯಾಗಿಹೋದ ತನ್ನ ಗೆಳಿತಿಗೆ ಪತ್ರ ಬರೆಯುತ್ತಾನೆ....
ಗೆಳತಿ ನಾನು ನಿನ್ನನ್ನು ತುಂಬಾ ಪ್ರೀತಿಸಿದ್ದೆ....
ನಿನ್ನನ್ನೇ ಮದುವೆಯಾಗಬೇಕೆಂದು ಕೊಂಡಿದ್ದೆ.... 
ನಿನಗೆ ಗೊತ್ತಿಲ್ಲ... 
ನಿನ್ನನ್ನು ಸುಮಾರೂ ಐದು ವರ್ಷಗಳಿದ ಪ್ರೀತಿಸುತ್ತಿದ್ದೆ....
ಆದರೆ ನಿನ್ನ ಬಳಿ ಹೇಳವ ಧೈರ್ಯ ನನ್ನಲಿರಲಿಲ್ಲ...
ಕಡೇ ಪಕ್ಷ ನಿನ್ನ ಮದುವೆಗೆ ಮುಂಚೆಯಾದರೂ ತಿಳಿಸಬಹುದಿತ್ತು....
ಆದರೆ ಆ ಹುಡುಗನ್ನು ನೀನು ತುಂಬಾ ಇಷ್ಟ ಪಡುತ್ತಿದ್ದೆ....
ಇದರಿಂದ ನನ್ನ ಪ್ರೀತಿಯನ್ನು ಮುರಿದುಕೊಂಡೆ....
"ಯಾವುದಕ್ಕೂ ನನ್ನ ಹಣೆಯಲ್ಲಿ ನಿನ್ನನ್ನು ಬರೆದಿಲ್ಲ ಅಂತ ಕಾಣುತ್ತೆ"....
ಇರಲಿ "ನಿನ್ನ ಪಡೆಯಲು" 
ಈ ಜನ್ಮದಲ್ಲಂತೂ ಸಾಧ್ಯವಾಗಲಿಲ್ಲ....
ಮುಂದಿನ ಜನ್ಮದಲ್ಲಾದರೂ ಪ್ರಯತ್ನಿಸುತ್ತೇನೆ....
ನಿನ್ನ ಜೀವನ ಸುಂದರ ಹೂವಾಗಿ ಅರಳಲಿ ಎಂದು ಹರಸುತ್ತಾ....
"ಇಂತಿ ನಿನ್ನ ಪ್ರೀತಿಗಾಗಿ, ಕಡೆಯವರೆಗೂ ಕಾದು ಸೋತ ಪ್ರಿಯತಮ"....
ಎಂದು ತನ್ನ ಮುಂದಿನ ಜನ್ಮದ ಆನೆಯನ್ನು ಬರೆದಿರುತ್ತಾನೆ....
ಇದು ಸಹ ಪ್ರೀತಿಯಲ್ಲಿ ಸೋತ ಹುಡುಗನ ಹಣೆಬರಹವೆಂದೆ ಹೇಳಬೇಕು....

     ಒಟ್ಟಿನಲ್ಲಿ ಹಣೆಬರಹದ ಬಗ್ಗೆ ನೂರಾರು ಕಥೆಗಳಿವೆ.... ನಂಬಿಕೆಗಳಿವೆ.... ವಾದಗಳಿವೆ.... ಇದನ್ನು ನಂಬುವಂತ ಮಂದಿಯು ಸಂಖ್ಯೆ ಕಡಿಮೆಯೇನಿಲ್ಲ....  ಹಾಗೇಯೆ ಜ್ಯೋತಿಷಿಗಳು, ಋಷಿಗಳು, ಪಂಡಿತರು, ವಿಧವಿಧವಾಗಿ ಹೇಳುತ್ತಾರೆ.... ಈ ಆಜ್ಞಾ ಚಕ್ರವು ಹಣೆಯ ಭಾಗದಲ್ಲಿದೆ.... ಅದ್ದರಿಂದ ಸೂಕ್ಮ ರೂಪದಲ್ಲಿ ಭಗವಂತನಿಂದ ಬರೆಯಿಲ್ಪಟ್ಟ,,,, ಎಂದು ಹಿರಿಯರು ಇದನ್ನು ವಿಧವಿಧವಾಗಿ ವಿವರಣೆ ಕೊಟ್ಟು ವರ್ಣಸುತ್ತಾರೆ.... ಆದರೆ ದಿನನಿತ್ಯ ನಡೆಯುವಂತ ಕೊಲೆ, ಸುಲಿಗೆ, ವಂಚನೆ ,ಅತ್ಯಾಚಾರಗಳಿಗೇನು ಕಡಿಮೆಯಿಲ್ಲ.... ಭಗವಂತನಲ್ಲೂ ಸಹ ಭಕ್ತಿಯನ್ನು ಪರೀಕ್ಷಿಸುವ ನೆಪದಲ್ಲಿ ಚಿನ್ನಾಬರಣಗಳಿಗೆ ಕತ್ತರಿ ಹಾಕುತ್ತಾರೆ.... ಇದರ ಫಲವು ಹಣೆಬರಹದ್ದೆ ಎಂದರೆ ?. ಅವರ ಪಾಪದ ಕೊಡ ತುಂಬಿದ ಬಳಿಕ ದೇವರಲ್ಲಿ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತೆ ಎಂದು ಹೇಳುತ್ತಾರೆ.... ಒಟ್ಟಿನಲ್ಲಿ ಯಾರ ಹಣೆಯಲ್ಲಿ ಯಾವ ಯಾವ ರೀತಿ ಬರೆದಿರುತ್ತದೆಯೋ ಯಾರಿಗೆ ಗೊತ್ತು.... ಅದು ನಿಜವಾಗಿಯು ಬರೆದಿದೆಯೊ ಇಲ್ಲವೊ ನಾನಂತು ಕಾಣೆ.... ಆದರೂ ಇದು ಬರೆದಿರುವುದು ಸತ್ಯವಾದರೆ, ಎಲ್ಲರ ಜೀವನದಲ್ಲೂ  ಸುಂದರ ಬದುಕನ್ನು ರೂಪಿಸುವ ಬರಹವಾಗಿ ಬರೆದಿರಲೆಂದು ಹಾರೈಸುತ್ತೇನೆ....

                                                                                                                  ವಸಂತ್


22 comments:

SATISH N GOWDA said...

ಚನ್ನಾಗಿದೆ ವಸಂತ್ ಹೊಸ ಪ್ರಯತ್ನ ಮುಂದುವರೆಸಿ

- ಕತ್ತಲೆ ಮನೆ... said...

ಹಣೆಬರಹಕ್ಕೆ ಹೊಣೆ ಯಾರು..?
ಚೆನ್ನಾಗಿದೆ..

ದಿನಕರ ಮೊಗೇರ.. said...

ವಸಂತ್,
ತುಂಬಾ ಚೆನ್ನಾಗಿದೆ...... ಅತ್ಯಂತ ನೋವಿನ ಬರಹ....

ಹಳ್ಳಿ ಹುಡುಗ ತರುಣ್ said...

vasamt tumba chenagide...

ashokkodlady said...

Vasanth,

Uttama Prayatna, chennagide nimma lekhana....Dhanyavadagalu..

ಅನಂತರಾಜ್ said...

ತಾಣ ಸು೦ದರಗೊಳಿಸಿದ್ದೀರಿ ವಸ೦ತ್..ಧನ್ಯವಾದಗಳು, ಹಣೆಬರಹದ ಲೇಖನ ಚೆನ್ನಾಗಿದೆ.

ಅನ೦ತ್

ಸಾಗರದಾಚೆಯ ಇಂಚರ said...

sundaravaagide sir baraha

munduvarisi

ಸೀತಾರಾಮ. ಕೆ. / SITARAM.K said...

ಘಟಿಸುವದೆಲ್ಲಾ ಹಣೆಬರಹವೇ! ನೀವು ಓದಿದ್ದು, ಬರೆದದ್ದು,ನಾವು ಓದಿದ್ದು, ಪ್ರತಿಕ್ರಿಯಿಸೋದು ಎಲ್ಲಾ ಅವರವರ ಹಣೆಬರಹ! ಅಲ್ಲವೇ!

ವಸಂತ್ said...

ತುಂಬಾ ಧನ್ಯವಾದಗಳು ಸತೀಶ್.

ವಸಂತ್ said...

"ಕತ್ತಲುಮನೆ"ಯವರೆ ಹಣೆಬರಹಕ್ಕೆ ಹೊಣೆ ಯಾರು..? ಈ ಪ್ರಶ್ನೆಗೆ ಉತ್ತರ. ಕೆಲವರ ಪ್ರಕಾರ ದೇವರು ಆಗಬಹುದು, ಮತ್ತಲವರ ಪ್ರಕಾರ ತಾನೇ ಮಾಡಿದ ಪೂರ್ವ ಜನ್ಮದ ಪಾಪವೆನ್ನುತ್ತಾರೆ, ಇದೆಲ್ಲ ಶುದ್ಧ ಸುಳ್ಳು ಎಂದು ಹೇಳುವವರು ಉಂಟು. ಯಾವುದು ಸತ್ಯ, ಯಾವುದು ಸುಳ್ಳು, ಈ ಪ್ರಶ್ನೆಗೆ ಉತ್ತರ ನಮ್ಮ ನಮ್ಮಲ್ಲೆ ಕಂಡುಕೊಳ್ಳಬೇಕಿದೆ ಎಂದು ನನ್ನ ಅನಿಸಿಕೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ವಸಂತ್ said...

ತುಂಬಾ ಧನ್ಯವಾದಗಳು ದಿನಕರ ಮೊಗೇರ ಸರ್, ನಿಮ್ಮ ಪ್ರತಿಕ್ರಿಯೆಗೆ. ನಿಮ್ಮ ಮಾತಿನಂತೆ ಹಣೆಬರಹದಲ್ಲಿ ನೋವು ಇದೆ, ನಲಿವು ಇದೆ, ಯಾವುದಕ್ಕೂ ಅಣೆಬರಹ ಬೇಕಲ್ಲ ಎಂಬಂತೆ.

ವಸಂತ್ said...

ತುಂಬಾ ಧನ್ಯವಾದಗಳು ತರುಣ್ ರವರೆ ನಿಮ್ಮ ಪ್ರತಿಕ್ರಿಯೆಗೆ.

ವಸಂತ್ said...

ನಿಮ್ಮ ಈ ಪ್ರತ್ಸಾಹಕ್ಕೆ ತುಂಬಾ ಧನ್ಯವಾದಗಳು ashokkodlady ಸರ್.

ವಸಂತ್ said...

ತುಂಬಾ ಧನ್ಯವಾದಗಳು ಅನಂತರಾಜ್ ಸರ್, ನಿಮ್ಮ ಪ್ರತಿಕ್ರಿಯೆಗೆ.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾಗಳು Gurumurthy Hegde ಸರ್.

ವಸಂತ್ said...

ಸೀತಾರಾಮ ಸರ್, ನೀವು ತಿಳಿಸಿದಂತೆ ಎಲ್ಲದರಲ್ಲೂ ಹಣೆಬರಹದ ಪಾಲುಂಟು, ನಿಜವಾಗಿಯು ಹಣೆಯಲ್ಲಿ ಬರಹವಿದೆಯೋ ಇಲ್ಲವೋ, ಗೊತ್ತಿಲ್ಲ ಆದರೂ ಪ್ರಾಚೀನ ಗ್ರಂಥಗಳ ಉಲ್ಲೇಖದ ಪ್ರಕಾರ ಇದೆಯೆನ್ನುತ್ತಾರೆ ಹಲವರು. ಇದನ್ನು ತಿಳಿದುಕೊಳ್ಳಲು ಸಹ ಹಣೆಬರಹ ವಿರಬೇಕೆನೋ ಎಂದೆನಿಸುತ್ತದೆ. ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

prabhamani nagaraja said...

ಹಣೆ ಬರಹವೆ೦ದು ಕೈ ಕಟ್ಟಿ ಕುಳಿತುಕೊಳ್ಳುವುದು ಬೇಡ. ಮನಸ್ಸಿದ್ದಲ್ಲಿ ಮಾರ್ಗವಿದೆ ಅಲ್ಲವೇ?. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಿ.

ದಿನಕರ ಮೊಗೇರ.. said...

vasant
nanna blog ge banni...

ವಿ.ಆರ್.ಭಟ್ said...

ತಪ್ಪುಗಳು ಬಹಳ ಇವೆ, ಪ್ರಕಟಿು ಮುನ್ನ ತಿದ್ದುಪಡಿ ಬಹಳ ಅಗತ್ಯ! ಹ ಮತ್ತು ಅ ಕಾರಗಳ ಬಳಕೆಯಲ್ಲಿ ಪಳಗಬೇಕು, ಹಣೆಬರಹ ಪ್ರತೀ ಜೀವಿಯ ಅಥವಾ ನಿಸರ್ಗದ ಪ್ರತೀ ವಸ್ತುವಿಗೆ ಸಂಬಂದಿಸಿದ್ದು: ಇದರ ಹರವನ್ನು ನಾವು ತಿಳಿದರೆ ದೇವರಿಗೆ ಬೇರೆ ಕೆಲಸ ಇರುವುದಿಲ್ಲ! ಸಾಮಾನ್ಯವಾಗಿ ಯಾರಿಗೂ ಇದು ಗೋಚರವಲ್ಲ! ಅಂದಮಾತ್ರಕ್ಕೆ ಹಣೆಬರಹವೇ ಸುಳ್ಳೇನೋ ಎಂಬ ಭಾವನೆಯೇ ಸರಿಯಲ್ಲ. ನಮ್ನಮ್ಮ ಹಣೆಯಲ್ಲಿ ಏನೇನು ಬರದಿದೆಯೋ ಅದು ನಡೆದೇ ತೀರುತ್ತದೆ-ಇದು ಖಂಡಿತ, ಬರೆದಿದ್ದನ್ನು ಜ್ಯೋತಿಷಿಗಳೂ ತಪ್ಪಿಸಲಾರರು ಇದೂ ಕೂಡ ಅಷ್ಟೇ ಖಂಡಿತ!

ವಸಂತ್ said...

ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ prabhamani nagaraja ಮೇಡಂ. ಖಂಡಿತ ನಿಮ್ಮ ಮಾತಿನಂತೆ "ಮನಸ್ಸಿದ್ದಲ್ಲಿ ಮಾರ್ಗವಿದೆ".

ವಸಂತ್ said...

ಧನ್ಯವಾದಳು ದಿನಕರ ಮೊಗೇರ ಸರ್. ನಿಮ್ಮ ಬ್ಲಾಗಿಗೆ ಬಂದಿದ್ದೆ. ಬ್ಲಾಗಿನಲ್ಲಿ ತುಂಬಾ ನೋವಿನ ಕಥೆ ಬರೆದಿತ್ತು. ಮೊದಲಿನಿಂದ ಕಡೆಯವರೆಗೂ ತುಂಬಾ ಉತ್ತಮವಾಗಿ ಬಿಡಿಸಿಕೊಂಡು ಹೋಗಿದ್ದೀರ. ಕಡೆಯಲ್ಲಿ ಕಣ್ಣು ಹೊದ್ದೆಯಾಯಿತು ತುಂಬಾ ಧನ್ಯವಾಗಳು.

ವಸಂತ್ said...

ಕಂಡಿತ ನಿಮ್ಮ ಮಾತನ್ನು ಪಾಲಿಸುತ್ತೇನೆ. ವಿ. ಆರ್. ಭಟ್ ಸರ್. ಕೆಲವು ತಪ್ಪುಗಳನ್ನು ತಿದ್ದುಪಡಿ ಮಾಡಿದ್ದೇನೆ. ನಿಮ್ಮ ಸಲಹೆಯಂತೆ ಪುಸ್ತಕಗಳನ್ನು ಓದುತ್ತಿದ್ದೇನೆ. <> ಖಂಡಿತ ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತೇನೆ. ಧನ್ಯವಾದಗಳು ಸರ್.