Monday, September 20, 2010

ಮುದ್ದಿನ ಚಂದಿರ (ಮಕ್ಕಳ ಕವನ)


ನನ್ನಯ ಮುದ್ದಿನ
ಚಂದಿರನು.
ಬೆಳ್ಳಿಯ ಬಣ್ಣದ
ಸುಂದರನು.
ಚಿಣ್ಣರಿಗಿವನೆ
ಚೆನ್ನಿಗನು.
ರಾತ್ರಿಯ ಲೋಕದ
ರಾಜನು.
ನೋಡಲು ತುಂಬ
ಚಿಕ್ಕವನು.
ಹಿಡಿಯಲು ದಕ್ಕದ
ಮುತ್ತವನು.
ತಣ್ಣಗೆ ಕೊರೆಯುವ
ಚಳಿಯವನು.
ನನ್ನಯ ಜೊತೆಗೆ
ಬರುವವನು.
ನನ್ನಯ ಅಜ್ಜನ
ಗುರು ಇವನು
ನಮ್ಮಯ ಅಜ್ಜಿಯ
ದೇವನವನು.
ನನ್ನಯ ಪುಸ್ತಕದಿ
ಪಾಠ ಇವನು.
ನಮ್ಮಯ ಗೆಳೆಯರ
ಸ್ನೇಹಿತನು.
ನೋಡಲು ತುಂಬಾ
ಸುಂದರನು.
ನನ್ನಯ ಮುದ್ದಿನ
ಚೆಂದಿರನು...
                               ವಸಂತ್

9 comments:

Dr.D.T.krishna Murthy. said...

ವಸಂತ್;ಮಕ್ಕಳ ಈ ಪದ್ಯ ತುಂಬಾನೇ ಚೆನ್ನಾಗಿದೆ.ಇನ್ನಷ್ಟು ಪದ್ಯಗಳನ್ನು ಬರೆಯಿರಿ.

ಹಳ್ಳಿ ಹುಡುಗ ತರುಣ್ said...

vasanth chenagide ri.. makkalante muddu muddagide....

ashokkodlady said...

Vasanth,

Chennagide, heege breeta iri.

ದಿನಕರ ಮೊಗೇರ.. said...

ವಸಂತ್,
ತುಂಬಾ ಮುದ್ದಾದ ಮಕ್ಕಳ ಕವನ.... ಮೊದಲಿಗೆ ಓದಿರಲಿಲ್ಲ "ಇದು ಮಕ್ಕಳ ಕವನ " ಎಂದು ಬರೆದಿದ್ದು........ ಓದುತ್ತಿದ್ದಂತೆ ಇದೇನು ಮಕ್ಕಳ ಕವನ ಇದೆಯಂತಲ್ಲ ಎನಿಸಿತು..... ಮತ್ತೆ ಶಿರ್ಶಿಕೆ ಓದಿದೆ...... ಖುಶಿಯಾಯಿತು......

ವಸಂತ್ said...

ತುಂಬಾ ಧನ್ಯವಾದಗಳು ಮೂರ್ತಿ ಸರ್ ನಿಮ್ಮ ಪ್ರತಿಕ್ರಿಯೆಗೆ. ಖಂಡಿತ ಇನ್ನೂ ಹೆಚ್ಚು ಪದ್ಯಗಳನ್ನು ಬರೆಯಲು ಪ್ರಯತ್ನಿಸುತ್ತೇನೆ.

ವಸಂತ್ said...

ಧನ್ಯವಾದಗಳು ತರುಣ್ ರವರೆ ಪ್ರತಿಕ್ರಿಯೆಗೆ ಮತ್ತು ನಿಮ್ಮ ಹೊಗಳಿಕೆಗೆ ಮಾರು ಹೋಗಿ, ಇನ್ನೂ ಹೆಚ್ಚು ಮಕ್ಕಳ ಪದ್ಯಗಳನ್ನು ಬರೆಯಲು ಪ್ರಯತ್ನಿಸುತ್ತೇನೆ.

ವಸಂತ್ said...

ತುಂಬಾ ಧನ್ಯಾವದಗಳು ashokkodlady ರವರೆ. ಖಂಡಿತ ಇನ್ನೂ ಹೆಚ್ಚು ಹೆಚ್ಚು ಬರೆಯುತ್ತೇನೆ.

ವಸಂತ್ said...

ತುಂಬಾ ಧನ್ಯವಾದಗಳು ದಿನಕರ ಮೊಗೇರ ಸರ್.ಕವನವನ್ನು ಇಷ್ಟ ಪಟ್ಟದ್ದಕ್ಕೆ. ಮತ್ತು ನಿಮ್ಮ ಅನಿಸಿಕೆಗು ಕೂಡ.

ಸೀತಾರಾಮ. ಕೆ. / SITARAM.K said...

ಮಕ್ಕಳ ಕವನ ಮಕ್ಕಳಂತೆ ಮುದ್ದಾಗಿದೆ,