Wednesday, September 22, 2010

ಇದು ಸರಿ ಎಂಬದಕ್ಕೆ ಉತ್ತರಿಸಿ ಹೋಗು....!.

ಅಂದು ಹುಣ್ಣಿಮೆಯ ರಾತ್ರಿಯಲ್ಲಿ
ಮಂದವಾಗಿ ಬೆಳಕದೊರುತ್ತಿದ್ದ
ಚಂದ್ರನಮೇಲೆ ಆಣೆಮಾಡಿ !
"ನನ್ನಲ್ಲಿ ಒಂದು ಮಾತು ಹೇಳಿದ್ದೆ"
ನಿನಗೆ ನೆನಪಿದೆಯಾ ಗೆಳಿತಿ....

ಬಾನಲಿರುವ ಚಂದ್ರನ ಬೆಳಕಿನಂತೆ
ನಮ್ಮಿಬ್ಬರ ಹೃದಯಗಳು ಒಂದಾಗಿ....
ಮಧುಮಾಸದ ಸಂಜೆಯನ್ನು ನೆನಪಿಸುತ್ತ
ಬಾಳ ಪಯಣವನ್ನೇರಿ....
ಸ್ವಚ್ಛಂದವಾಗಿ ಸಾಗಿ ಹೋಗುವ ಎಂದು....

ಆದರೆ ಅದು ಹಾಗಾಗಲಿಲ್ಲ....

ನಿನ್ನ ಪ್ರೀತಿಸುವ ಭರದಲ್ಲಿ
ಹಗಲು ರಾತ್ರಿಗಳನ್ನು ಮರೆತಿದ್ದ ನನಗೆ.....
ನೀ ಮಾಡುವ ವಂಚನೆಯು ಸಹ ಮರೆತುಹೋಗಿತ್ತು....
ಕಾರಣ ನಮ್ಮ ಬಾಳು ಸದಾ ಬೆಳಗುವ
ಬೆಳದಿಂಗಳಾಗುತ್ತದೆಂಬ ಹುಚ್ಚು ಬಯಕೆ....

ಪಾಪ ಚಂದ್ರನನ್ನು ಬಿಡದೆ ಕಾಡುವ ಕಾರ್ಗತ್ತಲು
ನನ್ನನ್ನು ಸುಮ್ಮನೆ ಬಿಟ್ಟೀತ್ತೇ....
ಹುಣ್ಣಿಮೆಯನ್ನು ಕಾಣುವ ಹಂಬಲದಲ್ಲಿ
ಬೆಳಕನ್ನೇ ನುಂಗುವಂತ ಕತ್ತಲಿರುವುದನ್ನು ಮರೆತಿದ್ದೆ....

ನನ್ನ ಬಾಳಿನಲ್ಲೊಂದು ದೀಪವಾಗಿ
ಬೆಳಗಬೇಕಿದ್ದ ನೀನು....
ಅಮವಾಸ್ಯೆಯ ಕತ್ತಲಂತಾಗುವೆಯೆಂದು
ನಾನು ಕನಸ ಕಂಡಿರಲಿಲ್ಲ....
ಕನಸುಗಳೆ ಕಾಣದಿದ್ದ ನನಗೆ
ಎಲ್ಲೂವು ನೀನೆಯೆಂಬ 
ಮಾಯೆಯಲ್ಲಿ ಮುಳುಗಿಹೋಗಿದ್ದೆ....

ನನ್ನಲ್ಲಿದ್ದ ನಿನ್ನೆಲ್ಲವನ್ನು ತೆಗೆದುಕೊಂಡೋದೆ....
ಬೆಳಕಾಗಿದ್ದ ಬೆಳದಿಂಗಳನ್ನು ಸಹ ಬಿಡದೆ....
ಆದರೆ ನಿನಗಾಗಿ ಹಂಬಲಿಸುವ
"ಬರಡು ಹೃದಯವನ್ನು" ಮಾತ್ರ
ಯಾಕಾಗಿ ಹುಳಿಸಿಹೋದೆಯೋ ನನಗೆ ಅರ್ಥವಾಗಲಿಲ್ಲ....

ನೀನು ಮತ್ತೆ "ಬಾ" ಎಂದು ನಾ ಕೇಳಲಾರೆ,
ಆದರೆ ನೀ ಕೊಟ್ಟ ಮಾತನ್ನು ಮುರಿದೆಯಲ್ಲ
ಇದು ಸರಿ ಎಂಬದಕ್ಕೆ ಉತ್ತರಿಸಿ ಹೋಗು....!.

                                                                  ವಸಂತ್

15 comments:

ಪ್ರಗತಿ ಹೆಗಡೆ said...

ವಸಂತ್ ಅವರೇ, ಕವನದ ಭಾವನೆಗಳು ಚೆನ್ನಾಗಿವೆ... ಕೆಲವು ಪದಗಳು ( ಮದುಮಾಸ- ಮಧುಮಾಸ, ಅಂಬಲಿಸಿ- ಹಂಬಲಿಸಿ) ತಪ್ಪಾಗಿ ಮೂಡಿರಬಹುದೆಂದು ಅನಿಸುತ್ತಿದೆ... ಅನ್ಯತಾ ಭಾವಿಸಬೇಡಿ... ವಂದನೆಗಳು..

Dr.D.T.krishna Murthy. said...

ಮತ್ತೆ ಬರುವನು ಚಂದಿರ!ಮತ್ತೆ ಬರುವುದು ಹುಣ್ಣಿಮೆ!ಅಮಾವಾಸೆಯ ಕತ್ತಲೆಯೇ ಕೊನೆಯಲ್ಲ.

ವಸಂತ್ said...

ಧನ್ಯವಾದಗಳು ಪ್ರಗತಿಯವರೆ ನಿಮ್ಮ ಪ್ರತಿಕ್ರಿಯೆಗೆ, ನೀವು ತಿಳಿಸಿದ ಪದಗಳನ್ನು ಸರಿಪಡಿಸಿದ್ದೇನೆ. ಇದಕ್ಕೆ ಖಂಡಿತ ಅನ್ಯತಾ ಎಂದು ಭಾವಿಸುವುದಿಲ್ಲ.

ವಸಂತ್ said...

ತುಂಬಾ ಧನ್ಯವಾದಗಳು ಮೂರ್ತಿ ಸರ್ ನಿಮ್ಮ ಪ್ರತಿಕ್ರಿಯೆಗೆ


ನಿಮ್ಮ ಈ >>>ಮತ್ತೆ ಬರುವನು ಚಂದಿರ!ಮತ್ತೆ ಬರುವುದು ಹುಣ್ಣಿಮೆ!ಅಮಾವಾಸೆಯ ಕತ್ತಲೆಯೇ ಕೊನೆಯಲ್ಲ.<<<

ಮಾತುಗಳಿಗೆ ಹೇಗೆ ಉತ್ತರಿಸಬೇಕೊ ತಿಳಿಯುತ್ತಿಲ್ಲ.

ಅನಂತರಾಜ್ said...

ಕವನದ ಭಾವಗಳು ತು೦ಬಾ matured ಆಗಿವೆ ವಸ೦ತ್. ಕೆಲವೊ೦ದು ಕಾಗುಣಿತಗಳನ್ನು ಸರಿ ಮಾಡಿಕೊ೦ಡರೆ ಉತ್ತಮ ಕವನ.

ಶುಭಾಶಯಗಳು
ಅನ೦ತ್

ಮನದಾಳದಿಂದ............ said...

ವಸಂತ್, ಊರಿನಿಂದ ಬಂದ ನಂತರ ಸ್ವಲ್ಪ ಬ್ಯುಸಿ ಇದ್ದೆ ಹಾಗಾಗಿ ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ, ದಯವಿಟ್ಟು ಕ್ಷಮಿಸಿ,
ನಿಮ್ಮ ಕವನ ತುಂಬಾ ಚನ್ನಾಗಿದೆ. ಕತ್ತಲೆ ಕಳೆಯಲು ಬೆಳಕು ಬಂದೇ ಬರುತ್ತದೆ. ಸ್ವಲ್ಪಾ ತಾಳ್ಮೆಯಿಂದ ಕಾಯಬೇಕು ಅಷ್ಟೇ! ಒಳ್ಳೆಯದಾಗುತ್ತದೆ.

ವಸಂತ್ said...

ಧನ್ಯವಾದಗಳು ಅನಂತರಾಜ್ ಸರ್ ನಿಮ್ಮ ಪ್ರತಿಕ್ರಿಯೆಗೆ. ಕಾಗುಣಿತಗಳನ್ನು ಸರಿಪಡಿಸುತ್ತೇನೆ.

ವಸಂತ್ said...

ಪ್ರವೀಣ್ ಸರ್ ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು. ತಡವಾಗಿ ಬಂದರೂ ನಿಮ್ಮ ಅನಿಸಿಕೆಯ ಮಾತುಗಳಿಗೆ ತಲೆಬಾಗುತ್ತೇನೆ.

ashokkodlady said...

Vasanth,

Cennagide,,,,Niceone...

- ಕತ್ತಲೆ ಮನೆ... said...

ಬಾನಲ್ಲಿರುವ ಚಂದ್ರನಂತೆ ಒಂದಾಗುವುದು.. ಸ್ವಲ್ಪ ಗೊಂದಲವಿದೆ..
ಸೊಗಸಾದ ಕವಿತೆ..

ವಸಂತ್ said...

ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ashokkodlady ರವರೆ.

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಕತ್ತಲೆ ಮನೆಯವರೆ. ನೀವು ತಿಳಿಸಿದ ಗೊಂದಲಕ್ಕೆ >>>ಬಾನಲ್ಲಿರುವ ಚಂದ್ರನಂತೆ ಒಂದಾಗುವುದು<<< ಇದನ್ನು ಬಾನಲ್ಲಿರುವ ಚಂದ್ರನ ಬೆಳಕಿನಂತೆ ಎಂದು ಬದಲಾಯಿಸಿದ್ದೇನೆ.

SATISH N GOWDA said...

it's 2 cute. vasanth . keep writing..

ವಸಂತ್ said...

ಧನ್ಯವಾದ ಸತೀಶ್.

ಸೀತಾರಾಮ. ಕೆ. / SITARAM.K said...

ಚೆಂದದ ಭಾವಾಭಿವ್ಯಕ್ತಿ. "ಉಳಿಸಿ" ಎಂಬುದು "ಹುಳಿಸಿ" ಆಗಿದೆ ತಿದ್ದಿ.