Tuesday, September 28, 2010

ಸಂತಸದಿಂದ ಕರಗಿ ಹೋಗುವ....


ಹಗಲಿನಲ್ಲಿನ ಬಣ್ಣಗಳನ್ನು
ಇರುಳಿನಲ್ಲಿ ಪೋಣಿಸುತ್ತಾ
ಕನಸಾಗಿಸುತ್ತೇವೆ....

ಮಸುಕು ಮಸುಕಾದ ಆಕೃತಿಗಳು
ವಿಧ ವಿಧವಾದ ಬಣ್ಣಗಳಿಂದ
ಕನಸಂತೆ ಕಾಣುತ್ತದೆ....

ಅದು ನಾವನುಭವಿಸುವ
ಅನುದಿನದ ಯಾತನೆಯೋ
ವೇದನೆಯೋ ಯಾವುದೋ
ಒಂದು ಕ್ಷಣದ ಸಂತಸದ
ಸಮಯವಾಗಿರಬಹುದು....

ಸುಖ ನಿದ್ರೆಗೂ ನೂರೆಂಟು
ಭಂಗಗಳಿಂದ ಕೂಡಿರುವ
ಹಲವಾರೂ ಸಂಗತಿಗಳು
ಒಮ್ಮೆಗೆ ಮರುಕಳಿಸಿದಾಗ....

ಬಾರದ ನಿದ್ರೆಯನ್ನರಸಿ
ನಿದ್ರೆಯನ್ನುಣಿಸುವಂತ
ಮಾತ್ರೆ ಮದ್ದುಗಳಿಗೆ 
ಮಾರು ಹೋಗುತ್ತೇವೆ....

ಈಗಿರುವಾಗ ನಾವು
ಕಾಣುವ ಕನಸಾದರೂ ಎಂತಹುದು
ಉರಿಯುವ ದೀಪದಡಿಯ ಕತ್ತಲೆಯಂತೆ....

ಹೇಗಿದ್ದರೂ ಎಂದಾದರೊಮ್ಮೆ 
ಶಾಂತಿಸಿಗುವ  ಲೋಕದೆಡೆಗೆ
ಕನಸಾಗಿ ಸಾಗಿಹೋಗಲೇ ಬೇಕಲ್ಲವೆ ?....

ಅಷ್ಟರೊಳಗೆ ಇರುವ ಸಮಯಕ್ಕೆ
ತಕ್ಕಂತ ಕನಸುಗಳನ್ನು ಕಂಡು
ಸಂತಸದಿಂದ ಕರಗಿ ಹೋಗುವ....
                                                           ವಸಂತ್

4 comments:

SATISH N GOWDA said...

ಚನ್ನಾಗಿದೆ ವಸಂತ್ .....

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಸತೀಶ್.

ಸೀತಾರಾಮ. ಕೆ. / SITARAM.K said...

ಕವನ ಚೆನ್ನಾಗಿದೆ. ಹೀಗಿರುವಾಗ=ಈಗಿರುವಾಗ ಆಗಿದೆ ಸರಿಪಡಿಸಿ. ಕನಸುಗಳನ್ನೂ ತಕ್ಕಂತೆ ಕಾಣುವದು ಕಷ್ಟ.

ashokkodlady said...

Niceone...