Saturday, October 2, 2010

ಸದಾ ನೆನೆದು ಸಂಭ್ರಮಿಸುವೆ...!.


 
ಕತ್ತಲ ಕೋಟೆಯನು ತಣ್ಣಗೆ ಸರಿಸಿ
ಬೆಳ್ಮುಗಿಲ ದಟ್ಟನೆಯ ಧರಗೆ ತಂದಂತೆ
ರವಿಯ ಮಾದಕ ನೋಟಕು ಮೂಗು ಮುರಿಯುತ
ನಮ್ಮ ಮನೆಯ ಬಾಗಿಲಿನವರೆಗೂ ಮಂಜು ಮಂಜು....

ಹಸಿರ ಹುಲ್ಲಿನ ಮೇಲೆ ಮಿನುಗುವ ನಕ್ಷತ್ರದ ಹರಳು
ತಣ್ಣನೆಯ ಗಾಳಿಗೆ ಸೋತು ಸೊರಗುವ ಮನ
ಮೈಕೊಡವಿ ಎದ್ದ ಜೇಡನ ಬಲೆಯಲ್ಲೂ
ಶೃಂಗರಿಸಿ ಹೋಗಿದ್ದ ಮುತ್ತುಗಳ ಮಾಲೆ....

ಯಾರಿಗಾಗಿ ಬರೆದ ಕವನವಿದು ನಾಕಾಣೆ
ಮತ್ಯಾರಿಗಾಗಿ ರಚಿತವಾದ ಕಲಾಕೃತಿಯೋ ನನ್ನಾಣೆ
ಕತ್ತಲು ಸರಿದು ಬೆಳಕು ಮೂಡಿದೊಡನೆಯೆ
ಮಧುಮಾಸದ ಸಂಜೆಯನ್ನು ನೆನಪಿಸಿದಂತೆ....

ವರುಷಕೊಮ್ಮೆಯಾದರೂ ದರುಶನವಿತ್ತು ಹೋಗುವ
ಬಳಲಿ ಬೆಂಡಾದ ಮನಕೆ ಆಹ್ಲಾದವನು ನೀಡುವ
ನಮ್ಮನೆಯವರೆಗೂ ಕರೆಯದೇ ಬರುವ ಅಥಿತಿಯನ್ನು
ನಾ ಸದಾ ನೆನೆದು ಸಂಭ್ರಮಿಸುತ್ತೇನೆ....

                                                                   ವಸಂತ್
ಚಿತ್ರಕೃಪೆ. http://lh4.ggpht.com

14 comments:

ದಿನಕರ ಮೊಗೇರ.. said...

vasant,
tumbaa chennaagide..... chitrakke honduva saalugalu chennaagive... adarallu...
ಹಸಿರ ಹುಲ್ಲಿನ ಮೇಲೆ ಮಿನುಗುವ ನಕ್ಷತ್ರದ ಹರಳು
ತಣ್ಣನೆಯ ಗಾಳಿಗೆ ಸೋತು ಸೊರಗುವ ಮನ
ಮೈಕೆಡವಿ ಎದ್ದ ಜೇಡನ ಬಲೆಯಲ್ಲೂ
ಶೃಂಗರಿಸಿ ಹೋಗಿದ್ದ ಮುತ್ತುಗಳ ಮಾಲೆ.... chennaagide....

ಹಳ್ಳಿ ಹುಡುಗ ತರುಣ್ said...

tumbaa chenagide...

SATISH N GOWDA said...

VASANTH SOOOOOOO CUTE KANRI NIMMA KAVANA...

ವಸಂತ್ said...

ಧನ್ಯವಾದಗಳು ಮೊಗೇರ ಸರ್. ಕವನದ ಬಗೆಗಿನ ನಿಮ್ಮ ಅನಿಸಿಕೆಗೆ ಧನ್ಯವಾದಗಳು.

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ತರುಣ್ ರವರೆ.

ವಸಂತ್ said...

ಧನ್ಯವಾದಗಳು ಸತೀಶ್.

ಅನಂತರಾಜ್ said...

ಉತ್ತಮ ಕಲ್ಪನೆ ಮತ್ತು ಚಿತ್ರಣ ವಸ೦ತ್.

ಶುಭಾಶಯಗಳು
ಅನ೦ತ್

ಸಿಮೆಂಟು ಮರಳಿನ ಮಧ್ಯೆ said...

ವಸಂತ್...

ಬಹಳ ಸುಂದರ ಕವನ...
ಬಹಳ ಆತ್ಮೀಯ ಸಾಲುಗಳಿಗೆ ಅಭಿನಂದನೆಗಳು...

ಕಲರವ said...

ವಸಂತ್ ರವರೆ ಇಬ್ಬನಿ ಕಂಡ ಕಾವ್ಯ ಸೊಗಸಾಗಿದೆ,ಅಭಿನಂದನೆಗಳು.ನಮ್ಮ ಬ್ಲಾಗ್ ಗು ನಿಮಗೆ ಸ್ವಾಗತ

ವಸಂತ್ said...

ಕವನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ಅನಂತರಾಜ್ ಸರ್.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಮತ್ತು ಅನಿಸಿಕೆಗೆ ತುಂಬಾ ಧನ್ಯವಾದಗಳು ಪ್ರಕಾಶ್ ಸರ್.

ವಸಂತ್ said...

ತುಂಬಾ ಧನ್ಯವಾದಗಳು ಮೇಡಂ.

ಸೀತಾರಾಮ. ಕೆ. / SITARAM.K said...

ತುಂಬಾ ಲಾಸ್ಯವಾಗಿ ಅನುಭವಿಸಿ ಬರೆದಿದ್ದಿರಾ...ಮನ ಓದಿ ಖುಶಿಗೊಂಡಿತು.
ಇಣು ಬರಲಿ..

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಸೀತಾರಾಮ ಸರ್.