Tuesday, October 12, 2010

ನೇಸರ...!.


ಮೂಡಲ ಬಾಗಿಲಿನಿಂದ
ಅರುಣೋದಯ ನೇಸರ ಬಂದ
ಕತ್ತಲು ಕವಿದ ಮನಕೆ
ಚೈತನ್ಯದ ಬೆಳಕತಂದ.

ಗಿರಿ ಶಿಖರಗಳ ಮೇಲೆ ಹೇರಿ
ಸುಮ ಲತೆಗಳ ಮನವ ಗೆದ್ದ
ಹಸಿರಮ್ಮನ ಗುಡಿಯ ಹೊಕ್ಕು
ಕಲರವಗಳನು ನೀಡಿದ.

ಜುಳು ಜುಳನೆ ಹರಿವ ಝರಿಗೆ
ದಾರಿತೋರೊ ದಾತನಾದ.
ತನಗಾಗಿ ಕಾದ ಪದ್ಮಕೆ
ಹೊಸ ಹುರುಪಿನ ಕಾಂತಿತಂದ.

ಸಮಯಕ್ಕೆ ತಕ್ಕ ಚಲನೆ
ಒಂದುಗಳಿಗೆ ಸುಮ್ಮನಿರನು
ಧರೆ ಕಾಯೋ ಧೀರನಿವನು
ದಿಟ್ಟ ತನದಿ ಮೆರೆವನು.

ಮೂಡಣದಿ ಹುಟ್ಟಿ ಬೆಳೆದು
ಪಡುವಣದಲಿ ಮುಳುಗುವ.
ನವ ಚೈತನ್ಯದಿ ಜನ್ಮಪಡೆದು
ಮತ್ತೆ ಬೆಳಕ ತೋರುವ.

                                    ವಸಂತ್
ಚಿತ್ರಕೃಪೆ. http://lh5.ggpht.com

21 comments:

ಪ್ರಗತಿ ಹೆಗಡೆ said...

ನೇಸರನ ವರ್ಣನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ವಸಂತ್ ...

Dr.D.T.krishna Murthy. said...

ಚಂದದ ಕವನ ವಸಂತ್.ಧನ್ಯವಾದಗಳು.

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಪ್ರಗತಿಯವರೆ. ನೇಸರನಿಗೆ ನೇಸರನೇ ಸಾಟಿ.

ವಸಂತ್ said...

ತುಂಬಾ ಧನ್ಯವಾದಗಳು ಮೂರ್ತಿ ಸರ್. ನಿಮ್ಮ ಪ್ರತಿಕ್ರಿಯೆಗೆ...

kusu Muliyala said...

ಸು೦ದರವಾಗಿ ಮೂಡಿಬ೦ದಿದೆ ಕವನ.ಅಭಿನ೦ದನೆಗಳು.

ಮನಮುಕ್ತಾ said...

nice..

ಪ್ರಸನ್ನ ಶಂಕರಪುರ said...

ವಸಂತ್, ಕವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

- ಕತ್ತಲೆ ಮನೆ... said...

ಸುಂದರ ವರ್ಣನೆ..

ಬನ್ನಿ ನನ್ನ 'ಮನಸಿನಮನೆ'ಗೆ..

ಮನದಾಳದಿಂದ............ said...

ವಸಂತ್,
ಚಂದದ ಕವನ,
ಸೂರ್ಯಾಸ್ತದ ಚಿತ್ರವೂ ಸೂಪರ್,

Venkatakrishna.K.K. said...

ಸಂದರವಾದ ಕವನ.

ashokkodlady said...

Chennagide nimma kavana...

ಸತೀಶ್ ಗೌಡ said...

SOO CUTE....

ವಸಂತ್ said...

ಕವನದ ಬಗ್ಗೆ ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು kusu Muliyala ಸರ್.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮನಮುಕ್ತಾ ಮೇಡಂ.

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಸನ್ನ.

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಗುರುಪ್ರಸಾದ್.

ವಸಂತ್ said...

ತುಂಬಾ ಧನ್ಯವಾದಗಳು ಪ್ರವೀಣ್ ಸರ್ ನಿಮ್ಮ ಪ್ರತಿಕ್ರಿಯೆಗೆ.

ವಸಂತ್ said...

ತುಂಬಾ ಧನ್ಯವಾದಗಳು Venkatakrishna ಸರ್.

ವಸಂತ್ said...

ತುಂಬಾ ಧನ್ಯವಾದಗಳು ashokkodlady ಸರ್.

ವಸಂತ್ said...

ತುಂಬಾ ಧನ್ಯವಾದಗಳು ಸತೀಶ್ ನಿಮ್ಮ ಪ್ರತಿಕ್ರಿಯೆಗೆ.

ಸೀತಾರಾಮ. ಕೆ. / SITARAM.K said...

ಸೂರ್ಯನ ಬಗೆಗಿನ ಕವನ ಸು೦ದರವಾಗಿ ಮೂಡಿದೆ.