Saturday, October 16, 2010

ನಿನ್ನ ನಗುವೇತಕೆ ಮೌನವಾಗಿದೆ..!.


ಕುದಿಯುವ ಕೋಪ ಮನದೊಳಗೆ
ಅರಿಯದ ವೇದನೆ ನಿನ್ನೊಳಗೆ
ನಗುವೇತಕೆ ಮೌನವಾಗಿದೆ  
ನಿನ್ನ ನಲಿವೇತಕೆ ಮರೆಯಾಗಿದೆ . IIಪII

ಹೊಳೆಯುವ ರೂಪವು ನೀನಲ್ಲವೆ
ನಿನ್ನ ಮುನಿಸಿಗೆ ಕಾರಣ ಬೇಕಲ್ಲವೆ
ನಿನ್ನಯ ವೇದನೆ ನನ್ನದಲ್ಲವೆ
ನಿನ್ನ ಹೃದಯದೊಳೆನಗೆ ಸ್ಥಳವಿಲ್ಲವೆ.

ಪ್ರೀತಿಯ ಪುಟಗಳ ಹಾಳೆಯ ಮೇಲೆ
ಕಣ್ಣೀರಿನಿಂದ ಕಥೆ ಬರೆದೆ
ಹೃದಯದ ಒಳಗೆ ಉಸಿರಾದಂತೆ
ನನ್ನ ಬಾಳಿಗೆ ಮುನ್ನುಡಿಯಾದೆ.

ಬೆಳಗುವ ಸೂರ್ಯ ಕತ್ತಲಾದಂತೆ
ನಲಿಯುವ ತಾವರೆ ಸುಮ್ಮನಾಗಿದೆ
ಲೋಕಕೆ ಲೋಕವು ಒಂಟಿಯಾದಂತೆ
ಸುಮ್ಮನಿರೆ ನೀ, ನಾ ಶಿಲೆಯಾಗುವೆ.

ಮನಸಿನ ಕೋಪವ ತಣಿಸಿಬಿಡು
ಹೂನಗೆ ತುಟಿಗಳ ಅರಳಿಬಿಡು
ನಿನ್ನ ಜೀವಕೆ ಜೀವವು ನನ್ನಾಣೆ
ನಿನಗಾಗಿ ನನ್ನ ಪ್ರಾಣವ ಬಿಟ್ಟೆನೇ..

ನಗುವೇತಕೆ ಮೌನವಾಗಿದೆ  
ನಿನ್ನ ನಲಿವೇತಕೆ ಮರೆಯಾಗಿದೆ . IIಪII

                                       ವಸಂತ್


ಚತ್ರಕೃಪೆ. http://lh3.ggpht.com

11 comments:

ಸಾಗರದಾಚೆಯ ಇಂಚರ said...

ವಸಂತ್
ಭಾವನೆಗಳ ಹೊಯ್ದಾಟ ತುಂಬಾ ಚೆನ್ನಾಗಿ ವ್ಯಕ್ತವಾಗಿದೆ
ನಗು ಯಾತಕೆ ಮರೆಯಾಗಿದೆ ನ್ನುವುದರ ಹಿಂದೆ ದುಃಖ ಯಾಕೆ ಮಡುಗಟ್ಟಿದೆ ಎಂಬ ದುಗುಡವಿದೆ
ಸುಂದರ ಕವಿತೆ

ವಸಂತ್ said...

ತುಂಬಾ ಧನ್ಯವಾದಗಳು Gurumurthy ಸರ್. ಈ ಕವನದಲ್ಲಿ ಎರಡು ಮನಸ್ಸು ಮನಸ್ಸುಗಳ ತೋಳಳಾಟವನ್ನು ವಿವರಿಸಿದ್ದೇನೆ. ಮತ್ತು ನೀವು ತಿಳಿಸಿದಂತೆ ಸ್ವಲ್ಪ ದುಗುಡವು ಮಡುಗಟ್ಟಿದೆ.

ದಿನಕರ ಮೊಗೇರ said...

bhavagala taakalaata.......... dhikhada sogasaada nirupaNe....

nandu said...

Really hats to you vasant,,,,,,,,,,,! wish you all the best

ಹಳ್ಳಿ ಹುಡುಗ ತರುಣ್ said...

vashant nimade lokadalli.. manasina tolalata... naguvina hudukaatadalli dhukha sundaravagi mudide...

chenagide...

ಸತೀಶ್ ಗೌಡ said...

ತುಂಬಾ ಚನ್ನಾಗಿದೆ ವಸಂತ್ .....

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ದಿನಕರ ಮೊಗೇರ ಸರ್.

ವಸಂತ್ said...

ಧನ್ಯವಾದಗಳು ನಂದುರವರೆ ನಿಮ್ಮ ಪ್ರತಿಕ್ರಿಯೆಗೆ.

ವಸಂತ್ said...

ಕವನವನ್ನು ಇಷ್ಟ ಪಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ತರುಣ್ ರವರೆ.

ವಸಂತ್ said...

ಧನ್ಯವಾದಗಳು ಸತೀಶ್.

ಸೀತಾರಾಮ. ಕೆ. / SITARAM.K said...

ತು೦ಬಾ ಚೆನ್ನಾಗಿದೆ ಕವನ.
ಮನದನ್ನೆಯ ಮನದ ದುಗುಡಕ್ಕೆ ಕಳವಳಗೊ೦ಡು ಸ೦ತೈಸುವ ಪರಿ ಅದ್ಭುತ...