Saturday, October 23, 2010

ಮೌನದೊಳು ಮೌನವಾಗುತ್ತ....!.


ನೂರಾರು ಆಸೆಗಳ ಹೊತ್ತು ಹಲವಾರು ಕನಸುಗಳೊಂದಿಗೆ
ಜವರಾಯನ ಬೆದರಿಕೆಗೂ ಬಗ್ಗದೆ
ಮೌನದೊಳು ಮೌನವಾಗಿ ಬದುಕುತ್ತೇನೆ....

ಜಡವಾದ ಮಾತುಗಳು, ಸತ್ಯವನ್ನು ತೊರೆದ ನಾಲಿಗೆಗಳು,
ಎಡಗೈಯಿಂದ ಬಲಗೈಗೆ ಗೊತ್ತಾಗದಂತೆ
ಹಸ್ತಾಂತರವಾಗುವ ಪಾಪಗಳು ನನ್ನನ್ನು
ನಿನ್ನದು ಯಾವ ದಿಕ್ಕಿನ ದಾರಿ ಎಂದು ಕೇಳುತ್ತವೆ.... ?.

ಒಮ್ಮೆ ತಣ್ಣಗೆ ಬೀಸಿಬಂದ ತಂಗಾಳಿಯಲ್ಲಿ
ಕಾಣದ ವಿಷವಾಯು ಹರಿಯುತ್ತದೆ....
ದಾಹ ತೀರಿಸಿಕೊಳ್ಳಲೆಂದು ನೀರು ಕುಡಿಯಲು ಹೋದಾಗ
ಲವಣಗಳು ವಿಷಕಾರಕ ಪದಾರ್ಥಗಳು
ನಮ್ಮ ದೇಹದೊಳು ಸೇರುತ್ತಿರುತ್ತವೆ....
ಕತ್ತಲಲ್ಲೂ ಬೆಳಕಾದಂತೆ ಬಂದೂಕು ಬಾಂಬುಗಳ ಸ್ಪೋಟಗಳು
ಅಬ್ಬರಿಸಿ ತಣ್ಣಗೆ ಮರೆಯಾಗುತ್ತವೆ....

ಮೌನವಾಗಿ ಕುಳಿತಿದ್ದ ನನ್ನಲ್ಲಿ
ಕೆಲವು ಪ್ರಶ್ನೆಗಳು ಎದುರುಗೊಂಡು ಕೇಳುತ್ತದೆ
ನಾವು ಬದುಕುವುದಾದರೂ ಯಾವ ಪುರುಷಾರ್ಥಕ್ಕಾಗಿ....
ಅಪಾಯ ಕಾರಕ ವಿಷಜಂತುಗಳ ಜೊತೆ ನೆಮ್ಮದಿಕಾಣದ ಬದುಕು, 
ಯಾವ ಕ್ಷಣದಲ್ಲಾದರು ಏನಾದರೂ ಆಗಬಹದು
ಈ ಲೋಕವನ್ನು ಮತ್ತೆ ತಿದ್ದಲು ಬಾಬ, ಗಾಂಧಿ, ಬುದ್ದ
ಬಸವರಂತಹವರಾರು ಬರಲಾರರ ಎಂಬ ಪ್ರಶ್ನೆಗೆ ?.
ನನ್ನ ಬಳಿ ಉತ್ತರವಿರಲಿಲ್ಲ....!.
ಆದರೆ ಸಜ್ಜನಿಕೆಯ ಮನಸ್ಸುಗಳು ಒಂದಾದಲ್ಲಿ ಮಾತ್ರ
ದುರ್ಗುಣಗಳನ್ನು ಹೋಗಲಾಡಿಸಬಹುದೆಂದು ನನ್ನ ಒಮ್ಮತವಾಗಿತ್ತು....

ಪ್ರಾಣವಿಲ್ಲದ ವೃಕ್ಷ ಸಂಪತ್ತು
ತನ್ನಲಿ ಬಿಡುವ ಹೂ ಹಣ್ಣುಗಳ ಬಗ್ಗೆ ತಮಗೆ ಅರಿವಿಲ್ಲದಿದ್ದರೂ
ಪರರ ಉದರವನ್ನು ಪೋಷಿಸುತ್ತವೆ....
ಹಾಗೆ ನಮ್ಮ ಬದುಕು ತನಗಲ್ಲದಿದ್ದರೂ
ಇತರರ ನೆರವಿಗಾದರೂ ಜೀವಿಸಬೇಕೆಂದುಕೊಳ್ಳುತ್ತದೆ....
ಗಾಂಧೀಜಿಯ ತತ್ವವನು ಗಾಳಿಗೆ ತೂರಿ
ಗೌತಮನ ಭೋದಿಷೃಕ್ಷವನ್ನೇ ಕಡಿದು
ಅಲ್ಲಮ ಬಾಬರ ವಾಕ್ಯಗಳಿಗೆ ಬೆಲೆಕೊಡುವವರಾರೆಂದು ಅಂದುಕೊಳ್ಳುತ್ತಿದ್ದಾಗ....

ಸಂಜೆಯ ಬಾನಲಿದ್ದ ಸೂರ್ಯ ಆಗತಾನೇ ಕತ್ತಲು ದೂಡಿ ಕೆಂಪಾಗುತ್ತಿರುತ್ತಾನೆ.....
ಅದರರ್ಥ ನಾಳೆಯ ಬೆಳಕಿಗೆ ಈ ಕತ್ತಲು ಸಾಕ್ಷಿಯೆಂಬಂತ್ತಿತ್ತು....
ಮೌನದಲಿ ಮೌನವಾಗಿದ್ದ ನನಗೆ ಮುಂದಿನ ಕಾರ್ಯಗಳ ಬಗ್ಗೆ ಅರಿವಾಗಿ
ಕಾಣದ ಸತ್ಯಗಳನ್ನು ಹುಡುಕುತ್ತ ಕತ್ತಲಲ್ಲಿ ಸಾಗುತ್ತೇನೆ.......

                                                                              ವಸಂತ್ 

ಚಿತ್ರಕೃಪೆ. http://lh4.ggpht.com

20 comments:

ಪ್ರವರ said...

sir bahala olle aparoopada kavite....

Dr.D.T.krishna Murthy. said...

ವಸಂತ್;ಚೆಂದದ ಕವನ.ಅಭಿನಂದನೆಗಳು.

ಹಳ್ಳಿ ಹುಡುಗ ತರುಣ್ said...

hmm chenagide vashanth.. yen bari besaradalli bareda hagide namna satyagala ondu najya vivarane..

ಸೀತಾರಾಮ. ಕೆ. / SITARAM.K said...

ತು೦ಬಾ ಪ್ರಭುಧ್ಧ ಕಾವ್ಯ.


" ಆದರೆ ಸಜ್ಜನಿಕೆಯ ಮನಸ್ಸುಗಳು ಒಂದಾದಲ್ಲಿ ಮಾತ್ರದುರ್ಗುಣಗಳನ್ನು ಹೋಗಲಾಡಿಸಬಹುದೆಂದು ನನ್ನ ಒಮ್ಮತವಾಗಿತ್ತು....
ಪ್ರಾಣವಿಲ್ಲದ ವೃಕ್ಷ ಸಂಪತ್ತು ತನ್ನಲಿ ಬಿಡುವ ಹೂ ಹಣ್ಣುಗಳ ಬಗ್ಗೆ ತಮಗೆ ಅರಿವಿಲ್ಲದಿದ್ದರೂ ಪರರ ಉದರವನ್ನು ಪೋಷಿಸುತ್ತವೆ....ಹಾಗೆ ನಮ್ಮ ಬದುಕು ತನಗಲ್ಲದಿದ್ದರೂ ಇತರರ ನೆರವಿಗಾದರೂ ಜೀವಿಸಬೇಕೆಂದುಕೊಳ್ಳುತ್ತದೆ.." ಸಾಲುಗಲು ತು೦ಬಾ ಇಷ್ಟವಾಯಿತು.
ಸ್ವಲ್ಪ ಕಾಗುಣಿತ ತಪ್ಪನ್ನು ಸರಿಪಡಿಸಿ - ಆಶೆಗಳನೊತ್ತು= ಅಶೆಗಳ ಹೊತ್ತು, ಅಲವಾರು=ಹಲವಾರು,..

kusu Muliyala said...

ಒಳ್ಳೆಯ ಆಶಯದ ಕವನ ಚೆನ್ನಾಗಿ ಮೂಡಿ ಬ೦ದಿದೆ.

ವಿ.ಆರ್.ಭಟ್ said...

ವಸಂತ್, ಸೀತಾರಾಮರು ಹೇಳಿದ್ದನ್ನೇ ಮತ್ತೆ ಹೇಳಬೇಕಾಗಿದೆ, ಶುಭಾಶಯಗಳು

ವಸಂತ್ said...

ಧನ್ಯವಾದಗಳು ಪ್ರವರರವರೆ ನಿಮ್ಮ ಪ್ರತಿಕ್ರಿಯೆಗೆ.

ವಸಂತ್ said...

ತುಂಬಾ ಧನ್ಯವಾದಗಳು ಮೂರ್ತಿ ಸರ್ ನಿಮ್ಮ ಪ್ರತಿಕ್ರಿಯೆಗೆ.

ವಸಂತ್ said...

ಬೇಸರ ಅಂತ ಅಲ್ಲಾ ತರುಣ್ ರವರೆ. ದಿನದ 24 ಗಂಟೆಗಳ ಕಾಲ ಟಿವಿ ಮುಂದೆ ಕೂಳಿತರು ಭ್ರಷ್ಟಾಚಾರ, ಸ್ವರ್ಥ ಮನೋಬಾವ, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೋರಾಟದಲ್ಲಿ ಕುರ್ಚಿಗಾಗಿ ಕಾದಾಟ ಹೀಗೆ ಸಾಗುತ್ತಾ ಹೋದಲ್ಲಿ ಸಾಮಾನ್ಯ ಜನರ ಪಾಡೇನೆಂಬುದಕ್ಕೆ ಉತ್ತರವನ್ನು ಹುಡುಕುವುದು ಕಷ್ಟದಾಯಕವಾಗುತ್ತಿದೆ. ನಮ್ಮ ಹಿಂದಿನ ಸಜ್ಜನರರೂ ಸತ್ಯಕ್ಕಾಗಿ ಪ್ರಾಣವನ್ನೇ ಬಲಿಕೊಡುತ್ತಿದ್ದರೂ ನೇಣುಕಂಬಗಳಿಗೆ ಜೈ ಭಾರತ್ ಮಾತ ಎಂದು ಕುಣಿಕೆಗಳನ್ನು ಬಿಗಿಸಿಕೊಳ್ಳುತ್ತಿದ್ದರೂ. ಅಂತಹವರ ನಾಡಲ್ಲಿ ಹುಟ್ಟಿದ ನಾವುಗಳು. ನಮ್ಮ ನಡೆ ಯಾವ ದಿಕ್ಕನ್ನು ತಲುಪುತ್ತಿದೆ ಎಂಬುದು ಸೋಜಿಗವಾಗಿಬಿಟ್ಟಿದೆ. ಯಾರೇ ಆಗಲಿ ಒಂದು ಕೈಯಿಂದ ಚಪ್ಪಾಳೆ ತಟ್ಟಿದರೆ ಯಾರಿಗೂ ಕೇಳಿಸದು ಮತ್ತು ಅದು ಸಾಧ್ಯವಾಗದು ಕೂಡ. ಅದಕ್ಕೆ ಪ್ರತಿದಿನ ನಡೆಯುತ್ತಿರುವ ದೊಂಬರಾಟಗಳನ್ನು ನೋಡಿ ಸುಮ್ಮನೆ ಕೂರಲಾಗದೆ ಕವನದ ಮೂಲಕ ನನ್ನ ಕೋಪವನ್ನು ವೆಕ್ತಪಡಿಸುತ್ತಿದ್ದೇನೆ ಅಷ್ಟೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ವಸಂತ್ said...

ತುಂಬಾ ಧನ್ಯವಾದಗಳು ಸರ್ ನಿಮ್ಮ ಪ್ರತಿಕ್ರಿಯೆಯನ್ನು ಕಂಡು ತುಂಬಾ ಸಂತಸವಾಯಿತು.ನೀವು ತಿಳಿಸಿದ ಕಾಗುಣಿತ ತಪ್ಪುಗಳು ಮತ್ತು ಕೆಲವು ಸಾಲುಗಳನ್ನು ಬದಲಿಸಿದ್ದೇನೆ ನಿಮಗೆ ವಂದನೆಗಳು ಸರ್.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು kusu Muliyala ಸರ್.

ವಸಂತ್ said...

ಸಾರಿ ವಿ.ಆರ್.ಭಟ್ ಸರ್. ನೆನ್ನೆ ನನ್ನ ಸ್ನೇಹಿತನ ಮದುವೆಯಿದ್ದ ಕಾರಣ ನಾನು ಕಾಮೆಂಟ್ ಗಳನ್ನು ಗಮನಿಸಿರಲಿಲ್ಲ. ಸೀತಾರಾಮ ಸರ್ ತಿಳಿಸಿದ ತಪ್ಪುಗಳನ್ನು ಸರಿಪಡಿಸಿದ್ದೇನೆ. ಧನ್ಯವಾದಗಳು.

Venkatakrishna.K.K. said...

ಚೆಂದದ ಕವನ..

ಜಲನಯನ said...

ವಸಂತ್...ಕವನ ಹೀಗೇಕೆ ಎಂದುಕೊಂಡೆ ಮೊದಲಿಗೆ...ಓದ್ತಾ..ಸಾಲುಗಳು ಗಂಭೀರ ಒಳಾರ್ಥವನ್ನು ಹೊರಸೂಸಲಾರಂಭಿಸಿದಾಗ ...ಹಾಂ ಮೇಲ್ನೋಟಕ್ಕೆ ಗದ್ಯವೆನಿಸಿದರೂ ..ಶೈಲಿ ಪದ್ಯಕ್ಕೆ ಹತ್ತಿರ ಅನಿಸಿತು...ಚನ್ನಾಗಿದೆ ವಿಚಾರ...

- ಕತ್ತಲೆ ಮನೆ... said...

ಚಂದದ ಕವಿತೆ
ನನ್ನ 'ಮನಸಿನಮನೆ'ಗೂ ಬನ್ನಿ.

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು Venkatakrishna ಸರ್.

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಗುರುಪ್ರಸಾದ್.

ವಸಂತ್ said...

ಧನ್ಯವಾದಗಳು ಜಲಾನಯನ ಸರ್ ನಿಮ್ಮ ಪ್ರತಿಕ್ರಿಯೆಗೆ ಮತ್ತು ಅನಿಸಿಕೆಗೆ.

ಸತೀಶ್ ಗೌಡ said...

ವಸಂತ್ ನಿಮ್ಮ ಪ್ರಯತ್ನ ತುಂಬಾ ಸೊಗಸಾಗಿದೆ . ಮೇಲುನೋಟಕ್ಕೆ ಪದಗಳ ಜೋಡಣೆ ಕಷ್ಟವೆಂದರು ಇಲಾನೋತಕ್ಕೆ ಅದರ ಅರ್ಥ ಅಮೋಘ ... ಒಳ್ಳೆಯ ಪ್ರಯತ್ನ ಮುಂದುವರೆಸಿ

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಸತೀಶ್..