Monday, November 8, 2010

ನಲ್ಲೆ..!.



ನ್ನ ನೈದಿಲೆಯೆ ನಿನ್ನ ಜಾಡು ಹುಡುಕಿ
ಸರೋವರಗಳೆಲ್ಲವನ್ನೂ ತಡಕಾಡುತ್ತೇನೆ
ನಾ ಸೂರ್ಯನಾಗಲಾರೆ
ಬಂದು ಎನ್ನ ಬಿಗಿದಪ್ಪುಕೋ..

ಓ ನನ್ನ ಕೋಗಿಲೆಯೆ ನಿನ್ನ ಸುಮಧುರ ಕಂಠಕ್ಕಾಗಿ
ಪ್ರತಿದಿನವು ಹಂಬಲಿಸುತ್ತೇನೆ
ನನ್ನನ್ನು ಒಂಟಿಯನ್ನಾಗಿಸಬೇಡ
ಮಧುವನದ ಸರೋವರದಲ್ಲಿ ಪೂರ್ಣವಾಗಿ ಮುಳುಗಿಸು..

ಓ ನನ್ನ ಮಲೆಯ ಮಾರುತವೇ
ನಿನ್ನ ತಣ್ಣನೆಯ ಸ್ವರ್ಶಕ್ಕಾಗಿ ಸೋತು ಸೊರಗುತ್ತೇನೆ
ನಿನಗಾಗಿ ಹಂಬಲಿಸುವ ಈ ಹೃದಯಕ್ಕೆ
ಮುತ್ತಿನ ಹನಿಗಳನ್ನು ಸುರಿಸಿ..

ಓ ನನ್ನ ಬೆಳ್ಮುಗಿಲೆ ನಿನ್ನ ಆಕೃತಿಗಳನ್ನು ಬಳಸಿ
ನನ್ನನ್ನು ಮರುಳು ಗೊಳಿಸಬೇಡ
ಈ ನಿನ್ನ ಇನಿಯನ ಕರೆಗೆ ಓಗೊಟ್ಟು
ನನ್ನ ಬಾಳನ್ನು ಬೆಳಗಿಸುವ ಬೆಳಕಾಗಿ ಬಾ..

ಚಿತ್ರಕೃಪೆ. http://lh4.ggpht.com/

18 comments:

ಚುಕ್ಕಿಚಿತ್ತಾರ said...

sundara kavite..

kshanakkondu roopa badalisuva belmugilu nodugarannu marulu maaduvudu nija kanree...

sunaath said...

ನಲ್ಲೆಯನ್ನು ಎಷ್ಟು ವಿಧದಲ್ಲಿ ಕಲ್ಪಿಸಿಕೊಂಡರೂ ಸಾಲದು, ಅಲ್ಲದೆ? ಸುಂದರವಾದ ಪ್ರಣಯಗೀತೆ.

Dr.D.T.krishna Murthy. said...

ಸುಂದರ ಕವಿತೆ ವಸಂತ್.ಅಭಿನಂದನೆಗಳು.

ಮನಮುಕ್ತಾ said...

ರಮ್ಯ ಕವನ ..ಚೆನ್ನಾಗಿದೆ.

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಚುಕ್ಕಿಚಿತ್ತಾರ ಮೇಡಂ..

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಸುನಾತ್ ಸರ್. ಕಲ್ಪನೆಗೆ ಅಂತ್ಯವೇ ಇಲ್ಲ ಅನಿಸುತ್ತೆ..

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮೂರ್ತಿ ಸರ್...

ವಸಂತ್ said...

ಕವನದ ಬಗ್ಗೆ ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು ಮನಮುಕ್ತಾ ಮೇಡಂ...

ಸಿಮೆಂಟು ಮರಳಿನ ಮಧ್ಯೆ said...

ವಸಂತ್...

ಹೃದಯದಲ್ಲಿ ಹೊಸ ಭಾವಗಳು ತುಂಬಿರುವಾಗ ನೋಡುವ ಪ್ರಪಂಚ ಬಲು ಸುಂದರ..

ಭಾವಗಳನ್ನು ಬಲು ಸುಂದರವಾಗಿ ಬಣ್ಣಿಸಿದ್ದೀರಿ...

ಅಭಿನಂದನೆಗಳು...

Narayan Bhat said...

ನಲ್ಲೆಗೆ ಕರೆ...ತುಂಬಾ ಚೆನ್ನಾಗಿದೆ.

ಸತೀಶ್ ಗೌಡ said...

hudugiyannu kareyuva nimma sahasa munduvareyali..

ಹಳ್ಳಿ ಹುಡುಗ ತರುಣ್ said...

sundarvada varnane vasant chenaagide...

ನಾ ಸೂರ್ಯನಾಗಲಾರೆ
ಬಂದು ಎನ್ನ ಬಿಗಿದಪ್ಪುಕೋ...... aaa super..

ಸೀತಾರಾಮ. ಕೆ. / SITARAM.K said...

nice1 Excellent!

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳ ಪ್ರಕಾಶ್ ಸರ್..

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು Narayan Bhat ಸರ್.

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಸತೀಶ್.

ವಸಂತ್ said...

ಪ್ರತಿಕ್ರಿಯೆಗೆ ಮತ್ತು ನಿಮ್ಮ ಅನಿಸಿಕೆಗೆ ಆಬಾರಿ ತರುಣ್ ಸರ್.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಮನಸ್ಪೂರ್ವಕ ಅಭಿನಂದನೆಗಳು ಸೀತಾರಾಮ ಸರ್..