Wednesday, November 17, 2010

ನಿಲ್ಲು ನಿಲ್ಲು ಎಲೆ ಮನವೆ...!.

ನಿಲ್ಲು ನಿಲ್ಲು ಎಲೆ ಮನವೆ
ಜಗದ ಪಾಪಗಳ ಕಂಡು
ನೊಂದು ಮರುಗಿ ಹೋಗದಿರು
ನೂರು ಕಷ್ಟಗಳ ಸುತ್ತ ನಮ್ಮ ಬಾಳು...

ಸುರಿವ ಕಣ್ಣೀರಲ್ಲಿ
ಹಲವು ಕನಸುಗಳ ಬಿತ್ತಿ
ಅವು ಮೊಳಕೆಯೊಡೆಯಲಿಲ್ಲವೆಂದು ಭ್ರಮಿಸಿ
ನೀ ಸಾಗದಿರು
ಕಲ್ಲು ಕರಗುವ ಸಮಯ ಬಂದೇ ಬರುವುದು...

ಕಾಣದ ಸತ್ಯಗಳಿಗಾಗಿ
ಬುದ್ದ ತಡಕಾಡಿ ಗಾಂಧಿ ಸುತ್ತಾಡಿ
ಅಲ್ಲಮರು ತಲೆಯ ಮೇಲೆ ಕೈಹೊತ್ತು
ಏನಾದರೂ ಉತ್ತರವಿದೆಯೇ ಎಂದು
ಸತ್ಯ ಪಥದೆಡೆಗೆ ಮುಖಮಾಡಿದರು...

ಜಗದ ಕೊಳಕನ್ನು ತೋಳೆಯಲು
ಅವರಿಂದಲೂ ಪೂರ್ಣವಾಗಿ ಸಾಧ್ಯವಾಗಲಿಲ್ಲ
ಒಂದು ಸತ್ತರೆ ನೂರು
ಮರುಹುಟ್ಟುನು ಪಡೆದರೆ
ಸತ್ಯಕಿದು ಸಮಯವಲ್ಲವೆಂದೆನಿಸಿ ಮೌನವಾದರು...

ಹುಟ್ಟು ಸಾವಿನ ನೆರಳು
ಎತ್ತ ಹೋದರೂ ಬಿಡಲೊಲ್ಲದು
ಸಂಜೆಗತ್ತಲಾದರೆ
ಮರು ಮುಂಜಾನೆ ಬೆಳಕು ಬೆಳಕಲ್ಲವೆ...

                                                                   ವಸಂತ್

ಚಿತ್ರಕೃಪೆ. http://lh5.ggpht.com/

9 comments:

ಸಿಮೆಂಟು ಮರಳಿನ ಮಧ್ಯೆ said...

ವಸಂತ್...

ತುಂಬ ಚಂದದ ಸಾಲುಗಳು...

ಅದರಲ್ಲೂ ಕೊನೆಯ ಸಾಲುಗಳು ಬಹಳ ಅರ್ಥಪೂರ್ಣವಾಗಿದೆ...

"ಹುಟ್ಟು ಸಾವಿನ ನೆರಳು..,
ಎತ್ತಹೋದರೂ ಬಿಡಲೊಲ್ಲದು..,
ಸಂಜೆಗತ್ತಲಾದರೂ..,
ಮರು ಮುಂಜಾನೆ ಬೆಳಕು ಬೆಳಕಲ್ಲವೆ......"

ಅಭಿನಂದನೆಗಳು ಅರ್ಥಪೂರ್ಣ ಕವಿತೆಗೆ....

ವಸಂತ್ said...

ಕವನದ ಬಗ್ಗೆ ನಿಮ್ಮ ಅನಿಸಿಕೆಗೆ ಮತ್ತು ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಪ್ರಕಾಶ್ ಸರ್...

ವಸಂತ್

Dr.D.T.krishna Murthy. said...

ವಸಂತ್;ಪ್ರಕಾಶ್ ಅವರು ಹೇಳಿದಂತೆ ಕೊನೆಯ ಸಾಲುಗಳು ತುಂಬಾ ಸುಂದರ ಸಾಲುಗಳು.

ಪ್ರವರ ಕೆ ವಿ said...

ವಸಂತ್ ರವರೆ..... ಕವನ ಭಾವಪೂರ್ಣ,ಮನದ ತಲ್ಲಣ ಹಾಗೆ ಕಣ್ಣಿಂದ ಇಣುಕಿದಂತಿದೆ.....

sunaath said...

ವಸಂತ,
ನಿಮ್ಮ ಕವನವು ವಿಶ್ವಸತ್ಯವೊಂದನ್ನು ಸಾರುತ್ತಿದೆ. ಒಳಿತು- ಕೆಡಕು, ಹುಟ್ಟು-ಸಾವು ಇವು ಇರುವವೇ. ಈ ಚಕ್ರವನ್ನು ಬಿಡಿಸಲು ಯಾರಿಗೂ ಸಾಧ್ಯವಿಲ್ಲ. ಆದರೇನು?--ಸಂಜೆಗತ್ತಲಾದರೂ ಮರುಮುಂಜಾನೆ ಬೆಳಕು ಬೆಳಕಲ್ಲವೆ? ಎನ್ನುವ ನಿಮ್ಮ ಆಶಾಭಾವನೆ ಅರ್ಥಪೂರ್ಣವಾಗಿದೆ.

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಮೂರ್ತಿ ಸರ್...

ವಸಂತ್ said...

ಧನ್ಯವಾದಗಳು ಪ್ರವರರವರೆ ನನ್ನ ಮನಸಿನಲ್ಲಿ ಮೂಡಿದ ಕೆಲವು ಬಾವನೆಗಳನ್ನು ವೆಕ್ತಪಡಿಸಿದ್ದೇನೆ............

ವಸಂತ್ said...

ಕಂಡಿತ ಸುನಾತ್ ಸರ್ ನೀವು ತಿಳಿಸಿದಂತೆ >>ಒಳಿತು- ಕೆಡಕು, ಹುಟ್ಟು-ಸಾವು ಇವು ಇರುವವೇ. ಈ ಚಕ್ರವನ್ನು ಬಿಡಿಸಲು ಯಾರಿಗೂ ಸಾಧ್ಯವಿಲ್ಲ<< ಇದಕ್ಕೆ ಉತ್ತರವು ಚಿದಂಬರ ರಹಸ್ಯ.....

ನಾಗರಾಜ ಭಟ್ said...

ಕವನಗಳು ತುಂಬಾ ಚೆನ್ನಾಗಿವೆ..

''ಜಗದ ಕಲ್ಮಶಗಳನ್ನು ಅವರಿಂದಲೂ..,
ಪೂರ್ಣವಾಗಿ ತೋಳೆಯಲಾಗಲಿಲ್ಲ..,
ಒಂದು ಸತ್ತರೆ ನೂರು..,
ಮರುಹುಟ್ಟು ಪಡೆಯುತ್ತಿದ್ದರೆ..,
ಸತ್ಯಗ್ರಹವನ್ನೇ ನಂಬಿ ಕೂರಲಾಗುವುದೆ ''
ಎಂಬ ಸಾಲುಗಳು ಮನ ಮುಟ್ಟಿದವು.