Thursday, November 25, 2010

ಕನಸಿನೊಳಗೊಂದು ದಿನ..!.



ಜವ್ವನ ಕರಿಹೊತ್ತು
ಇರುಳೊಳಗೆ ಕಳೆದುಹೋಗಿ
ಕನಸ ಕಟ್ಟುತಲಿದ್ದೆ...

ಆಗಸದ ತುಂಬಾ
ಮಂದಾರ ಪುಷ್ಪಗಳು
ಏಣಿಯೊಂದು ಸ್ವರ್ಗಕ್ಕೆ...

ಪಾರಿವಾಳಗಳು ಕೈಬೀಸಿ
ಕರೆಯುತ್ತಿದ್ದವು
ಸ್ವರ್ಗ ಲೋಕದ ಪಯಣಕ್ಕೆ....

ತನ್ನೊಳಗಿನ ಮೌನ
ಬೆಚ್ಚಿ ನುಡಿದಿತ್ತು !..

ಹೋಗುವೆಯಾ ಹುಡುಗಿ
ಹಿರಿಯೂರ ಸೌಧಕ್ಕೆ...
ಬ್ರಾಂತಿಯಲಿ ಮೈಮರೆತು
ಇಳಿಯದಿರು ನರಕಕ್ಕೆ...

ಗೊಂದಲವೇ ಗಾಳವಾಗಿ
ಮನಸಿನೊಳು ತೂರಿತ್ತು...
ಸ್ವರ್ಗ ನರಕಗಳೆರಡು
ಕೈ ಹಿಡಿದು ಎಳೆದಿತ್ತು...

ಹೂವಿನ ಹಾಸಿಗೆಯೊಂದೆಡೆ ?..
ಮುಳ್ಳಿನ ಹೊದಿಕೆಯೊಂದೆಡೆ ?..

ಬೆಚ್ಚಿ ಬೇಸತ್ತು ...!.
ಚೀರಿಕೊಂಡು ಕಣ್ ಬಿಟ್ಟೆ...

ಇರುಳು ಕಳೆದಿತ್ತು...
ಬೆಳಕು ಮೂಡಿತ್ತು...
ನನ್ನ ಅವಸ್ಥೆಯ ಕಂಡು
ಸೂರ್ಯ ನಗುತ್ತಿದ್ದ...

                                     ವಸಂತ್
                                   
ಚಿತ್ರಕೃಪೆ. http://1.bp.blogspot.com/

12 comments:

ಸತೀಶ್ ಗೌಡ said...

nice,,,,,,,

sunaath said...

ಕನಸು ಕೆಲವೊಮ್ಮೆ ವಾಸ್ತವಕ್ಕೆ ಎಷ್ಟು ಹತ್ತಿರವಾಗಿರುತ್ತದೆ,
ಅಲ್ಲವೆ?!

Dr.D.T.krishna Murthy. said...

ಸುಂದರ ಕವನ!

ಮನಮುಕ್ತಾ said...

chennaagi barediddiri.

nimmolagobba said...

ಕವಿತೆ ಚೆನ್ನಾಗಿದೆ .ಇಷ್ಟವಾಯಿತು.

ವಿ.ಆರ್.ಭಟ್ said...

ವಸಂತ್, ಪರವಾಗಿಲ್ಲ ಅನಿಸಿತು,ಏಷ್ಟೋ ಉತ್ತ್ತಮ, ಇನ್ನೂ ಚೆನ್ನಾಗಿ ಬರಲಿ, ಶುಭವಾಗಲಿ

ವಸಂತ್ said...

ಧನ್ಯವಾದಗಳು ಸತೀಶ್...

ವಸಂತ್ said...

ಧನ್ಯವಾದಗಳು ಸುನಾತ್ ಸರ್ ನೀವು ಹೇಳಿದಂತೆ ವಾಸ್ತವವು ಕೆಲವೊಮ್ಮೆ ತುಂಬಾ ಹತ್ತಿರವಾಗಿರುವಂತೆ ಬಾಸವಾಗುತ್ತದೆ....

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಮೂರ್ತಿ ಸರ್....

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಮನಮುಕ್ತಾ ಮೇಡಂ...

ವಸಂತ್ said...

ಧನ್ಯವಾದಗಳು ಸರ್ ಕವನವನ್ನು ಇಷ್ಟಪಟ್ಟಿದ್ದಕ್ಕೆ...

ವಸಂತ್ said...

ಭಟ್ ಸರ್. ನನ್ನ ಬದಲಾವಣೆಗೆ ಮುಖ್ಯ ಕಾರಣ ನಿಮ್ಮ ಸಲಹೆ ಮತ್ತು ನಿಮ್ಮಯ ಬುದ್ದಿಮಾತುಗಳೇ ಕಾರಣವೆಂದರೆ ತಪ್ಪಾಗಲಾರದು. ಮೊದಮೊದಲು ನನ್ನಿಷ್ಟಬಂದಂತೆ ಬರೆಯುತ್ತಿದ್ದೆ. ಅವುಗಳಲ್ಲಿನ ದೋಶಗಳು ನನಗೆ ಅರ್ಥವಾಗುತ್ತಿರಲಿಲ್ಲ. ಇದನ್ನು ನೀವು ಮೂರ್ತಿ ಸರ್ ಮತ್ತಲವು ಬ್ಲಾಗ್ ಮಿತ್ರರರರ ಸಲಹೆ ಕೊಟ್ಟ ಬಳಿಕವೆ ನನಗೆ ಅರ್ಥವಾದದ್ದು ಧನ್ಯವಾದಗಳು.

ನಿಮಗೂ ಮತ್ತು ಎಲ್ಲಾ ಬ್ಲಾಗ್ ಮಿತ್ರರಿಗೂ ನನ್ನ ವಂದನೆಗಳನ್ನು ಸಲ್ಲಿಸಲು ಇಚ್ಚಿಸುತ್ತೇನೆ ವಂದನೆಗಳೊಂದಿಗೆ

ವಸಂತ್..