Sunday, November 14, 2010

ನನ್ನಯ ಮುದ್ದಿನ ಬೆಕ್ಕು...!. (ಮಕ್ಕಳ ಕವನ)


ನನ್ನಯ ಮುದ್ದಿನ ಬೆಕ್ಕೆ...
ಏನು ನಿನ್ನಯ ಸೊಕ್ಕೆ....

ಹಾಲನು ಕೊಟ್ಟರೆ ಕುಡಿಯುವೆ...
ಆಪಲ್ ಕೊಟ್ಟರೆ ಹೋಡುವೆ...

ಚಾಕ್ಲೇಟ್ ನೀನು ತಿನ್ನಲ್ಲ...
ಶಾಲೆಗೆ ಅಂತೂ ಹೋಗೊಲ್ಲ...

ಅ, ಆ, ಇ, ಈ ಬರೆಯೊಲ್ಲ...
ಒಂದು ಎರಡು ಹೇಳಲ್ಲ...

ಇಲಿಯನು ಕಂಡರೆ ಹಿಡಿಯುವೆ...
ಹುಲಿಯಂತೆ ನೀ ನಡೆಯುವೆ...

ಚಂಡಿನ ಜೊತೆಯಲಿ ಚಲ್ಲಾಟ...
ನಾಯಿಯ ಕಂಡರೆ ರಂಪಾಟ...

ಅಮ್ಮನು ಕರೆದರೆ ಕೂಗುವೆ...
ಅಪ್ಪನ ಅಂಗಿಯ ಎಳೆಯುವೆ...

ನಿನ್ನನು ಕಂಡರೆ ನನಗಿಷ್ಟ...
ಓಡದಿರು ನಿನ್ನ ಹಿಡಿಯುವುದೇ ಕಷ್ಟ...

                                               ವಸಂತ್ 

ಚಿತ್ರಕೃಪೆ.. http://lh6.ggpht.com

10 comments:

ಸೀತಾರಾಮ. ಕೆ. / SITARAM.K said...

ಚೆಂದದ ಕವನ. ಓಡದಿರು -ಹೋಡದಿರು ಆಗಿದೆ.

ಪ್ರಗತಿ ಹೆಗಡೆ said...

ಸುಂದರ ಚಿತ್ರಕ್ಕೆ ಮುದ್ದಾದ ಕವನ... ಸೀತಾರಾಮ್ ಸರ್ ಹೇಳಿದಹಾಗೆ ಅದೊಂದು ತಿದ್ದುಪಡಿ ಆಗಬೇಕಾಗಿದೆ...

Dr.D.T.krishna Murthy. said...

ವಸಂತ್;ಮಕ್ಕಳ ಕವಿತೆ ಬರೆಯುತ್ತಿರುವವರು ತುಂಬಾ ಕಮ್ಮಿ.ಕವಿತೆ ತುಂಬಾ ಚೆನ್ನಾಗಿದೆ.ಇನ್ನಷ್ಟು ಮಕ್ಕಳ ಕವಿತೆ ಹೊರಬರಲಿ.

PARAANJAPE K.N. said...

ಚೆನ್ನಾಗಿದೆ ವಸಂತ್, ಸೀತಾರಾಮರು ಗುರುತಿಸಿ ಹೇಳಿದ ಲೋಪ ಸರಿಪಡಿಸಿ. ಇನ್ನಷ್ಟು ಬರೆಯಿರಿ, ನಿಮಗೆ ಬರೆಯುವ ಶಕ್ತಿ ಇದೆ.

ವಸಂತ್ said...

ಧನ್ಯವಾದಗಳು ಸೀತಾರಾಮ ಸರ್. ಮತ್ತು ನೀವು ತಿಳಿಸಿದ ತಪ್ಪನ್ನು ಸರಿಪಡಿಸಿದ್ದೇನೆ.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಗತಿ ಹೆಗಡೆರವರೆ ಸೀತಾರಾಮ್ ಸರ್ ಹೇಳಿದ ತಪ್ಪನ್ನು ಸರಿಪಡಿಸಿದ್ದೇನೆ.

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಮೂರ್ತಿ ಸರ್. ಮತ್ತು ನೀವು ತಿಳಿಸಿದಂತೆ ಮಕ್ಕಳ ಕವಿತೆಗಳನ್ನು ಹೆಚ್ಚಾಗಿ ಬರೆಯಲು ಪ್ರಯತ್ನಿಸುತ್ತೇನೆ..

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು PARAANJAPE ಸರ್. ನಿಮ್ಮೆಲ್ಲೆರ ಪ್ರೋತ್ಸಾಹ ನನ್ನಿಂದ ಮತ್ತಷ್ಟು ಕವನಗಳನ್ನು ಬರೆಯಲು ಪ್ರೇರೇಪಿಸುತ್ತಿದೆ. ನಿಮ್ಮಯ ಪ್ರೋತ್ಸಾಹವೆ ನನ್ನ ಮುಂದಿನ ಹೆಜ್ಜೆಗೆ ಮೆಟ್ಟಿಲು. ಮತ್ತಷ್ಟು ಕವನಗಳನ್ನು ಬರೆಯಲು ಪ್ರಯತ್ನಿಸುತ್ತೇನೆ. ನಿಮಗನಿಸಿದ ತಪ್ಪುಗಳೇನಾದರೂ ಇದ್ದಲ್ಲಿ ಕಂಡಿತ ತಿಳಿಸಿ ಸರಿಪಡಿಸಿಕೊಳ್ಳುತ್ತೇನೆ ಧನ್ಯವಾದಗಳೊಂದಿಗೆ.

ವಸಂತ್

sunaath said...

ವಸಂತ,
ತುಂಬ ಮುದ್ದಾದ ಶಿಶುಗೀತೆ. ಜೊತೆಗಿನ ಚಿತ್ರವೂ ಚೆನ್ನಾಗಿದೆ. ಬಹುಶಃ ನೀವು ಮಾರ್ಜಾಲಪ್ರಿಯರೆ?

ವಸಂತ್ said...

ಹೌದು ಸರ್ ನನಗೆ ಬೆಕ್ಕುಗಳೆಂದರೆ ತುಂಬಾ ಇಷ್ಟ. ನಮ್ಮ ಮನೆಯಲ್ಲೂ ಒಂದು ಬೆಕ್ಕಿನ ಮರಿಯಿದೆ ಅದರ ತುಂಟಾಟಿಕೆ ಎಲ್ಲಿಗಾದರು ಹೋದರೆ ಜೋತೆಯಲ್ಲಿಯೇ ಬಂದುಬಿಡುತ್ತದೆ. ನಾನು ಕೇಲಸಕ್ಕೇ ಹೋಗಿ ಮನೆಗೆ ಬಂದಾಗ ಅದಕ್ಕೇನಾದರೂ ತೆಗೆದುಕೊಂಡು ಹೋಗಬೇಕು ಇಲ್ಲದಿದ್ದಲ್ಲಿ ಕೂಗಿ ರಂಪ ಮಾಡಿಬಿಡುತ್ತದೆ. ಅದರ ಶೇಷ್ಠೆಗಳನ್ನು ಪುಟಗಟ್ಟಲೆ ಬರೆಯಬೇಕು...

ಪ್ರತಿಕ್ರಿಯೆಗೆ ಧನ್ಯವಾದಗಳು ಸುನಾತ್ ಸರ್..