Saturday, December 25, 2010

ಚಿತ್ರ ಚಿತ್ತಾರ ...4.

ಇದೊಂದು ಕಾಡು ಜಾತಿಯ ಹೂ ನಂದಿಬೆಟ್ಟಕ್ಕೆ ಹೋದ ಸಂದರ್ಭದಲ್ಲಿ ನನ್ನ ಕ್ಯಾಮರ ಕಣ್ಣಿಗೆ ಸೆರೆಸಿಕ್ಕಿ ದೃಶ್ಯವಿದು.

ಮೋಡದ ಮೇಲೊಂದು ಮನೆಯ ಕಟ್ಟಿ …!.


ಮೋಡದ ಮೇಲೊಂದು ಮನೆಯ ಕಟ್ಟಿ
ಸದ್ದು ಗದ್ದಲಗಳಿಂದ ದೂರವಿರಲು ಭಯಸುತ್ತೇನೆ.
ಹಾರುವ ವಿಮಾನಗಳು ನನ್ನ ಆಸೆಗೆ ತಡೆಯೊಡ್ಡಿ
ನನ್ನ ನೆಮ್ಮದಿಯನ್ನು ಹಾಳುಗೆಡವುತ್ತವೆ...

ಆಳ ಸಮುದ್ರದಲ್ಲೊಂದು ಮನೆಯ ಕಟ್ಟಿ
ಮುತ್ತು ಅವಳಗಳನ್ನು ಬೆಳೆಯಲು ನಿರ್ಧರಿಸುತ್ತೇನೆ
ಜಲಾಂತರ್ಗಾಮಿ ಹಡಗುಗಳು 
ನನ್ನ ಮನೆಯನ್ನು ನೆಲೆ ಸಮಗೊಳಿಸಿ
ನಾಮಾವಶೇಷಗಳನ್ನೂ ಉಳಿಸದಂತೆ ಮರೆಯಾಗಿಸುತ್ತವೆ...

ವಿಶಾಲ ಕಣಿವೆಯಲ್ಲೊಂದು ಮನೆಯ ಕಟ್ಟಿ
ಮೌನವಾಗಿರಲು ತವಕಿಸುತ್ತೇನೆ.
ಸುರಿವ ಬಾಂಬು ಮದ್ದು ಗುಂಡುಗಳ ದಾಳಿಗೆ
ನನ್ನ ಮನೆ ಸುಟ್ಟು ಇದ್ದಿಲಾಗುತ್ತದೆ...

ದಟ್ಟಡವಿಯ ಮಧ್ಯದಲ್ಲೊಂದು ಮನೆಯಕಟ್ಟಿ
ಮೂಕ ಪ್ರಾಣಿಗಳ ಸಂರಕ್ಷಣೆಯನ್ನು ಕೈಗೊಳ್ಳುತ್ತೇನೆ
ನರರೂಪ ರಾಕ್ಷಸರ ಕೆಂಗಣ್ಣಿಗೆ ಗುರಿಯಾಗಿ
ಪ್ರಾಣಿಯಂತೆ ನನ್ನನ್ನೇ ಅಟ್ಟಾಡಿಸಿ ಕೊಲ್ಲಲೆತ್ನಿಸುತ್ತಾರೆ...

ಕಾಣದ ನೆಮ್ಮದಿಯನ್ನು ಹುಡುಕುತ್ತ.
ದುಃಖ ಬಯಲು ಸೀಮೆಗಳಲ್ಲಿ ಅಲೆಯುತ್ತ.
ನಾ ಕಟ್ಟಬೇಕಿದ್ದ ಮನೆ ಕನಸಂತೆಯೇ ಉಳಿದಾಗ
ಈ ಕ್ಷುದ್ರಲೋಕದ ನೆನಪನ್ನೇ ತೊರೆದು 
ಮೌನವಾಗಿ ಮರೆಯಾಗುತ್ತೇನೆ...

                                                                                     ವಸಂತ್

Wednesday, December 15, 2010

ನಾ ಕಂಡ ಜಗತ್ತು…!.


ನಾ ಕಂಡ ಜಗತ್ತು ಪರಿಪೂರ್ಣದಂತಿದ್ದರೂ
ಅಲ್ಲಿಯೂ ನೋವುಗಳಿವೆ, ನಲಿವುಗಳಿವೆ,
ವಿಷಾದಗಳಿವೆ ವಿಮರ್ಶೆಗಳಿವೆ ಹಾಗೇಯೆ,
ಮತ್ತೊಬ್ಬರನ್ನು ಅನುಸರಿಸುವಂತ ಮಾತುಗಳು ಇವೆ...

ಯಾರು ಸತ್ತರೆ ನಮಗೇನೆಂದು
ಬಾಗಿಲು ಮುಚ್ಚಿ ಮಲಗುವಂತ ಮನಸ್ಸುಗಳಿವೆ..
ದೂರಕ್ಕೆ ಕಾಣುವ ಬೆಟ್ಟ ಹಿಮಾಲಯದಂತ್ತಿದ್ದರೂ
ಹಿಮಾಲಯವಿರುವುದು ಕಾಶಿಯಲ್ಲಲ್ಲವೆ 
ಎನ್ನುವಂತ ಮುಗ್ಧ ಕನಸುಗಳು ಇವೆ...

ತುತ್ತು ಕಾಣದ ಹೊಟ್ಟೆಗಳು ಕಂಡ ಕಂಡಲ್ಲಿ
ಕೈ ಮುಗಿದು ಬೇಡುವ ಸಂಪ್ರಾದಾಯವು ಇದೆ
ಬೀದಿ ಬೀದಿಗಳಲ್ಲಿ ಸೌಂಧರ್ಯವನ್ನೇ ಪಣಕ್ಕಿಟ್ಟು
ಕಂಡವರಿಗೆ ಕೈ ಬೀಸಿ ಕರೆಯುವಂತ ಚಾಳಿಯು ಇದೆ...

ನೆಲಕ್ಕೆ ಕಾಲಿಡಲು ಭಯ ಪಟ್ಟು ನಡುಗುವಂತ
ಸಿರಿವಂತರ ಸೊಕ್ಕಿನ ಬಯಲು ಸೀಮೆಗಳಿವೆ.
ಸುಡುವ ಬಿಸಿಲಿಗೆ ಒಣಗುತ್ತ ಚಳಿಯಲ್ಲಿ ನಡುಗುತ್ತ
ಬಲವಿಲ್ಲದ ದೇಹದೊಂದಿಗೆ ಹಗಳಿರುಳು
ದುಡಿಯುವಂತ ಅತಾಷ ಭಾವಗಳು ಇವೆ...

ಏನಿಲ್ಲಾ ಹೇಳಿ ಈ ಜಗತ್ತಿನಲ್ಲಿ
ಕಾಮ, ಕ್ರೋದ, ಮೋಹ, ಲೋಭ, ಮಧ,
ಮಾತ್ಸರ ಮಯದಿಂದ ಕೂಡಿರುವ
ಈ ನರಕಮಯ, ಸ್ವರ್ಗಮಯ,
ಮಧುರಮಯ ಲೋಕ ಇದ್ದಂತೆ ಅಲ್ಲವೆ ?....

                                               ವಸಂತ್ 
ಚಿತ್ರಕೃಪೆ. http://mohebban.burjalsaheb.com

Monday, December 13, 2010

ಚಿತ್ರ ಚಿತ್ತಾರ ...3.

ಸಣ್ಣ ಕೀಟಗಳ ಹಾರೈಕೆಯಲ್ಲಿ ಮಗ್ನವಾಗಿರುವ ಇರುವೆ..

Thursday, December 9, 2010

ಹೊಸ ದಿಗಂತದೆಡೆಗೆ ಪಯಣ...!.ಕಾಲವು ದೀಪದಂತೆ ಉರಿಯುತ್ತ
ಕತ್ತಲ ಬೆಳಕಿನ ರೂಪದಲ್ಲಿ
ತನ್ನ ಚಲನೆಯನ್ನು ಸೂಚಿಸುತ್ತದೆ..
ದಿನದಿಂದ ದಿನಕ್ಕೆ
ಹೊಸ ಹೊಸ ಬದಲಾವಣೆಗಳು
ಹೊಸ ಹೊಸ ಪರ್ವಗಳಾಗಿ
ಹೊಸ ದಿಗಂತದೆಡೆಗೆ ಹೆಜ್ಜೆಯನಿರಿಸಿ ಸಾಗುತ್ತದೆ...

ಮೌನವಾಗಿ ಸುರಿಯುವ ಮಳೆ
ರಣಚಂಡಿಯ ಅವತಾರಂದತಾಗಿ
ಎಲ್ಲವನ್ನು ತನ್ನೊಳಗೆ ಮುಳುಗಿಸಿಟ್ಟುಕೊಳ್ಳಬಹುದು...
ಒಮ್ಮೊಮ್ಮೆ ಹಿತವಾಗಿ ಅಪ್ಪಳಿಸುವ ಅಲೆಗಳು
ಸುನಾಮಿ ಅಲೆಯಂತ ಭೀಕರತೆಯನ್ನು ಸೃಷ್ಟಿಸಬಹುದು...
ಕಣ್ಣಿಗೆ ಕಾಣದ ಗಾಳಿಯು ಸಹ
ಚಂಡಮಾರುತದಂತಾಗಿ ಎಲ್ಲವನ್ನು ಒಡೆದುರುಳಿಸಿ
ಮಾರಣಹೋಮವನ್ನು ನಡೆಸಬಹುದು...
ಇದು ಸಹ ಹೊಸ ಹಾದಿಗೆ ಮುನ್ನುಡಿ ಬರೆದಂತೆ...

ಎಲ್ಲ ಕಾರ್ಯಗಳು ಬದಲಾವಣೆಗಳತ್ತ
ಸಾಗುತ್ತಲೇ ಇರಬೇಕು
ಇದು ಪ್ರಕೃತಿಯ ನಿಯಮ...
ಇಂದು ನಾವು ಮಂದೆ ನಮ್ಮನ್ನು ಮೀರಿಸುವಂತ
ಜೀವಿಗಳು ಸೃಷ್ಟಿಯಾಗಬಹುದು...

ಪ್ರತಿ ಕ್ಷಣವು ಸಹ ಹೊಸತನ್ನು ಬಯಸುತ್ತದೆ
ಪ್ರತಿ ಆಲೋಚನೆಯು ಹೊಸ ವಿಚಾರಗಳತ್ತ ಅಂಬಲಿಸುತ್ತದೆ
ಪ್ರತಿ ರಾತ್ರಿಯು ಹೊಸ ಉದಯವನ್ನು ಕಾಣುತ್ತದೆ
ಪ್ರತಿ ವಿಜಯವು ಹೊಸ ಕ್ರಾಂತಿಯತ್ತ ಸಾಗುತ್ತದೆ
ಬದಲಾವಣೆಯ ಹಾದಿಯಲಿ ವರ್ಷಗಳೇ ಕಳೆದು
ಹೊಸ ವರ್ಷದ ಸಂಭ್ರಮವನ್ನು ಸಹ ಆಚರಿಸಿಕೊಳ್ಳುತ್ತದೆ...

                                                                   ವಸಂತ್ 

ಚಿತ್ರಕೃಪೆ. http://www.acceleratingfuture.com

Monday, December 6, 2010

ಚಿತ್ರ ಬೇಟೆ ...2.

           ಮೊದ ಮೊದಲು ನಮ್ಮ ಹಳ್ಳಿಗಳ ಕಡೆ ಹೆಚ್ಚಾಗಿ ಕಂಡುಬರುತ್ತಿದ್ದ ಈ ಕೀಟಗಳ ಸಂಖ್ಯೆ. ಈಗ ಕ್ಷೀಣಿಸುವ ಹಂತಲ್ಲಿದೆ. ಕಾರಣ ಗೊತ್ತಾಗುತ್ತಿಲ್ಲ. ಆದರು ಇವುಗಳ ಸಂಖ್ಯೆ ತೀರಾ ಅಪರೂಪವಾಗುತ್ತಿದೆ...


Friday, December 3, 2010

ಚಿತ್ರ ಬೇಟೆ ...1.

         ಚಿತ್ರ ಬೇಟೆ. ಕೆಲವು ದಿನಗಳಿಂದ ಪರಿಸರ, ಸಮಾಜ, ಬದುಕು, ಬಾಷೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತ ಚಿತ್ರಗಳನ್ನು ಸೆರೆಯಿಡಿಯುವ ಕಾಯಕಕ್ಕೆ ಕೈ ಹಾಕಿದ್ದೇನೆ. 10 ಪುಟಗಳ ಅರ್ಥವನ್ನು ಕೇವಲ ಒಂದೇ ಚಿತ್ರದಲ್ಲಿ ಮೂಡಿಸಬಹುದಂತೆ. ಆ ಕಾರಣದಿಂದ ಚಿತ್ರ ಬೇಟೆಗೆ ಸಜ್ಜುಗೊಂಡಿದ್ದೇನೆ. ಹಳ್ಳಿಬದುಕು, ಪ್ರವಾಸಿ ತಾಣಗಳು, ಕಲೆ, ಸಾಹಿತ್ಯ, ದಾರ್ಮಿಕ ಆಚರಣೆಗಳು, ಸಭಾ ಸಮಾರಂಭಗಳು, ವೇಶಭೂಷಣಗಳು ಹೀಗೆ ನಾಡಿನ ಸೊಬಗನ್ನು ಬಿಂಬಿಸುವಂತ ಚಿತ್ರಗಳ ಬೇಟೆಯನ್ನು ಶುರು ಮಾಡಿದ್ದೇನೆ. ನಿಮ್ಮ ಪ್ರೋತ್ಸಾಹದೊಂದಿಗೆ ಅವುಗಳೆಲ್ಲವನ್ನು ಈ ಬ್ಲಾಗಿನ ಮುಖಾಂತರ ನಿಮ್ಮ ಮುಂದಿಡಲು ಬಯಸುತ್ತೇನೆ. ಧನ್ಯವಾದಗಳೊಂದಿಗೆ.
ನಮ್ಮ ಹಳ್ಳಿಯ ಕೆರೆಯ ಬಳಿ ಕ್ಯಾಮರ ಕಣ್ಣಿಗೆ ಬಿದ್ದ ಚಿತ್ರವಿದು .....

                                                                                                                          ವಸಂತ್