Thursday, December 9, 2010

ಹೊಸ ದಿಗಂತದೆಡೆಗೆ ಪಯಣ...!.



ಕಾಲವು ದೀಪದಂತೆ ಉರಿಯುತ್ತ
ಕತ್ತಲ ಬೆಳಕಿನ ರೂಪದಲ್ಲಿ
ತನ್ನ ಚಲನೆಯನ್ನು ಸೂಚಿಸುತ್ತದೆ..
ದಿನದಿಂದ ದಿನಕ್ಕೆ
ಹೊಸ ಹೊಸ ಬದಲಾವಣೆಗಳು
ಹೊಸ ಹೊಸ ಪರ್ವಗಳಾಗಿ
ಹೊಸ ದಿಗಂತದೆಡೆಗೆ ಹೆಜ್ಜೆಯನಿರಿಸಿ ಸಾಗುತ್ತದೆ...

ಮೌನವಾಗಿ ಸುರಿಯುವ ಮಳೆ
ರಣಚಂಡಿಯ ಅವತಾರಂದತಾಗಿ
ಎಲ್ಲವನ್ನು ತನ್ನೊಳಗೆ ಮುಳುಗಿಸಿಟ್ಟುಕೊಳ್ಳಬಹುದು...
ಒಮ್ಮೊಮ್ಮೆ ಹಿತವಾಗಿ ಅಪ್ಪಳಿಸುವ ಅಲೆಗಳು
ಸುನಾಮಿ ಅಲೆಯಂತ ಭೀಕರತೆಯನ್ನು ಸೃಷ್ಟಿಸಬಹುದು...
ಕಣ್ಣಿಗೆ ಕಾಣದ ಗಾಳಿಯು ಸಹ
ಚಂಡಮಾರುತದಂತಾಗಿ ಎಲ್ಲವನ್ನು ಒಡೆದುರುಳಿಸಿ
ಮಾರಣಹೋಮವನ್ನು ನಡೆಸಬಹುದು...
ಇದು ಸಹ ಹೊಸ ಹಾದಿಗೆ ಮುನ್ನುಡಿ ಬರೆದಂತೆ...

ಎಲ್ಲ ಕಾರ್ಯಗಳು ಬದಲಾವಣೆಗಳತ್ತ
ಸಾಗುತ್ತಲೇ ಇರಬೇಕು
ಇದು ಪ್ರಕೃತಿಯ ನಿಯಮ...
ಇಂದು ನಾವು ಮಂದೆ ನಮ್ಮನ್ನು ಮೀರಿಸುವಂತ
ಜೀವಿಗಳು ಸೃಷ್ಟಿಯಾಗಬಹುದು...

ಪ್ರತಿ ಕ್ಷಣವು ಸಹ ಹೊಸತನ್ನು ಬಯಸುತ್ತದೆ
ಪ್ರತಿ ಆಲೋಚನೆಯು ಹೊಸ ವಿಚಾರಗಳತ್ತ ಅಂಬಲಿಸುತ್ತದೆ
ಪ್ರತಿ ರಾತ್ರಿಯು ಹೊಸ ಉದಯವನ್ನು ಕಾಣುತ್ತದೆ
ಪ್ರತಿ ವಿಜಯವು ಹೊಸ ಕ್ರಾಂತಿಯತ್ತ ಸಾಗುತ್ತದೆ
ಬದಲಾವಣೆಯ ಹಾದಿಯಲಿ ವರ್ಷಗಳೇ ಕಳೆದು
ಹೊಸ ವರ್ಷದ ಸಂಭ್ರಮವನ್ನು ಸಹ ಆಚರಿಸಿಕೊಳ್ಳುತ್ತದೆ...

                                                                   ವಸಂತ್ 

ಚಿತ್ರಕೃಪೆ. http://www.acceleratingfuture.com

10 comments:

sunaath said...

ನಿಜ, ಪ್ರಳಯದಲ್ಲಿಯೇ ಹೊಸ ಸೃಷ್ಟಿಯ ಬೀಜವಿರುತ್ತದೆ.

ಚುಕ್ಕಿಚಿತ್ತಾರ said...

channaagide..bhava..

ಹಳ್ಳಿ ಹುಡುಗ ತರುಣ್ said...

chenagide vasant..


ellavu ondalla ondu badalavanige holaguttale irutte...

bhava arta chenagide..

Venkatakrishna.K.K. said...

ನಿಮ್ಮ ಆಶಯ ಮಾರ್ಮಿಕವಾಗಿದೆ..

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಸುನಾತ್ ಸರ್...

ವಸಂತ್ said...

ತುಂಬಾ ಧನ್ಯವಾದಗಳು ಮೇಡಂ ನಿಮ್ಮ ಪ್ರತಿಕ್ರಿಯೆಗೆ....

ವಸಂತ್ said...

ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ತರುಣ್ ರವರೆ. ಸದಾ ಬದಲಾವಣೆಗಳತ್ತ ನಮ್ಮ ಚಿತ್ತವೂ ಸಹ...

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು Venkatakrishna ಸರ್...

ಪ್ರವರ ಕೆ ವಿ said...

ondu kshna bhaya aytu... ole hatti uridode nilabahudu... aadare dhare hatti uridare nilabahude... nenapaagittu...

ವಸಂತ್ said...

ತುಂಬಾ ಧನ್ಯವಾದಗಳು ಪ್ರವರರವರೆ ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆಗೆ ವಂದನೆಗಳು...