Wednesday, December 15, 2010

ನಾ ಕಂಡ ಜಗತ್ತು…!.


ನಾ ಕಂಡ ಜಗತ್ತು ಪರಿಪೂರ್ಣದಂತಿದ್ದರೂ
ಅಲ್ಲಿಯೂ ನೋವುಗಳಿವೆ, ನಲಿವುಗಳಿವೆ,
ವಿಷಾದಗಳಿವೆ ವಿಮರ್ಶೆಗಳಿವೆ ಹಾಗೇಯೆ,
ಮತ್ತೊಬ್ಬರನ್ನು ಅನುಸರಿಸುವಂತ ಮಾತುಗಳು ಇವೆ...

ಯಾರು ಸತ್ತರೆ ನಮಗೇನೆಂದು
ಬಾಗಿಲು ಮುಚ್ಚಿ ಮಲಗುವಂತ ಮನಸ್ಸುಗಳಿವೆ..
ದೂರಕ್ಕೆ ಕಾಣುವ ಬೆಟ್ಟ ಹಿಮಾಲಯದಂತ್ತಿದ್ದರೂ
ಹಿಮಾಲಯವಿರುವುದು ಕಾಶಿಯಲ್ಲಲ್ಲವೆ 
ಎನ್ನುವಂತ ಮುಗ್ಧ ಕನಸುಗಳು ಇವೆ...

ತುತ್ತು ಕಾಣದ ಹೊಟ್ಟೆಗಳು ಕಂಡ ಕಂಡಲ್ಲಿ
ಕೈ ಮುಗಿದು ಬೇಡುವ ಸಂಪ್ರಾದಾಯವು ಇದೆ
ಬೀದಿ ಬೀದಿಗಳಲ್ಲಿ ಸೌಂಧರ್ಯವನ್ನೇ ಪಣಕ್ಕಿಟ್ಟು
ಕಂಡವರಿಗೆ ಕೈ ಬೀಸಿ ಕರೆಯುವಂತ ಚಾಳಿಯು ಇದೆ...

ನೆಲಕ್ಕೆ ಕಾಲಿಡಲು ಭಯ ಪಟ್ಟು ನಡುಗುವಂತ
ಸಿರಿವಂತರ ಸೊಕ್ಕಿನ ಬಯಲು ಸೀಮೆಗಳಿವೆ.
ಸುಡುವ ಬಿಸಿಲಿಗೆ ಒಣಗುತ್ತ ಚಳಿಯಲ್ಲಿ ನಡುಗುತ್ತ
ಬಲವಿಲ್ಲದ ದೇಹದೊಂದಿಗೆ ಹಗಳಿರುಳು
ದುಡಿಯುವಂತ ಅತಾಷ ಭಾವಗಳು ಇವೆ...

ಏನಿಲ್ಲಾ ಹೇಳಿ ಈ ಜಗತ್ತಿನಲ್ಲಿ
ಕಾಮ, ಕ್ರೋದ, ಮೋಹ, ಲೋಭ, ಮಧ,
ಮಾತ್ಸರ ಮಯದಿಂದ ಕೂಡಿರುವ
ಈ ನರಕಮಯ, ಸ್ವರ್ಗಮಯ,
ಮಧುರಮಯ ಲೋಕ ಇದ್ದಂತೆ ಅಲ್ಲವೆ ?....

                                               ವಸಂತ್ 
ಚಿತ್ರಕೃಪೆ. http://mohebban.burjalsaheb.com

10 comments:

ಸಾಗರದಾಚೆಯ ಇಂಚರ said...

ಯಾರು ಸತ್ತರೆ ನಮಗೇನೆಂದು
ಬಾಗಿಲು ಮುಚ್ಚಿ ಮಲಗುವಂತ ಮನಸ್ಸುಗಳಿವೆ..
ದೂರಕ್ಕೆ ಕಾಣುವ ಬೆಟ್ಟ ಹಿಮಾಲಯದಂತ್ತಿದ್ದರೂ
ಹಿಮಾಲಯವಿರುವುದು ಕಾಶಿಯಲ್ಲಲ್ಲವೆ
ಎನ್ನುವಂತ ಮುಗ್ಧ ಕನಸುಗಳು ಇವೆ..
entha saalugalivu
tumbaa ishtaa aytu

ವಸಂತ್ said...

ತುಂಬ ತುಂಬ ಧನ್ಯವಾದಗಳು ಗುರುಮೂರ್ತಿ ಸರ್ ನಿಮ್ಮ ಅನಿಸಿಕೆಗೆ...

ಮನದಾಳದಿಂದ............ said...

ವಸಂತ್, ತೂಕತುಂಬಿದ ಸಾಲುಗಳು....
ಅರ್ಥಗರ್ಭಿತವಾಗಿದೆ ಕವನ....
ಚಂದದ ಕವನಕ್ಕೆ ಧನ್ಯವಾದಗಳು.

ವಸಂತ್ said...

ಧನ್ಯವಾದಗಳು ಪ್ರವೀಣ್ ಸರ್ ನಿಮ್ಮ ಪ್ರತಿಕ್ರಿಯೆಗೆ.....

sunaath said...

ವಸಂತ,
ಮನಮಿಡಿಯುವ ಕವನ. ಅಭಿನಂದನೆಗಳು.

Venkatakrishna.K.K. said...

ಚೆಂದದ ಕವನ..

ವಸಂತ್ said...

ಧನ್ಯವಾದಗಳು ಸರ್ ನಮ್ಮ ಜಗತ್ತಿನ ಪರಿಸ್ಥಿತಿ ಹೀಗೆಯೇ ಇದೆ....

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ವೆಂಕಟಕೃಷ್ಣ ಸರ್....

ವಾಣಿಶ್ರೀ ಭಟ್ said...

ನಿಮ್ಮ ಕವನ ಓದಿ " ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮುಳ್ಳುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆವು ನಮ್ಮೊಳಗೇ" ಎಂದ G.S.ಶಿವರುದ್ರಪ್ಪ ಅವರ ಸಾಲುಗಳು ನೆನಪಾದವು..
nanna blogigomme banni........

ವಸಂತ್ said...

ಧನ್ಯವಾದಗಳು ವಾಣಿಶ್ರೀ ಮೇಡಂ ನಿಮ್ಮ ಪ್ರತಿಕ್ರಿಯೆಗೆ...