Monday, January 31, 2011

ನಾ ಕಟ್ಟ ಬೇಕಿರುವ ಗೂಡು...!.

ನಾ ಕಟ್ಟಬೇಕಿರುವ ಗೂಡಿಗೆ
ಅಡಿಪಾಯದ ಅವಶ್ಯಕತೆಯಿಲ್ಲ.
ಉಕ್ಕಿನ ಸರಳುಗಳ ಜೋಡಿಸಬೇಕಿಲ್ಲ.
ಬೆಟ್ಟಗಳ ಬಗೆದು ಕಲ್ಲು ತರಬೇಕಿಲ್ಲ.
ಸಿಮೆಂಟು ಕಾಂಕ್ರೇಟಿನಿಂದ ಶೃಂಗರಿಸುವ ಅಗತ್ಯವೂ ಇಲ್ಲ..

ನೆಮ್ಮದಿಯ ಬಯಲಲ್ಲಿ
ಬರವಸೆಗಳೆಂಬ ಮರಗಳನು ನೆಟ್ಟು.
ಉತ್ಸಾಹವೆಂಬ ಹೊದಿಕೆ ಹೊದಿಸಿ.
ಸದಾ ಸಂತಸದಿಂದ ಇರುವಂತ
ಸಣ್ಣ ಗುಡಿಸಲಾದರೂ ಸಾಕು.
ಭೂಮಿಗೆ ಸ್ವರ್ಗವನ್ನೇ ತಂದಂತೆ ಸಂಭ್ರಮಿಸುತ್ತೇನೆ..
                                                              
                                                        ವಸಂತ್
ಚಿತ್ರಕೃಪೆ. www.walktoon.in

Saturday, January 29, 2011

ಗೆಳತಿ..,


ಹೀಗೆ ನನ್ನನ್ನು ಹಿಯ್ಯಾಳಿಸದಿರು ಗೆಳತಿ
ಸುಳ್ಳನ್ನು ಬಳಸಿ ನನ್ನಿಂದ
ಮಹಲ್ಲನ್ನು ಕಟ್ಟಲು ಬರುವುದಿಲ್ಲ.
ಚಂದ್ರನಲ್ಲಿಗೆ ನಿನ್ನನ್ನು
ಕೊಂಡೊಯ್ಯಲು ಸಾಧ್ಯವಿಲ್ಲ
ಆ ರೀತಿಯ ಸುಳ್ಳಿನ ಬದುಕು ನನಗೂ ಇಷ್ಟವಿಲ್ಲ..

ಕತ್ತಲಾದರೆ ಬೆಳಕಾಗಲು ಬಯಸುತ್ತೇನೆ.
ನೋವಿನಲ್ಲಿ ನಿನ್ನನ್ನು ಸಂತೈಸಲು ತವಕಿಸುತ್ತೇನೆ.
ಸದಾ ನಿನ್ನ ಜೊತೆಯಲ್ಲೇ ನೆರಳಾಗಿ ನಿಲ್ಲುತ್ತೇನೆ.

ಎಂದೂ ನಾ
ನಿನ್ನಲ್ಲಿ ವಿಶ್ವಾಸವನ್ನು ಕಳೆದುಕೊಂಡಿಲ್ಲ..!.
ಬೇಕಾದರೆ ??.
ನನ್ನ ಹೃದಯವನ್ನೊಮ್ಮೆ ಬಗೆದು ನೋಡು.
ಅದು ಸದಾ ನಿನ್ನ ನಾಮಾಂಕಿತವನ್ನೆ ಜಪಿಸುತ್ತಿರುತ್ತದೆ….
                                                                       ವಸಂತ್ 

ಚಿತ್ರಕೃಪೆ,. ಅಂತರ್ಜಾಲ..

Saturday, January 22, 2011

ಜೀವನವೆಂಬ ಮೂರು ಅಕ್ಷರಗಳು....!.ಜೀವನವೆಂಬ ಮೂರು ಅಕ್ಷರಗಳನ್ನು ಹಿಡಿದು
ಅರ್ಥಕಾಣದೆ ಉತ್ತರಕ್ಕಾಗಿ ಹುಡುಕುತ್ತೇನೆ.
ಗುಡಿ ಗೋಪುರಗಳನ್ನು ಸುತ್ತುತ್ತ
ಗಿರಿ ಶಿಕರಗಳನ್ನೂ ಅಲೆಯುತ್ತೇನೆ,
ಯಾರ ಬಳಿಯು ಉತ್ತರ ದೊರಕದಿದ್ದಾಗ
ಎಲ್ಲರೂ ನನ್ನಂತೆಯೆ ಯೋಚಿಸಬಹುದೆಂಬ ಪ್ರಶ್ನೆ 
ನನ್ನ ಮನದಲ್ಲಿ ಮೂಡುತ್ತದೆ..

ದಿನವಿಡೀ ಪುರಸೊತ್ತಿಲ್ಲದ ಕೆಲಸಗಳು,
ಅರ್ಥವಿಲ್ಲದ ಪ್ರಶ್ನೆಗಳು,
ತಲೆ ತಿನ್ನುವ ಆಲೋಚನೆಗಳು,
ಯಾವುದಾದರೊಂದು ಗವಿಯೊಳಗೆ ಕುಳಿತ
ಸನ್ಯಾಸಿಯನ್ನಾದರು ಕೇಳಿತಿಳಿಯುವ ಎಂದಾಗ.

ನನ್ನ ಮನಸ್ಸೊಮ್ಮೆ ದಿಗಿಲುಗೊಂಡು
ಕಾಮಕ್ಕೆ ಮಿಗಿಲಾದವರು,
ಕ್ರೋದವನು ಕಡೆಗಣಿಸಿದವರು,
ಮೋಹವನ್ನು ಮೆಟ್ಟಿ ನಿಂತವರು,
ಲೋಭಕ್ಕೆ ಲಾಬಿಯಾಗದವರು,
ಮಧವನ್ನು ಮದಿಸಿನಡೆದವರು,
ಮತ್ಸರವನ್ನು ಮರತು ಬಿಟ್ಟವರು ಸನ್ಯಾಸಿಗಳಲ್ಲವೆ ?.

ಎಲ್ಲಿದ್ದಾರೆ ಅಂಥ ಪುರುಷರು ಎಂದುಕೊಂಡಾಗ
ಮತಿಹೀನ ಕೃತ್ಯಗಳು ಕಣ್ಣೆದುರು ಕುಣಿದಾಡಿ
ಯಾವುದು ಬೇಡವೆನಿಸಿ ಸುಮ್ಮನಾಗುತ್ತೇನೆ..

ಮತ್ತೆ ಯಾರಲ್ಲಿ ನನ್ನ ಪ್ರಶ್ನೆಯನ್ನು ಕೇಳಲಿ ?
ಸ್ಮಶಾನಗಳಲ್ಲಿ ಕುಳಿತು ಯೋಚಿಸುತ್ತೇನೆ.
ಗಾಳಿಯೊಂದಿಗೆ ಮಾತನಾಡಲು ಪ್ರಯತ್ನಿಸುತ್ತೇನೆ.
ಬೆಳಕಿನೊಂದಿಗೆ ಜಗಳವನ್ನಾಡುತ್ತ ನಿಲ್ಲುತ್ತೇನೆ...

ಕೆಲವರೆನ್ನುತ್ತಾರೆ ಇವನಿಗೆ ಹುಚ್ಚು ಹಿಡಿದಿರಬೇಕು
ಹಿಂದಿನ ಜನ್ಮದ ಪಾಪವಿದ್ದಿರಬೇಕು
ಕುಡಿದ ಅಮಲು ಇಳಿದಂತೆ ಕಾಣುತ್ತಿಲ್ಲ. 
ಅರಿತ ಕೆಲವರು ಮಾತ್ರ
ಇವನ ಜೀವನವೇ ಪುಣ್ಯಎಂದು ಸಾಗುತ್ತಾರೆ.

ಏನೂ ಅರ್ಥವಾಗದ ನನಗೆ
ಉತ್ತರವಂತು ದೊರಕದಿದ್ದಾಗ
ಬೇಡದ ಕಾರಣಗಳಿಗಾಗಿ
ಸಲ್ಲದ ಅವಾಂತರಗಳನ್ನಾಕೆ ಸೃಷ್ಠಿಸಿಕೊಳ್ಳಬೇಕೆನ್ನುತ್ತ
ನಾಳಿನ ಯೋಚನೆಗಳನ್ನು ನೆನೆದು
ಮೌನವಾಗಿ ದಾರಿಯಿಡಿಯುತ್ತೇನೆ….


                                                                   ವಸಂತ್

Monday, January 3, 2011

ಈ ಲೋಕಕ್ಕೆ ಮತ್ತೊಮ್ಮೆ ಮುಕ್ತಿ ಸಿಗಬಹುದೆಂದು ಕಾಯುತ್ತೇನೆ....

ಆ ಮಣ್ಣ ಹಾದಿಯಲಂದು
ಗಾಂಧಿ ಸಾಗಿದ್ದರು
ಬುದ್ದ ನಡೆದೋಗಿದ್ದರು
ಬಾಬ, ಬಸವ, ಅಲ್ಲಮರೂ ನಡೆದು
ಸತ್ಯ ಅಹಿಂಸೆಯ ಗಿಡಗಳನ್ನೂ ನೆಟ್ಟಿದ್ದರು...

ಬರಡು ಬರಡಾದ ನೆಲದಲ್ಲಿ
ನೆಮ್ಮದಿಯ ನೆರಳು,
ಹಸಿರಂಬ ಉಸಿರು,
ಹಸಿವ ನೀಗಲು ಫಲವು,
ಸಿಗಲೆಂಬ ಯೋಚನೆಯಿದ್ದಿರಬೇಕು...


ಎಲ್ಲ ಮನಸ್ಸುಗಳು ಒಂದೆ,
ಎಲ್ಲ ಕನಸುಗಳು ಒಂದೆ,
ಎಲ್ಲರೂ ನಮ್ಮಂತೆಯೇ ನಡೆದೇ 
ಸಾಗುವರೆಂಬ ಭ್ರಾಂತಿಯಿದ್ದಿರಬೇಕು...

ಅವರು ಸಾಗಿದ ನೆಲದಲ್ಲಿ
ಭೂ ಹಗರಣಗಳ ಬಿರುಕುಗಳೊಡೆದುಬಿಟ್ಟವು
ಸ್ವಾರ್ಥದ ಚಿಲುಮೆಯೊಡೆದು
ಈ ಮರಗಳಿಂದ ನಮಗೇನು ಪ್ರಯೋಜನವೆಂದು
ಅವುಗಳನ್ನು ಕಡಿದು ಕುರ್ಚಿಗಳನ್ನಾಗಿಸಿಕೊಂಡರು
ಇವುಗಳೆಲ್ಲವನ್ನು ಮುಚ್ಚಿಕೊಳ್ಳಲು
ಕಪ್ಪು ಟಾರನ್ನು ಬಳೆದು ಸುಮ್ಮನಾದರು...

ಸತ್ಯ ಅಹಿಂಸೆಯನ್ನು
ಅಕ್ಟೋಬರ್ 2 ನೇ ತಾರೀಕು
ಏಪ್ರೆಲ್ 14 ನೇ ತಾರೀಕು
ಮೇ 5 ನೇ ತಾರೀಕಿನಂತೆ
ಅಲವು ದಿನಗಳ ದಿನದರ್ಶಿಕೆಯಾಗಿ ತೂಗು ಹಾಕಿದರು...

ತತ್ವ ಸಿದ್ದಾಂತಗಳನು ತರಗೆಲೆಗಳಂತೆ ಗುಡಿಸಿ
ಜಾತಿ ಧರ್ಮದ ಭಾವನೆಗಳ ಬೆಳೆಸಿ
ಮನುಜ ನಿನಗೆ ನೀನೇ ಶತ್ರುವೆಂದೇಳಿ
ರಾಜಕೀಯ ದಾಳಗಳನ್ನಾಗಿ ಮಾಡಿಬಿಟ್ಟರು...

ಅವರು ಸಾಗಿದ ನೆಲವು ಒಂದಿಂಚೂ ಕಾಣುತ್ತಿಲ್ಲ
ಅವರು ಬೆಳೆಸಿದ ಮರಗಳ ಗುರುತುಗಳೇ ಸಿಗುತ್ತಿಲ್ಲ
ರಾಮ ರಾಜ್ಯದ ಕನಸು ರಾವಣನ ರಾಜ್ಯವಾಯಿತು
ಸುಲುಗೆ ವಂಚನೆಗಳಿಗೆ ತಡೆಯಿಲ್ಲದಂತಾಯಿತು...

ಕಾಯುತ್ತೇನೆ ಅವರು ಮತ್ತೆ ಬರಬಹುದೆಂದು
ಅವರ ನಡೆದ ನೆಲದಲ್ಲಿ ಮತ್ತೆ ಚಿಗುರೊಡೆಯಬಹುದೆಂದು
ಈ ಲೋಕಕ್ಕೆ ಮತ್ತೊಮ್ಮೆ ಮುಕ್ತಿ ಸಿಗಬಹುದೆಂದು....

                                                         ವಸಂತ್
 ಚಿತ್ರಕೃಪೆ. http://www.gandhiserve.org

ಕಲ್ಲು ಶಿಲ್ಪ....!.


ಬಟ್ಟ ಬಯಲಲ್ಲೊಂದು ಬಂಡೆಯನು ಇಟ್ಟು
ಸುತ್ತಿಗೆ ಉಳಿಗಳನ್ನು ಬಳಸಿ ಶಿಲ್ಪವಾಗಿಸುತ್ತೇನೆ
ನೋಡಲು ರಂಬೆಯಂತೆ ಕಂಡರೂ
ಜೀವ ಕೊಡುವಲ್ಲಿ ನಾ ಸೋಲುತ್ತೇನೆ....

ಕಾಶ್ಮೀರವನ್ನೇ ಮಾರಿಯಾದರೂ ಸರಿ
ಕನ್ಯಾಕುಮಾರಿಯನ್ನೇ ಅಡಕಿಟ್ಟರು ಸರಿ
ನನ್ನ ಗೊಂಬೆಗೆ ನಾ
ಜೀವ ತುಂಬಲೆತ್ನಿಸುತ್ತೇನೆ..
ಬಾಯ್ತೆರೆದು ಮಾತಾಡುವ ತನಕ
ಅನ್ನನೀರುಗಳ ತೊರೆದು ಕಾಯುತ್ತೇನೆ..

ನಾ ದೇವ ಮಾನವನಾಗಿಲ್ಲ
ಸತ್ತ ವಸ್ತುಗಳಿಗೆ ಜೀವವನು ತುಂಬಲು
ನನ್ನೋಳಗೂ ಅಡಗಿರುವುದು ಮೂಳೆ ಮಾಂಸಗಳೆ
ನನ್ನ ಬಯಕೆಯು ನೆರವೆರುತ್ತದೋ ಇಲ್ಲವೋ ?.

ಕಲ್ಲು ಮಾತನಾಡುವ ಕಾಲ ಕಲಿಕಾಲದಲ್ಲಲ್ಲ
ನಮಗೂ ಅರಿವಿದ ದೇವಯುಗದಲ್ಲಿ
ನಿನ್ನ ಜೀವವೇ ತೋರೆದೋದರು
ಶಿಲೆಯು ಶಿಲೆಯಂತೆಯೆ ನಿಲ್ಲುವುದು ಏಲೆ ಮನವೆ....
ವಾಸ್ತವವನ್ನರಿತು ನಿನ್ನ ಮೂಡ ಬುದ್ದಿಯಿಂದೊರಗೆ ಬಾ....

                                                             ವಸಂತ್ 

ಚಿತ್ರಕೃಪೆ.. http://www.istockphoto.com