Saturday, January 22, 2011

ಜೀವನವೆಂಬ ಮೂರು ಅಕ್ಷರಗಳು....!.



ಜೀವನವೆಂಬ ಮೂರು ಅಕ್ಷರಗಳನ್ನು ಹಿಡಿದು
ಅರ್ಥಕಾಣದೆ ಉತ್ತರಕ್ಕಾಗಿ ಹುಡುಕುತ್ತೇನೆ.
ಗುಡಿ ಗೋಪುರಗಳನ್ನು ಸುತ್ತುತ್ತ
ಗಿರಿ ಶಿಕರಗಳನ್ನೂ ಅಲೆಯುತ್ತೇನೆ,
ಯಾರ ಬಳಿಯು ಉತ್ತರ ದೊರಕದಿದ್ದಾಗ
ಎಲ್ಲರೂ ನನ್ನಂತೆಯೆ ಯೋಚಿಸಬಹುದೆಂಬ ಪ್ರಶ್ನೆ 
ನನ್ನ ಮನದಲ್ಲಿ ಮೂಡುತ್ತದೆ..

ದಿನವಿಡೀ ಪುರಸೊತ್ತಿಲ್ಲದ ಕೆಲಸಗಳು,
ಅರ್ಥವಿಲ್ಲದ ಪ್ರಶ್ನೆಗಳು,
ತಲೆ ತಿನ್ನುವ ಆಲೋಚನೆಗಳು,
ಯಾವುದಾದರೊಂದು ಗವಿಯೊಳಗೆ ಕುಳಿತ
ಸನ್ಯಾಸಿಯನ್ನಾದರು ಕೇಳಿತಿಳಿಯುವ ಎಂದಾಗ.

ನನ್ನ ಮನಸ್ಸೊಮ್ಮೆ ದಿಗಿಲುಗೊಂಡು
ಕಾಮಕ್ಕೆ ಮಿಗಿಲಾದವರು,
ಕ್ರೋದವನು ಕಡೆಗಣಿಸಿದವರು,
ಮೋಹವನ್ನು ಮೆಟ್ಟಿ ನಿಂತವರು,
ಲೋಭಕ್ಕೆ ಲಾಬಿಯಾಗದವರು,
ಮಧವನ್ನು ಮದಿಸಿನಡೆದವರು,
ಮತ್ಸರವನ್ನು ಮರತು ಬಿಟ್ಟವರು ಸನ್ಯಾಸಿಗಳಲ್ಲವೆ ?.

ಎಲ್ಲಿದ್ದಾರೆ ಅಂಥ ಪುರುಷರು ಎಂದುಕೊಂಡಾಗ
ಮತಿಹೀನ ಕೃತ್ಯಗಳು ಕಣ್ಣೆದುರು ಕುಣಿದಾಡಿ
ಯಾವುದು ಬೇಡವೆನಿಸಿ ಸುಮ್ಮನಾಗುತ್ತೇನೆ..

ಮತ್ತೆ ಯಾರಲ್ಲಿ ನನ್ನ ಪ್ರಶ್ನೆಯನ್ನು ಕೇಳಲಿ ?
ಸ್ಮಶಾನಗಳಲ್ಲಿ ಕುಳಿತು ಯೋಚಿಸುತ್ತೇನೆ.
ಗಾಳಿಯೊಂದಿಗೆ ಮಾತನಾಡಲು ಪ್ರಯತ್ನಿಸುತ್ತೇನೆ.
ಬೆಳಕಿನೊಂದಿಗೆ ಜಗಳವನ್ನಾಡುತ್ತ ನಿಲ್ಲುತ್ತೇನೆ...

ಕೆಲವರೆನ್ನುತ್ತಾರೆ ಇವನಿಗೆ ಹುಚ್ಚು ಹಿಡಿದಿರಬೇಕು
ಹಿಂದಿನ ಜನ್ಮದ ಪಾಪವಿದ್ದಿರಬೇಕು
ಕುಡಿದ ಅಮಲು ಇಳಿದಂತೆ ಕಾಣುತ್ತಿಲ್ಲ. 
ಅರಿತ ಕೆಲವರು ಮಾತ್ರ
ಇವನ ಜೀವನವೇ ಪುಣ್ಯಎಂದು ಸಾಗುತ್ತಾರೆ.

ಏನೂ ಅರ್ಥವಾಗದ ನನಗೆ
ಉತ್ತರವಂತು ದೊರಕದಿದ್ದಾಗ
ಬೇಡದ ಕಾರಣಗಳಿಗಾಗಿ
ಸಲ್ಲದ ಅವಾಂತರಗಳನ್ನಾಕೆ ಸೃಷ್ಠಿಸಿಕೊಳ್ಳಬೇಕೆನ್ನುತ್ತ
ನಾಳಿನ ಯೋಚನೆಗಳನ್ನು ನೆನೆದು
ಮೌನವಾಗಿ ದಾರಿಯಿಡಿಯುತ್ತೇನೆ….


                                                                   ವಸಂತ್

10 comments:

ದೀಪಸ್ಮಿತಾ said...

ಕವನ ತುಂಬಾ ಚೆನ್ನಾಗಿದೆ

ಹಳ್ಳಿ ಹುಡುಗ ತರುಣ್ said...

vasanth,

tumba chenagide...

danyavadagalu...

sunaath said...

ವಸಂತ,
ನೀವು ಹೇಳುವದು ಸರಿ.
"ನಿನ್ನೆ ನಿನ್ನೆಗೆ, ನಾಳೆ ನಾಳೆಗೆ
ಇರಲಿ ಈದಿನ ಇಂದಿಗೆ"
ಎಂದೆನ್ನುತ್ತ ಮುಂದೆ ಸಾಗಬೇಕು.

Pradeep Rao said...

ಕವನ ಚೆನ್ನಾಗಿದೆ.. ನನಗೂ ಕೆಲವೊಮ್ಮೆ ಇಂತ ಪ್ರಶ್ನೆಗಳು ಕಾಡುತ್ತವೆ.. ನಿಮಗೆ ಉತ್ತರ ದೊರೆತರೆ ನನಗೆ ತಿಳಿಸುವುದನ್ನು ಮರೆಯದಿರಿ.. :)

ವಿಚಲಿತ... said...

ಚೆನ್ನಾಗಿದೆ..

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ದೀಪಸ್ಮಿತಾ ಸರ್...

ವಸಂತ್ said...

ಧನ್ಯವಾದಗಳು ತರುಣ್ ರವರೆ......

ವಸಂತ್ said...

ಕಂಡಿತ ಸುನಾಥ್ ಸರ್ ನಿಮ್ಮ ಮಾತಿನಂತೆ ಸಾಗಬೇಕಿದೆ ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ...

ವಸಂತ್ said...

ಕಂಡಿತ ದೊರೆತ ಕೂಡಲೆ ತಿಳಿಸುತ್ತೇನೆ ಪ್ರದೀಪ್....

ವಸಂತ್ said...

ನಿಮ್ಮ ಪ್ರತಿಲ್ರಿಯೆಗೆ ಧನ್ಯವಾದಗಳು ವಿಚಲಿತರವರೆ....