Monday, January 31, 2011

ನಾ ಕಟ್ಟ ಬೇಕಿರುವ ಗೂಡು...!.

ನಾ ಕಟ್ಟಬೇಕಿರುವ ಗೂಡಿಗೆ
ಅಡಿಪಾಯದ ಅವಶ್ಯಕತೆಯಿಲ್ಲ.
ಉಕ್ಕಿನ ಸರಳುಗಳ ಜೋಡಿಸಬೇಕಿಲ್ಲ.
ಬೆಟ್ಟಗಳ ಬಗೆದು ಕಲ್ಲು ತರಬೇಕಿಲ್ಲ.
ಸಿಮೆಂಟು ಕಾಂಕ್ರೇಟಿನಿಂದ ಶೃಂಗರಿಸುವ ಅಗತ್ಯವೂ ಇಲ್ಲ..

ನೆಮ್ಮದಿಯ ಬಯಲಲ್ಲಿ
ಬರವಸೆಗಳೆಂಬ ಮರಗಳನು ನೆಟ್ಟು.
ಉತ್ಸಾಹವೆಂಬ ಹೊದಿಕೆ ಹೊದಿಸಿ.
ಸದಾ ಸಂತಸದಿಂದ ಇರುವಂತ
ಸಣ್ಣ ಗುಡಿಸಲಾದರೂ ಸಾಕು.
ಭೂಮಿಗೆ ಸ್ವರ್ಗವನ್ನೇ ತಂದಂತೆ ಸಂಭ್ರಮಿಸುತ್ತೇನೆ..
                                                              
                                                        ವಸಂತ್
ಚಿತ್ರಕೃಪೆ. www.walktoon.in

18 comments:

Dr.D.T.krishna Murthy. said...

ವಸಂತ್;ತುಂಬಾ ಸುಂದರ ಸರಳ ಕವನ.ಬಹಳ ಇಷ್ಟವಾಯಿತು.ಒದಿಕೆ ಎನ್ನುವುದು ಹೊದಿಕೆ ಎಂದಾಗಲಿ.ಬ್ಲಾಗಿಗೆ ಬನ್ನಿ.

ಪ್ರವೀಣ್ ಭಟ್ said...

Chennagide .. odike mattu odisi.. hodike .. hodisi endagabeku

Pravi

ಸುಮ said...

ಸುಂದರ ಕಲ್ಪನೆ . ಇಷ್ಟವಾಯ್ತು.

Narayan Bhat said...

ಸರಳ ಮತ್ತು ಸುಂದರ...

sunaath said...

ಇದು ನಿಜವಾಗಿಯೂ ಸುಂದರವಾದ ಗೂಡು.

ಪ್ರವರ ಕೆ ವಿ said...

goodu chennagide.....

ದಿನಕರ ಮೊಗೇರ said...

sundara kavana.....
chitradallina gUDunashTe tampaagide...

ಹಳ್ಳಿ ಹುಡುಗ ತರುಣ್ said...

vashan tumba saralavagi.. bhava tumbida kavana.. tumba ista aytu...
danyavadagalu.......

Pradeep Rao said...

Very cool one.. very nice

ವಸಂತ್ said...

ಪ್ರತಿಕ್ರಿಯೆಗೆ ಮತ್ತು ಅನಿಸಿಕೆಗೆ ತುಂಬ ಧನ್ಯವಾದಗಳು ಮೂರ್ತಿ ಸರ್. ಹಾಗೆ ನೀವು ತಿಳಿಸಿದ ತಪ್ಪುಗಳನ್ನು ಬದಲಾಯಿಸಿದ್ದೇನೆ...........

ವಸಂತ್ said...

ಪ್ರತಿಕ್ರಿಯೆಗೆ ಮತ್ತು ಅನಿಸಿಕೆಗೆ ತುಂಬ ಧನ್ಯವಾದಗಳು ಪ್ರವೀಣ್ ಭಟ್ ಸರ್...........

ವಸಂತ್ said...

ಅಭಿಪ್ರಾಯಕ್ಕೆ ಧನ್ಯವಾದಗಳು ಮೇಡಂ.........

ವಸಂತ್ said...

ಅನಿಸಿಕೆಗೆ ತುಂಬ ಧನ್ಯವಾದಗಳು Narayan Bhat ಸರ್...

ವಸಂತ್ said...

ಗೂಡಿನ ಬಗ್ಗೆ ನಿಮ್ಮ ಅನಿಸಿಕೆಗೆ ತುಂಬ ಧನ್ಯವಾದಗಳು ಸುನಾಥ್ ಸರ್..........

ವಸಂತ್ said...

ಕವನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು ಪ್ರವರರವರೆ...........

ವಸಂತ್ said...

ಪ್ರತಿಕ್ರಿಯೆಗೆ ತುಂಬ ಧನ್ಯವಾದಗಳು ದಿನಕರ ಮೊಗೇರ ಸರ್........

ವಸಂತ್ said...

ಕವನ ಇಷ್ಟ ಪಟ್ಟಿದ್ದಕ್ಕೆ ಮತ್ತು ನಿಮ್ಮ ಅನಿಸಿಕೆಗೆ ತುಂಬ ಧನ್ಯವಾದಗಳು ತರುಣ್ ರವರೆ...............

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರದೀಪ್.................