Monday, January 3, 2011

ಈ ಲೋಕಕ್ಕೆ ಮತ್ತೊಮ್ಮೆ ಮುಕ್ತಿ ಸಿಗಬಹುದೆಂದು ಕಾಯುತ್ತೇನೆ....

ಆ ಮಣ್ಣ ಹಾದಿಯಲಂದು
ಗಾಂಧಿ ಸಾಗಿದ್ದರು
ಬುದ್ದ ನಡೆದೋಗಿದ್ದರು
ಬಾಬ, ಬಸವ, ಅಲ್ಲಮರೂ ನಡೆದು
ಸತ್ಯ ಅಹಿಂಸೆಯ ಗಿಡಗಳನ್ನೂ ನೆಟ್ಟಿದ್ದರು...

ಬರಡು ಬರಡಾದ ನೆಲದಲ್ಲಿ
ನೆಮ್ಮದಿಯ ನೆರಳು,
ಹಸಿರಂಬ ಉಸಿರು,
ಹಸಿವ ನೀಗಲು ಫಲವು,
ಸಿಗಲೆಂಬ ಯೋಚನೆಯಿದ್ದಿರಬೇಕು...


ಎಲ್ಲ ಮನಸ್ಸುಗಳು ಒಂದೆ,
ಎಲ್ಲ ಕನಸುಗಳು ಒಂದೆ,
ಎಲ್ಲರೂ ನಮ್ಮಂತೆಯೇ ನಡೆದೇ 
ಸಾಗುವರೆಂಬ ಭ್ರಾಂತಿಯಿದ್ದಿರಬೇಕು...

ಅವರು ಸಾಗಿದ ನೆಲದಲ್ಲಿ
ಭೂ ಹಗರಣಗಳ ಬಿರುಕುಗಳೊಡೆದುಬಿಟ್ಟವು
ಸ್ವಾರ್ಥದ ಚಿಲುಮೆಯೊಡೆದು
ಈ ಮರಗಳಿಂದ ನಮಗೇನು ಪ್ರಯೋಜನವೆಂದು
ಅವುಗಳನ್ನು ಕಡಿದು ಕುರ್ಚಿಗಳನ್ನಾಗಿಸಿಕೊಂಡರು
ಇವುಗಳೆಲ್ಲವನ್ನು ಮುಚ್ಚಿಕೊಳ್ಳಲು
ಕಪ್ಪು ಟಾರನ್ನು ಬಳೆದು ಸುಮ್ಮನಾದರು...

ಸತ್ಯ ಅಹಿಂಸೆಯನ್ನು
ಅಕ್ಟೋಬರ್ 2 ನೇ ತಾರೀಕು
ಏಪ್ರೆಲ್ 14 ನೇ ತಾರೀಕು
ಮೇ 5 ನೇ ತಾರೀಕಿನಂತೆ
ಅಲವು ದಿನಗಳ ದಿನದರ್ಶಿಕೆಯಾಗಿ ತೂಗು ಹಾಕಿದರು...

ತತ್ವ ಸಿದ್ದಾಂತಗಳನು ತರಗೆಲೆಗಳಂತೆ ಗುಡಿಸಿ
ಜಾತಿ ಧರ್ಮದ ಭಾವನೆಗಳ ಬೆಳೆಸಿ
ಮನುಜ ನಿನಗೆ ನೀನೇ ಶತ್ರುವೆಂದೇಳಿ
ರಾಜಕೀಯ ದಾಳಗಳನ್ನಾಗಿ ಮಾಡಿಬಿಟ್ಟರು...

ಅವರು ಸಾಗಿದ ನೆಲವು ಒಂದಿಂಚೂ ಕಾಣುತ್ತಿಲ್ಲ
ಅವರು ಬೆಳೆಸಿದ ಮರಗಳ ಗುರುತುಗಳೇ ಸಿಗುತ್ತಿಲ್ಲ
ರಾಮ ರಾಜ್ಯದ ಕನಸು ರಾವಣನ ರಾಜ್ಯವಾಯಿತು
ಸುಲುಗೆ ವಂಚನೆಗಳಿಗೆ ತಡೆಯಿಲ್ಲದಂತಾಯಿತು...

ಕಾಯುತ್ತೇನೆ ಅವರು ಮತ್ತೆ ಬರಬಹುದೆಂದು
ಅವರ ನಡೆದ ನೆಲದಲ್ಲಿ ಮತ್ತೆ ಚಿಗುರೊಡೆಯಬಹುದೆಂದು
ಈ ಲೋಕಕ್ಕೆ ಮತ್ತೊಮ್ಮೆ ಮುಕ್ತಿ ಸಿಗಬಹುದೆಂದು....

                                                         ವಸಂತ್
 ಚಿತ್ರಕೃಪೆ. http://www.gandhiserve.org

22 comments:

sunaath said...

ವಸಂತ,
ನನಗೂ ನಿಮ್ಮದೇ ಆಶಯ.

ವಸಂತ್ said...

ನಿಮ್ಮ ಆಶಯಕ್ಕೆ ನನ್ನ ಸಹಮತವೂ ಇದೆ ಸರ್ ಧನ್ಯವಾದಗಳು....

satya mitra said...

ನಿಜಕ್ಕೂ ಚನ್ನಾಗಿದೆ..

Dr.D.T.krishna Murthy. said...

ವಸಂತ್;ನಿಮ್ಮ ಆಶಯವೇ ನಮ್ಮೆಲ್ಲರ ಆಶಯ.ಅಭಿನಂದನೆಗಳು.

Archana said...

kavana tumba cennaagide.

Anonymous said...

ವಸಂತ್ ಸಕತ್ತಾಗಿದೆ. ಕೋಲಾರದ ಚಿನ್ನದ ಗಣಿಯಿಂದ ಬಂದ ವಿಶೇಷ ಪ್ರತಿಭೆ. ಬ್ಯಾಕ್ ಗ್ರೌಂಡ್ ಬ್ಲಾಕ್ ಬದಲು ಬೇರೆ ಕಲರ್ ಕೊಟ್ಟಿದ್ದರೆ ಚೆನ್ನಾಗಿತ್ತು ಅನ್ನಿಸಿತು. ಅಭಿಪ್ರಾಯ ಅಷ್ಟೆ. ಒಳ್ಳೆಯದಾಗಲಿ. ಮುಂದೆ ಸಾಕಷ್ಟು ಬೆಳೆಯಿರಿ. ಶುಭವಾಗಲಿ
ಸುರೇಶ್ ನಾಡಿಗ್
ಶಿಕಾರಿಪುರ

- ಕತ್ತಲೆ ಮನೆ... said...

ಬಹುಜನರ ಅಂತರಾಳದ ಮಾತಿದು..

Pradeep Rao said...

ಅದ್ಭುತವಾದ ಕವನ ವಸಂತ್.. ಉತ್ತಮವಾದ ಭಾವವಿದೆ.. ಮನಸ್ಸಿಗೆ ನಾಟಿತು..

ಹಳ್ಳಿ ಹುಡುಗ ತರುಣ್ said...

chenide vashant....


nimma ee ashaya halavara manadaalada maatagide...

adare ellaru tamma pakakda maneyalli gandi budda raru hutti barili endu ashishuvare varatu.. tammalle tamma meneyali hutti barali ennuvaru yaru illa (virala).. adu namma duradrustave sari..

danyavaadagalu...

'A-NIL' said...

ವಸಂತ್, ಸುಂದರವಾದ ಭಾವ..
ನಿಮ್ಮ ಆಶಯವೇ ನಮ್ಮ ಆಶಯ..
ಹೊಸ ವರುಷದ ಶುಭಾಶಯಗಳು..

ವಿ.ಆರ್.ಭಟ್ said...

ಆಶಯಗಳು ಆದರ್ಶವಾಗಿರಬೇಕು, ಅವು ಜಗದ ಎಲ್ಲರ ಹಿತಬಯಸುವಂತಿರಬೇಕು, ಆ ದಿಸೆಯಲ್ಲಿ ಕವನದಲ್ಲಿ ನೀವು ಹೇಳಿದ ವ್ಯಕ್ತಿಗಳೆಲ್ಲಾ ನಡೆದಿದ್ದಾರಲ್ಲವೇ ? ಅದೇ ನಮ್ಮೆಲ್ಲರ ಆಶಯವೂ ಆದಾಗಮಾತ್ರ ನಾವೂ ಸಜ್ಜನಿಕೆಯ ದಾರಿಯಲ್ಲಿ ಒಂದಷ್ಟು ಸಾಗಲು ಸಾಧ್ಯ. ಅದಿಲ್ಲಾ ನಮಗೆ ಎಲ್ಲೆಂದರಲ್ಲಿ ದ್ವೇಷಾಸೂಯೆಗಳೇ ಅಡ್ಡಬಂದು ನಮ್ಮ ಮಾರ್ಗವೇ ತಪ್ಪಿಹೋಗುತ್ತದೆ. ಮುಂದುವರಿಯಲಿ, ಶುಭಮಸ್ತು, ಶುಭಾಶಯಗಳು

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಸತ್ಯಮಿತ್ರ ರವರೆ....

ವಸಂತ್ said...

ತುಂಬಾ ಧನ್ಯವಾದಗಳು ಮೂರ್ತಿ ಸರ್...

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಅರ್ಚನ....

ವಸಂತ್ said...

ನಿಮ್ಮ ಅನಿಸಿಕೆಗೆ ವಂದನೆಗಳು Anonymous ಸರ್...

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಗುರುಪ್ರಸಾದ್....

ವಸಂತ್ said...

ತುಂಬಾ ಧನ್ಯವಾದಗಳು ಪ್ರದೀಪ್....

ವಸಂತ್ said...

ನಿಮ್ಮ ಅನಿಸಿಕೆಗೆ ಅಭಿನಂದನೆಗಳು ತರುಣ್ ರವರೆ..

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಅನಿಲ್ ರವರೆ.....

ಸಿಮೆಂಟು ಮರಳಿನ ಮಧ್ಯೆ said...

ವಸಂತ್...

ನಿಮ್ಮ ಆಶಯದಂತೆ ಅಂಥವರೊಬ್ಬರು ಮತ್ತೆ ಬರುತ್ತಾರೆ..

ಅದು ನಮ್ಮೆಲ್ಲರ ನಿರೀಕ್ಷೆ ಕೂಡ...

ಅಭಿನಂದನೆಗಳು... ಸುಂದರ ಕವನಕ್ಕೆ...
ನಿಮ್ಮ ಆಶಯಕ್ಕೆ...

ವಸಂತ್ said...

ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಸರ್. ನಮ್ಮ ಬದುಲಿನಲ್ಲಿ ಆದರ್ಶ ವೆಕ್ತಿಗಳ ಹಾದಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಹಾಗೇಯೆ ಅದನ್ನು ಅನುಸರಿಸಿಕೊಂಡು ನಡೆಯಬೇಕು. ಕಾಲ ಬದಲಾದಂತೆ ಮನುಷ್ಯನ ನಡುವಳಿಕೆಗಳು ಬದಲಾಗುತ್ತಿರುವುದು ಕಬ್ಬಿಣದ ಕಡಲೆಯಂತ ಬಾಸವಾಗುತ್ತಿದೆ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು...

ವಸಂತ್ said...

ನಿಮ್ಮ ಆಶಯ ನಿಜವಾಗಲೆಂದು ಅರಸುತ್ತೇನೆ ಪ್ರಕಾಶ್ ಸರ್. ಅಂಥ ಬದಲಾವಣೆಗಾಗಿ ನಾನು ಕಾಯುತ್ತೇನೆ. ಧನ್ಯವಾದಗಳು....