Wednesday, February 2, 2011

ಪೂರ್ಣವಾಗದ ಹೆಜ್ಜೆಗಳು..



ಭಾವನೆಗಳ ಆಳವನ್ನು ಅರಿಯುವುದು
ತೀರ ಕಷ್ಟವೇ ಸರಿ !..
ನಡೆದಷ್ಟು ದೂರ
ನಡೆಯುತ್ತಲೇ ಇರುತ್ತೇವೆ !.

ಕೊನೆಯ ಮುಟ್ಟಲು ತವಕಿಸುತ್ತ
ಓಡುತ್ತ ಕಾದಾಡುತ್ತಲೇ…!.
ಯಾರಿಗೂ ದಕ್ಕದ ಅಂತರವನ್ನು
ದಕ್ಕಿಸಿಕೊಳ್ಳಲು ಎತ್ನಿಸುತ್ತೇವೆ

ಒಮ್ಮೆ ಬೆಳದಿಂಗಳು.
ಮತ್ತೊಮ್ಮೆ ಕಾರೀರುಳು.
ಒಮ್ಮೆ ಮೌನ.
ಮತ್ತೊಮ್ಮೆ ಸವಿಗಾನ.
ಏನೂ ಅರ್ಥಕಾಣದ
ಯಾವುದಕ್ಕೂ ಉತ್ತರವನ್ನು ಕಾಣದ
ಕೆಲವು ಒಗಟುಗಳು ನಮ್ಮ ಬಾಳು.

ನಾವು ಬಂದಾದ್ದಾದರೂ ಏಕೆಂಬ
ಕೆಲವು ಪ್ರಶ್ನೆಗಳಿಗಾದರು ಉತ್ತರ ಕಾಣದೆ
ನಮ್ಮ ಅಧ್ಯಾಯವನ್ನೂ ಪೂರ್ಣಗೊಳಿಸಲಾಗದೆ
ಅರ್ಧಕ್ಕೆ ಮುಚ್ಚಿ ಮರೆಯಾಗುತ್ತೇವೆ….
                                                                    ವಸಂತ್
ಚಿತ್ರಕೃಪೆ.. ಅಂತರ್ಜಾಲ. 

10 comments:

sunaath said...

ಕವನ ಚೆನ್ನಾಗಿದೆ, ಆದರೆ ಈ ಭಾವ ಸರಿಯೆ? ಪ್ರಯತ್ನದಲ್ಲಿ ವಿಶ್ವಾಸವಿರಲಿ.

ಪ್ರವರ ಕೆ ವಿ said...

kavi manassu kattaleyalliddare.... barahavemba belakina vishwasavide...

ವಸಂತ್ said...

ಕಂಡಿತ ಸರ್ ನಿಮ್ಮ ಮಾತಿನಂತೆ ಭಾವವನ್ನು ಬದಲಾಯಿಸಲು ಪ್ರಯತ್ನಿಸುತ್ತೇನೆ ಧನ್ಯವಾದಗಳು ಸುನಾಥ್ ಸರ್................

ವಸಂತ್ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಪ್ರವರವರೆ.............

Pradeep Rao said...

"ನಮ್ಮ ಅಧ್ಯಾಯವನ್ನು ಸಹ ಪೂರ್ಣಗೊಳಿಸಲಾಗದೆ ಅರ್ಧಕ್ಕೇ ಮುಚ್ಚಿ ಮರೆಯಾಗುತ್ತೇವೆ" ಎಂಬ ಸಾಲುಗಳು ತುಂಬಾ ಹಿಡಿಸಿದವು.. ಅರ್ಥಪೂರ್ಣವಾಗಿದೆ..

ದಿನಕರ ಮೊಗೇರ said...

ವಸಂತ್,
ವಾವ್... ತುಂಬಾ ಚೆನ್ನಾಗಿದೆ... ತುಂಬಾ ಅರ್ಥ ಇದೆ ಕವನಕ್ಕೆ.... ತೂಕ ಇದೆ.....

Vidya Ramesh said...

ಒಂದಕ್ಕಿಂತ ಒಂದು ಸುಂದರ ಕವನಗಳು.. keep writing!!

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರದೀಪ್ ನಿಮ್ಮ ಅನಿಸಿಕೆಗೂ ಸಹ ಅಭಿನಂದನೆಗಳು...

ವಸಂತ್ said...

ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆಗೆ ಅಭಿನಂದನೆಗಳು ದಿನಕರ ಸರ್.........

ವಸಂತ್ said...

ಕವನಗಳ ಬಗೆಗಿನ ನಿಮ್ಮ ಮೆಚ್ಚುಗೆಗೆ ಹೃದಯಪೂರಕ ಅಭಿನಂದನೆಗಳು Vidya ಮೇಡಂ...