Wednesday, February 9, 2011

ಬಾರದಿರು ಚಲುವೆ ನನ್ನೂರಿಗೆ...!.


ನನ್ನ ಹಂಬಲಕೆ ಸೋತು
ಪ್ರೀತಿಯೆಂಬ ಹುಚ್ಚಿನೊಳು ಸಿಲುಕಿ
ನಿನ್ನ ಬಾಳನು ಬಿರುಗಾಳಿಯಾಗಿಸಿದಿರು.
ಅರ್ಥವಿಲ್ಲದ ಊರಿನಲಿ
ವೆರ್ಥವಾಗಿ ಹೋಗುವುದು ಬೇಡ
ಬಾರದಿರು ಚಲುವೆ ನೀ ನನ್ನೂರಿಗೆ...

ಬಯಲು ಬೆತ್ತಲ ಕಾಡು.
ಬಂಡೆ ಕಲ್ಲುಗಳ ಬೀಡು.
ಜಾತಿ ಮತಗಳಿಂದ್ ಹವಣಿಸುವ
ರಾಕ್ಷಸರ ಸೀಮೆಯದು..
ಬಾರದಿರು ಚಲುವೆ ನೀ ನನ್ನೂರಿಗೆ...

ನಗಲಲ್ಲಿ ಸ್ಥಳವಿಲ್ಲ.
ನಡೆದಾಡಲು ಕೊಡುವುದಿಲ್ಲ.
ಹೃದಯವಿಲ್ಲದ ಜನ.
ಹೂ ಅರಳದ ಊರದು..
ಬಾರದಿರು ಚಲುವೆ ನೀ ನನ್ನೂರಿಗೆ..

ರಾತ್ರಿಯೊಳು ಕಾದಾಟ.
ಹಗಲಿನೊಳು ಬಾಡೂಟ.
ಎದರುರು ನಿಂತವರ
ಎದಯನೇ ಬಗೆದು ನೋಡುವ.
ಹಂತಕರ ಕೇರಿಗೆ..
ಬಾರದಿರು ಚಲುವೆ ನೀ ನನ್ನೂರಿಗೆ...

ಬೆಳಕು ಕಾಣದ ಊರದು
ಪ್ರೀತಿಯನೇ ಅರಿಯದ ನರಕವದು.
ಮಮತೆಯನು ಮರೆತಿರುವ ಸ್ಥಳದಲ್ಲಿ
ನೀ ನಗುವುದಾದರು ಎಂತು.
ಮತಿಹೀನ ಭಾವನೆಯೋಳ್
ಸದಾ ಕತ್ತಿ ಮಸೆಯುವರ ಎದಿರು.
ಬಾರದಿರು ಚಲುವೆ ನೀ ನನ್ನೂರಿಗೆ...

ಕೊಳದಲಿ ಅರಳುವಂತ
ಶುದ್ದಮನಸ್ಸಿನ ಸುಮವು ನೀ
ನಿನಗಾಗಿ ಹಂಬಲಿಸುವ,
ಸುಖ ಸಾಗರದಲ್ಲಿ ತೇಲಿಸುವಂತ.
ಬೆಳಕೊಂದು ಕಾಯುತಿರಬಹುದು..
ನೊಂದು ಒಲ್ಲೆಂದು ಮಾತ್ರ ನುಡಿಯದಿರು
ಬಾರದಿರು ಚಲುವೆ ನೀ ನನ್ನೂರಿಗೆ...

ನಾನೊಂದು ಕತ್ತಲು.
ನನಗ್ಯಾರ ಭಯವಿಲ್ಲ.
ನನಗಾಗಿ ಯೋಚಿಸದೆ 
ನೀ ಬಾಳನು ಹಸನಾಗಿಸು..
ನಿನ್ನ ನೆನಪಲ್ಲೇ ಈ ಜೀವನವನ್ನು.
ಕನಸಂತೆ ಕಳೆದು ಬಿಡುತ್ತೇನೆ..
ಬಾರದಿರು ಚಲುವೆ ನೀನೆಂದೂ ನನ್ನೂರಿಗೆ...
                                                         ವಸಂತ್ 

ಚಿತ್ರಕೃಪೆ.. http://www.wearebsm.com

15 comments:

Gelathi said...

ತುಂಬಾ ತುಂಬಾ ಚೆನ್ನಾಗಿದೆ ಕವನ

Pradeep Rao said...

Very nice poem Vasanth.. nimmuru yavdu anta svalpa heltira? :)

sunaath said...

ನಿಜವಾದ ಪ್ರೇಮಿಯೊಬ್ಬನು ತನ್ನ ಹುಡುಗಿಗೆ ನೀಡಬಹುದಾದ ಸಂದೇಶವಿದು.

ವಸಂತ್ said...

ತುಂಬಾ ಧನ್ಯವಾದಗಳು ಗೆಳತಿ ನಿಮ್ಮ ಅನಿಸಿಕೆಗೆ.....

ವಸಂತ್ said...

ನಿಮ್ಮ ಅಭಿಪ್ರಾಯ ಮತ್ತು ಅನಿಸಕಕೆಗೆ ತುಂಬಾ ಪ್ರದೀಪ್ ರವರೆ ನಮ್ಮದು ಊರಲ್ಲ ಹಳ್ಳಿ..........

ವಸಂತ್ said...

ತುಂಬಾ ಧನ್ಯವಾದಗಳು ಸುನಾಥ್ ಸರ್ ನಿಮ್ಮ ತೂಕದಾಯಕ ಅಭಿಪ್ರಾಯಕ್ಕೆ ವಂಧನೆಗಳು........

Umashankara BS said...

ಸೂಪರ್ ವಸಂತಣ್ಣ
ಒಂದು ರಿಲೀಫ್ ಸಿಕ್ಕಂತಾಯ್ತು

ವಸಂತ್ said...

ನನ್ನ ಕವನ ನಿಮಗೆ ನೆಮ್ಮದಿಯನ್ನುಂಟುಮಾಡಿದ್ದಕ್ಕೆ ತುಂಬ ಧನ್ಯವಾದಗಳು ಉಮಾಶಂಕರ್ ಸರ್.........

Narayan Bhat said...

ಚೆನ್ನಾಗಿದೆ.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು Narayan Bhat ಸರ್.....

ಮನಮುಕ್ತಾ said...

nice poem..

ಪ್ರವೀಣ್ ಭಟ್ said...

Nice kavana Vasanth... tumba chennagide.. nimma olava pari.

ondu sanna correction

ನೀ ಬಾಳನು ಅಸನಾಗಿಸು..

idu asanu .. alla hasanu

ವಸಂತ್ said...

ಧನ್ಯವಾದಗಳು ಮನಮುಕ್ತಾ ಮೇಡಂ.........

ವಸಂತ್ said...

ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು ಪ್ರವೀಣ್ ಭಟ್ ಸರ್, ಮತ್ತು ನೀವು ತಿಳಿಸಿದ ತಪ್ಪನ್ನು ಬದಲಾಯಿಸುತ್ತೇನೆ ಧನ್ಯವಾದಗಳು........

ಸೀತಾರಾಮ. ಕೆ. / SITARAM.K said...

nice