Saturday, February 26, 2011

ದೂರವಿಲ್ಲವೆನಿಸುತ್ತಿದೆ.....


ದೂರದಲ್ಲಿ ಕಾಣುವ ಬೆಟ್ಟವನು ಕಂಡು
ಅನುದಿನವೂ ಕೈ ಮುಗಿದು ಪ್ರಾರ್ಥಿಸುತ್ತೇನೆ
ಆದರೆ ಅದು ದೇವರೆಂದಲ್ಲ !!.
ಅದರ ಮೇಲೆ ಯಾರ ವಕ್ರದೃಷ್ಠಿಯೂ ಬೀಳದಿರಲೆಂದು...

ಮಾನವನ ಮನಸ್ಸು ಸುಕೋಮಲದಂತಿದ್ದರೂ.
ಅವನೊಳಗೆ ಕಂಡಿದ್ದೆಲ್ಲವನ್ನೂ 
ದಕ್ಕಿಸಿಕೊಳ್ಳುವಂತ ಸ್ವಾರ್ಥವಿದೆ.
ಎಲ್ಲವನ್ನೂ ಬರಿದಾಗಿಸುವ
ಮಾಯಾ ಚಂಚಲೆಯ ಮರ್ಮವಿದೆ..
ಇದರಲ್ಲಿ ತನ್ನ ಪಾತ್ರವೇನು ಇಲ್ಲವೆಂಬ 
ಮೋಸ ವಂಚನೆಯ ತಂತ್ರಗಾರಿಕೆಯೂ ಇದೆ…

ಕಣ್ತೆರೆದು ಕಣ್ಮುಚ್ಚುವುದರೊಳಗೆ
ಕೇವಲ ಬೆಟ್ಟವನ್ನೇ ಅಲ್ಲಾ,..
ಈಡೀ ಪರಿಸರವನ್ನೇ ನುಂಗಿ ಹಾಕುವಂತ
ಪರಮಾಣು ಆಯುಧಗಳ ಸಂಗ್ರವೂ ಇದೆ...

ತನ್ನ ಅಸ್ಥತ್ವದ ಉಳಿವಿಗಾಗಿ
ಇತರರನ್ನೂ ಬಲಿಕೊಡಲೆಯತ್ನಿಸುವ
ಕ್ರೂರ ಮನಸ್ಸುಗಳ ಯೋಜನೆಗಳಿವೆ.
ಭೂಮಿಯನ್ನೇ ಅಲ್ಲದೆ ಇತರ ಗ್ರಹಗಳಿಗೂ
ತನ್ನ ಸಂಕುಲವನ್ನು ಸಾಗಿಸುವ ಯೋಚನೆಗಳೂ ಇವೆ.

ಹಿಂದಿದ್ದ.. ಬೆಟ್ಟಗಳು ಅಡವಿಗಳು,
ಝರಿ. ತೊರೆಗಳು,
ಮಣ್ಣು ದಿಬ್ಬಗಳು, ಗಿರಿ ಶಿಕರಗಳು,  
ಕೆರೆ ಕುಂಟೆಗಳು, ವನ್ಯಜೀವಿಗಳು,
ಮೀನುಗಳು, ಕೊಕ್ಕರೆಗಳು,
ಸಣ್ಣ ಪುಟ್ಟ ಗುಬ್ಬಿಗಳನ್ನೂ ಸಹ
ಮುಂದೊಂದು ದಿನ ಕೇವಲ ಚಿತ್ರಪಟಗಳಲ್ಲಿ
ಕಾಣುವ ಕಾಲ ದೂರವಿಲ್ಲವೆನಿಸುತ್ತಿದೆ....

                                                            ವಸಂತ್
ಚಿತ್ರಕೈಪೆ. http://sampada.net

5 comments:

'A-NIL' said...

ವಾಹ್..!
ವಸಂತ್, ನಿಮ್ಮ ಮಾತು ನಿಜ. ಹೀಗೆ ನಡೆದರೆ ಆ ದಿನಗಳು ದೂರವಿಲ್ಲ..
ನೀವು ಹೇಳಿದ ಶೈಲಿ, ಸುಂದರವಾಗಿದೆ..

sunaath said...

ಕಟುವಾಸ್ತವದ ಕವನ.

Pradeep Rao said...

ಸತ್ಯದ ಮಾತು ವಸಂತ್.. ನಿಮ್ಮ ಪರಿಸರ ಕಾಳಜಿ ಮೆಚ್ಚಿದೆ..

satya mitra said...

well and good..

ashokkodlady said...

parisarada nimma kaalaji kavandalli vyaktavagide, Nice one..