Sunday, February 27, 2011

ನಾನು ನಾನೆನ್ನದಿರು ಎಲೆ ಮೂಡ ಮನವೆ...

ನಾನು ನಾನೆನ್ನದಿರು ಎಲೆ ಮೂಡ ಮನವೆ
ನಾವು ನಮ್ಮವರೆಂದಲ್ಲಿ ಶಾಂತಿಯುಂಟು...
ನಾಲ್ಕು ಜನರೊಳು ನೀ ತಾನೊಬ್ಬನಾದಲ್ಲಿ
ನಿನ್ನ ಸೋಲಿಸಲು ಮತ್ಯಾರು ಇಹರಿಲ್ಲಿ...

ನಾನೇ ಎಂದಲ್ಲಿ ನಿನ್ನ ಜೀವನವು ಸಾಗುವುದೆ ?
ಬಂಡಿನೊಗವನು ಹೊರಲು ಜೋಡೆತ್ತುಗಳು ಬೇಕು...
ನಾನು ನಾನೇ ಎಂದು ನಡೆದಾಗ ನೀನಿನೊಮ್ಮೆ 
ಎಡವಿ ಬಿದ್ದರೆ ನಿನ್ನ ಮತ್ತೊಬ್ಬರು ಎಬ್ಬಿಸಬೇಕು...

ಬೀಸು ಗಾಳಿಯಲಿ ನಾನೆಂಬುದಿಲ್ಲ...
ಸುರಿವ ಮಳೆಯಲು ಕೂಡ ನಾನೆಂಬುದುಂಟೆ ?
ಉರಿವ ಸೂರ್ಯನು ನಾನು ನಾನೆಂದು ಕೂತರೆ...
ಬೆಳಕ ಕಾಣಲು ನಾವು ಮತ್ತೆಲ್ಲಿ ಹೋಗುವುದು...

ನಾನು ನನ್ನದು ನಿಜ, ಎಷ್ಟು ದಿನ ಈ ಬಾಳು...
ಮುಪ್ಪು ಕಾಡಿದರೆ ನಿನಗೆ ನಾನೆಂಬುದುಂಟೆ ?
ಬಾಳೊಂದು ನದಿಯಂತೆ ಸಾಗುವುದು ನಮ ಧರ್ಮ
ಸಾಗಿ ಹೋಗುವ ನಾವು ಎಲ್ಲರೊಳು ಸೇರಿ...

                                                          ವಸಂತ್

4 comments:

sunaath said...

ಸತ್ಯಂ ಶಿವಂ ಸುಂದರಂ!

Pradeep Rao said...

ವಸಂತ ದಾಸರ ಪದಗಳು ತುಂಬಾ ಸತ್ಯದ ಬೋಧನೆ ಮಾಡಿದೆ.. ಚೆನ್ನಾಗಿದೆ!

ಪ್ರವೀಣ್ ಭಟ್ said...

nanenbuda bittu naavu ennouna.. olle sandesha..

Pravi

ಕನ್ನಡವೇ ಸತ್ಯ said...

ತುಂಬಾ ಚೆನ್ನಾಗಿದೆ ವಸಂತ್ ರವರೇ