Friday, March 4, 2011

ನೆನಪುಗಳು....


ಒಮ್ಮಿಂದೊಮ್ಮೆಗೆ ಎಷ್ಟೊಂದು
ನೆನಪುಗಳು ಬಂದು ಕಾಡುತ್ತವೆ
ಮರುಭೂಮಿಯಲ್ಲಿ ಬಿರುಗಾಳಿ ಎದ್ದಂತೆ...

ಬಾಲ್ಯದಲ್ಲಿ ಗೆಳೆಯರ ಜೋತೆ
ಚಡ್ಡಿಯನ್ನು ಎಳೆಯುತ್ತಾ ಶಾಲೆಗೆ ಹೋಗುತ್ತಿದ್ದದ್ದು.
ಎಮ್ಮೆಮೆಯಿಸಲು ಹೊಲಕ್ಕೆ ಹೋಗುತ್ತಿದ್ದಾಗ  
ಅಗ್ಗ ಕಾಲಿಗೆ ಸಿಕ್ಕಿ ಕುಂಟೆಗೆ ಬಿದ್ದದ್ದು.
ಅಪ್ಪನ ಜೋಬಿನಲ್ಲಿ ಹಣವನ್ನು ಕದ್ದು
ರಂಗನ ಜೋತೆ ಗೋಲಿಹಾಡಿ ಸೋತಿದ್ದು...

ಕೆರೆಯ ಕಟ್ಟೆ ಒಡೆದು 
ಮೀನುಗಳೆಲ್ಲ ಹರಿದು ಹೋಗುತ್ತಿದ್ದಾಗ
ಅಕ್ಕನ ದಾವಣಿಯನ್ನು ಕದ್ದು ಮೀನು ಹಿಡಿದಿದ್ದು.
ಹರಿದ ಅಂಗಿಯನ್ನು ಅಮ್ಮನ ಬಳಿಕೊಟ್ಟು
ಹೊಲೆದು ಕೊಡೆಂದು ಪೀಡಿಸಿದ್ದು.
ಅಣ್ಣನ ಸೈಕಲ್ಲನೇರಿ ಕೆಳಗೆಬಿದ್ದು
ಕಾಲು ಮುರಿದುಕೊಂಡದ್ದು.

10 ನೇ ತರಗತಿಯಲ್ಲಿ ಎಲ್ಲರನ್ನು ಹಿಂದೆಹಾಕಿ
ಹೆಚ್ಚು ಅಂಕ ಪಡೆದದ್ದು.
ಕಾಲೇಜಿನಲ್ಲಿ ಅನಿತ ಮೇಡಂಗೆ
ರಾಕೇಟ್ ಎಸೆದು ವಾರದ ಕಾಲ
ಹಿಂಬದಿಯ ಬೆಂಚಿನ ಮೇಲೆ ನಿಂತದ್ದು.
ಶಿಲ್ಪಾಳಿಗೆ ಪ್ರೀತಿಯ ನಿವೇಧನೆಯನ್ನು
ಹೂ ಕೊಟ್ಟು ಹೇಳಿದ್ದು…
                                        
ಎಷ್ಟೋಂದು ನೆನಪುಗಳು..
ಒಂದರ ಮೇಲೊಂದರಂತೆ
ಬದುಕಿನ ಅಧ್ಯಾಯಗಳಾಗಿ
ತಡವರಿಸುತ್ತಾ ತೆರೆದುಕೊಳ್ಳುತ್ತವೆ..
ಒಂದೊಂದು ನೆನಪು ಸಹ
ತನ್ನ ಕಿರಿತನದ ಸಿಹಿಯನ್ನು
ಹಿರಿತನದ ಕಹಿಯನ್ನು ಉಣಬಡಿಸುತ್ತ...

ಕೆಲವೊಮ್ಮ ಕಾಣದ ವೇದನೆಗಳು
ಧಕ್ಕದ ಬಯಕೆಗಳು, ವಿಷಾದದ ಅಲೆಗಳು
ಕೈ ತಪ್ಪಿಹೋದ ಪ್ರಸಂಗಗಳು.
ಈಗಲೂ ಮುಗಿಯದಂತೆ ಮುಗಿದುಹೋದಂತೆ
ಪ್ರತಿದಿನವು ನನ್ನೊಂದಿಗೆ ಹಗಲು ರಾತ್ರಿಗಳನ್ನಾಚರಿಸುತ್ತವೆ.

                                             ವಸಂತ್ 
ಚಿತ್ರಕೃಪೆ. http://img.wallpaperstock.net:81/

6 comments:

satya mitra said...

ತುಂಬಾ ಚನ್ನಾಗಿ ಬಾಲ್ಯದ ಆ ದಿನಗಳ ಕನವರಿಕೆಗಳನ್ನು ಕವನದ ಮುಲಕ ಸ್ಪಷ್ಟವಾಗಿ ತಿಳಿಸಿದ್ದಿ ವಸಂತ್. ಚನ್ನಾಗಿದೆ.

satya mitra said...
This comment has been removed by the author.
Umashankara BS said...

ನೆನಪುಗಳ ಸುಖ
ಮರೆಸುವುದೆಲ್ಲ ದುಃಖ
ನಿಮ್ಮ ಹಿತದ ನೆನಪುಗಳು ಸದಾ ಹಸಿರಾಗೇ ಇರಲೆಂದು ಹಾರೈಸುವ
ನಿಮ್ಮ
ಉಮಾಶಂಕರ

Pradeep Rao said...

ಚೆನ್ನಾಗಿದೆ.. ಆಟೋಗ್ರಾಫ್ ಸಿನಿಮಾ ನೆನಪಾಯಿತು.

Vidya said...

chennagide...:)ee nenapu nimmalli sadaa irali:)

Mallesh G K said...

thumba channagide Vasanth