Wednesday, March 9, 2011

ರಾಕ್ಷಸನಂತಾಗಿ ಸಾಗದಿರು.....


ಮಲ್ಲಿಗೆ ಗಿಡದಲ್ಲಿ ಸಾಸುವೆ ಕಾಳು ಹುಟ್ಟುವುದಿಲ್ಲ
ಸುಡುವ ಸೂರ್ಯನಲ್ಲಿ ಚಂದ್ರನ ತಂಪು ಬರುವುದಿಲ್ಲ
ಈ ನುಡಿಗಳು ಯಾರಿಗೂ ರುಚಿಸುವುದಿಲ್ಲ
ಈ ಪ್ರಶ್ನೆಗಳಿಗೆ ಯಾರಿಂದಲೂ ಉತ್ತರ ದೊರೆಯುವುದಿಲ್ಲ..

ನಗರೀಕರಣದ ಬರದಲ್ಲಿ ಹಸಿರನ್ನು ಕಬಳಿಸುತ್ತ
ನಡೆದಷ್ಟು ದೂರ ನನ್ನದೇ ನೆಲವೆಂಬ ಉಬ್ಬುತೋರಿ
ಬಂದವರಿಗೆಲ್ಲ ಚಿಲ್ಲರೆಯನು ಎಸೆದು ತಮ್ಮ ತಮ್ಮ
ಸಾಮ್ರಾಜ್ಯಗಳನ್ನು ಹೊನ್ನನ ರಾಶಿಯ ಬಳಸಿ ಕಟ್ಟುತಿದ್ದಾರೆ..

ಹಸಿರು ನೆಲ ಬಿಳೀ ದೊರೆಗಳ ಕಾಲ ಕಸವಾಗುತಿದೆ
ಬೆಟ್ಟ ಗುಡ್ಡಗಳು ಉಳಿಯಿಡಿದು ನಿಂತವನ ಪಾಲಾಗುತಿದೆ
ಕಾಡು ಮೇಡುಗಳು ಕಾಡುಗಳ್ಳರ ಕಟ್ಟಿಗೆ ಹೊರೆಯಾಗಿವೆ

ಇದು ಶ್ರೀಮಂತರ ರಾಜ್ಯವೂ ಸಾಮಂತರ ಭೂಮಿಯೊ ?
ತುತ್ತು ನೀಡದ ಬಡವನಿಗೆ ನೆರಳಾಗಿ ನಿಲ್ಲುರವರೆ ??
ಎಲ್ಲಿದೆ ನೆಮ್ಮದಿ ?. ಇನ್ನೆಲ್ಲಿಯ ಸ್ವಾತಂತ್ರ್ಯ?.
ನಾನು ನನದೇ ಎಂಬ ಭರದಲ್ಲಿ.
ಬಳಲಿ ಬೆಂಡಾದ ಜನತೆಗೆ ನೆಮ್ಮದಿಯನು ತೋರುವರಾರು
ಅಡ್ಡಗೋಡೆಯ ಮೇಲೆ ದೀಪವನಿಟ್ಟಂತೆ..

ಎಲ್ಲದಕ್ಕೂ ಒಂದು ಎಲ್ಲೆಯುಂಟು ಒಂದು ಮಿತಿಯುಂಟು
ಇರುವೆ ಗೂಡನ್ನೂ ಸಹ ಬರಿಯ ಕಾಲಿಂದ ಹೊಸೆಯಲಾಗದು
ತಮ್ಮ ಕಾರ್ಯಗಳೆ ತಮಗೆ ಮುಳುವಾಗುಂತ ಕಾಲ ದೂರವಿಲ್ಲ
ಇದನ್ನರಿತು ನೀನು ನೀನಂತಲ್ಲದೆ ರಾಕ್ಷಸನಂತಾಗಿ ಸಾಗದಿರು...

                                                                      ವಸಂತ್ 

3 comments:

ಕನಸು ಕಂಗಳ ಹುಡುಗ said...

ಹೂಂ... ನಿಜದ ಮಾತು......
ನಾಳೆಯ ಬಗ್ಗೆ ಚಿಂತೆ ಯಾರಿಗೆ ಹೇಳಿ....
ಈವತ್ತಿನ ಬದುಕು ಬಂತು.....
ಕಬಳಿಸುವವರಿಗೆ ಕಬಳಿಸುವಷ್ಟು ನೆಲ ಅವರಿಗೆ....
ಕೈಯೊಡ್ಡುವವರಿಗೆ ಎಳೆದಷ್ಟು ಹಣ ಅವರಿಗೆ...
ಬಸ್ಮಾಸುರರ ಕೈಗೆ ತಲೆಕೊಟ್ಟಂತೆ....

ಚನ್ನಾಗಿದೆ.... ಸಾಲುಗಳು

sunaath said...

ಸ್ವಾರ್ಥಕ್ಕಾಗಿ ನಾಳಿನ ಮಕ್ಕಳ ಭವಿಷ್ಯವನ್ನು ಹೊಸೆದು ಹಾಕುತ್ತಿರುವವರ ಬಗೆಗೆ ಸರಿಯಾಗಿ ಬರೆದಿರುವಿರಿ.

ಮನದಾಳದಿಂದ............ said...

ಅರ್ಥಗರ್ಭಿತ ಸಾಲುಗಳು......