Tuesday, March 15, 2011

ಮೊರೆಯನು ಕೇಳೊಹರಿ,,,


ಮೊರೆಯನು ಕೇಳೊ ನರಹರಿಯೆ ನನ್ನ...
ಮೊರೆಯನು ಕೇಳೊ ನರಹರಿಯೆ IIಪII

ಭವ ಬಂಧನದಲ್ಲಿ ಸಿಕ್ಕಿ ಬಿದ್ದಿದ್ದಾಗಿದೆ
ಹೊರ ಬರಲಾಗದೆ ನೊಂದು ಬೆಂದಿಹಿನೆಯ್ಯ
ನೂರು ಕರ್ಮಗಳೆನ್ನ ಮುತ್ತಿ ಮುದ್ದಾಡಿವೆ
ರಕ್ಷಸಿ ಎನ್ನಯ ಸಲಹಯ್ಯ ಹರಿ 
ನೆಮ್ಮದಿಯನು ನೀ ತೋರಯ್ಯ..

ಸಪ್ತ ಸಾಗರವೆನಗೆ ಅಡ್ಡವೆ ಬಂದತೆ
ಬಿರುಗಾಳಿ ಬಿನ್ನಾಣ ತೋರುತ ಇದೆಯಲ್ಲ
ಹೇಗೆ ನಾ ಸಾಗಲಿ ಎಲ್ಲಿಗೆ ಹೋಗಲಿ
ಮುಕ್ತಿಯ ಮಾರ್ಗವ ತೋರಯ್ಯ ಹರಿ
ಮನಸ್ಸಿಗೆ ಶಾಂತಿಯ ನೀಡಯ್ಯ

ಕಾಣದ ವೇದನೆ ಕಾಡುತಿದೆ ನನ್ನಲ್ಲಿ
ತೀರದ ಧಾಹವೇ ಮನಸ್ಸೆಲ್ಲ
ಚಂಚಲವೆಂಬುದು ನಿತ್ಯ ಕಾಯಕವಯ್ಯ
ಬಂದಿಸೋ ಎನ್ನಯ ಮನಸನ್ನ ಹರಿ
ನಿನ್ನನೇ ಅನುದಿನ ಜಪಿಸಯ್ಯ..


                                                ವಸಂತ್ 

ಚಿತ್ರಕೃಪೆ.http://awesomepower.net


12 comments:

ಸಿಮೆಂಟು ಮರಳಿನ ಮಧ್ಯೆ said...

ವಸಂತ..

ಚೆನ್ನಾಗಿದೆ... ಇಷ್ಟವಾಯಿತು...

ಕನಸು ಕಂಗಳ ಹುಡುಗ said...

ದಾಸರಿಗೆ ವಂದನೆಗಳು...
ಶಿಷ್ಯನನ್ನಾಗಿಸಿಕೊಳ್ಳಿ.... ನಿಜವಾಗಿಯೂ ಚನ್ನಾಗಿದೆ.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.....

ವಸಂತ್ said...

ಕನಸು ಕಂಗಳ ಹುಡುಗರವರೆ ನನಗೆಲ್ಲಿದೆ ಅಂಥ ಶಕ್ತಿ.. ನನ್ನ ಮೊರೆಯನ್ನು ಆಲಿಸೋ ಎಂದು ಮೇಲಿನ ದೇವರಿಗೆ ನನ್ನ ಕಷ್ಟಗಳನ್ನು ಕವನದ ಮೂಲಕ ತಿಳಿಸಿದ್ದೇನೆ. ಒಟ್ಟಿನಲ್ಲಿ ಇಷ್ಟೊತ್ತಿಗಾಗಲೆ ಇದು ತಲುಪಿರಬೇಕು.. ನಿಮ್ಮನ್ನು ನನ್ನಿಂದ ಶಿಷ್ಯನನ್ನಾಗಿ ಖಂಡಿತ ಸ್ವೀಕರಿಸಲು ಸಾಧ್ಯವೇ ಇಲ್ಲ ಆದರೆ ನನ್ನ ಪ್ರೀತಿಯ ಸ್ನೇಹಿತನನ್ನಾಗಿ ಸ್ವೀಕರಿಸುತ್ತೇನೆ... ಕೋಪಿಸಿಕೊಳ್ಳಬೇಡಿ ತಮಾಶೆಗೆ... ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು..

sunaath said...

ವಸಂತ,
ತುಂಬ ಸೊಗಸಾದ, ಆರ್ತಭಾವ ತುಂಬಿದ ಕೀರ್ತನೆ.

ವಿ.ಆರ್.ಭಟ್ said...

ವಸಂತ್, ಹಲವು ದಿನಗಳಿಂದ ಹಲವು ಬ್ಲಾಗ್‍ಗಳಿಗೆ ಬರಲಾಗಿರಲಿಲ್ಲ, ಅದಕ್ಕಾಗಿ ನೀವೂ ಬೇಸರಿಸಬೇಡಿ, ಒಳ್ಳೆಯ ಸಂಕೀರ್ತನೆ, ಕೆಲವು ಕಾಗುಣಿತಗಳ ತಪ್ಪುಗಳು ಇವೆ, ’ಬೀರುಗಾಳಿ’, ’ತೊರುತ’ ಇಂಥದ್ದಕ್ಕೆ ಆದಷ್ಟೂ ಲಕ್ಷ್ಯವಹಿಸಿ, ಕಾಗುಣಿತ ಮತ್ತು ವ್ಯಾಕರಣ ನಮ್ಮ ಭಾಷೆಯ ಆಭರಣಗಳು. ಹರಿದ ಸರ ಧರಿಸಲು ಬಾರದಲ್ಲವೇ? ಮತ್ತಷ್ಟು ಬರೆಯಿರಿ, ಚಿಂತಿಸಿ-ಶ್ರದ್ಧೆಯಿಂದ, ಶುಭಹಾರೈಕೆಗಳು.

k.s.raghavendranavada said...

ಚೆನ್ನಾಗಿದೆ ವಸ೦ತ್, ಇಷ್ಟವಾಯಿತು.
ನನ್ನ ಬ್ಲಾಗಿಗೂ ಆಗಾಗ ಭೇಟಿ ಕೊಡುತ್ತಿರಿ. ತಪ್ಪು-ಒಪ್ಪುಗಳ ವಿನಿಮಯವಾಗಲಿ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

'A-NIL' said...

ವಾಹ್ ವಸಂತ್, ವಾವ್ :)

ವಸಂತ್ said...

ತುಂಬ ಧನ್ಯವಾದಗಳು ಸುನಾಥ್ ಸರ್....

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಸರ್. ಖಂಡಿತ ಯಾರ ಮೇಲೆಯು ನನಗೆ ಬೇಸರವಿಲ್ಲ .. ನನ್ನ ತಪ್ಪುಗಳನ್ನು ಸೂಕ್ಷ್ಮವಾಗಿ ಗಮನಿಸಿ ಬರೆಯುತ್ತೇನೆ ಸರ್. ನಿಮ್ಮ ಮಾತಿಗೆ ಸದಾ ಕಾಲ ನನ್ನ ಸಹಮತವಿದೆ ಸರ್ ವಂಧನೆಗಳು.....

ವಸಂತ್ said...

ಓ raghavendranavada ಸರ್ ನಿಮ್ಮನ್ನು ಕಂಡು ತುಂಬ ದಿನಗಳೇ ಆಗಿತ್ತು... ಇದೆ ಮೊದಲ ಬಾರಿಗೆ ನಿಮ್ಮ ವೇದಸುಧೆ ಬ್ಲಾಗಿಗೆ ಬೇಟಿ ಕೊಟ್ಟಿದ್ದು... ತುಂಬ ಸುಂದರವಾಗಿದೆ ಸರ್.. ವೇದಗಳ ಬಗ್ಗೆ ತುಂಬ ಅರ್ಥಪೂರ್ಣವಾಗಿ ವಿವರಿಸಿದ್ದೀರ.. ಖಂಡಿತ ನಿಮ್ಮಲ್ಲ ಬ್ಲಾಗುಗಳಿಗೂ ಬೇಟಿಕೊಡುತ್ತೇನೆ ವಂಧನೆಗಳು.....

ವಸಂತ್ said...

ಪ್ರತಿಕ್ರಿಯೆಗೆ ತುಂಬ ಧನ್ಯವಾದಗಳು 'A-NIL' ರವರೆ....