Thursday, March 31, 2011

ಎಲ್ಲಾ ಪಾತ್ರಗಳನ್ನೂ ಸರಿದೂಗಿಸಬಲ್ಲೆ…


ನಾನೇನು ಬಲ ಭೀಮನಲ್ಲ.
ಈ ಲೋಕದ ತಪ್ಪುಗಳನ್ನೆಲ್ಲ ಮೆಟ್ಟಿ ತುಳಿಯಲು...
ನಾನೇನು ಅರ್ಜುನನಲ್ಲ.
ಈ ಜಗದ ಪಾಪಗಳ ಒಡೆದು ಉರುಳಿಸಲು...
ನಾನಂತು ಕರ್ಣನಲ್ಲ.
ನನ್ನ ದೇಹವನ್ನು ಇತರರಿಗೆಲ್ಲ ಹರೆದು ಕೊಡಲು...
ನಾನಂತು ಧುರ್ಯೋದನನಲ್ಲ.
ಈ ರಾಜ್ಯ ಸಂಪತನ್ನೆಲ್ಲ ನನ್ನದೇ ಎಂದು ಬಾವಿಸಲು...
ನಾನಂತು ರಾವಣನಲ್ಲ.
ಸದಾ ಇತರರ ಮನಸ್ಸಿಗೆ ಘಾಸಿ ಮಾಡಲು...
ನಾನಂತು ರಾಮನಲ್ಲ.
ವರ್ಷಗಳ ಕಾಲ ಅಜ್ಞಾತವನು ಅನುಭವಿಸಲು...
ನಾನಂತು ಕೃಷ್ಣನೂ ಅಲ್ಲ.
ಭಗವತ್ಗೀತೆಯ ಅರ್ಥದಂತೆ ಈ ಲೋಕಕ್ಕೆ ಮಾದರಿಯಾಗಲು....

ಆದರೆ
ನಾನೊಬ್ಬ ಸಾಮಾನ್ಯ ಮನುಷ್ಯ
ನಾ ಮೆಟ್ಟುವ ದಾರಿಯಲಿ ನಾ
ಉತ್ತಮನಾಗಿ ನುಡಿದು ನಡೆದರೆ ಸಾಕು
ಈ ಮೇಲಿನ ಎಲ್ಲಾ ಪಾತ್ರಗಳನ್ನೂ ಸರಿದೂಗಿಸಬಲ್ಲೆ…

                                                              ವಸಂತ್

10 comments:

sunaath said...

ಇದು ಅತ್ಯಂತ ಸಮಂಜಸವಾದ ಮನೋಭಾವ!

ಪ್ರವರ ಕೆ ವಿ said...

manujapatha andre ide sir....

Pradeep Rao said...

ಚಂದದ ಕವನ!

ಅಷ್ಟೂ ಪಾತ್ರಗಳನ್ನು ನೆನಪಿಸಿದಿರಿ.. ಉತ್ತಮವಾದದ್ದು.

ashokkodlady said...

ನಾನೊಬ್ಬ ಸಾಮಾನ್ಯ ಮನುಷ್ಯ
ನಾ ಮೆಟ್ಟುವ ದಾರಿಯಲಿ ನಾ
ಉತ್ತಮನಾಗಿ ನುಡಿದು ನಡೆದರೆ ಸಾಕು
ಈ ಮೇಲಿನ ಎಲ್ಲಾ ಪಾತ್ರಗಳನ್ನೂ ಸರಿದೂಗಿಸಬಲ್ಲೆ....

Nice Lines...

ಜಲನಯನ said...

ವಸಂತ್ ಏನೂ ಆಗುವುದರ ಬದಲು ಏನಾದರೂ ಮಾಡುವ ಭಾವ ಬಹಳ ಚನ್ನಾಗಿ ಮೂಡಿದೆ...

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಸುನಾಥ್ ಸರ್...

ವಸಂತ್ said...

ನಿಮ್ಮ ಅನಿಸಿಕೆಗೆ ಧನ್ಯವಾದಗಳು ಪ್ರವರರವರೆ....

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಪ್ರದೀಪ್ ರವರೆ..

ವಸಂತ್ said...

ನಿಮ್ಮ ಅನಿಸಿಕೆಗೆ ತುಂಬ ಧನ್ಯವಾದಗಳು ashokkodlady ಸರ್..

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬ ಧನ್ಯವಾದಗಳು ಜಲನಯನ ಸರ್..