Tuesday, April 26, 2011

ಸ್ಪಾರ್ಟನ್ನಿನ ಮಹಾವೀರರು... (ಭಾಗ-3)

     ಲಿಯೋನೈಡರ್ಸ್ ಮೌನವಾಗಿ ದೂತನ ಮಾತುಗಳನ್ನು ಆಲಿಸುತ್ತ... ಶರಣು ಕೋರುವುದೇ ?...ಅದು ಎಂದೆಂದಿಗೂ ಸಾಧ್ಯವಾಗ ಮಾತು... ಇದರಿಂದಲೆ ಎಥೀನಿಯ್ಸ್ ನಿಮ್ಮಲ್ಲಿ ಶರಣು ಕೋರಲು ಒಪ್ಪಲಿಲ್ಲ... ಮಥಾಂದರು ಗಂಡಸುತನವನ್ನು ಬಿಟ್ಟು... ಸ್ವಲಿಂಗ ಸಂಪರ್ಕದೊಂದಿಗೆ ಅತ್ಯಂತ ನೀಚವಾಗಿ ಬೀಗುವುದು ನನಗೆ ಸ್ವಲ್ಪವೂ ಹಿಡಿಸುವುದಿಲ್ಲ... ‘’ಮಹಾರಾಜರ ಮಾತನ್ನು ತಡೆಯುತ್ತ ಆಸ್ಥಾನದ ಮಹಾಮಂತ್ರಿ ತೇರ’’... ‘ಮಹಾರಾಜ ಈ ವಿಷಯದಲ್ಲಿ ನಮಗೆ ಸ್ವಲ್ಪ ಸಹನೆಯಿಂದ ವರ್ತಿಸಿದರೆ ಕ್ಷೇಮವೆನಿಸುತ್ತದೆ ಎಂದು ಎಚ್ಚರಿಸುತ್ತಾನೆ’. ಮಂತ್ರಿ ಮಾತಿಗೆ ಅಸಮದಾನಗೊಂಡ ಮಹಾರಾಜ… ‘’ಸ್ಪಾರ್ಟನ್ನರಿಗೆ ಬೇಕಿರುವುದು ಸಹನೆಯಲ್ಲ ಸ್ವಾಭಿಮಾನವೆಂಬ ವಾಕ್ಯವನ್ನು ಸಿಂಹ ದ್ವನಿಯಲ್ಲಿ ನುಡಿಯುತ್ತಾನೆ. ಮಹಾರಾಜನ ಮಾತಿಗೆ ದೂತ ಎಚ್ಚರಿಸುತ್ತ ‘’ಲಿಯೋನೈಡರ್ಸ್ ಈಗ ನಿಮ್ಮ ಬಾಯಿಂದ ಹೊರಬರುವಂಥ ಮಾತೆ ಕೊನೆಯ ಮಾತಾಗಬಾರದು ಆಲೋಚಿಸಿ ನಿರ್ಧಾರಕ್ಕೆ ಬನ್ನಿ’’ ದೂತ ಆಜ್ಞಾಪಿಸುತ್ತಾನೆ.

    ಲಿಯೋನೈಡರ್ಸ್ ತನ್ನ ಕಾಲಡಿಯ ಮಣ್ಣನ್ನು ಗಮನಿಸುತ್ತ... ತನ್ನ ಪ್ರಜೆಗಳ ಕ್ಷೇಮದ ಬಗ್ಗೆ ಯೋಚಿಸುತ್ತ... ತನ್ನ ಮಡದಿಯ ಅರ್ಥವಾಗದ ನೋಟದ ಅರ್ಥವನ್ನು ಅರಿಯುತ್ತ... ತನ್ನ ಮನಸ್ಸಿನಲ್ಲಿ ಮೂಡುವಂತ ಹಲವಾರು ಪ್ರಶ್ನೆಗಳಿಗೆ ತಳಮಳದಿಂದರೆ ಉತ್ತರಿಸಿಕೊಳ್ಳುತ ಖಂಡಿತ ನನ್ನ ಪ್ರಜೆಗಳು ಎಂದಿಗೂ ಮತ್ತೊಬ್ಬರ ಗುಲಾಮರಾಗಕೂಡದು. ಅವರು  ಎಂದೆಂದಿಗೂ ಸ್ವತಂತ್ರರಾಗಿರಬೇಕು’’ ಎಂಬ ಯೋಚನೆಯೊಂದಿಗೆ ತನ್ನ ಸೊಂಟದಲ್ಲಿದ್ದ ಕಡ್ಗವನ್ನು ಹೊರತೆಗೆದು ದೂತನ ಕುತ್ತಿಗೆಯ ಬಳಿಯಿಡುತ್ತಾನೆ...  ದೂತ ಒಮ್ಮೆಗೆ ಬಿಚ್ಚಿಬಿದ್ದು ‘’ಲಿಯೋನೈಡರ್ಸ್ ಏನಿದು ನಿನ್ನ ಹುಚ್ಚುವರ್ತನೆ. ಕಡ್ಗವನ್ನು ಕೆಳಗಿಳಿಸು’’. ಎಂಬ ಗೊಂದಲದ ನುಡಿಗಳನ್ನಾಡುತ್ತಾನೆ...

     ‘’ನೀರು. ನೆಲ ಬೇಕೆಂದು ಕೇಳಿದೆಯಲ್ಲ. ಅದು ನಿನ್ನ ಹಿಂದಿರುವ ಬಾವಿಯಲ್ಲಿ ಬೇಕಾದಷ್ಟು ಸಿಗುತ್ತದೆ’’ ತೆಗೆದುಕೊ ಎಂಬ ಆವೇಶದ ನುಡಿಗಳಾಡುತ್ತಾನೆ... ಮಹಾರಾಜ ಇದಕ್ಕೆ ಕಂಪಿಸುವ ಧ್ವನಿಯಿಂದಲೆ ದೂತ ‘’ಬೇಡ ದೂತನನ್ನು ಕೊಲ್ಲುವುದು ರಾಜಕೀಯ ದುತ್ಛರ್ಯವಾಗುತ್ತದೆ’’ ಎಂದು ತಪ್ಪಿಸಿಕೊಳ್ಳಲೆತ್ನಿಸುತ್ತಾನೆ... ‘’ಸತ್ತ ರಾಜರ ತಲೆ ಬುರುಡೆಗಳನ್ನು ತಂದು ಶರಣುಕೋರೆನ್ನುತ್ತ. ಧಿಕ್ಕರಿಸಿದರೆ ನನಗೂ ಇದೆ ದುಸ್ಥಿತಿ ಒದಗಿ ಬರುವುದೆಂಬ ಬೆದರಿಕೆಯ ಮಾತುಗಳಾಡಿರುವೆ’’... ‘’ನನ್ನ ರಾಣಿಯನ್ನು ಸಹ ಅವಮಾನಿಸಿರುವೆ’’... ‘’ನನ್ನ ದೇಶ ಮಣ್ಣಿನಲ್ಲಿ ಬೆರೆತುಹೋಗುತ್ತದೆಂಬ ದರ್ಪದ ನುಡಿಗಳನ್ನು ನನ್ನ ಬಳಿಯೆ ಹುಚ್ಚರಿಸಿರುವೆ’’... ದೂತನಾಗಿ ಬಂದಿರುವ ನೀನು ನಿನ್ನ ಬಾಯಿಯಿಂದ ಹೊರ ಬರುವ ಪ್ರತಿಯೊಂದು ಮಾತುಗಳಿಗೆ ನೀನೇ ಜವಾಬ್ಧಾರನಾಗುತ್ತಿಯೆಂದು ನಾನು ಮೊದಲೆ ತಿಳಿಸಿದ್ದರೂ... ನೀನು ಅದನ್ನು ದಿಕ್ಕರಿಸಿರುವೆ’’. ಎಂಬ ರೋಷದ ನುಡಿಗಳನ್ನಾಡುತ್ತಾನೆ  ಲಿಯೋನೈಡರ್ಸ್... 

    ‘’ಇದು ನ್ಯಾಯಕ್ಕೆ ವಿರುದ್ಧವಾದದ್ದು ಲಿಯೋನೈಡರ್ಸ್ ಬೇಡ ನನ್ನನ್ನು ಸಾಯಿಸಬೇಡ’’ ದೂತ ಗೋಗರೆಯುತ್ತಾನೆ... ಲಿಯೋನೈಡರ್ಸ್ ತನ್ನ ರಾಣಿಯ ಕಡೆ ತಿರುಗಿ ಆಕೆಯ ಮುಖ ವರ್ತನೆಯನ್ನು ತಿಳಿದು... ‘’ನ್ಯಾಯಕ್ಕೆ ವಿರುದ್ಧವೆ’’ ?..  ಆಗಾದರೆ ‘’ಇದೇ ಕಣೋ ನಮ್ಮ ಸ್ಪಾರ್ಟನ್ಸ್ ದೇಶದ ನ್ಯಾಯವೆಂದು. ಹಲ್ಲನ್ನು ಕಡಿಯುತ್ತ ದೂತನ ಎದೆಗೆ ಬಲವಾಗಿ ಒದೆಯುತ್ತಾನೆ... ದೂತ ಕಂಪನದ ಮಾತುಗಳನ್ನಾಡುತ್ತ ಅವನ ಹಿಂದಿದ್ದ  ಆಳವಾದ ಬಾವಿಯಲ್ಲಿ ಬಿದ್ದು ಮುಳುಗುತ್ತಾನೆ... ಅವನ ಜೊತೆಗೆ ಬಂದ ಸೈನಿಕರನ್ನೂ ಲಿಯೋನೈಡರ್ಸನ ಸೈನಿಕರು ಅದೇ ಬಾವಿಯಲ್ಲಿ ಕೊಚ್ಚಿ ಬೀಳಿಸುತ್ತಾರೆ... 

(ಅನುವಾದಿಸುತ್ತಿರುವ ಕಥೆ)    ಮುಂದುವರೆಯುವುದು.

Sunday, April 24, 2011

ಸ್ಪಾರ್ಟನ್ನಿನ ಮಹಾವೀರರು... (ಭಾಗ-2)


     ವಾಯು ವೇಗದಲ್ಲಿ ಅಶ್ವವನ್ನೇರಿ ದೂಳೆಬ್ಬಿಸುತ್ತ ಪಾರಸೀಯ ದೂತನೊಬ್ಬ ಸೈನಿಕರೊಡನೆ ಸ್ಪಾರ್ಟ ಸಾಮ್ರಾಜ್ಯವನ್ನು ಪ್ರವೇಶಿಸುತ್ತಾನೆ. ತಾವು ಕೊಲ್ಲಲ್ಪಟ್ಟ ಸತ್ತ ರಾಜರ ಕೆಲವು ತಲೆಬುರುಡೆಗಳೊಂದಿಗೆ ತಮ್ಮ ವಿಜಯ ಪಥಾಕೆಯನ್ನು ದಿಕ್ಕರಿಸುವವಗೆ ಇದೇ ಶಿಕ್ಷೆಯೊದಗುತ್ತದೆ ಎಂದು ಬೀಗುವ ದಾಟಿಯಲ್ಲಿ ತನ್ನ ಅಶ್ವದ ಎರಡೂ ಕಾಲುಗಳನ್ನು ಮೇಲೆತ್ತಿ ಸೊಕ್ಕಿನಿಂದ ಗರ್ವದಿಂದ ಆ ತಲೆ ಬುರುಡೆಗಳನ್ನು  ಸ್ಪಾರ್ಟ ರಾಜನ ಅರಮನೆಯ ಮುಂದೆ ಎಸೆಯುತ್ತಾನೆ. ಅಲ್ಲಿನ ಪ್ರಜೆಗಳನ್ನು ಕಂಡು ಕೆಕ್ಕರಿಸಿ ನಗುತ್ತ ನಮ್ಮನ್ನು ಎದುರುಗೊಂಡರೆ ಎಂತವರಿಗೂ ಇದೇ ಗತಿಯೊದಗುವುವೆಂದು ತಾವು ಬಂದಿರುವ ವಿಷಯವನ್ನು ರಾಜನಿಗೆ ಮುಟ್ಟಿಸಲು ಅವನ ಸೇವಕನೊಬ್ಬನಿಗೆ ತಿಳಿಸುತ್ತಾನೆ.

    ಮಹಾರಾಜ ಲಿಯೋನೈಡರ್ಸ್ ಅರಮನೆಯ ಒಳ ಅಂಗಳದಲ್ಲಿ ಮಗನಿಗೆ ಯುದ್ಧ ತರಬೇತಿಯಲ್ಲಿ ತೊಡಗಿರುತ್ತಾನೆ. ದೂರದಲ್ಲೊಂದು ಕಲ್ಲು ಕಂಬಕ್ಕೆ ಒರಗಿಕೊಂಡ ಮಹಾರಾಣಿ ಅವರಿಬ್ಬರ ಯುದ್ಧಾಭ್ಯಾಸವನ್ನು ಸೂಕ್ಮವಾಗಿ ಗಮನಿಸುತ್ತಿದ್ದಾಳೆ. ರಾಜನ ಸೇವಕ ಆತಂಕದ ನುಡಿಯಲ್ಲಿ ಪಾರಸೀಯರ ದೂತನೊಬ್ಬ ಮಹಾರಾಜರನ್ನು ಕಾಣಲು ಬಂದಿದ್ದಾನೆ ಎಂದು ಮಹರಾಣಿಗೆ ತಿಳಿಸುತ್ತಾನೆ. 

     ನೆನಪಿಟ್ಟುಕೊ ನಾಳೆ ನಿನ್ನ ಮೈಯಿಂದ ಹರಿಯುವ ಪ್ರತಿಯೊಂದು ರಕ್ತದ ಹನಿಯೂ ಯುದ್ಧ ಭೂಮಿಯಲ್ಲಿ ಸಾವಿರಾರು ಸೈನಿಕರ ರಕ್ತದ ರುಷಿಯನ್ನು ಕಾಣಲು ಉಪಯೋಗವಾಗಬೇಕು ಅದ್ದರಿಂದಲೆ ನಿನಗೆ ಈ  ಅಭ್ಯಾಸ. ಅರ್ಥವಾಯಿತೆ ಯುಕ್ತಿಯಾಗಿ ಹೋರಾಡು. ಸರಿ ನಿನಗೆ ಈ ದಿನದ ಅಭ್ಯಾಸ ಮುಗಿದಿದೆ ಇನ್ನು ಹೊರಡು ಎಂದು ಮಗನನ್ನು ಕಳಿಸುತ್ತ ರಾಣಿಯನ್ನು ಎದುರುಗೊಳ್ಳುತ್ತಾನೆ.

“ಏನು ವಿಷಯ” ರಾಜನ ಪ್ರಶ್ನೆಗೆ ರಾಣಿ....
“ಪಾರಸೀಯ ದೂತನೊಬ್ಬ ನಿಮ್ಮನ್ನು ಕಾಣಲು ಬಂದಿದ್ದಾನಂತೆ” ಕ್ರೋದವಾಗಿ ನುಡಿಯುತ್ತಾಳೆ...
ಆಸ್ತಾನದ ಮತ್ರಿ "ತೇರ" ಪಾರಸೀಯನೊಂದಿಗಿನ ವ್ಯವಹಾರದಲ್ಲಿ ಅನುಮಾನಗೊಂಡಂತೆ ಪ್ರಶ್ನಿಸುತ್ತಾಳೆ....
‘ಮಹಾಮತ್ರಿ ತೇರ ದೂತನೊಂದಗಿನ ಕಾರ್ಯಗಳೆಲ್ಲವೂ ಮುಗಿದಾಯಿತೇ’. 
ಹಾಗೇನಿಲ್ಲ ಮಹಾರಾಣಿ ರಾಜರು ಬರುವುದು ತಡವಾಗುತ್ತದೆಂದು ಅವರನ್ನು ಮಾತಿಗೆ ಇಳಿಸಿದ್ದೆ.
ತಲೆ ತಗ್ಗಿಸಿ ನುಡಿಯುತ್ತಾನೆ ಮಂತ್ರಿ.
ಲಿಯೋನೈಡರ್ಸ್   ''ಹಾಗೋ’'..... ಗಡಸುನಿಂದ ನುಡಿಯುತ್ತಾನೆ....
ದೂತ ಮಾತಿಗಿಳಿಯುವ ಮುನ್ನವೇ ಲಿಯೋನೈಡರ್ಸ್ ತಡೆದು ಷರತ್ತೊಂದನ್ನು ವಿಧಿಸುತ್ತಾನೆ.
“ಒಂದು ನಿಮಿಷ ನೀನು ದೂತನಾಗಿ ಬಂದಿರುವುದರಿಂದ....
ನಿನ್ನ ಬಾಯಿಂದ ಹೊರಬರುವ ಪ್ರತಿಯೊಂದು ಮಾತಿಗೂ....
ನೀನೆ ಜವಬ್ಧಾರಿಯನ್ನು ವಹಿಸಲಬೇಕಾಗುತ್ತೆ. ಈ ವಿಷಯವನ್ನು ಮರೆಯಬೇಡ’’...
ಲಿಯೋನೈಡರ್ಸ್ ಮಾತನಾಡಲು ಅನುಮತಿಸುತ್ತಾನೆ....
ದೂತ ಮಾತಿಗೆ ತಲೆಬಾಗುತ್ತ....

“ನೀರು, ನೆಲ” ಎನ್ನುವ ಸೋಮಾರಿತನದ ಮಾತಗಳನ್ನಾಡುತ್ತಾನೆ…
ಲಿಯೋನೈಡರ್ಸ್ ಒಮ್ಮೆ ಒಗಟಂತೆ ನಕ್ಕು…
ನೀರು, ನೆಲ ನಿಮ್ಮ ಪಾರಸೀಯ ದೇಶದಲ್ಲಿ ಸಿಗುವುದಿಲ್ಲವೆ. ಅವುಗಳಿಗೊಸ್ಕರ ಇಷ್ಟು ದೂರ ಬರಬೇಕಿತ್ತೆ ?...
ಲಿಯೋನೈಡರ್ಸನ ಮಾತಿಗೆ ರಾಣಿ ದ್ವನಿಗೂಡಿಸುತ್ತ,
‘ತಲೆ ತಿರುಗುವಂತ ಪ್ರಶ್ನೆಗಳನ್ನು ಕೇಳಿದರೆ.. ನೀನು ನಿನ್ನ ಸಂಗಡಿಗರೊಂದಿಗೆ ಪ್ರಾಣಿದಿಂದ ಹೊರ ಹೊಗುತ್ತೀಯೆಂಬ...
ಆಮಿಯನ್ನು ನಾವು ಕೊಡಲಾಗುವುದಿಲ್ಲ’... ಗಡಸು ದ್ವನಿಯಲ್ಲಿ ರಾಣಿ ನುಡಿಯುತ್ತಾಳೆ....

‘ಇಬ್ಬರು ಗಂಡಸರು ಮಾತನಾಡುತ್ತಿರುವಾಗ ಹೆಂಗಸರು ಈ ವಿಷಯದಲ್ಲಿ ತಲೆದೂರಿಸುವುದು ಅಷ್ಟೊಂದು ಒಳ್ಳೆಯದಲ್ಲ’. 
ಎತ್ತರವಾದ ದ್ವನಿಯಲ್ಲಿ ನುಡಿಯುತ್ತಾನೆ ದೂತ.
ಅಸಾಧಾರಣ ವೀರರೆನಿಸಿಕೊಂಡ ಇಲ್ಲಿನ ಗಂಡಸರಿಗೆ ಜನ್ಮವನ್ನು ಕೊಟ್ಟದ್ದು 
ನಮ್ಮ ಸ್ಪಾರ್ಟ ದೇಶದ ಹೆಂಗಸರೆ, ಶೌರ್ಯದಿಂದ ನುಡಿಯುತ್ತಾಳೆ ಮಹರಾಣಿ.
ರಾಣಿಯನ್ನು ಓಲೈಸುತ್ತ ಲಿಯೋನೈಡರ್ಸ್ ದೂತನೊಂದಿಗೆ,,...

‘ಸರೆ ಬಾ ಅತ್ತ ಹೋಗುತ್ತ ಮಾತನಾಡೋಣ’ ಸಹಜವಾಗಿ ನುಡಿದು ದೂತನೊಡನೆ ಸಾಗುತ್ತಾನೆ...
ಕೆಂಗಣ್ಣು ಬೀರುತ್ತ ದೂತ....
ಲಿಯೋನೈಡರ್ಸ್ ನಮ್ಮ ಸಾಮರ್ಥ್ಯವೇನೆಂಬುದು ನಿಮಗೆ ಗೊತ್ತಿಲ್ಲ...
‘ನಿಮ್ಮ ಸ್ಪಾರ್ಟ ದೇಶವು ಮಣ್ಣಿನಲ್ಲಿ ಬೆರೆಯಕೂಡದೆಂದಿದ್ದಲ್ಲಿ  ಒಂದೇ ದಾರಿಯಿದೆ’....
‘ಅದು ನಾನು ಹೇಳಿದಂತೆ ಕೇಳುವುದು...

ನಮ್ಮ ಮಹರಾಜರ ದೃಷ್ಠಿ ಸೋಕಿದರು....
ಅವರ ಕಾಲು ಬಿದ್ದರ, ಆ ಸ್ಥಳ ಅವರಿಗೇ ಸ್ವಂತ....
ಅವರ ಸೇನೆ ನಡೆದು ಬಂದರೆ ಸಾಕು ಇಡೀ ಭ್ರಂಹಾಂಡವೇ ನಡುಗಿಹೋಗುತ್ತದೆ....
ಅವರು ನೀರನ್ನು ತಾಕಿದರೆ ಹರಿಯುವ ನದಿಗಳು ಹಿಂಗಿಹೋಗುತ್ತವೆ....
ಆ ಸೇನೆಯನ್ನು ಗೆಲ್ಲುವುದು ಯಾರಿಂದಲೂ ಸಾಧ್ಯವಿಲ್ಲ....
ಆದ್ದರಿಂದ ನೀವು ಮಾಡಬೇಕಿರುವುದು ಇಷ್ಟೆ....

ಈ ರಾಜ್ಯದಿಂದ ಒಂದು ಹಿಡಿ ಮಣ್ಣನ್ನು ಮತ್ತು ಸ್ವಲ್ಪ ನೀರನ್ನು ಕೊಟ್ಟು....
ನಮ್ಮ ಮಹರಾಜರಲ್ಲಿ ಶರಣುಕೋರಿದರೆ....
ಅವರು ತಪ್ಪದೆ ನಿಮ್ಮನ್ನು ಬಿಟ್ಟು ಕೊಡುತ್ತಾರೆ. ದೂತ ತುಟಿಗಳನ್ನರಳಿಸಿ ನುಡಿಯುತ್ತಾನೆ.....

(ಅನುವಾದಿಸುತ್ತಿರುವ ಕಥೆ)    ಮುಂದುವರೆಯುವುದು.

Tuesday, April 19, 2011

ಸ್ಪಾರ್ಟನ್ನಿನ ಮಹಾವೀರರು... (ಭಾಗ-1)


        ಸ್ಪಾರ್ಟನ್ನರಲ್ಲಿ ಹುಟ್ಟಿದ ಪ್ರತಿ ಮಗುವು ಅಲ್ಲಿನ ಅನುಭವಸ್ತರ ಕೈಯಿಂದ ಪರೀಕ್ಷೆಗೊಳಪಡುತ್ತದೆ. ಅದಕ್ಕೆ ಯಾವುದೇ ಕಾಯಿಲೆ ಅಥವಾ ಅಂಗವೈಕಲ್ಯವಿದ್ದಲ್ಲಿ ಅಂಥ ಮಗು ಕ್ಷಣವೆ ಸಾಯಿಸಲ್ಪಡುತ್ತದೆ. ಮಗು ನಡೆಯುವುದಕ್ಕೆ ಪ್ರಾರಂಭಿಸಿದ ಮೊದಲಿನಿಂದ ಯಾವರೀತಿಯಲ್ಲಿ ಯುದ್ಧ ಮಾಡಬೇಕೆಂದು ಕಲಿಸುತ್ತಾರೆ. ಸೋಲೆ ಅವರಿಗೆ (ಚರಣು ಕೋರುವುದು) ಗೊತ್ತಿಲ್ಲದ ಮಾತುಗಳು. ಸ್ವದೇಶಕ್ಕೋಸ್ಕರ ಕಡೆಯ ಉಸಿರಿನವರೆಗೂ ಹೋರಾಡಿ ಯುದ್ಧರಂಗದಲ್ಲಿ ಪ್ರಾಣವನ್ನು ಅರ್ಪಿಸುವುದೆ ಅವರ ಏಕೈಕ ಉದ್ದೇಶ. ಮಗುವಿಗೆ ಏಳು ವರ್ಷ ತುಂಬಿದೊಡನೆಯೆ ಬಲವಂತವಾಗಿ ತಾಯಿಯಿಂದ ದೂರವಾಗಿಸಿ ಶಿಕ್ಷಣ ಅನ್ನೋ ಹೆಸರಿನೊಂದಿಗೆ ಒಂಟಿಯಾಗಿಸಿ ಕಾಡಿನಲ್ಲಿ ಬಿಟ್ಟುಬರುತ್ತಾರೆ. ಹುಟ್ಟಿದಾಗಿನಿಂದ ಇಂಥ ಭಯಂಕರವಾದ ಶಿಕ್ಷಣ ಪಡೆದು ಸ್ಪಾರ್ಟನ್ಸ್ ಪ್ರಪಂಚದಲ್ಲೇ  ಅತಿ ಉನ್ನತವಾದ ವೀರರೆಂದು ನಿರೂಪಿಸಿಕೊಳ್ಳುತ್ತಾರೆ.

        ಅಗೋಗಿ ಅನ್ನೋ ಶಿಕ್ಷಣವು ಒಬ್ಬ ಹುಡುಗನನ್ನು ಹುಚ್ಚುಕೋಪದ ಸ್ಥಿತಿಗೆ ಕೊಂಡೊಯ್ಯುತ್ತದೆ. ಹೊಟ್ಟೆಯಲ್ಲಿ ಹಸಿವಿನ ಕೂಗನ್ನು ಮೊಳಗಿಸುತ್ತದೆ. ಅಗತ್ಯವಾದರೆ ಕೊಲ್ಲುವಂಥ ಅಂಥಕ್ಕೂ ಕೊಂಡೊಯ್ಯುತ್ತದೆ. ಕೋಲಿನಿಂದ ಮತ್ತು ಚಾಟಿಯಿಂದ ಶಿಕ್ಷಣಕ್ಕೋಸ್ಕರ ಹುಡುಗ ತಿನ್ನೋ ಏಟುಗಳು, ನೋವು, ಬಾದೆಯನ್ನು ತೋರದಂತೆ ಅವನ ಶರೀರವು ಕಲ್ಲಿನಂತೆ ಜಡವಾಗುತ್ತದೆ. ಕಾಡಿನಲ್ಲಿ ಒಂಟಿಯಾಗಿ ಬಿಟ್ಟಂತಹ ಹುಡುಗನು ಪ್ರಕೃತಿಯ ವೈಪರೀತ್ಯಗಳನ್ನು ಕ್ರೂರ ಮೃಗಗಳನ್ನು ಎದುರಿಸುತ್ತಾನೆ. ಧೈರ್ಯ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ ಇವುಗಳ ಸಹಾಯದಿಂದ ಸ್ವದೇಶಕ್ಕೆ ಪ್ರಾಣದೊಂದಿಗೆ ಮರಳಿ ಬಂದರೆ. ಅವನು ಸ್ಪಾರ್ಟನ್ ವೀರನಾಗುತ್ತಾನೆ. ಇಲ್ಲವಾದಲ್ಲಿ ಅಲ್ಲಿಯೇ ಪ್ರಾಣವನ್ನು ಕಳೆದುಕೊಳ್ಳುತ್ತಾನೆ.

       ನಯವಾದ ಕತ್ತಿಯಂತಹ ಉಗುರುಗಳೊಂದಿಗೆ ಕಾರ್ಗತ್ತಲಿನ ಬಣ್ಣದಲ್ಲಿ ಬೆಂಕಿಯಂತೆ ಉರಿಯುತ್ತಿರುವ ಕಣ್ಣುಗಳೊಂದಿಗೆ ಒಂದು ಕ್ರೂರ ತೋಳ, ಅವನ ಮೇಲೆ ದಾಳಿಗೆ ಸಿದ್ಧವಾಗುತ್ತದೆ. ಅದಕ್ಕೆ ಒಳ್ಳೆಯ ಭೋಜನ ಸಿಕ್ಕಿದೆ ಎಂದು ಸಂತೋಶದಿಂದ ಕೂಗಿಡುತ್ತ ಅವನ ಮೇಲೆ ದಾಳಿಮಾಡುತ್ತದೆ. ಭಯವೆಂದರೆ ಏನೆಂಬುದನ್ನೇ ಅರಿಯದ ಅವನ ಮನಸ್ಸಿನಲ್ಲಿ ಈಗಿರುವ ಏಕೈಕ (ಲಕ್ಷೆ) ಉದ್ಧೇಶವೆಂದರೆ ಶತ್ರುವನ್ನು ಗೆಲ್ಲುವುದು ಮಾತ್ರವೆ. ಮಂಜು ಸುರಿಯುವ ವೇಳೆ... ಸರ್ವೆ ಮರಗಳ ಶಬ್ಧ.. ಕೈಯಲ್ಲಿ ಇರುವ ಸಣ್ಣ ಕೋಲಿನಂತಹ ಆಯುಧದೊಂದಿಗೆ ಆ ತೋಳದ ಕುತ್ತಿಗೆಗೆ ತಿವಿದು ಕೊಂದು ಹಾಕುತ್ತಾನೆ. ಶಿಕ್ಷಣದಲ್ಲಿ ಗೆದ್ದು ವೀರನಾಗಿ ಪ್ರಾಣದೊಂದಿಗೆ ಮರಳಿಬಂದರೆ ಆ ಹುಡುಗ ಆ ದೇಶಕ್ಕೆ ಮಹಾ ರಾಜನಾಗುತ್ತಾನೆ. ಅವನೇ ರಾಜ ಲಿಯೋನೈಡರ್ಸ್..

        ಮಹಾರಾಜ ಲಿಯೋನೈಡರ್ಸ್ ತನ್ನ ಸಿಂಹದಂತ ಕಂಠವನ್ನು ಬಳಸಿ ಸ್ಪಾರ್ಟಾದ ಪ್ರಜೆಗಳನ್ನುದ್ದೇಶಿಸಿ ಮಾತನಾಡುತ್ತಿದ್ದಾನೆ....  
"ನಾನು ಆ ಕ್ರೂರ ಮೃಗವನ್ನು ಕೊಂದು ಮೂವ್ವತ್ತು ವರ್ಷಗಳು ಕಳೆದಿವೆ....
ಆದರೆ ಈ ದಿನ ಅದಕ್ಕಿಂತ ಭಯಂಕರ ಮೃಗವೊಂದು ನಮ್ಮನ್ನು ಎದುರಿಸಲು ಬರುತ್ತಿದೆ.... 
ಅದನ್ನು ನಾವು ಉಪಾಯದಿಂದ ಗೆಲ್ಲಬೇಕು.... 
ನಾನು ಮೃಗವೆಂದು ಹೇಳಿದ್ದು ಭಯಂಕರವಾದ ಕ್ರೂರ ಗುಣಗಳಿಂದ ಕೂಡಿದ ಮನುಷ್ಯರನ್ನ....
ದಾರುಣವಾದ ಆಯುಧಗಳನ್ನು ಮಾಡಿಟ್ಟುಕೊಂಡವರನ್ನ.... 
ಗುಲಾಮರೊಂದಿಗೆ ಮತ್ತು ಸೇನೆಯಿಂದ ಕೂಡಿರುವ ಧಳವೊಂದು ನಮ್ಮ ಮೇಲೆ ದಾಳಿಗೆ ಸಿದ್ಧವಾಗುತ್ತಿದೆ.... ಅವರು ಎಂತವರಾದರೂ ಸರಿ ನಮ್ಮ ಏಕೈಕ ಉದ್ಧೇಶ ಈ ಯದ್ಧದಲ್ಲಿ ಶತ್ರುಗಳನ್ನು ಗೆಲ್ಲುವುದು ಮಾತ್ರವೆ.... 
ಆ ಧಳ ಆದಷ್ಟು ಬೇಗ ನಮ್ಮ ರಾಜ್ಯದತ್ತ ಪ್ರವೇಶಿಸುತ್ತದೆ"....

(ಅನುವಾದಿಸುತ್ತಿರುವ ಕಥೆ)    ಮುಂದುವರೆಯುವುದು.

Tuesday, April 12, 2011

ಒಂದು ಸಣ್ಣ ದೀಪವನ್ನಾದರೂ ಉರಿಸಿಹೋಗು…


ನನ್ನ ಮನದಾಳದ ಕೆಲವು ಮಾತುಗಳನ್ನು
ನಿನಗೆ ಪತ್ರವಾಗಿ ಬರೆಯಲೆತ್ನಿಸಿದ್ದೇನೆ ಗೆಳತಿ,
ಕೋಪಗೊಳ್ಳದೆ ನೆಮ್ಮದಿಯಿಂದ ಓದಿ ಮುಗಿಸುತ್ತೀಯ
ಎಂಬ ಧೃಡ ಸಂಕಲ್ಪವನ್ನಿಟ್ಟುಕೊಂಡು..

ನಾನೇನು ದೊಡ್ಡ ಬರಹಗಾರನಲ್ಲ,
ಅದಕ್ಕೂ ಮುನ್ನ ನಾ ಕವಿಯಂತೂ ಅಲ್ಲ,
ನನ್ನ ಮನದ ನೋವನ್ನು ಕೇವಲ
ಸಾಲುಗಳಾಗಿ ಬಿಡಿಸಲೆತ್ನಿಸಿದ್ದೇನೆ..

ನನಗೆ ನೀ ಗಗನ ಕುಸುಮವೆಂದೆನಿಸಿದ್ದರೂ
ಬರವಸೆಯ ಬೆಳಕನ್ನು ಕಾಣುತ್ತಿದ್ದೆ,
ಆಳ ಸಮುದ್ರದಲ್ಲಿನ ಮುತ್ತಿಗೆ
ಆಸೆ ಪಡಬಾರದಿತ್ತು.
ಆದರೆ ನನ್ನ ಮೂಡ ಮನಸ್ಸಿಗೆ
ಇದರ ಅರಿವಾಗಲಿಲ್ಲ..

ನಾ ದಿನ ಕಾಣುತ್ತಿದ್ದ ಪ್ರತಿ ಕನಸು
ನಿನ್ನದೇ ಆಗಿತ್ತು.
ನನ್ನ ಹೃದಯದ ಪ್ರತಿ ಮಿಡಿತವು
ನೀನೆ ತುಂಬಿಕೊಂಡಿದ್ದೆ.
ಇದು ಪ್ರೀತಿಯೋ ಮೋಹವೋ
ನನಗಂತೂ ತಿಳಿದಿರಲಿಲ್ಲ..

ನನ್ನೆದುರು ನೀ ನಾಚಿ ಓಡುತ್ತಿದ್ದಾಗ
ನನ್ನಂಥರಂಗದಲ್ಲಿ ನಿನ್ನದೇ ಚಿತ್ರವನ್ನು ಬಿಡಿಸುತ್ತಿದ್ದೆ.
ನಿನ್ನ ಮೌನಕ್ಕೊಂದು ಕವನವನ್ನು ಬರೆಯಲೆತ್ನಿಸುತ್ತ
ನಾನು ಒಬ್ಬ ಚಿತ್ರಗಾರನಂತೆ
ಕಲ್ಪನೆಯ ಲೋಕದ ಕವಿಯಂತೆ
ನಿನ್ನನ್ನು ಬಣ್ಣಿಸಲೆತ್ನಿಸುತ್ತಿದ್ದೆ..

ನೀ ನನ್ನ ಇಷ್ಟಪಡುತ್ತಿದ್ದೆ ಎನ್ನುವುದಕ್ಕೆ
ನಿನ್ನ ನಾಚಿಕೆಯನ್ನೊಮ್ಮೆ ಕೇಳಿನೋಡು.
ನಿನ್ನ ಮುಂಗುರುಳಿನ ನರ್ತನವೊಮ್ಮೆ  ಕೇಳು.
ನಮ್ಮಿಬ್ಬರನ್ನೂ ಒಟ್ಟು ಗೂಡಿಸುತ್ತಿದ್ದ
ಬೆಳದಿಂಗಳ ರಾತ್ರಿಯನ್ನೊಮ್ಮೆ ಕೇಳಿತಿಳಿದುಕೊ..

ತಂಗಾಳಿಯಾಗಬೇಕಿದ್ದ ನೀನು
ಬಿರುಗಾಳಿಯಾಗಿ ನನ್ನ ಹೃದಯಕ್ಕೆ ಬಡಿದಾಗ
ನಾನೇನು ಮಾಡಲಾಗಲಿಲ್ಲ..
ನಾ ಕಟ್ಟುತ್ತಿದ್ದ ಕನಸಿನ ಮನೆಯನ್ನು
ಚಿದ್ರ ಚಿದ್ರ ಮಾಡಿ ನನ್ನ ಕಣ್ಣೆದುರೆ ಉರುಳಿಸಿಬಿಟ್ಟೆ..

ಏನು ಮಾಡಲಿ ನಾ ಅಸಹಾಯಕ
ನೀ ಗಗನ ಕುಸುಮವೆಂಬುದರ ಅರಿವು
ತಡವಾಗಿಯಾದರೂ ಅರಿವಾಯಿತು.
ನಾ ಇಷ್ಟೂ ದಿನ ಬಿರುಗಾಳಿಯ ಜೊತೆ
ಸ್ನೇಹಕ್ಕೆ ಅಂಗಲಾಚಿದೆನಾ ಎಂಬ ಕೊರಗು 
ನನ್ನಲ್ಲಿ ಪರಿ ಪರಿಯಾಗಿ ಕಾಡುತ್ತಿದೆ..

ನನ್ನ ಜಡವಾದ ಮನಸ್ಸಿನಲ್ಲಿ ಕೆಲವು ನೆನಪುಗಳು
ನಿನ್ನನ್ನು ಈಗಲೂ ಬಯಸಲೆತ್ನಿಸುತ್ತವೆ..
ಕಡೆಗೆ ನೀ ಬೆಳಕಾಗಿ ಕಾಣಲಿಲ್ಲ
ಕಾರ್ಗತ್ತಲ ಕೋಟೆಯೊಳಗೆ ನನ್ನನ್ನು
ಒಂಟಿಯಾಗಿಸಿ ಹೊರಟುಹೋದೆ..

ಏನೂ ಕಾಣದ ಕತ್ತಲೊಳು
ಬೆಳದಿಂಗಳನ್ನು ಹುಡುಕಲೇತ್ನಿಸುತ್ತಿದ್ದೇನೆ..
ಈ ಕತ್ತಲಂತೂ ಸರಿದುಹೋಗುವ ಲಕ್ಷಣವೇ ಕಾಣುತ್ತಿಲ್ಲ.
ನೀ ಚಂದ್ರನ ಬೆಳಕಾಗಬೇಕಿಲ್ಲ ಗೆಳತಿ
ನನ್ನ ಹೃದಯದ ಬಯಲಲ್ಲಿ
ಒಂದು ಸಣ್ಣ ದೀಪವನ್ನಾದರೂ ಉರಿಸಿಹೋಗು…

                                                                 ವಸಂತ್

ಚಿತ್ರಕೃಪೆ. http://buy-online-shopping-mall.com